
ಮೈಸೂರು: ನಗರದ ನಜರ್ಬಾದ್ ಪೆÇಲೀಸ್ ಠಾಣೆ ವ್ಯಾಪ್ತಿಯ ರೇಸ್ ಕೋರ್ಸ್ ರಸ್ತೆಯ ಫುಟ್ ಪಾತ್ನಲ್ಲಿ ನಿತ್ರಾಣಗೊಂಡು ಬಿದ್ದಿದ್ದ 60 ವರ್ಷದ ಅಪರಿಚಿತ ವ್ಯಕ್ತಿಯೊಬ್ಬರು ಸಾವಿಗೀಡಾಗಿದ್ದಾರೆ.
ನಿತ್ರಾಣಗೊಂಡು ಬಿದ್ದಿದ್ದ ಈ ವ್ಯಕ್ತಿಯನ್ನು ಚಿಕಿತ್ಸೆಗಾಗಿ, ಮೈಸೂರು ನಗರದ ಸಂಚಲನ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಪ್ರಕರಣ ನಜರ್ಬಾದ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಮೃತನ ಹೆಸರು ಶಿವಕುಮಾರ್ (ಅಪರಿಚಿತ ಗಂಡಸು), ಆಗಿದ್ದು, 5.8 ಅಡಿ ಎತ್ತರ, . ಈತನ ಕೋಲು ಮುಖ, ಸಣ್ಣ ಶರೀರ, ಎಣಗೆಂಪು ಮೈಬಣ್ಣ, ತಲೆಯ ಮುಂಭಾಗ ಕೂದಲು ಉದುರಿಹೋಗಿದ್ದು, ಕಪ್ಪು ಮತ್ತು ಬಿಳಿ ಬಣ್ಣದ ಗಡ್ಡ- ಮೀಸೆ ಬಿಟ್ಟಿರುತ್ತಾನೆ.
ಮೃತನ ವಾರಸುದಾರರ ಬಗ್ಗೆ ಮಾಹಿತಿ ಕಂಡುಬಂದಲ್ಲಿ ಮೈಸೂರು ನಗರ ಕಂಟ್ರೋಲ್ ರೂಂ: 0821-2418339, 0821-2452200, ನಜûರ್ಬಾದ್ ಠಾಣೆ ನಂ. 0821-2418308 ನ್ನು ಸಂಪರ್ಕಿಸಬಹುದೆಂದು ನಜರ್ಬಾದ್ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫಿಸರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.