
ವರದಿ ಜಿ ಬಂಗಾರು
ಚಾಮರಾಜನಗರ ; ದೇವಸ್ಥಾನಗಳಿಗ ಭೇಟಿ ನೀಡಿ ದೇವರ ದರ್ಶನ ಪಡೆದರೆ ಮನಸ್ಸಿಗೆ ನೆಮ್ಮದಿ ಸಿಗಲಿದೆ ಎಂದು ತಹಶೀಲ್ದಾರ್ ಬಿ ಗಿರಿಜಾ ತಿಳಿಸಿದರು
ಇತಿಹಾಸ ಪ್ರಸಿದ್ಧವಾಗಿರುವ ಶ್ರೀ ಚಾಮರಾಜೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಗಿರಿಜಾ ಕಲ್ಯಾಣ ಮಹೋತ್ಸವ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಆಧ್ಯಾತ್ಮಿಕ ದಿಂದ ಮನಸ್ಸಿಗೆ ಸುಖ ಶಾಂತಿ ನೆಮ್ಮದಿ ಸಿಗಲಿದೆ ಜೂನ್ 18ರಿಂದ. ಜೂನ್ 23 ವರೆಗೆ ಧಾರ್ಮಿಕ ಕಾರ್ಯಕ್ರಮಗಳು ಸಾಂಸ್ಕೃತಿಕ ಕಾರ್ಯಕ್ರಮಗಳು ವಿಶೇಷ ಹೋಮ ಪೂಜಾ ಕಾರ್ಯಕ್ರಮಗಳು ನಡೆಯಲಿದೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವರ ದರ್ಶನ ಪಡೆದು ಕಾರ್ಯಕ್ರಮ ಯಶಸ್ವಿ ಮಾಡಬೇಕೆಂದು ತಿಳಿಸಿದರು
ಶ್ರೀ ಚಾಮರಾಜೇಶ್ವರ ದೇವಸ್ಥಾನದ ಧರ್ಮದರ್ಶಿ ಮಂಡಳಿ ವೆಂಕಟ ನಾಗಪ್ಪ ಶೆಟ್ಟಿ ಬಾಬು ಮಾತನಾಡಿ, ವಿಶ್ವದಲ್ಲೇ ಹಿಂದುಗಳ ಧಾರ್ಮಿಕ ಕಾರ್ಯಕ್ರಮಗಳ ಆಚರಣೆ ಮಾಡು ಮೂಲಕ ನಮ್ಮ ಭಾರತೀಯ ಸಂಸ್ಕೃತಿ ಉಳಿಸಿ ಬೆಳೆಸುವ ಮೂಲಕ ಉತ್ತಮ ನಂಬಿಕೆ ಪದ್ಧತಿ ಇಟ್ಟುಕೊಳ್ಳುತ್ತಾರೆ ಎಂದು ತಿಳಿಸಿದರು.
ಅರ್ಚಕ ರಾಮಕೃಷ್ಣ ಭಾರದ್ವಾಜ್ ಮಾತನಾಡಿ, ಪ್ರಾಚೀನ ಕಾಲದ ಜನಪದ ಕಲೆಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯ. ದಿನನಿತ್ಯ ಬೆಳಿಗ್ಗೆ ಸಂಜೆ ಕುಟುಂಬ ಸಮೇತ ದೇವಸ್ಥಾನಗಳಿಗೆ ಆಗಮಿಸಿ ತಮ್ಮ ಇಷ್ಟಾರ್ಥ ಬೇಡಿಕೆಗಳನ್ನು ಮನವಿ ಮಾಡಿಕೊಂಡರೆ. ದೇವರು ಎಲ್ಲ ಕಷ್ಟವನ್ನು ಬಗೆಹರಿಸುತ್ತಾನೆ ಎಂಬುದು ಶ್ರೀ ಚಾಮರಾಜೇಶ್ವರ ದೇವಸ್ಥಾನದ ಮಹಿಮೆ ತಮ್ಮದೇ ಆದ ಇತಿಹಾಸ ಹೊಂದಿದೆ ಎಂದು ತಿಳಿಸಿದರು
ಶ್ರೀ ಚಾಮರಾಜೇಶ್ವರ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಬಿ ರಾಜಶೇಖರ ಮೂರ್ತಿ. ದೇವಸ್ಥಾನದ ಮುಖ್ಯ ಅಗಮಿಕ , ಎನ್ ದರ್ಶನ್,ಕರ್ನಾಟಕ ಸೇನೆ ಪಡೆ ರಾಜ್ಯಾಧ್ಯಕ್ಷ ಚಾಂ ಶ್ರೀನಿವಾಸಗೌಡ, ಜೈ ಭುವನೇಶ್ವರಿ ಕನ್ನಡ ಯುವ ವೇದಿಕೆ ಅಧ್ಯಕ್ಷ ಜಿ ಬಂಗಾರು. ನಗರಸಭೆ ಮಾಜಿ ಅಧ್ಯಕ್ಷ ಸುರೇಶ್ ನಾಯ್ಕ. ಜಿಲ್ಲಾ ಉಪ್ಪಾರ ಯುವಕರ ಸಂಘದ ಅಧ್ಯಕ್ಷ ಜಯಕುಮಾರ್. ಶ್ರೀ ದೇವಸ್ಥಾನದ ಉಸ್ತುವಾರಿಮಹೇಶ್. ಸೇರಿದಂತೆ ಇತರು ಹಾಜರಿದ್ದರು
ನಂಜನಗೂಡಿನವಿದುಷಿ ರಂಜಿತಾ ಸೋಮಶೇಖರ್ ನೇತೃತ್ವದಲ್ಲಿ ಭರತನಾಟ್ಯ ಕಾರ್ಯಕ್ರಮದಲ್ಲಿ.ವಿದುಷಿ ಎಚ್ ಎಂ ಸಾರಿಕಾ, ಕವನಶ್ರೀ, ಸಮನ, ನೀತು ಶೆಟ್ಟಿ, ನಿಕಿತಾ. ನಿಖಿತಾ,ಸುಕೃತ ,ಅನನ್ಯ,ವರ್ಷಿಣಿ,ಗಗನಶ್ರೀ,ಪ್ರಕೃತಿ,ಲೇಖನ,ಲಕ್ಷ್ಮಿಶ್ರೀ,ಹಿತಾಶ್ರೀ,ಬಿಂದು,ಸೋನಿಕಾ, ಕಲಾವಿದರು ನಡೆಸಿಕೊಟ್ಟ ಭರತನಾಟ್ಯ ಕಾರ್ಯಕ್ರಮ ಪ್ರೇಕ್ಷಕರ ಗಮನ ಸೆಳೆಯಿತು.ಉದ್ಯಮಿ ರವಿಶಂಕರ್. ಸೇರಿದಂತೆ ದೇವಾಲಯ ಅಭಿವೃದ್ಧಿ ಸಲಹೆ ಸಮಿತಿ ಸದಸ್ಯರು ನೂರಾರು ಭಕ್ತರು ಹಾಜರಿದ್ದರು 500 ಹೆಚ್ಚು ಭಕ್ತರು ಆಗಮಿಸಿ ದೇವರ ಪ್ರಸಾದ ಸ್ವೀಕಾರ ಮಾಡಿದರು