
ಮೈಸೂರು; ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಶನಿವಾರ ರಾತ್ರಿ ನಿಧನರಾದ ಭಾರತದ ಕೋಗಿಲೆ, ಖ್ಯಾತ ಹಿನ್ನೆಲೆ ಗಾಯಕಿ ಎಸ್. ಜಾನಕಿ (ಶಿಷ್ಟಾಲಯ ಶ್ರೀರಂಗA ಜಾನಕಿ) ಅವರ ಅಂತ್ಯಕ್ರಿಯೆಯು ಮೈಸೂರು ಜಿಲ್ಲೆಯ ಹೆಚ್.ಡಿ. ಕೋಟೆ ತಾಲೂಕಿನ ಕಣಿಯನಹುಂಡಿ ಗ್ರಾಮದಲ್ಲಿ ಭಾನುವಾರ ಶಾಸ್ತೊçÃಕ್ತ ವಿಧಿವಿಧಾನದೊಂದಿಗೆ ನೆರವೇರಿತು. ತೆಲುಗು ಬ್ರಾಹ್ಮಣ ಸಂಪ್ರದಾಯದAತೆ ಸಕಲ ವಿಧಿವಿಧಾನಗಳೊಂದಿಗೆ ಅಂತ್ಯಸAಸ್ಕಾರವನ್ನು ನೆರವೇರಿಸಲಾಗಿದ್ದು, ಎಸ್.ಜಾನಕಿಯವರ ಪಾರ್ಥಿವ ಶರೀರ ಅಗ್ನಿಯಲ್ಲಿ ದಹನಗೊಳ್ಳುವ ಮೂಲಕ ಜಾನಕಿಯವರು ಪಂಚಭೂತಗಳಲ್ಲಿ ಲೀನವಾದರು. ಎಸ್.ಜಾನಕಿಯವರ ಪುತ್ರ ದಿವಂಗತ ಮುರುಳಿ ಕೃಷ್ಣರವರ ಮಗಳು ಅಪ್ಸರಾ ತಮ್ಮ ಅಜ್ಜಿಯ ಅಂತ್ಯ ಸಂಸ್ಕಾರದ ವಿಧಿ ವಿಧಾನಗಳನ್ನು ನೆರವೇರಿಸಿದರು. ಆಗಮಿಕ ರಮೇಶ್ ಶರ್ಮ ನೇತೃತ್ವದ ನಾಲ್ವರ ತಂಡ ವಿಧಿ ವಿಧಾನಗಳನ್ನು ತಯಾರಿಸಿ ನಡೆಸಿ, ಅಂತ್ಯ ಸಂಸ್ಕಾರಕ್ಕೆ ಅನುವು ಮಾಡಿಕೊಟ್ಟಿತು.
ಶನಿವಾರ ರಾತ್ರಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದ ಎಸ್.ಜಾನಕಿಯವರ ಪಾರ್ಥಿವ ಶರೀರವನ್ನು ಅವರು ಕೊನೆಯ ದಿನಗಳನ್ನು ಕಳೆದಿದ್ದ ಮೈಸೂರಿನ ಬೋಗಾದಿಯ ಕೇರ್ ಟೇಕರ್ ಮನೆಗೆ ಒಯ್ಯಲಾಗಿತ್ತು. ಅಲ್ಲಿ ಬಂಧುಗಳು ದರ್ಶನ ಪಡೆದರು. ಸೊಸೆ ಹಾಗೂ ಮೊಮ್ಮಗಳು ಸೇರಿದಂತೆ ಕುಟುಂಬದವರು ಪೂಜೆ ಮೊದಲಾದ ಅಂತಿಮ ವಿಧಿವಿಧಾನ ನೆರವೇರಿಸಿದ ಬಳಿಕ ಮಹಾರಾಜ ಕಾಲೇಜು ಮೈದಾನಕ್ಕೆ ಪಾರ್ಥಿವ ಶರೀರವನ್ನು ಅಂಬ್ಯುಲೆನ್ಸ್ನಲ್ಲಿ ಬೆಳಿಗ್ಗೆ 8.53ಕ್ಕೆ ಪಾರ್ಥಿವ ಶರೀರವನ್ನು ತರಲಾಯಿತು. ಒಟ್ಟು ಏಳು ಗಂಟೆಗೂ ಹೆಚ್ಚು ಕಾಲ ಗಣ್ಯರು, ಸಾರ್ವಜನಿಕರ ದರ್ಶನಕ್ಕೆ ಇರಿಸಲಾಗಿತ್ತು. ಸಾವಿರಾರು ಮಂದಿ ಸರದಿ ಸಾಲಿನಲ್ಲಿ ಬಂದು ಅಂತಿಮ ದರ್ಶನ ಪಡೆದು ಕಂಬನಿ ಮಿಡಿದರು.
ಸುಗಮ ದರ್ಶನಕ್ಕಾಗಿ ಮೈಸೂರು ನಗರ ಪೊಲೀಸ್ ಆಯುಕ್ತ ಸೀಮಾ ಲಾಟ್ಕರ್. ಡಿಸಿಪಿ ಡಾ.ಹರ್ಷಪ್ರಿಯಂವದ, ಎಸಿಪಿ ಪ್ರಕಾಶ್ ನೇತೃತ್ತದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಬ್ಯಾರಿಕೇಡ್ ಹಾಕಿ ಗಣ್ಯಾತಿ ಗಣ್ಯರು, ಮುಖಂಡರುಗಳು ನೇರವಾಗಿ ಸಾಗಿ ದರ್ಶನ ಪಡೆಯಲು, ಸಾರ್ವಜನಿಕರು ಸರದಿ ಸಾಲಿನಲ್ಲಿ ಬರಲು ವ್ಯವಸ್ಥೆ ಮಾಡಲಾಗಿತ್ತು. ಒಂದು ಬದಿಯಲ್ಲಿ ಎಲ್ಇಡಿ ಪರದೆಯಲ್ಲಿ ನೇರ ಪ್ರಸಾರದ ವ್ಯವಸ್ಥೆಯನ್ನು ಮಾಡಲಾಗಿತ್ತು.
ಮಹಾರಾಜ ಕಾಲೇಜು ಮೈದಾನದಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನ ಕಾರ್ಯಕ್ರಮ ನಡೆದದ್ದು ಇದೇ ಮೊದಲನೇ ಬಾರಿಯಾಗಿದೆ. ಯಾವುದೇ ಗೊಂದಲ, ಗದ್ದಲವಿದ್ದರೆ ಸಾರ್ವಜನಿಕರು, ಒಡನಾಡಿಗಳು ಎಸ್.ಜಾನಕಿಯವರ ಅಂತಿಮ ದರ್ಶನ ಪಡೆದು ಕಂಬನಿ ಮಿಡಿದರು.
ಮೈಸೂರು ಸೇರಿದಂತೆ ರಾಜ್ಯದ ವಿವಿಧ ಭಾಗದ ಜೊತೆಗೆ ನೆರೆಯ ಕೇರಳಂ, ತಮಿಳುನಾಡು, ಆಂಧ್ರ ಮತ್ತು ತೆಲಂಗಾಣ ರಾಜ್ಯಗಳಿಂದಲೂ ಅಭಿಮಾನಿಗಳು, ಚಿತ್ರರಂಗದ ಕಲಾವಿದರು, ಸಂಗೀತ ನಿರ್ದೇಶಕರು, ನಿರ್ಮಾಪಕರು, ರಾಜಕೀಯ ರಂಗದ ಗಣ್ಯರು, ಒಡನಾಡಿಗಳು ಬಂದು ಅಂತಿಮ ದರ್ಶನ ಪಡೆದರು.
ಯಾವುದೇ ಗೊಂದಲ, ಗದ್ದಲ ಇಲ್ಲದಂತೆ ಕಾರ್ಯಕ್ರಮ ನಡೆಯಲು ಪೊಲೀಸರು ಸಾಕಷ್ಟು ಮುಂಜಾಗ್ರತಾ ಕ್ರಮ ವಹಿಸಿದ್ದರು. ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಕಮಾಂಡೋ, ಚಿರತೆ ಕಾರ್ಯಪಡೆಯವರೂ ಕಾರ್ಯನಿರ್ವಹಿಸಿದರು. ಶಾಮಿಯಾನ, ಆಸನಗಳು,ಕುಡಿಯುವ ನೀರು,ಬ್ಯಾರಿಕೇಡ್,ಮತ್ತು ಕುಟುಂಬಸ್ಥರಿಗೆ ಊಟೋಪಚಾರ,ಮತ್ತು ಅಂತ್ಯಕ್ರಿಯೆಗೆ ಅಗತ್ಯವಾದ ಎಲ್ಲಾ ಅತ್ಯುತ್ತಮ ವ್ಯವಸ್ಥಗಳನ್ನು ಮಾಡಲಾಗಿತ್ತು.
ವಿವಿಧೆಡೆಯಿಂದ ಸಾವಿರಾರು ಮಂದಿ ಅಭಿಮಾನಿಗಳು ಬಂದಿದ್ದರು. ಕೆಲವರು, ಮಕ್ಕಳು ಹಾಗೂ ಹಿರಿಯ ನಾಗರಿಕರ ಜೊತೆ ಕುಟುಂಬದೊAದಿಗೆ ಬಂದಿದ್ದರು. ಹೆಚ್ಚಿನವರು ಮಂದಿ ತಮ್ಮ ಮೊಬೈಲ್ ಫೋನ್ಗಳಲ್ಲಿ ಜಾನಕಿಯವರ ಪಾರ್ಥಿವ ಶರೀರದ ಫೋಟೊ ತೆಗೆದುಕೊಳ್ಳುತ್ತಿದ್ದರು.
ಝೀ ಕನ್ನಡ ವಾಹಿನಿಯ ‘ಸರಿಗಮಪ’ ಕಾರ್ಯಕ್ರಮದ ಸ್ಪರ್ಧಿಗಳಾದ ಮಕ್ಕಳು ಜಾನಕಿ ಅವರು ಹಾಡಿರುವ ‘ಎರಡು ಕನಸು’ ಚಲನಚಿತ್ರದ ‘ಪೂಜಿಸಲೆಂದೇ ಹೂಗಳ ತಂದೆ’, ‘ಶಾಂತಿ ಕ್ರಾಂತಿ’ ಚಲನಚಿತ್ರದ ‘ಹುಟ್ಟೋದ್ಯಾಕೆ ಸಾಯೋದ್ಯಾಕೆ ಏನಾದರು ಸಾಧಿಸಿ ಹೋಗೋಕೆ’ ಹಾಡುಗಳನ್ನು ಹಾಡಿ ಅಗಲಿದ ಗಾಯಕಿಗೆ ವಿಶೇಷ ಗೌರವ ಸಮರ್ಪಿಸಿದರು. ಚಲನಚಿತ್ರ ನಿರ್ದೇಶಕ ಹಂಸಲೇಖ ಅವರೊಂದಿಗೆ ‘ನೋಡು ಬಾ ನೋಡು ಬಾ ನಮ್ಮೂರ’ ಹಾಡನ್ನೂ ಹಾಡಿದರು.
ಮಧ್ಯಾಹ್ನ 3.05ಕ್ಕೆ ಎಸ್.ಜಾನಕಿಯವರ ಪಾರ್ಥಿವ ಶರೀರವನ್ನು ವಿವಿಧ ಹೂವುಗಳಿಂದ ಅಲಂಕೃತವಾಗಿದ್ದ ವಾಹನದಲ್ಲಿ ಇರಿಸಲಾಯಿತು. 3.09ಕ್ಕೆ ಮಹಾರಾಜ ಕಾಲೇಜ್ನಿಂದ ಹೆಚ್.ಡಿ.ಕೋಟೆ ತಾಲೂಕಿನ ಕಣಿಯನಹುಂಡಿಯತ್ತ ‘ಅಂತಿಮಯಾತ್ರೆ’ ಆರಂಭವಾಯಿತು. ಅವರ ಕುಟುಂಬದವರು, ಪೊಲೀಸರು ಹಾಗೂ ಅಧಿಕಾರಿಗಳು ವಾಹನಗಳಲ್ಲಿ ಸಾಗಿದರು. ಜಾನಕಿ ಅವರ ಪಾರ್ಥೀವ ಶರೀರವನ್ನು ಅಂತ್ಯಕ್ರಿಯೆಗಾಗಿ ಕಣಿಯನಹುಂಡಿ ತೋಟದತ್ತ ಕೊಂಡುಯ್ಯುತ್ತಿದ್ದು, ಮಾನ ಹುದ್ದಕ್ಕೂ ಅಭಿಮಾನಿಗಳು ಗುಂಪು ಗುಂಪಾಗಿ ನಿಂತು ನೆಚ್ಚಿನ ಗಾಯಕಿಗೆ ನಮಿಸಿದರು.
ಕಣಿಯನ ಹುಂಡಿಯ ಫಾರಂ ಹೌಸ್ನ್ನು ಪಾರ್ಥಿವ ಶರೀರ ತಂದು, ಅಲ್ಲಿ ಅಂತಿಮ ಸಂಸ್ಕಾರದ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು. ಸರ್ಕಾರದ ಪರವಾಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯನವರು ಜಾನಕಮ್ಮನವರ ಪಾರ್ಥಿವ ಶರೀರಕ್ಕೆ ಪುಷ್ಪಗುಚ್ಚವಿರಿಸಿ ಅಂತಿಮ ಗೌರವ ನಮನ ಸಲ್ಲಿಸಿದರು. ಜಿಲ್ಲಾಡಳಿತದ ಪರವಾಗಿ ಜಿಲ್ಲಾಧಿಕಾರಿ ಲಕ್ಷಿö್ಮಕಾಂತ ರೆಡ್ಡಿ, ನಗರ ಪೊಲೀಸ್ ಆಯುಕ್ತರು, ಜಿಲ್ಲಾ ಎಸ್ಪಿ, ಎಚ್.ಡಿ.ಕೋಟೆ ಕ್ಷೇತ್ರದ ಶಾಸಕ ಅನಿಲ್ ಚಿಕ್ಕಮಾದು ಅವರು ಗೌರವ ನಮನ ಸಲ್ಲಿಸಿದರು. ಬಳಿಕ ಸಕಲ ಸರ್ಕಾರಿ ಗೌರವವನ್ನು ಸಲ್ಲಿಸಲಾಯಿತು. ಮೈಸೂರು ಜಿಲ್ಲಾಡಳಿತದ ವತಿಯಿಂದ ಪೊಲೀಸ್ ಗೌರವವನ್ನು ಸಲ್ಲಿಸುವ ಮೂಲಕ ಗಾನಕೋಗಿಲೆಗೆ ಭಾವಪೂರ್ಣ ವಿದಾಯ ಹೇಳಲಾಯಿತು. ಸಚಿವ ರೋಜಿ ಎಂ.ಜಾನ್ ಅವರು ಕೇರಳಂ ಸರ್ಕಾರದ ಪರವಾಗಿ ಪಾಲ್ಗೊಂಡು ಗೌರವ ಸಲ್ಲಿಸಿದರು.
ಗಂಧ, ಕಾಡಿನ ಕಟ್ಟಿಗೆಗಳು, ತುಳಸಿಯಿಂದ ನಿರ್ಮಿಸಲಾಗಿದ್ದ ಚಿತೆಗೆ ಎಸ್.ಜಾನಕನಮ್ಮವರ ಪಾರ್ಥಿವ ಶರೀರವನ್ನು ಇರಿಸಿದಾಗ, ಕಟ್ಟಿಗೆ ಹಾಕಿದ ಮೊಮ್ಮಗಳು ಅಪ್ಸರಾ ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು.
ಹಿರಿಯ ಚಿತ್ರ ನಟಿ ಭಾರತಿ ವಿಷ್ಣುವರ್ಧನ್, ಜಯಮಾಲಾ, ಶ್ರೀನಾಥ್, ಸಂಗೀತ ನಿರ್ದೇಶಕ ಹಂಸಲೇಖ ಸ್ಭೆರಿದಂತೆ ನೆರೆದಿದ್ದ ಗಣ್ಯರು ಸೆಲ್ಯೂಟ್ ಹಾಕುವ ಮೂಲಕ ಭಾವ ಪೂರ್ಣ ಅಂತಿಮ ವಿದಾಯವನ್ನು ಎಸ್.ಜಾನಕಿಯವರಿಗೆ ಹೇಳಿದರು.
200ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಹಾಗೂ 2 ಕೆ.ಎಸ್.ಆರ್.ಪಿ ತುಕಡಿಗಳನ್ನು ನಿಯೋಜಿಸಲಾಗಿತ್ತು. ವಿಧಿವಿಧಾನಗಳ ವೇಳೆ ವಿವಿಐಪಿಗಳು ಹಾಗೂ ಗಣ್ಯರಷ್ಟೇ ಅಲ್ಲದೆ,ಸಾರ್ವಜನಿಕರು ಹಾಗೂ ಅಭಿಮಾನಿಗಳಿಗೂ ವೀಕ್ಷಣೆ ಮಾಡಲು ಸೂಕ್ತ ವ್ಯವಸ್ಥೆ ಮಾಡಲಾಗಿತ್ತು.