Skip to main content

3Kaala News

ಸುಭಾಷಿತ 

ಪಕ್ಕದಲ್ಲಿರುವವನ ತಟ್ಟೆಯಲ್ಲಿ ಏನಿದೆ ಅಂತ ಯಾವತ್ತೂ ಇಣುಕಿ ನೋಡಬೇಡ. ಕಾರಣ ಅಲ್ಲಿ ಜಾಸ್ತಿಯಿದ್ದರೆ, ನಿನಗೆ ಸಂಕಟವಾಗುತ್ತದೆ.ಅಲ್ಲಿ ಕಡಿಮೆ ಇದ್ದರೆ, ನಿನಗೆ ಅಹಂಕಾರ ಬರುತ್ತದೆ.ಎರಡೂ ಒಳ್ಳೆಯದಲ್ಲ.ನಮ್ಮ ತಟ್ಟೆಯನ್ನು ನಾವು ನೋಡಿಕೊಂಡಿದ್ದರೆ, ಸಿಗುವ ಸಂತೋಷವೇ ಬೇರೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಕೇಂದ್ರ ಸರ್ಕಾರದ ಯೋಜನೆಗಳನ್ನು ಪಕ್ಷದ ಕಾರ್ಯಕರ್ತರು, ಮುಖಂಡರುಗಳು ಮನೆ ಮನೆಗೆ ತಲುಪಿಸಬೇಕು; ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ


ಮೈಸೂರು: ಆಡಳಿತ ರೂಢ ಪ್ರಧಾನಿ ನರೇಂದ್ರಮೋದಿ ನೇತೃತ್ವದ ಕೇಂದ್ರ ಸರ್ಕಾರದ ಯೋಜನೆಗಳನ್ನು ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರುಗಳು ಆಸಕ್ತಿ ವಹಿಸಿ ಮನೆ ಮನೆಗೆ ತಲುಪಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ತಿಳಿಸಿದರು.
ಮೈಸೂರು ಹೊರವಲಯದ ಲಿಂಗದೇವರಕೊಪ್ಪಲು ಬಳಿ ಇರುವ ಪ್ರಜಾಪಿತ ಬ್ರಹ್ಮಕುವಾರಿ ಈಶ್ವರೀಯ ವಿದ್ಯಾಲಯದಲ್ಲಿ ಮೈಸೂರು ನಗರ ಬಿಜೆಪಿ ವತಿಯಿಂದ ಆಯೋಜಿಸಿದ್ದ ಮೈಸೂರು ಮಹಾನಗರ ಪ್ರಶಿಕ್ಷಣ ವರ್ಗದ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಿಜೆಪಿ ಜನಸಂಘದ ಕಾಲದಿಂದಲೂ ನಂಬಿದ ವಿಚಾರಕ್ಕೆ ಒತ್ತು ನೀಡಿ ಕೆಲಸ ಮಾಡುತ್ತಿದೆ.ಅಧಿಕಾರ ಇರಲಿ,ಇಲ್ಲದಿದ್ದರೂ ನಂಬಿದ ಸಿದ್ಧಾಂತ ಉಳಿವಿಗಾಗಿ ಕೆಲಸ ಮಾಡಿದೆ. ಕಾರ್ಯಕರ್ತರ ಶ್ರಮ ದೊಡ್ಡದು. ಕಾರ್ಯಕರ್ತರೇ ನಮ್ಮ ನಾಯಕರು. ನಾಯಕರನ್ನು ಹುಟ್ಟು ಹಾಕುವುದಕ್ಕೆ ಅನೇಕರು ಶ್ರಮಿಸಿದ್ದಾರೆ ಎಂದರು.
ಪಕ್ಷದ ಮೂಲ ತತ್ವ,ಸಿದ್ದಾಂತವನ್ನು ಪ್ರತಿಯೊಬ್ಬ ಕಾರ್ಯಕರ್ತ ತಿಳಿದುಕೊಳ್ಳಬೇಕು. ಕಾರ್ಯಕರ್ತರಿಗೆ ತಿಳಿಸುವ ಕೆಲಸ ಆಗಬೇಕು.ಭಾರತ್ ಮಾತಾಕೀ ಜೈ ಎನ್ನುವುದು ಘೋಷಣೆ ಕೂಗಿದರೂ, ಅದು ಮನಸ್ಸಿನಿಂದ ಬರಬೇಕು. ಭಾವನಾತ್ಮಕ ವಿಚಾರಗಳನ್ನು ಅರಿಯಬೇಕು ಎಂದು ಸಲಹೆ ನೀಡಿದರು.
ದೇಶಮೊದಲು ಅಮೇಲೆ ನಾವು ಎನ್ನುವ ಗುರಿ. ರಾಮಮಂದಿರ ವಿಚಾರ,ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗವೆAದು ಹೇಳಿಕೊಂಡು ಬಂದಿದ್ದರಿAದಾಗಿ, ಅದರಲ್ಲಿ ನಾವು ಸಫಲವಾದೆವು. ಪಕ್ಷ ಇಂದು ಹೆಮ್ಮರವಾಗಿ ಬೆಳೆದಿದೆ. ಪ್ರಪಂಚದಲ್ಲೇ ಅತ್ಯಂತ ದೊಡ್ಡ ರಾಜಕೀಯ ಪಕ್ಷ.ಆದರೆ ಅತಿ ಕಿರಿಯ ವಯಸ್ಸಿನ ನಾಯಕ ಪಕ್ಷದ ರಾಷ್ಟಿçÃಯ ಅಧ್ಯಕ್ಷರಾಗಿದ್ದಾರೆ. ಮುಂದಿನ ಪೀಳಿಗೆಗೆ ಪಕ್ಷವನ್ನು ಮತ್ತಷ್ಟು ಗಟ್ಟಿ ಮತ್ತು ಬಲಪಡಿಸುವ ಗುರಿ ಹೊಂದಿ ನಾಉಕರನ್ನು ರೂಪಿಸುತ್ತಿದ್ದಾರೆ ಎಂದರು.
ಮೈಸೂರು ನಗರಪಾಲಿಕೆಯಲ್ಲಿ ೬೫ ಸ್ಥಾನಗಳು ಇರುವಾಗ ಎಲ್ಲರಿಗೂ ಚುನಾವಣೆಯಲ್ಲಿ ಅವಕಾಶ ಸಿಗಲ್ಲ.ಅದೇ ರೀತಿ,ಶಾಸಕರು,ಸಂಸದರ ಸ್ಥಾನಗಳಲ್ಲೂ ಅವಕಾಶ ಸಿಗದೆ ಇರಬಹುದು. ಆದರೆ, ಅಧಿಕಾರ ಇಲ್ಲದಿದ್ದಾಗ ಜೈ ಎನ್ನಿಸಿಕೊಳ್ಳುವವನೇ ನಿಜವಾದ ಕಾರ್ಯಕರ್ತ,ನಾಯಕನಾಗಿರುತ್ತಾನೆ ಎಂದು ಹೇಳಿದರು.
ಹೊಗಳಿಕೆಯಿಂದ ಅಡಗಿರುವ ಸತ್ಯ ಹಾಗೂ ಟೀಕೆಯಲ್ಲಿ ಅಡಗಿರುವ ಸುಳ್ಳುಗಳನ್ನು ವಿಮರ್ಶೆ ಮಾಡಬೇಕು. ಇಂದು ಶೇ.೨೫ರಷ್ಟು ವ್ಯಕ್ತಿಗತ ಸಾಮರ್ಥ್ಯವಿದ್ದರೆ,ಶೇ.೭೫ರಷ್ಟು ಪಕ್ಷ,ಸಂಘಟನೆ ಇರುತ್ತದೆ ಎಂದರು. ಶಿಸ್ತು ಇಲ್ಲದ ಪಕ್ಷ ಬೆಳೆ?ಂಲು ಸಾಧ್ಯವಿಲ್ಲ. ಶಿಸ್ತು ಇಲ್ಲದಿದ್ದರೆ ಏನಾಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ.
ಕಾರ್ಯಕರ್ತರ ಶ್ರಮದಿಂದಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವಕರ್ಮ ಯೋಜನೆ ದೊಡ್ಡ ಮಟ್ಟದಲ್ಲಿ ಅನುಷ್ಠಾನವಾಗಿ ಕುಶಲಕರ್ಮಿಗಳಿಗೆ ಆರ್ಥಿಕ ಶಕ್ತಿ ತುಂಬುತ್ತಿದೆ. ಬಿಜೆಪಿ ಘೋಷಣೆ ಆಧಾರಿತ ರಾಜಕಾರಣ ಮಾಡದೆ ಅನುಷ್ಠಾನ ಆಧಾರಿತ ರಾಜಕಾರಣ ಮಾಡುತ್ತಾ ಬಂದಿದೆ. ಮೋದಿ ಸರ್ಕಾರ ಬಂದ ಮೇಲೆ ಹೊಸ ಹೊಸ ಯೋಜನೆಗಳನ್ನು ರೂಪಿಸಿ, ಅನುಷ್ಠಾನಕ್ಕೆ ತರುವ ಕೆಲಸ ಮಾಡಲಾಗುತ್ತಿದೆ. ಸಬ್‌ಕಾಸಾಥ್-ಸಬ್‌ಕಾ ವಿಕಾಸ್ ಎನ್ನುವ ಮಂತ್ರದAತೆ ಎಲ್ಲ ಜನರಿಗೂ ಅನುಕೂಲ ಮಾಡಿಕೊಡುತ್ತಿದೆ ಎಂದರು.
ಸಶಕ್ತ,ಸಮೃದ್ಧ ಹಾಗೂ ಸ್ವಾಭಿಮಾನ ಭಾರತವನ್ನಾಗಿ ಮಾಡಲು ಅಂದು ಅಟಲ್‌ಬಿಹಾರಿ ವಾಜಪೇಯಿ ಕೊಟ್ಟಿದ್ದ ಕರೆಯಂತೆ ಮೋದಿ ಅವರು, ಚಾಚುತಪ್ಪದೆ ಮಾಡುತ್ತಿದ್ದಾರೆ. ಅವಕಾಶಗಳು ಎಲ್ಲರಿಗೂ ಒದಗಿ ಬರಲ್ಲ. ಬಂದ ಅವಕಾಶವನ್ನು ಸದುಪಯೋಗಪಡಿಸಕೊಳ್ಳಬೇಕು. ವಿಶ್ವಕರ್ಮ ಯೋಜನೆಯಡಿ ಕುಲಕಸುಬು ಮಾಡಿಕೊಂಡು ಬಂದ ಜನರಿಗೆ ಅನುಕೂಲವಾಗಿದೆ.ಅದೇ ರೀತಿ ಅನೇಕ ಯೋಜನೆಗಳು ಅಭಿವೃದ್ಧಿಗೆ ಪೂರಕವಾಗಿದೆ ಎಂದು ತಿಳಿಸಿದರು.
ನೋಟು ಅಮಾನ್ಯೀಕರಣ ಗಟ್ಟಿ ನಿಲುವು: ದೇಶದ ಅರ್ಥವ್ಯವಸ್ಥೆಯಾದ ನೋಟು ಅಮಾನ್ಯೀಕರಣ ಮಾಡುವ ತೀರ್ಮಾನ ಸಾಮಾನ್ಯವಾದುದಲ್ಲ.ಅದೊಂದು ಗಟ್ಟಿಯಾದ ನಿಲುವಾಗಿತ್ತು. ಭಾರತದ ಬಗ್ಗೆ ಲಘುವಾಗಿ ಪರಿಗಣಿಸಿದ್ದ ಅನೇಕ ದೇಶಗಳಿಗೆ ಕೊರೊನಾಬಂದಾಗ ವ್ಯಾಕ್ಸಿನ್ ರಫುö್ತ ಮಾಡಿದ್ದು ದೊಡ್ಡ ಸಾಧನೆಯಾಗಿದೆ ಎಂದು ಬಣ್ಣಿಸಿದರು.
ಭಾರತದ ಕಡೆಗೆ ಇಂದು ಜಗತ್ತು ನೋಡುವಂತಾಗುವುದರ ಹಿಂದೆ ಮೋದಿ ನಾಯಕತ್ವ ಕಾರಣವಾಗಿದೆ. ಬೇರೆ ದೇಶಗಳಿಗೆ ಹೋಲಿಸಿದರೆ ಆರ್ಥಿಕತೆಯ ಶಿಸ್ತು ಕಾಪಾಡಿಕೊಂಡು ಬಂದಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೈಸೂರು ನಗರ ಬಿಜೆಪಿ ಅಧ್ಯಕ್ಷ ಎಲ್.ನಾಗೇಂದ್ರ ವಹಿಸಿದ್ದರು. ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್,ಶಾಸಕ ಟಿ.ಎಸ್.ಶ್ರೀವತ್ಸ,ರಾಜ್ಯ ಉಪಾಧ್ಯಕ್ಷರಾದ ಮಾಳವಿಕ ಅವಿನಾಶ್, ಮೈಸೂರು ಜಿಲ್ಲಾ ಪ್ರಶಿಕ್ಷಣ ವರ್ಗದ ಉಸ್ತುವಾರಿ ರಾಬಿನ್ ದೇವಯ್ಯ, ವಿಧಾನ ಪರಿಷತ್ ವಾಜಿ ಸದಸ್ಯರಾದ ತೋಂಟದಾರ್ಯ, ಸಿದ್ದರಾಜು, ಸಹ ಪ್ರಭಾರಿ ಡಾ.ಈ.ಸಿ.ನಿಂಗರಾಜ್ ಗೌಡ,ರಾಜ್ಯ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಡಾ.ಅನಿಲ್ ಥಾಮಸ್, ಮಾಜಿ ಮೇಯರ್‌ಗಳಾದ ಶಿವಕುಮಾರ್,ಎಸ್.ಸಂದೇಶ್ ಸ್ವಾಮಿ, ನಗರ ಪ್ರಧಾನ ಕಾರ್ಯದರ್ಶಿಗಳಾದ ವಿ.ಸೋಮಸುಂದರ್,ಬಿ.ಎA.ರಘು,ರಘುಮೂರ್ತಿ, ಪ್ರಶಿಕ್ಷಣ ವರ್ಗದ ಸಂಚಾಲಕ ವಾಣೀಶ್ ಕುಮಾರ್ ,ಸಹ ಸಂಚಾಲಕರಾದ ಹೇವಾನಂದೀಶ್ ಮತ್ತಿತರರು ಹಾಜರಿದ್ದರು.

ಮೈಸೂರು ಹೊರವಲುಂದ ಲಿಂಗದೇವರಕೊಪ್ಪಲು ಪ್ರಜಾಪಿತ ಬ್ರಹ್ಮಕುವಾರಿ ಈಶ್ವರೀ?ಂ ವಿದ್ಯಾಲುಂದಲ್ಲಿ ನಗರ ಬಿಜೆಪಿ ವತಿಯಿಂದ ಆ?ಂಜಿಸಿದ್ದ ಮೈಸೂರು ಮಹಾನಗರ ಪ್ರಶಿಕ್ಷಣ ವರ್ಗದ ಸವಾರಂಭವನ್ನು ಉದ್ಘಾಟಿಸಿ ವಾತನಾಡಿದರು. ಅನಗರ ಬಿಜೆಪಿ ಅಧ್ಯಕ್ಷ ಎಲ್.ನಾಗೇಂದ್ರ,ಸAಸದ ಕೃಷ್ಣದತ್ತ ಚಾಮರಾಜ ಒಡೆ?ಂರ್,ಶಾಸಕ ಟಿ.ಎಸ್.ಶ್ರೀವತ್ಸ,ರಾಜ್ಯ ಉಪಾಧ್ಯಕ್ಷರಾದ ವಾಳವಿಕ ಅವಿನಾಶ್, ಮೈಸೂರು ಜಿಲ್ಲಾ ಪ್ರಶಿಕ್ಷಣ ವರ್ಗದ ಉಸ್ತುವಾರಿ ರಾಬಿನ್ ದೇವ್‌ಂಯು, ವಿಧಾನ ಪರಿಷತ್ ವಾಜಿ ಸದಸ್ಯರಾದ ತೋಂಟದಾAರ್?, ಸಿದ್ದರಾಜು, ಸಹ ಪ್ರಭಾರಿ ಡಾ.ಈ.ಸಿ.ನಿಂಗರಾಜ್ ಗೌಡ,ರಾಜ್ಯ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಡಾ.ಅನಿಲ್ ಥಾಮಸ್, ವಾಜಿ ಮಹಾಪೌರರಾದ ಶಿವಕುವಾರ್,ಎಸ್.ಸಂದೇಶ್ ಸ್ವಾಮಿ ಹಾಜರಿದ್ದರು.