
ಮೈಸೂರು: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರವನ್ನು ಕಾಂಗ್ರೆಸ್ ರಾಜಕೀಯವಾಗಿ ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿ ಮೈಸೂರು ನಗರ ಮತ್ತು ಗ್ರಾಮಾಂತರ ಬಿಜೆಪಿ ವತಿಯಿಂದ ಶುಕ್ರವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ನಗರದ ರಾಮಸ್ವಾಮಿ ವೃತ್ತದ ಬಳಿ ಜಮಾಯಿಸಿದ ನೂರಾರು ಕಾರ್ಯಕರ್ತರು ಕಾಂಗ್ರೆಸ್ ವಿರುದ್ಧ ನಾನಾ ಘೋಷಣೆಗಳನ್ನು ಕೂಗಿ ಆಕ್ರೋಶವ್ಯಕ್ತಪಡಿಸಿದರು.
ಈ ವೇಳೆ ಶಾಸಕ ಟಿ.ಎಸ್.ಶ್ರೀವತ್ಸ ಮಾತನಾಡಿ, ಜೈಲಿನಿಂದ ಕೈದಿಗಳು ಪರಾರಿಯಾದರೆ ಅದಕ್ಕೆ ಅಧಿಕಾರಿಗಳು ಕಾರಣವಾದರೆ,ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಾದರೆ ಸಚಿವರು ಹೊಣೆಯಾಗಬೇಕಾ? ನಿಮ್ಮ ದ್ವಂದ್ವ ನೀತಿಯ ಬಗ್ಗೆ ಜನರಿಗೆ ಅರ್ಥವಾಗುತ್ತಿದೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿಕಾರಿದರು. ಬಿಜೆಪಿ ಶಾಸಕರ ಮೇಲೆ ಮೊಟ್ಟೆ ಎಸೆಯುತ್ತಾರೆ ಎಂದರೆ, ಗೃಹ ಇಲಾಖೆ ಏನು ಮಾಡುತ್ತಿದೆ ಎಂದು ಪ್ರಶ್ನಿಸಿದರು.
ಮಾಜಿ ಸಂಸದ ಪ್ರತಾಪ್ ಸಿಂಹ, ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ಪ್ರಧಾನಿ ನರೇಂದ್ರಮೋದಿ ಮುಚ್ಚಿ ಹಾಕದೆ ಸಿಬಿಐ ತನಿಖೆಯ ಮೂಲಕ ಹಗರಣದಲ್ಲಿ ಭಾಗಿಯಾಗಿದ್ದವರನ್ನು ಪತ್ತೆ ಹಚ್ಚಿ ಜೈಲಿಗೆ ಹಾಕಿದರು. ಮೊದಲು ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಕೇಳುತ್ತಿದ್ದವರು, ಈಗ ಪ್ರಧಾನಿ ರಾಜೀನಾಮೆ ಕೇಳುತ್ತಿದ್ದಾರೆ. ಮೋದಿ ಬಂದ ನಂತರ 1.36 ಲಕ್ಷ ಸೀಟುಗಳು ಹೆಚ್ಚಾಗಿದ್ದು, ಇಂದು 350 ರಿಂದ 845 ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲಾಗಿದೆ ಎಂದರು. ಭಾರತವನ್ನು ಮುಗಿಸಲು ಷಡ್ಯಂತ್ರ ಮಾಡುತ್ತಿರುವ ವ್ಯಕ್ತಿಗಳು ದೇಶ ವಿರೋಧಿ ಶಕ್ತಿಗಳೊಂದಿಗೆ ಕೈ ಜೋಡಿಸುತ್ತಿದ್ದಾರೆ. ಪ್ರತಿಭಟನಾನಿರತರಿಗೆ ಮುಲ್ಲಾಗಳು ಬಂದು ಬಿರಿಯಾನಿ ತಿನ್ನಿಸುತ್ತಿದ್ದಾರೆ. ತಮಗೆ ತಿನ್ನಲು ಇಲ್ಲದ ಮುಲ್ಲಾಗಳು ಬಿರಿಯಾನಿ ಕೊಟ್ಟು ಔತಣ ನೀಡುತ್ತಿದ್ದಾರೆ ಎಂದು ಟೀಕಿಸಿದರು.
ಶಾಸಕ,ಯುವಮೋರ್ಚಾ ರಾಜ್ಯಾಧ್ಯಕ್ಷ ಧೀರಜ್ ಮುನಿರಾಜ್ ವಾತನಾಡಿ, ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ನಂತರ ಸಿಬಿಐ ತನಿಖೆ ಶುರು ಮಾಡಿ ಹದಿಮೂರು ಜನರನ್ನು ಬಂಧಿಸಲಾಗಿದೆ. ಅನೇಕ ಅಧಿಕಾರಿಗಳನ್ನು ವರ್ಗಾವಣೆ ವಾಡಲಾಗಿದೆ. ವಿದ್ಯಾರ್ಥಿಗಳ ಹಿತ ಕಾಪಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುವ ಪ್ರಧಾನಿ ನರೇಂದ್ರಮೋದಿ ಅವರ ಮೇಲೆ ಅಪಪ್ರಚಾರದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದರು. ನೀಟ್ ಪರೀಕ್ಷೆಯಲ್ಲಿ ಅಮೂಲಾಗ್ರ ಬದಲಾವಣೆ ವಾಡಲು ಸಂಕಲ್ಪ ವಾಡಿದ್ದಾರೆ. ದೇಶದ ಏಳಿಗೆ ಮತ್ತು ಆಖಂಡತೆಯನ್ನು ಸಹಿಸದೆ ಕೆಲವರು ನಡೆಸುತ್ತಿರುವ ರಾಜಕೀಯ ಪಿತೂರಿಯನ್ನು ಸಹಿಸುವುದಿಲ್ಲ ಎಂದು ಎಚ್ಚರಿಸಿದರು. ನೀಟ್ ಪ್ರಶ್ನೆ ಪತ್ರಿಕೆ ವಿಚಾರವನ್ನು ಮುಂದಿಟ್ಟುಕೊAಡು ರಾಜಕೀಯ ಅಸ್ಥಿರತೆಗೆ ಕೆಲವರು ಒಳಗೊಳಗೆ ಸಂಚು ಮಾಡುತ್ತಿದ್ದಾರೆ. ದೇಶದ ಯುವಕರಿಗೆ ಸುಳ್ಳು ವಿಚಾರಗಳನ್ನು ಹರಡುತ್ತಿದ್ದಾರೆ. ಕಾಂಗ್ರೆಸ್ ಮಾಡಿದ ಪಾಪವನ್ನು ಜನರು ಮರೆಯಲ್ಲ ಎಂದರು.
ಪ್ರತಿಭಟನೆಯಲ್ಲಿ ಮೈಸೂರು ಗ್ರಾಮಾಂತರ ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಂಬ್ರಳ್ಳಿ ಎನ್. ಸುಬ್ಬಣ್ಣ, ಬಿಜೆಪಿ ರಾಜ್ಯ ಎಸ್.ಟಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿವಕುಮಾರ್, ಮೈಸೂರು ವಿಭಾಗೀಯ ಸಹ ಪ್ರಭಾರಿ ಡಾ.ಸಿ.ಎನ್.ನಿಂಗರಾಜ್ ಗೌಡ, ಚಿತ್ರ ನಟ ಹಾಗೂ ಮುಖಂಡ ಎಸ್.ಜಯಪ್ರಕಾಶ್ (ಜೆಪಿ), ಕಾಂಪೋಸ್ಟ್ ನಿಗಮದ ಮಾಜಿ ಅಧ್ಯಕ್ಷ ಎಸ್.ಮಹದೇವಯ್ಯ, ನಗರಪಾಲಿಕೆ ಮಾಜಿ ಸದಸ್ಯರಾದ ಪಿ.ಪ್ರಶಾಂತ್ ಗೌಡ, ಪ್ರಧಾನ ಕಾರ್ಯದರ್ಶಿಗಳಾದ ರುದ್ರಮೂರ್ತಿ,ವಿ.ಸೋಮಸುಂದರ್, ಬಿ.ಎಂ.ರಘು, ನಗರ ವಕ್ತಾರ ಎಂ.ವಿ.ಮೋಹನ್, ಮಾಜಿ ಮೇಯರ್ ಎಸ್.ಸಂದೇಶ್ ಸ್ವಾಮಿ, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎ.ಹೇಮಂತ್ ಕುವಾರ್ ಗೌಡ,ಬಿ.ಪಿ.ಮಂಜುನಾಥ್, ರಂಗಸ್ವಾಮಿ, ಎಂ.ಕೆ.ಶAಕರ್, ಸೌಮ್ಯ ಉಮೇಶ್, ಪ್ರಮೀಳಾಭರತ್,ಗುರು ವಿನಾಯಕ, ಲಕ್ಷಿ÷್ಮÃ ಕಿರಣ್ ಗೌಡ,.ರಮೇಶ್, ಮೈಸೂರು ಜಿಲ್ಲಾ ಮಾಜಿ ಅಧ್ಯಕ್ಷರಾದ ಮಂಗಳಾ ಸೋಮಶೇಖರ್, ಬಿಜೆಪಿ ಉಪಾಧ್ಯಕ್ಷರಾದ ಹೇವಾನಂದೀಶ್, ಕಾರ್ತಿಕ್ ಮರಿಯಪ್ಪ, ಅರುಣ್ ಕುಮಾರ್ ಗೌಡ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ನಳಿನಿಗೌಡ, ಕಾರ್ಯದರ್ಶಿ ಎಂ.ಮೋನಿಕಾ, ಎಚ್.ಜಿ.ಗಿರಿಧರ್, ನಾಗರತ್ನಮ್ಮ, ಅನಿತಾ, ಜೋಗಿಮಂಜು, ಕೃಷ್ಣನಾಯಕ,ಕಿರಣ್ ಗೌಡ, ದಿನೇಶ್ ಗೌಡ ಮತ್ತಿತರರು ಪ್ರತಿಭಟನೆಯಲ್ಲಿ ಹಾಜರಿದ್ದರು.