Skip to main content

3Kaala News

ಸುಭಾಷಿತ 

ಯಾರಿಗಾದರೂ ಅವರು ಕೃತಜ್ಞತೆಯಿಂದ ಸ್ವೀಕರಿಸಲು ಸಾಧ್ಯವಾಗುವಷ್ಟು ಮಾತ್ರ ಸಹಾಯ ಮಾಡಿ. ನೀವು ಅವನಿಗೆ ಹೆಚ್ಚು ಸಹಾಯ ಮಾಡಿದರೆ, ಅವನು ಅದನ್ನು ತನ್ನ ಹಕ್ಕು ಎಂದು ಪರಿಗಣಿಸಲು ಪ್ರಾರಂಭಿಸುತ್ತಾನೆ. ಮತ್ತು ಅವನು ಅದನ್ನು ಪಡೆಯದಿದ್ದಾಗ, ಅದೇ ವ್ಯಕ್ತಿ ನಿಮ್ಮ ಶತ್ರುವಾಗುತ್ತಾನೆ.

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಖ್ಯಾತ ಬಹುಭಾಷಾ ಗಾಯಕಿ ಎಸ್.ಜಾನಕಿ ವಿಧಿ ವಶ

ಮೈಸೂರಿನಲ್ಲಿಯೇ ಎಸ್.ಜಾನಕಿಯವರ ಅಂತ್ಯಕ್ರಿಯೆ


ಮೈಸೂರು; ಖ್ಯಾತ ಬಹುಭಾಷಾ ಗಾಯಕಿ ಎಸ್.ಜಾನಕಿ ಅವರು ಶನಿವಾರ ರಾತ್ರಿ ಹೃದಯಾಘಾತದಿಂದ ನಿಧನರಾದರು. ಅವರಿಗೆ 88 ವರ್ಷ ವಯಸ್ಸಾಗಿತ್ತು. ಮೂಲತ ಆಂಧ್ರಪ್ರದೇಶದವರಾದ ಅವರು, ಇತ್ತೀಚೆಗೆ ಮೈಸೂರಿನ ಬೋಗಾದಿಯಲ್ಲಿ ನೆಲೆಸಿದ್ದರು. ಸಂಬAಧಿಕರ ಮನೆಯಲ್ಲಿ ವಾಸವಿದ್ದ ಅವರು ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ಕಳೆದ ವರ್ಷ ಮಗನನ್ನು ಕಳೆದುಕೊಂಡಿದ್ದರು. ಇಂದು ಮಧ್ಯಾಹ್ನ ಅವರ ಆರೋಗ್ಯದಲ್ಲಿ ಏರುಪೇರಾದ ಕಾರಣ ಮೈಸೂರಿನ ಅಪೋಲೋ ಆಸ್ಪತ್ರೆಗೆ ಮಧ್ಯಾಹ್ನ 12.49ರ ವೇಳೆಯಲ್ಲಿ ಕರೆ ತಂದು ದಾಖಲಿಸಲಾಯಿತು. ತಕ್ಷಣವೇ ಅವರನ್ನು ಪರೀಕ್ಷಿಸಿದ ವೈದ್ಯರು ಐಸಿಯುಗೆ ರವಾನಿಸಿ, ತಜ್ಞ ವೈದ್ಯರ ತಂಡ ಅವರಿಗೆ ಚಿಕಿತ್ಸೆಯನ್ನು ನೀಡುತ್ತಿತ್ತು. ಆದರೆ ಬಹು ಅಂಗಾಗ ವೈಫಲ್ಯವಾಗಿ, ಹೃದಯಾಘಾತವಾಯಿತು. ಅವರನ್ನು ಉಳಿಸಿಕೊಳ್ಳಲು ವೈದ್ಯರ ತಂಡ ನಿರಂತರವಾಗಿ ಚಿಕಿತ್ಸೆ ನೀಡಿದರೂ, ಚಿಕಿತ್ಸೆ ಫಲP್ಫರಿಯಾಗಿ ರಾತ್ರಿ 7.30ರ ವೇಳೆ ನಿಧನರಾದರು ಎಂದು ಆಸ್ಪತ್ರೆಯ ವೈದ್ಯರು ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಶಾಸಕ ಜಿ.ಟಿ.ದೇವೇಗೌಡ, ಮಾಜಿ ಸಚಿವ ಸಾ.ರಾ.ಮಹೇಶ್ ಸ್ಭೆರಿದಂತೆ U್ಪಣ್ಯಾತಿ, ಗಣ್ಯರು, ಅಭಿಮಾನಿಗಳು ಆಸ್ಪತ್ರೆಗೆ ದಾಖಲಿಸಿ, ಮಾಹಿತಿ ಪಡೆದು ಎಸ್.ಜಾನಕಿ ನಿಧನಕ್ಕೆ ಕಂಬನಿ ಮಿಡಿದರು.
ಎಸ್.ಜಾನಕಿಯವರ ಪಾರ್ಥವ ಶರೀರದ ಅಚಿತ್ಯಕ್ರಿಯೆ ಎಲ್ಲಿ ನಡೆಸಬೇಕು ಎಂಬುದರ ಬಗ್ಗೆ ಸಂಬAಧಿಕರು ಚರ್ಚಿಸಿ, ತೀರ್ಮಾನ ಕೈಗೊಳ್ಳಲಿದ್ದಾರೆ. ಮೈಸೂರಿನಲ್ಲಿಯೇ ಎಸ್.ಜಾನಕಿ ಅವರ ಅಂತ್ಯಕ್ರಿಯೆ ನಡೆಸುವುದಾದರೆ, ಆರ್.ಟಿ.ನಗರದಲ್ಲಿರುವ ತಮ್ಮ ಮಾಲೀಕತ್ವದ 60*40 ನಿವೇಶನವನ್ನು ಉಚಿತವಾಗಿ ನೀಡುವುದಾಗಿ ಮಾಜಿ ಸಚಿವ ಸಾ.ರಾ.ಮಹೇಶ್ ತಿಳಿಸಿದ್ದಾರೆ.
ಹರಿದು ಬರುತ್ತಿರುವ ಅಭಿಮಾನಿಗಳನ್ನು ನಿಯಂತ್ರಿಸುವುದಕ್ಕಾಗಿ ಅಪೋಲೋ ಆಸ್ಪತ್ರೆಗೆ ಬಿಗಿ ಪೊಲೀಸ್ ಬಂದೋ ಬಸ್ತ್ ಮಾಡಲಾಗಿದೆ. ಗೇಟ್‌ಗಳನ್ನು ಬಂದ್ ಮಾಡಲಾಗಿದೆ. 4 ಬಾರಿ ರಾಷ್ಟಿçÃಯ ಪ್ರಶಸ್ತಿ ಪುರಸ್ಕöÈತೆಯಾದ, 17,000 ಕ್ಕೂ ಹೆಚ್ಚು ಹಾಡುಗಳನ್ನು ಹಾಡಿರುವ ಪ್ರಖ್ಯಾತ ಹಿನ್ನೆಲೆ ಗಾಯಕಿ ಎಸ್. ಜಾನಕಿ ಅವರ ಕಳೆದ 6 ವರ್ಷಗಳಿಂದ ಮೈಸೂರಿನ ಬೋಗಾದಿ ಯಲ್ಲಿ ನೆಲೆಸಿದ್ದರು. ಅವರು ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ ಸೇರಿದಂತೆ ವಿವಿಧ ಭಾಷೆಗಳಲ್ಲಿ 17,000 ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ.
ವೇಣುವಿನ ಗಾನ'',ಒಂದಾನೊAದು ಕಾಲದಲ್ಲಿ”, “ನಾದ ಬ್ರಹ್ಮ” ಸೇರಿದಂತೆ ನೂರಾರು ಕನ್ನಡ ಹಾಡುಗಳ ಮೂಲಕ ಕನ್ನಡಿಗರ ಮನಗೆದ್ದಿದ್ದರು.
1981ರಲ್ಲಿ ಅಂಬಲತಿಲೆ” ಹಾಡಿಗೆ ರಾಷ್ಟಿçÃಯ ಪ್ರಶಸ್ತಿ ಸೇರಿದಂತೆ 4 ಬಾರಿ ರಾಷ್ಟç ಪ್ರಶಸ್ತಿ, 32ಕ್ಕೂ ಹೆಚ್ಚು ರಾಜ್ಯ ಪ್ರಶಸ್ತಿಗಳನ್ನು ಪಡೆದಿದ್ದಾರೆ.
2017ರಲ್ಲಿ ಮೈಸೂರಿನಲ್ಲಿ ನಡೆದ ಸಂಗೀತ ಕಚೇರಿಯೊಂದಿಗೆ ಅವರು ಹಿನ್ನೆಲೆ ಗಾಯನದಿಂದ ನಿವೃತ್ತರಾಗಿದ್ದರು.

ಮೈಸೂರಿನಲ್ಲಿಯೇ ಎಸ್.ಜಾನಕಿಯವರ ಅಂತ್ಯಕ್ರಿಯೆ
ಮೈಸೂರು; ಇಳಿ ವಯಸ್ಸಿನಲ್ಲಿ ಕಾಲ ಕಳೆಯುತ್ತಿದ್ದ ಖ್ಯಾತ ಗಾಯಕಿ ಎಸ್.ಜಾನಕಿ ಅವರಿಗೆ ಮೈಸೂರು ಅಚ್ಚು ಮೆಚ್ಚಾಗಿತ್ತು. ಹಾಗಾಗಿಯೇ ತಮ್ಮ ಜೀವನದ ಸಂದ್ಯಾ ಕಾಲವನ್ನು ಮೈಸೂರಿನಲ್ಲಿಯೇ ಕಳೆಯುತ್ತಿದ್ದರು. ಮೈಸೂರಿನಲ್ಲಿಯೇ ತಮ್ಮ ನಿಧನದ ನಂತರ ಅಚಿತ್ಯಕ್ರಿಯೆ ನಡೆಯಬೇಕೆಂಬ ಇಚ್ಚೆಯನ್ನು ಹೊಂದಿದ್ದರು. ಈ ಹಿನ್ನಲೆಯಲ್ಲಿಯೇ ಅವರ ಆಸೆಯಂತೆ ಭಾನುವಾರ ಎಸ್.ಜಾನಕಿಯವರ ಪಾರ್ಥಿವ ಶರೀರದ ಅಂತ್ಯಕ್ರಿಯೆಯನ್ನು ಮೈಸೂರಿನಲ್ಲಿಯೇ ನೆರವೇರಿಸಲಾಗುತ್ತದೆ.
ಭಾನುವಾರ ಬೆಳಗ್ಗೆಯಿಂದ ಮೈಸೂರಿನ ಹೃದಯಭಾಗದಲ್ಲಿರುವ ಮಹಾರಾಜ ಮೈದಾನದಲ್ಲಿ ಎಸ್.ಜಾನಕಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಜಿಲ್ಲಾಡಳಿತ ವ್ಯವಸ್ಥೆ ಮಾಡಿದೆ. ಚಿತ್ರರಂಗದವರು U್ಪಣ್ಯರು, ಅಭಿಮಾನಿಗಳು ದರ್ಶನ ಪಡೆಯುವುದಕ್ಕೆ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ. ಬಳಿಕ ಮಧ್ಯಾಹ್ನ ಮೈಸೂರಿನ ಬೋಗಾದಿ ಸಮೀಪದ ಕಣಿಯರ ಹುಂಡಿ ಗ್ರಾಮದ ತೋಟದಲ್ಲಿ ಎಸ್.ಜಾನಕಿಯವರ ಅಂತ್ಯಸAಸ್ಕಾರ ನಡೆಯಲಿದೆ. ಈ ಕುರಿತು
ಎಸ್.ಜಾನಕಿ ಸಾಕು ಮಕ್ಕಳಾದ ಪವನ್ ಹಾಗೂ ಅನಿಲ್ ಅವರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಎಸ್.ಜಾನಕಿಯವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಅಪೋಲೋ ಆಸ್ಪತ್ರೆಗೆ
ದೌಡಾಯಿಸಿದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ. ಭಾನುವಾರ ನಡೆಯಬೇಕಾಗಿರುವ ಅಂತಿಮ ದರ್ಶನ, ಅಂತ್ಯಕ್ರಿಯೆ ವ್ಯವಸ್ಥೆ ಹಾಗೂ ಭದ್ರತೆ ಸಂಬAಧ ಅಧಿಕಾರಿಗಳ ಜತೆ ಚರ್ಚೆ ನಡೆಸಿದರು. ಜಿಲ್ಲಾಡಳಿತದಿಂದ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆಯನ್ನು ನಡೆಸಲಾಗುತ್ತದೆ.

ಮಗನನ್ನು ಕಳೆದುಕೊಂಡು ಮಾನಸಿಕವಾಗಿ ಕುಗ್ಗಿ ಹೋಗಿದ್ದ ಎಸ್.ಜಾನಕಿ
ಪತಿ, ಮಗ ಹೃದಯಾಘಾತದಿಂದ ಸಾವು, ಈಗ ಜಾನಕಿ ಕೂಡ ಹೃದಯಾಘಾತದಿಂದಲೇ ನಿಧನ
ಮೈಸೂರು; ಗಾಯಕಿ ಎಸ್.ಜಾನಕಿ ಅವರು, ಕಳೆದ ಜನವರಿ ತಿಂಗಳಲ್ಲಿ ಮಗ ಮುರಳಿಕೃಷ್ಣರನ್ನು ಕಳೆದುಕೊಂಡಿದ್ದರು. ಅವರ ಸಾವಿನಿಂದ ಮಾನಸಿಕವಾಗಿ ಕುಗ್ಗಿ ಹೋಗಿದ್ದರು. ಹೊರ ಜಗತ್ತಿನ ಸಂಪರ್ಕವನ್ನು ಕಡಿದುಕೊಂಡು ಮೌನವಾಗಿದ್ದರು. ಮಗ ಮೃತಪಟ್ಟ ಬಳಿಕ ಮೈಸೂರಿನ ಬೋಗಾದಿಯಲ್ಲಿರುವ ತಮ್ಮ ಆಪ್ತರ ಮನೆಯಲ್ಲಿ ಎಸ್ ಜಾನಕಿ ವಾಸವಿದ್ದರು. ಯಾರ ಸಂಪರ್ಕಕ್ಕೂ ಸಿಗುತ್ತಿರಲಿಲ್ಲ.
ಆಂಧ್ರಪ್ರದೇಶ ಮೂಲದ ಎಸ್ ಜಾನಕಿ;
ಆಂಧ್ರಪ್ರದೇಶದ ಗುಂಟೂರಿನಲ್ಲಿ ಏಪ್ರಿಲ್ 23, 1938 ರಂದು ಜನಿಸಿದ ಎಸ್ ಜಾನಕಿ ಅವರು, ನಾದಸ್ವರಂ ವಿದ್ವಾನ್ ಪೈದಿಸ್ವಾಮಿ ಅವರಿಂದ ಸಂಗೀತ ಕಲಿತ ಎಸ್ ಜಾನಕಿ ತಮ್ಮ 9ನೇ ವಯಸ್ಸಿಗೆ ವೇದಿಕೆ ಮೇಲೆ ಹಾಡಲು ಶುರು ಮಾಡಿದರು. ಆದರೆ, ಎಸ್ ಜಾನಕಿ ಎಂದೂ ಶಾಸ್ತಿçÃಯ ಸಂಗೀತ ಕಲಿತವರಲ್ಲ. 1959ರಲ್ಲಿ ವಿ ರಾಮ್ ಪ್ರಸಾದ್ ಎಂಬುವರನ್ನ ಎಸ್ ಜಾನಕಿ ಮದುವೆಯಾದವರು. ಅವರ ವೃತ್ತಿಬದುಕಿಗೆ ವಿ ರಾಮ್ ಪ್ರಸಾದ್ ಬೆಂಬಲವಾಗಿ ನಿಂತಿದ್ದರು. ಆದರೆ, 1997ರಲ್ಲಿ ಪತಿ ವಿ ರಾಮ್ ಪ್ರಸಾದ್ ಹೃದಯಾಘಾತದಿಂದ ಮೃತಪಟ್ಟರು.
ಎಸ್ ಜಾನಕಿ ಅವರ ಮಾತೃಭಾಷೆ ತೆಲುಗು. ಆದರೆ, ತಮಿಳು, ಕನ್ನಡ, ಮಲಯಾಳಂ ಹಾಗೂ ಹಿಂದಿ ಭಾಷೆಗಳನ್ನ ಸುಲಲಿತವಾಗಿ ಮಾತನಾಡುತ್ತಿದ್ದರು.

ಕನ್ನಡದಲ್ಲಿ ಹಲವು ಸೂಪರ್ ಹಿಟ್ ಹಾಡುಗಳನ್ನ ಹಾಡಿದರು;
ಕನ್ನಡದ ಹಲವು ಸೂಪರ್ ಹಿಟ್ ಗೀತೆಗಳಲ್ಲಿ ಗಾನಸುಧೆ ಹರಿಸಿದವರು ಎಸ್ ಜಾನಕಿ. ಅದರಲ್ಲೂ ಪಿಬಿ ಶ್ರೀನಿವಾಸ್, ಎಸ್ ಬಿ ಬಾಲಸುಬ್ರಹ್ಮಣ್ಯಂ ಹಾಗೂ ಡಾ ರಾಜ್‌ಕುಮಾರ್ ಜೊತೆಗಿನ ಎಸ್ ಜಾನಕಿ ಅವರ ಡ್ಯುಯೆಟ್ ಗೀತೆಗಳು ಇಂದಿಗೂ ಕನ್ನಡಿಗರ ಫೇವರಿಟ್ ಆಗಿವೆ.
1957ರಲ್ಲಿ ಮೊದಲ ಕನ್ನಡ ಹಾಡನ್ನ ಎಸ್ ಜಾನಕಿ ಹಾಡಿದರು. ಆನಂತರ ಕನ್ನಡದ ನಂಬರ್ 1 ಗಾಯಕಿಯಾಗಿ ಮೆರೆದರು. ಸಂಗೀತ ನಿರ್ದೇಶಕರಾದ ಜಿಕೆ ವೆಂಕಟೇಶ್, ರಾಜನ್ – ನಾಗೇಂದ್ರ ಅವರಿಂದ ಹಿಡಿದು ಹಂಸಲೇಖವರೆಗೂ ಎಲ್ಲಾ ಸಂಗೀತ ನಿರ್ದೇಶಕರಿಗೂ ಎಸ್ ಜಾನಕಿ ಸ್ವರ ಅಚ್ಚುಮೆಚ್ಚು.
2014ರಲ್ಲಿ ಎಸ್ ಜಾನಕಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಲಾಯಿತು. ಕನ್ನಡ ಸಿನಿಮಾ ಹಾಗೂ ಸಂಗೀತಕ್ಕೆ ಅಪಾರ ಕೊಡುಗೆ ನೀಡಿರುವ ಎಸ್ ಜಾನಕಿ ಅವರಿಗೆ ಮೈಸೂರು ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.
ಮಲಯಾಳಂ, ಕನ್ನಡ, ತೆಲುಗು, ತಮಿಳು, ಒಡಿಯಾ ಸೇರಿದಂತೆ ಭಾರತದ 20 ಭಾಷೆಗಳಲ್ಲಿ 48 ಸಾವಿರಕ್ಕೂ ಅಧಿಕ ಗೀತೆಗಳನ್ನ ಹಾಡಿರುವ ಖ್ಯಾತಿ ಎಸ್ ಜಾನಕಿ ಅವರದ್ದು. ಇದಲ್ಲದೆ ಜ್ಯಾಪನೀಸ್, ಜರ್ಮನ್, ಇಂಗ್ಲೀಷ್, ಫ್ರೆಂಚ್ ಹಾಗೂ ಸಿನ್ಹಳಾ ಭಾಷೆಯ ಹಾಡನ್ನೂ ಎಸ್ ಜಾನಕಿ ಸುಶ್ರಾವ್ಯವಾಗಿ ಹಾಡಿದ್ದಾರೆ.

ಪ್ರಶಸ್ತಿಗಳು;
ತಮ್ಮ ಸುದೀರ್ಘ ವೃತ್ತಿ ಜೀವನದಲ್ಲಿ ಹಲವಾರು ಪ್ರಶಸ್ತಿಗಳನ್ನ ಎಸ್ ಜಾನಕಿ ಮುಡಿಗೇರಿಸಿಕೊಂಡಿದ್ದಾರೆ. ಗಾಯನಕ್ಕೆ 4 ಬಾರಿ ನ್ಯಾಷನಲ್ ಅವಾರ್ಡ್, 11 ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ, 10 ಆಂಧ್ರ ಪ್ರದೇಶ ರಾಜ್ಯ ಚಲನಚಿತ್ರ ಪ್ರಶಸ್ತಿ, 6 ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿ, 1 ಒಡಿಶಾ ರಾಜ್ಯ ಚಲನಚಿತ್ರ ಪ್ರಶಸ್ತಿ, ಫಿಲ್ಮ್ ಫೇರ್ ಲೈಫ್ ಟೈಮ್ ಅಚೀವ್‌ಮೆಂಟ್ ಅವಾರ್ಡ್, ಡಾ ರಾಜ್‌ಕುಮಾರ್ ಲೈಫ್‌ಟೈಮ್ ಅಚೀವ್‌ಮೆಂಟ್ ಅವಾರ್ಡ್ ಸೇರಿದಂತೆ ಅನೇಕ ಪ್ರಶಸ್ತಿ, ಗೌರವ ಪುರಸ್ಕಾರಗಳು ಎಸ್ ಜಾನಕಿ ಅವರಿಗೆ ಸಂದಿವೆ.

ಎಸ್ ಜಾನಕಿ ಹಾಡಿರುವ ಕನ್ನಡ ಗೀತೆಗಳು

ಪೂಜಿಸಲೆಂದೆ ಹೂಗಳ ತಂದೆ - ಚಿತ್ರ: ಎರಡು ಕನಸು
ಗಗನವು ಎಲ್ಲೋ - ಚಿತ್ರ: ಗೆಜ್ಜೆ ಪೂಜೆ
ಒಮ್ಮೆ ನಿನ್ನನ್ನೂ - ಚಿತ್ರ: ಗಾಳಿ ಮಾತು
ಬರೆದೆ ನೀನು - ಚಿತ್ರ: ಸೀತಾ
ಬಾನಲ್ಲೂ ನೀನೇ.. ಭುವಿಯಲ್ಲೂ ನೀನೇ.. - ಚಿತ್ರ: ಬಯಲು ದಾರಿ
ಕರೆದರೂ ಕೇಳದೆ - ಚಿತ್ರ: ಸನಾದಿ ಅಪ್ಪಣ್ಣ
ದೀಪವು ನಿನ್ನದೆ - ಚಿತ್ರ: ಮೈಸೂರು ಮಲ್ಲಿಗೆ
ತಂಗಾಳಿಯಲ್ಲಿ ನಾನು ತೇಲಿಬಂದೆ - ಚಿತ್ರ: ಜನ್ಮ ಜನ್ಮದ ಅನುಬಂಧ
ಆಕಾಶ ದೀಪವು ನೀನು - ಚಿತ್ರ: ಪಾವನ ಗಂಗಾ