
ಮೈಸೂರು: ಕಾಯಿಲೆಗಳ ಪತ್ತೆಗೆ ಆರೋಗ್ಯ ತಪಾಸಣಾ ಶಿಬಿರ ಸಹಕಾರಿಯಾಗಿದೆ ಎಂದು ಶಾಸಕ ಟಿ.ಎಸ್.ಶ್ರೀವತ್ಸ ಹೇಳಿದರು.
ಧರ್ಮ ಪ್ರಕಾಶ್ ರಾವ್ ಬಹುದ್ದೂರ್ ಡಿ ಬನುಮಯ್ಯ ಯುವ ಬ್ರಿಗೇಡ್ ವತಿಯಿಂದ ಡಿ ಬನುಮಯ್ಯ ರವರ 166 ನೇ ಜಯಂತಿ ಅಂಗವಾಗಿ ಜುಲೈ 5ರ ಭಾನುವಾರ ಸಮಯ 12 ಗಂಟೆಗೆ ನಗರದ ನ್ಯೂ ಸೈಯಾಜಿ ರಾವ್ ರಸ್ತೆಯಲ್ಲಿರುವ ಡಿ ಬನುಮಯ್ಯ ಕಾಲೇಜಿನ ಆವರಣದಲ್ಲಿ ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ, ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ವಿತರಣೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ನವನೀತ್ ನೇತ್ರಾಲಯ ವತಿಯಿಂದ ಕಣ್ಣಿನ ತಪಾಸಣೆ ಶಿಬಿರ, ಸುಯೋಗ ಮಲ್ಟಿ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಜೀವದಾರ ರಕ್ತ ನಿಧಿ ಕೇಂದ್ರದ ಸಹಯೋಗದೊಂದಿಗೆ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು
ಹಮ್ಮಿಕೊಂಡಿದ್ದು, ಅದರ ಪ್ರಚಾರ ಸಾಮಗ್ರಿಗಳನ್ನು ಕೆ.ಆರ್.ಮೊಹಲ್ಲಾದಲ್ಲಿರುವ ಶ್ರೀ ಕೊಲ್ಲಾಪುರದ ಮಹಾಲಕ್ಷಿ÷್ಮ ದೇವಸ್ಥಾನದ ಮುಂಭಾಗ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಇಂದಿನ ಸ್ಥಿತಿಗತಿಯಲ್ಲಿ ಪ್ರತಿ ಆರು ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ಮಾಡಿಕೊಳ್ಳುವುದು ಅನಿವಾರ್ಯವಾಗಿದೆ ಎಂದರು.
ದೇಶ ವಿದೇಶಗಳಿಂದ ಅತೀ ವೇಗವಾಗಿ ಹರಡುವ ನಾನಾ ವೈರಸ್ಗಳೂ ಪತ್ತೆಯಾಗಿವೆ. ಪ್ರಕೃತಿಯ ಏರುಪೇರುಗಳಿಂದ ಶರೀರಕ್ಕೆ ನಾನಾ ಕಾಯಿಲೆ ಗಳು ಬರುತ್ತವೆ. ದೇಹವನ್ನು ಕಾಪಾಡುವುದರ ಜೊತೆಗೆ ಪ್ರಕೃತಿಯನ್ನು ಸಮತೋಲನದಲ್ಲಿ ಇಟ್ಟುಕೊಳ್ಳುವುದು ನಮ್ಮ ಗುರುತರ ಜವಾಬ್ದಾರಿಯೂ ಆಗಿದೆ. ಗೊತ್ತಿಲ್ಲದ ಕಾಯಿಲೆಗಳ ಪತ್ತೆಗೆ ಸಾರ್ವಜನಿಕ ಉಚಿತ ಆರೋಗ್ಯ ತಪಾಸಣಾ ಶಿಬಿರಗಳು ಸಹಕಾರಿ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಮುಖಂಡರಾದ ಪ್ರದೀಪ್ ಕುಮಾರ್, ರವಿ, ದೀಪಕ್, ಸುರೇಶ್, ಶಿವಣ್ಣ, ಪ್ರಕಾಶ್, ಭಾರತಿ, ಮಹಾಲಕ್ಷಿ÷್ಮ, ಹೇಮಾ, ತಾಯಮ್ಮ ಹಾಗೂ ಇನ್ನಿತರರು ಹಾಜರಿದ್ದರು.