Skip to main content

3Kaala News

ಸುಭಾಷಿತ 

ಪ್ರಯತ್ನ ಎಂಬುದು ಬೀಜದ ಹಾಗೆ ಬಿತ್ತುತ್ತಲೇ ಇರಿ ಚಿಗುರಿದರೆ ಮರವಾಗಲಿ ಇಲ್ಲವೆಂದರೆ ಮಣ್ಣಿಗೆ ಗೊಬ್ಬರವಾಗಲಿ.
ಇವತ್ತು ನಿನ್ನನ್ನು ಏನು ನೋಯಿಸುತ್ತಿದೆಯೋ ನಾಳೆ ಅದೇ ನಿನ್ನನ್ನು ಬಲಗೊಳಿಸುತ್ತದೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ವಶಪಡಿಸಿಕೊಂಡಿದ್ದ 10.55 ಲಕ್ಷರೂ ಮೌಲ್ಯದ ಮಾದಕ ವಸ್ತುಗಳ ನಾಶ


ಮೈಸೂರು:
ಜಿಲ್ಲೆಯಲ್ಲಿ ಎನ್.ಡಿ.ಪಿ.ಎಸ್. ಪ್ರಕರಣಗಳಲ್ಲಿ ವಶಪಡಿಸಿಕೊಳ್ಳಲಾಗಿದ್ದ ಮಾದಕ ವಸ್ತು, ದ್ರವ್ಯಗಳನ್ನು ನ್ಯಾಯಾಲಯದ ಆದೇಶದಂತೆ ಇಂದು ಜಯಪುರದಲ್ಲಿರುವ ಜಿಪ್ಸ್ ಬೈಯೋಟೆಕ್ ಸಂಸ್ಥೆಯ ಕುಲುಮೆಯಲ್ಲಿ ಜಿಲ್ಲಾ ಮಾದಕ ವಸ್ತುಗಳ ವಿಲೇವಾರಿ ಸಮಿತಿಯ ವತಿಯಿಂದ ನಿಯಮಾನುಸಾರವಾಗಿ ನಾಶಪಡಿಸಲಾಯಿತು ಎಂದು ಪೊಲೀಸ್ ಅಧೀಕ್ಷಕರಾದ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದ್ದಾರೆ.
ಮೈಸೂರು ಜಿಲ್ಲಾ ವ್ಯಾಪ್ತಿಯ ವಿವಿಧ ಪೊಲೀಸ್ ಠಾಣೆಗಳಲ್ಲಿ 27 ಎನ್.ಡಿ.ಪಿ.ಎಸ್ ಪ್ರಕಣಗಳಲ್ಲಿ ಒಟ್ಟು 19 ಕೆ.ಜಿ 404 ಗ್ರಾಂ ಮಾದಕ ವಸ್ತುವನ್ನು (19 ಕೆ.ಜಿ 414 ಗ್ರಾಂ ಗಾಂಜಾ ಮತ್ತು 6 ಗ್ರಾಂ ಎಂ.ಡಿ.ಎA.ಎ ಪೌಡರ್) ವಶಪಡಿಸಿಕೊಂಡಿದ್ದು, 10,55,700 ರೂ ಅಂದಾಜು ಮೌಲ್ಯದ ಸದರಿ ಮಾದಕ ವಸ್ತುವನ್ನು ವಿಲೇವಾರಿ ಮಾಡುವ ಬಗ್ಗೆ ನ್ಯಾಯಾಲಯದ ಆದೇಶದ ಹಿನ್ನಲೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.ಈ ಸಂದರ್ಭದಲ್ಲಿ ಅಪರ ಪೊಲೀಸ್ ಅಧೀಕ್ಷಕ ಎಲ್ ನಾಗೇಶ್ ರವರು ಹಾಗೂ ಜಿಲ್ಲಾ ಮಾದಕ ವಸ್ತುಗಳ ವಿಲೇವಾರಿ ಸಮಿತಿಯ ಸದಸ್ಯರುಗಳು ಉಪಸ್ಥಿತರಿದ್ದರು.