
ಮೈಸೂರು: ಹಾರ್ಟ್ ಸಂಸ್ಥೆ ಮೈಸೂರು ಹಾಗೂ ನಿರ್ಮಲ ಪ್ರೌಢ ಶಾಲೆ ಶ್ರೀ ರಾಂಪುರ ಇವರ ಸಂಯುಕ್ತ ಆಶ್ರಯದಲ್ಲಿ ಹಿರಿಯರ ನಾಗರೀಕರ ದಿನಾಚರಣೆ ಅಂಗವಾಗಿ ಹಿರಿಯರು ನಮ್ಮ ಬೇರು ಎಂಬ ವಿಷಯದ ಕುರಿತು ಭಾಷಣ ಕಾರ್ಯಕ್ರಮ ಆಯೋಜಿಸಲಾಯಿತು,
ನಿರ್ಮಲ ಪ್ರೌಢಶಾಲೆಯ ಮಕ್ಕಳು ಹಿರಿಯರು ನಮ್ಮ ಬೇರು ಎಂಬ ವಿಷಯದ ಕುರಿತು ಮಾತನಾಡಿ, ಮರ ಬೃಹದಾಕರವಾಗಿ ಗಟ್ಟಿಯಾಗಿ ಬೆಳೆಯಲು ಬೇರು ಬಹಳ ಮುಖ್ಯ, ಅದೇ ರೀತಿ ಮನೆಯು ಲವ ಲವಿಕೆಯಿಂದ ಕೂಡಿರಲು ಮತ್ತು ಯಾವುದೇ ಸಮಸ್ಯೆಗಳು ಬಾರದ ರೀತಿ ತಿದ್ದಿ ತೀಡಿಲು ಮನೆಯಲ್ಲಿ ಹಿರಿಯರ ಪಾತ್ರ ಬಹಳ ಮುಖ್ಯ. ನಮ್ಮ ಜೀವನ ಉಜ್ವಲ ಭವಿಷ್ಯಕ್ಕೆ ಹಿರಿಯ ಆಶೀರ್ವಾದ, ಮಾರ್ಗದರ್ಶನ ನಮಗೆ ಅತ್ಯಗತ್ಯ, ಸದಾ ನಾವು ಜೊತೆ ಜೊತೆಯಲ್ಲಿ ಇರಬೇಕು ಅವರ ಅನುಭವಗಳು ನಮಗೆ ದಾರಿ ದೀಪ, ಎಂದು ತಮ್ಮ ಅಭಿಪ್ರಾಯಗಳನ್ನು ಹಂಚಿಕೊAಡರು,
ಇತ್ತೀಚಿಗೆ ಹಿರಿಯರನ್ನು ಮನೆಯಿಂದ ಹೊರ ಹಾಕುವ ವೃದ್ಧಶ್ರಮಗಳಲ್ಲಿ ಬಿಡುವುದು ಸರ್ವ ಸಾಮಾನ್ಯವಾಗಿದೆ ಅದರ ಬದಲಾಗಿ ಕುಟುಂಬದಲ್ಲಿ ಅವರನ್ನು ಗೌರವಿಸಬೇಕು ಪ್ರೀತಿಸಬೇಕು, ಕೊನೆಯ ದಿನಗಳನ್ನು ಸಂತೋಷದಿAದ ಕುಟುಂಬದೊAದಿಗೆ ಕಳೆಯುವಂತೆ ನೋಡಿಕೊಳ್ಳಬೇಕು ಈ ಹಿನ್ನಲೆಯಲ್ಲಿ ಇಂತಹ ಕಾರ್ಯಕ್ರಮಗಳು ಬಹಳ ಮುಖ್ಯ ಎಂದರು.
ಹಿರಿಯರು ಕುಟುಂಬ, ಸಮಾಜ ಹಾಗೂ ಸಂಸ್ಕöÈತಿಯ ಅಮೂಲ್ಯ ಆಸ್ತಿಯಾಗಿದ್ದು, ಅವರ ಅನುಭವ, ಜ್ಞಾನ, ಮೌಲ್ಯಗಳು ಮತ್ತು ಜೀವನ ಆದರ್ಶನವನ್ನು ಯುವ ಪೀಳಿಗೆಗೆ ವರ್ಗಾಹಿಸಲು ಸಾಧ್ಯ ಎಂದು ಭಾಗವಹಿಸಿದ ಮಕ್ಕಳು ಅನಿಸಿಕೆ ಹಂಚಿಕೊAಡರು
ಉತ್ತಮವಾಗಿ ಭಾಷಣ ಮಾಡಿದ 3 ಮಕ್ಕಳನ್ನು ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ನೀಡುವ ಮೂಲಕ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು.
ಈ ವೇಳೆ ಶಾಲೆಯ ಮುಖ್ಯ ಶಿಕ್ಷಕರಾದ ಲಿಟಿ ಜೋಷ್, ವಿನಯ, ಸಹ ಶಿಕ್ಷಕರು, ಮಕ್ಕಳು ಹಾರ್ಟ್ ಸಂಸ್ಥೆಯ ಸಂಯೋಜಕ ಶಿವಲಿಂಗ ಇದ್ದರು.