
ಪಿರಿಯಾಪಟ್ಟಣ : ರೋಟರಿ ಕ್ಲಬ್ ಪಿರಿಯಾಪಟ್ಟಣ ಮಿಡ್ ಟೌನ್ 2026-27 ನೇ ಸಾಲಿನ ನೂತನ ಅಧ್ಯಕ್ಷ ರಾಗಿ ಬಲರಾಮ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಹರೀಶ್. ಬಿ.ಎಸ್, ಜೋನಲ್ ಲೆಫ್ಟಿನೆಂಟ್ ಆಗಿ ರಾಜೇಗೌಡ. ಎಂ.ಎಂ ಆಯ್ಕೆಯಾಗಿದ್ದಾರೆ.ನೂತನ ಪದಾಧಿಕಾರಿಗಳು ಪದಗ್ರಹಣ ಸಮಾರಂಭವು ಜುಲೈ 5ರ ಭಾನುವಾರ ಸಂಜೆ 6 ಗಂಟೆಗೆ ಪಟ್ಟಣದ ಕನಕ ಸಮುದಾಯದ ಭವನದಲ್ಲಿ ಜರುಗಲಿದ್ದು ಈ ಸಮಾರಂಭಕ್ಕೆ ಮಾಜಿ ಅಧ್ಯಕ್ಷರು, ಕಾರ್ಯದರ್ಶಿಗಳು, ಸದಸ್ಯರುಗಳು ಸೇರಿದಂತೆ ಇತರರು ಭಾಗವಹಿಸಲಿದ್ದಾರೆ ಎಂದು ನೂತನ ಜೋನಲ್ ಲಿಫ್ಟಿನೆಂಟ್ ಆಗಿ ಆಯ್ಕೆಯಾದ ರಾಜೇಗೌಡ ಎಂ ಎಂ ತಿಳಿಸಿದರು.
ರೋಟರಿ ಕ್ಲಬ್ ನ ಆಶಯಗಳಿಗೆ ತಕ್ಕಂತೆ ಕಾರ್ಯ ನಿರ್ವಹಿಸುವುದರ ಮೂಲಕ ನಮ್ಮ ಕ್ಲಬ್ ಹಿಂದಿಗಿಂತಲೂ ಹೆಚ್ಚು ಹೆಚ್ಚು ಸಾಮಾಜಿಕ ಕಾರ್ಯಕ್ರಮಗಳನ್ನು ಕೈಗೊಳ್ಳುವುದರ ಮೂಲಕ ಸಮಾಜಕ್ಕೆ ನಮ್ಮದೇ ಆದ ಕೊಡುಗೆ ನೀಡಲು ನಮ್ಮ ತಂಡ ಉಸ್ತುಕವಾಗಿದೆ ಈ ನೂತನ ತಂಡವು ತಮ್ಮ ಅವಧಿಯಲ್ಲಿ ಸಮಾಜದ ವಿವಿಧ ವರ್ಗಗಳಿಗೆ ಅಗತ್ಯವಿರುವ ಸೇವೆಯನ್ನು ತ್ವರಿತ ಗತಿಯಲ್ಲಿ ಒದಗಿಸುವ ಮೂಲಕ ಅವರ ಆಸೆಗಳಿಗೆ ನೀರುಣಿಸುವ ಕೆಲಸ ಮಾಡಲು ಕಂಕಣಬದ್ಧವಾಗಿದ್ದೇವೆ ಎಂದು ಹೇಳಿದರು