
ಮೈಸೂರು: ಕಂಪ್ಯೂಟರ್ ಯುಗದಲ್ಲಿ ಪ್ರತಿ ವಿದ್ಯಾರ್ಥಿಯು ಆಧುನಿಕ ತಂತ್ರಜ್ಞಾನ ಕಲಿಯುತ್ತಾ ಸಾಗಬೇಕು. ಅದಕ್ಕೆ ಪಾಲಕರು ಪ್ರೋತ್ಸಾಹ ನೀಡಬೇಕು ಎಂದು ನಗರ ಪಾಲಿಕೆಯ ಮಾಜಿ ಸದಸ್ಯ ಪ್ರಶಾಂತ್‌ಗೌಡ ಹೇಳಿದರು
ಗುರುವಾರ ನಗರದ ನಾರಾಯಣ ಶಾಸ್ತಿç ರಸ್ತೆಯಲ್ಲಿರುವ ಎನ್ ಟಿ ಎಂ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಕರುಣಾಮಯಿ ವಿಷ್ಣು ಅಭಿಮಾನಿ ಬಳಗದ ವತಿಯಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಲೇಖನಿ ಸಾಮಗ್ರಿಗಳು ವಿತರಿಸಿ ಮಾತನಾಡಿದ ಅವರು, ಸರ್ಕಾರಿ ಶಾಲೆಗಳಿಗೆ ಹೆಚ್ಚು ಹಾಜರಾತಿ ಆಗುವ ಹಿನ್ನಲೆಯಲ್ಲಿ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಸ್ನೇಹಿತರಲ್ಲ ಸೇರಿ, ಎನ್ ಟಿ ಎಂ ಶಾಲಾ ವಾಹನವನ್ನು ಕೊಡುಗೆ ನೀಡಲಾಗುವುದು ಎಂದು ತಿಳಿಸಿದರು,
ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಕಡೆಗೆ ಹೆಚ್ಚಿನ ಗಮನಹರಿಸಬೇಕು. ಈ ಕಲಿಕಾ ಪರಿಕರಗಳು ಅವರ ಶಿಕ್ಷಣಕ್ಕೆ ನೆರವಾಗಬೇಕು ಎನ್ನುವುದು ನಮ್ಮ ಆಶಯ. ಸಮಾಜಕ್ಕೆ ನಾವು ಸಾಧ್ಯವಾದಷ್ಟು ಕೊಡುಗೆ ನೀಡಬೇಕು. ಪ್ರತಿಯೊಬ್ಬರೂ ಸಮಾಜಮುಖಿ ಚಿಂತನೆ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು
ನಗರಪಾಲಿಕೆಯ ಮಾಜಿ ಸದಸ್ಯ ಎಂ.ಡಿ ಪಾರ್ಥಸಾರಥಿ ಮಾತನಾಡಿ, ಸರ್ಕಾರಿ ಶಾಲೆಗಳ ಬಲವರ್ಧನೆಗೆ ಇದೊಂದು ಅತ್ಯಂತ ಉತ್ತಮ ಬೆಳವಣಿಗೆ. ಇಂತಹ ಶಾಲೆಗಳಿಗೆ ಪ್ರೋತ್ಸಾಹದ ಅವಶ್ಯಕತೆ ತುಂಬಾ ಇದೆ. ಕಡು ಬಡತನದಲ್ಲಿದ್ದು ಕಲಿಯಬೇಕೆಂಬ ಹಂಬಲವಿರುವ ಮಕ್ಕಳಿಗೆ ಇಂತಹ ಆಸರೆ ಸಿಕ್ಕಾಗ, ಅದು ನಿಜವಾಗಿಯೂ ಸಾರ್ಥಕತೆ ಪಡೆದುಕೊಳ್ಳುತ್ತದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಕರುಣಾಮಯಿ ವಿಷ್ಣು ಅಭಿಮಾನಿ ಬಳಗದ ಅಧ್ಯಕ್ಷ ಎಸ್.ಎನ್.ರಾಜೇಶ್, ಕನಕ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ರವಿಚಂದ್ರ, ರಮೇಶ್, ರಾಕೇಶ್, ಶಾಲೆಯ ಮುಖ್ಯ ಶಿಕ್ಷಕರಾದ ಶಾಂತಮ್ಮ, ಶಿಕ್ಷಕರದ ಸಮೀನಾ ಪರ್ವೀನ್, ಹಾಗೂ ಇನ್ನಿತರರು ಹಾಜರಿದ್ದರು