3Kaala News

ಸುಭಾಷಿತ 

ಭೌತಿಕ ಬದುಕಿಗೆ ಆಧ್ಯಾತ್ಮದ ಜ್ಞಾನ ಅವಶ್ಯಕ. ಮನುಷ್ಯ ಧರ್ಮದಿಂದ ವಿಮುಖನಾದರೇ, ಜೀವನ ಅಶಾಂತಿಯ ಕಡಲಾಗುತ್ತದೆ. ಮನುಷ್ಯನ ಬದುಕು ಇನ್ನೊಬ್ಬರಿಗೆ ಮಾದರಿಯಾಗಬೇಕಲ್ಲದೆ, ಮಾರಕವಾಗಬಾರದು.  ಸುಳ್ಳು ಹೇಳಲು ಹಲವು ದಾರಿ, ಆದರೆ ಸತ್ಯಕ್ಕೆ ಇರುವುದೊಂದೇ ದಾರಿ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಮೈಸೂರು

June 17, 2026

ತಾಯಿಯನ್ನೇ ಕೊಲೆ ಮಾಡಿ ಸುಟ್ಟು ಹಾಕಿದ ಮಗ
ಮೈಸೂರು: ತಾಯಿಯನ್ನೇ ಮಗ ಕೊಲೆ ಮಾಡಿರುವ ಘಟನೆ ಮೈಸೂರು ತಾಲ್ಲೂಕಿನ ಮಾದಹಳ್ಳಿ ಗ್ರಾಮದಲ್ಲಿ ನಡೆದಿದೆ.ಸುಧಾ ಕೊಲೆಯಾಗಿದ್ದು, ಈಕೆಯ ಪುತ್ರ್ ಶಿವರುದ್ರಪ್ಪ ಕೊಲೆ ಮಾಡಿದ ಆರೋಪಿಯಾಗಿದ್ದಾನೆ.ಪರಪುರುಷನ ಸಂಗ ಮಾಡಿದ್ದ ತಾಯಿಗೆ ಶಿವರುದ್ರಪ್ಪ ಪದೇ ಪದೇ ಬುದ್ದಿವಾದ ಹೇಳುತ್ತಿದ್ದ. ಆದರೂ ತಾಯಿ ಸುಧಾ ಮಾತ್ರ ಪರ ಪುರುಷನ ಸಹವಾಸ ಬಿಡಲು ಒಪುö್ಪತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಸುಧಾಳ ಮೇಲೆ ಶಿವರುದ್ರಪ್ಪ ತೀವ್ರ ಹಲ್ಲೆ ನಡೆಸಿದ್ದಾನೆ. ತೀವ್ರ ಹಲ್ಲೆಗೊಳಗಾಗಿದ್ದ ಸುಧಾಳನ್ನು ಸಂಬAಧಿಕರು ಆಸ್ಪತ್ರೆಗೆ ಕರೆಯೊಯ್ದಿದ್ದರು. ಈ ವೇಳೆ ಅಡ್ಡಬಂದ ಪುತ್ರ ತಾನೇ ಆಸ್ಪತ್ರೆಗೆ ಕರೆದೊಯ್ಯುವುದಾಗಿ ಹೇಳಿ, ಆಕೆಯ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾನೆ. ಬಳಿಕ ಕಣಿಯನಹುಂಡಿ ಸಮೀಪದ ತೋಟದಲ್ಲಿ ತಾಯಿಯ ಶವವನ್ನು ಸುಟ್ಟುಹಾಕಿ ಪರಾರಿಯಾಗಿದ್ದ. ಆರೋಪಿಗೆ ಚಿಕ್ಕಪ್ಪನ ಮಕ್ಕಳಾದ ಆಕಾಶ್ ಹಾಗೂ ಅಭಿ ಎಂಬುವವರು ಕೂಡ ಸಾಥ್ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.ಪ್ರಕರಣ ಭೇದಿಸಿದ ಜಯಪುರ ಠಾಣೆ ಪೊಲೀಸರು, ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.