Skip to main content

3Kaala News

ಸುಭಾಷಿತ 

ನಾವು ಮಾಡುವ ಕೆಲಸದಲ್ಲಿ ಸಂಪೂರ್ಣ ಶ್ರದ್ಧೆ ಮತ್ತು ಭಕ್ತಿ ಇದ್ದಾಗ ಮಾತ್ರ ಯಶಸ್ಸು ಒಲಿಯುತ್ತದೆ. ಅರ್ಧಮನಸ್ಸಿನಿಂದ ಮಾಡುವ ಕೆಲಸ ಎಂದಿಗೂ ಪರಿಪೂರ್ಣ ಫಲ ನೀಡಲಾರದು.

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಐದು ದಿನಗಳ ಕಾಲ ವೈವಿಧ್ಯಮಯ ದಸರಾ ಕವಿಗೋಷ್ಠಿ


ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವ-2026ರ ಪ್ರಯುಕ್ತ ದಸರಾ ಕವಿಗೋಷ್ಠಿ ಉಪಸಮಿತಿಯ ವತಿಯಿಂದ ಅಕ್ಟೋಬರ್ 13 ರಿಂದ 17ರವರೆಗೆ ಮೈಸೂರಿನ ಮಾನಸಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಬಿ.ಎಂ.ಶ್ರೀ. ಸಭಾಂಗಣದಲ್ಲಿ ಐದು ದಿನಗಳ ವೈವಿಧ್ಯಮಯ ಕವಿಗೋಷ್ಠಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಇದರಲ್ಲಿ ಭಾಗವಹಿಸಲು ಇಚ್ಛಿಸುವ ಅರ್ಹ ಕವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಈ ಬಾರಿಯ ದಸರಾ ಮಹೋತ್ಸವದಲ್ಲಿ ಯುವ ಕವಿಗೋಷ್ಠಿ, ಚಿಗುರು ಕವಿಗೋಷ್ಠಿ, ಹಾಸ್ಯ, ಚುಟುಕು ಗೋಷ್ಠಿ, ಜನಪದ ಕಾವ್ಯಗೋಷ್ಠಿ ಹಾಗೂ ಪ್ರಧಾನ ಕವಿಗೋಷ್ಠಿಗಳನ್ನು ಹಮ್ಮಿಕೊಳ್ಳಲಾಗಿದ್ದು, ಯುವ ಕವಿಗೋಷ್ಠಿಗೆ ಅರ್ಜಿ ಸಲ್ಲಿಸುವವರು ಕನಿಷ್ಠ ಒಂದು ಕವನ ಸಂಕಲನ ಪ್ರಕಟಿಸಿರಬೇಕು. ಚಿಗುರು, ಹಾಸ್ಯ, ಚುಟುಕು ಹಾಗೂ ಜನಪದ ಕಾವ್ಯಗೋಷ್ಠಿಗೆ ಭಾಗವಹಿಸುವವರು ತಮ್ಮ ಕವನ ಅಥವಾ ಕಾವ್ಯದೊಂದಿಗೆ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಪ್ರಧಾನ ಕವಿಗೋಷ್ಠಿಗೆ ಕರ್ನಾಟಕದ ಎಲ್ಲಾ ಜಿಲ್ಲೆಗಳಿಂದ ಒಬ್ಬರಂತೆ ಭಾಗವಹಿಸಲು ಅವಕಾಶವಿದ್ದು, ಅರ್ಜಿ ಸಲ್ಲಿಸುವವರು ಕನಿಷ್ಠ ಎರಡು ಕವನ ಸಂಕಲನಗಳನ್ನು ಪ್ರಕಟಿಸಿರಬೇಕು.
ಕಳೆದ ಎರಡು ವರ್ಷಗಳ ದಸರಾ ಕವಿಗೋಷ್ಠಿಯಲ್ಲಿ ಭಾಗವಹಿಸಿದವರಿಗೆ ಈ ಬಾರಿ ಅವಕಾಶವಿರುವುದಿಲ್ಲ ಹಾಗೂ ಕವಿತೆಯ ಪ್ರಬುದ್ಧತೆಯೇ ಆಯ್ಕೆಗೆ ಅಂತಿಮ ಮಾನದಂಡವಾಗಿರುತ್ತದೆ. ಆಸಕ್ತ ಕವಿಗಳು ತಮ್ಮ ಸ್ವವಿವರ ಹಾಗೂ ಕವನ ಸಂಕಲನಗಳೊAದಿಗೆ ಸೆಪ್ಟೆಂಬರ್ 15 ರ ಸಂಜೆ 5 ಗಂಟೆಯೊಳಗೆ ಕಾರ್ಯಾಧ್ಯಕ್ಷರು, ದಸರಾ ಕವಿಗೋಷ್ಠಿ ಉಪಸಮಿತಿ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮಾನಸಗಂಗೋತ್ರಿ, ಮೈಸೂರು-570006 ಇಲ್ಲಿಗೆ ನೇರವಾಗಿ ಅಥವಾ ನೋಂದಾಯಿತ ಅಂಚೆ ಮೂಲಕ ಅರ್ಜಿ ತಲುಪಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ 9900785982 ಅಥವಾ 9611811461 ಸಂಖ್ಯೆಗೆ ಸಂಪರ್ಕಿಸಬಹುದು ಎಂದು ದಸರಾ ಕವಿಗೋಷ್ಠಿ ಉಪಸಮಿತಿಯ ಕಾರ್ಯಾಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.