Skip to main content

3Kaala News

ಸುಭಾಷಿತ 

ಪಕ್ಕದಲ್ಲಿರುವವನ ತಟ್ಟೆಯಲ್ಲಿ ಏನಿದೆ ಅಂತ ಯಾವತ್ತೂ ಇಣುಕಿ ನೋಡಬೇಡ. ಕಾರಣ ಅಲ್ಲಿ ಜಾಸ್ತಿಯಿದ್ದರೆ, ನಿನಗೆ ಸಂಕಟವಾಗುತ್ತದೆ.ಅಲ್ಲಿ ಕಡಿಮೆ ಇದ್ದರೆ, ನಿನಗೆ ಅಹಂಕಾರ ಬರುತ್ತದೆ.ಎರಡೂ ಒಳ್ಳೆಯದಲ್ಲ.ನಮ್ಮ ತಟ್ಟೆಯನ್ನು ನಾವು ನೋಡಿಕೊಂಡಿದ್ದರೆ, ಸಿಗುವ ಸಂತೋಷವೇ ಬೇರೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಶ್ರೀ ರಾಘವೇಂದ್ರ ಸ್ವಾಮಿಗಳ ಪಂಚಲೋಹ ಶಿಲಾ ಪ್ರತಿಷ್ಠಾಪನೆ


ಮೈಸೂರು; ಇಲ್ಲಿನ ರಾಮಕೃಷ್ಣ ನಗರದ ವಿವೇಕಾನಂದ ರಸ್ತೆಯಲ್ಲಿರುವ ಶ್ರೀನಿವಾಸ ದೇವಸ್ಥಾನ ಆವರಣದಲ್ಲಿ ಶ್ರೀ ರಾಘವೇಂದ್ರಸ್ವಾಮಿಗಳ ಪಂಚಲೋಹ ಶಿಲಾ ಪ್ರತಿಷ್ಠಾಪನಾ ಮಹೋತ್ಸವವು ಸೋಮವಾರ ನೆರವೇರಿತು.
ಬೆಳಿಗ್ಗೆಯಿಂದ ದೇವರಿಗೆ ಅಭಿಷೇಕ, ಹೂವಿನ ಅಲಂಕಾರ, ಗಣಪತಿ ನವಗ್ರಹ ಹೋಮ, ವಿಶೇಷ ವೇದಮಂತ್ರಗಳೊAದಿಗೆ ಶ್ರೀ ರಾಘವೇಂದ್ರ ಸ್ವಾಮಿಗಳ ಪಂಚಲೋಹ ಶಿಲಾ ಪ್ರತಿಷ್ಠಾಪನೆಯನ್ನು ವಿದ್ವಾನ್ ನಿತ್ಯಾಗ್ನಿ ಹೋತ್ರಿ ಶ್ರೀದಾಮೋದರಾವಾರ್ಯ ಬಾಜಪೇಯಿ ಅವರ ನೇತೃತ್ವದಲ್ಲಿ ಜರುಗಿತು.
ದೇಸ್ಥಾನದ ಅಧ್ಯಕ್ಷ ಹರೀಶ್‌ರಾವ್, ಟ್ರಸ್ಟಿಗಳಾದ ಸುಧಾರಾವ್, ಗುರುರಾಜ್‌ರಾವ್, ದಾನಿಗಳಾದ ಉದ್ಯಮಿ ಆನಂದ್ ಹಾಗೂ ನೂರಾರು ಭಕ್ತಾಧಿಗಳು ಪ್ರಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಭಕ್ತಾಧಿಗಳಿಗೆ ಪ್ರಸಾದವಾಗಿ ಅನ್ನದಾನ ನೆರವೇರಿಸಲಾಯಿತು.