3Kaala News

ಸುಭಾಷಿತ 

ಯಾವುದಕ್ಕಾಗಿ ಚಿಂತೆ ಯಾವುದಕ್ಕಾಗಿ ದುಃಖ ಪಡುತ್ತಿದ್ದಿ , ನೆನ್ನೆ ಇದ್ದ ಖುಷಿ ಇವತ್ತು ಇಲ್ಲ ಅಂದಮೇಲೆ ಇವತ್ತು ಇರೋದು ನಾಳೆ ಇರುತ್ತಾ? ಈ ಜಗತ್ತಿನ ಸೃಷ್ಟಿಯಲ್ಲಿ ಯಾವುದೂ ಕೂಡ ಶಾಶ್ವತ ಅಲ್ಲ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ರಾಜ್ಯ

June 17, 2026

ನಾಮ ಸ್ಮರಣೆಯಿಂದ ಅನಂತ ಫಲ
ಮೈಸೂರು: ಕೇವಲ ಭಗವಂತನ ನಾಮ ಸ್ಮರಣೆಯಿಂದಲೇ ಮಹಾನ್ ಯೋಗಿಗಳಿಗೂ ದೊರಕದ ಫಲವನ್ನು ಸಾಮಾನ್ಯ ಭಕ್ತರು ಗಳಿಸಬಹುದು ಎಂದು ಶ್ರೀ ಉತ್ತರಾದಿ ಮಠದ ಶ್ರೀ ಸತ್ಯಾತ್ಮ ತೀರ್ಥ ಸ್ವಾಮೀಜಿ ಹೇಳಿದರು. ಅಧಿಕ ಜ್ಯೇಷ್ಠ ಮಾಸದ ಅಂಗವಾಗಿ ಶ್ರೀಮನ್ ಮಧ್ವಾಚಾರ್ಯ ಮೂಲ ಮಹಾ ಸಂಸ್ಥಾನ ಉತ್ತರಾದಿ ಮಠದಲ್ಲಿ ಹಮ್ಮಿಕೊಂಡಿರುವಮೈಸೂರು ದಿಗ್ವಿಜಯವಿಶೇಷ ಕಾರ್ಯಕ್ರಮ ಸರಣಿಯಲ್ಲಿ ಅವರು ಶನಿವಾರ ಸಂಜೆ ನಡೆದ ಧರ್ಮ ಸಭೆಯಲ್ಲಿ ಅನುಗ್ರಹ ಸಂದೇಶ ನೀಡಿದರು. ಭಾಗವತವು ಪರಮ ಪಾವನ ಗ್ರಂಥ. ಇಲ್ಲಿ ಬರುವ ಕತೆಗಳು ಕೇವಲ ರಂಜನೆಗಾಗಿ, ಟೈಂ ಪಾಸ್ ಮಾಡಲಿಕ್ಕಾಗಿ ಅಲ್ಲ. ಜೀವನದ ಸಂದೇಶ ಇಲ್ಲಿ ಅಡಕವಾಗಿದೆ. ಮೌಲ್ಯಗಳು ತುಂಬಿವೆ. ಅಧ್ಯಾತ್ಮ ಮಾರ್ಗದಲ್ಲಿ ಸಾಗಲು ಸೂತ್ರಗಳಿವೆ. ಒಟ್ಟಾರೆ ಬದುಕನ್ನು ಪಾವನವಾಗಿಸಲು ಬೇಕಾದ ಎಲ್ಲ ಅಂಶಗಳೂ ಇವೆ ಎಂದರು.ನಿತ್ಯವೂ ದೇವರ, ಗುರುಗಳ ಸೇವೆ ಮಾಡಿ. ಭಗವತನಿಗೆ ನೈವೇದ್ಯ ಮಾಡಿದ ಆಹಾರವನ್ನೇ ಸೇವಿಸಿ. ಪುಣ್ಯ ನದಿಗಳಲ್ಲಿ ಸ್ನಾನ ಮಾಡಿ. ಯಾರನ್ನೂ ನಿಂದೆ ಮಾಡಬೇಡಿ. ಜ್ಞಾನಿಗಳ, ಪಂಡಿತರ ದರ್ಶನ ಮಾಡಿ. ಇದರಿಂದ ಮಾನವ ಜನ್ಮ ಸಾರ್ಥಕವಾಗುತ್ತದೆ ಎಂದು ಸ್ವಾಮೀಜಿ ಹೇಳಿದರು. ಪಂಡಿತ ಪ್ರಭಂಜನಾಚಾರ್ಯ ವಿದ್ಯಾಪತಿ ಅವರು ಪ್ರವಚನ ನೀಡಿದರು. ವಿದ್ವಾನ್ ಪ್ರಣವ ಶ್ರೀಪಾದ ಅವರ ದಾಸ ಲಹರಿ ಗಾಯನ ರಂಜಿಸಿತು. ಮಹಾಭಾರತ ತಾತ್ಪರ್ಯ ನಿರ್ಣಯ ಉಪನ್ಯಾಸ ನೀಡಿದ ಹಿರಿಯ ಪಂಡಿತ ಆದ್ಯ ಗೋವಿಂದಾಚಾರ್ಯ ಮತ್ತು ರಂಗನಾಥಾಚಾರ್ಯ ಕಟ್ಟಿ ಅವರಿಗೆ ಗೌರವಿಸಲಾಯಿತು. ಬೆಳಗ್ಗೆ ಧನ್ವಂತರಿ ಸನ್ನಿಧಿಯಲ್ಲಿ ಶ್ರೀಗಳಿಂದ ಸಂಸ್ಥಾನ ಪೂಜೆ, ಭಕ್ತರಿಗೆ ಮುದ್ರಾ ಧಾರಣೆ ನಡೆಯಿತು.*ಇಂದು ಅಧಿಕ ಮಾಸದ ಕಾರ್ಯಕ್ರಮ ಉದ್ಘಾಟನೆ: ಅಧಿಕ ಮಾಸದ ಅಂಗವಾಗಿ ಅಗ್ರಹಾರ ಮುಖ್ಯ ರಸ್ತೆಯಲ್ಲಿರುವ ಶ್ರೀ ರುದ್ರ ದೇವರ ಸನ್ನಿಧಿ ಆವರಣದ ಬೃಹತ್ ವೇದಿಕೆಯಲ್ಲಿ ಮೇ 17ರ ಸಂಜೆ 6ಕ್ಕೆ ಅಧಿಕ ಮಾಸೋತ್ಸವ 33 ದಿನಗಳ ಸರಣಿ ವಿಧ್ಯುಕ್ತವಾಗಿ ಉದ್ಘಾಟನೆಗೊಳ್ಳಲಿದೆ. ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ನಗರದ ಗಣ್ಯರು, ಪಂಡಿತರು ಭಾಗವಹಿಸಲಿದ್ದಾರೆ.ಚಿತ್ರ ಶೀರ್ಷಿಕೆ :::: ಅಧಿಕ ಜ್ಯೇಷ್ಠ ಮಾಸದ ಅಂಗವಾಗಿ ಶ್ರೀಮನ್ ಮಧ್ವಾಚಾರ್ಯ ಮೂಲ ಮಹಾ ಸಂಸ್ಥಾನ ಉತ್ತರಾದಿ ಮಠವು ಅಗ್ರಹಾರದಲ್ಲಿ ಹಮ್ಮಿಕೊಂಡಿರುವ ಮೈಸೂರು ದಿಗ್ವಿಜಯ ವಿಶೇಷ ಕಾರ್ಯಕ್ರಮದ ಧರ್ಮ ಸಭೆಯಲ್ಲಿ ಹಿರಿಯ ಪಂಡಿತ ಆದ್ಯ ಗೋವಿಂದಾಚಾರ್ಯರನ್ನು ಸನ್ಮಾನಿಸಲಾಯಿತು. ಶ್ರೀ ಸತ್ಯಾತ್ಮ ತೀರ್ಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.