
ಮೈಸೂರು; ಜನ ಸ್ಪಂದನಾ ಟ್ರಸ್ಟ್ ವತಿಯಿಂದ ಉದ್ಯೋಗಮೇಳವನ್ನು ಸೆ. ೦೫ ರಂದು ಮೈಸೂರಿನ ಕುವೆಂಪುನಗರದ ಉದಯರವಿ ರಸ್ತೆಯಲ್ಲಿರುವ ಚಿಕ್ಕಮ್ಮಾನಿಕೇತನ ಸಮುದಾಯ ಭವನದಲ್ಲಿ ಆಯೋಜಿಸಲಾಗಿದೆ ಎಂದು ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ತಿಳಿಸಿದರು.
ಬುಧವಾರ ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಉದ್ಯೋಗ ಮೇಳದ ಪೋಸ್ಟರ್‌ನ್ನು ಬಿಡುಗಡೆ ಮಾಡಿದ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ ೯ ರಿಂದ ಸಂಜೆ ೫ ರ ವರೆಗೆ ನಡೆಯಲಿರುವ
ಈ ಉದ್ಯೋಗ ಮೇಳವನ್ನು ಮೈಸೂರು ಜಿಲ್ಲಾ ಉಸ್ತುವಾರಿ ಹಾಗೂ ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಉದ್ಘಾಟನೆ ಮಾಡಲಿದ್ದು, ಇತರೆ ಆನೇಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಉದ್ಯೋಗ ಮೇಳದಲ್ಲಿ ನಿರುದ್ಯೋಗ ಯುವಕ, ಯುವತಿಯರಿಗೆ ಅನುಕೂಲವಾಗುವ ಉದ್ದೇಶದಿಂದ ಜಾಬ್ ಪೋರ್ಟಲ್ ನ್ನು ಪ್ರಾರಂಭಿಸಲಾಗುತ್ತಿದ್ದು, ನೋಂದಣಿಗಾಗಿ ನಿರುದ್ಯೋಗಿಗಳು ಉoogಟe ಜಿoಡಿm ಗೆ ಔಟಿಟiಟಿe ಮೂಲಕ ತಮ್ಮ ವ್ಯಕ್ತಿಪರಿಚಯಪತ್ರ ಸಲ್ಲಿಸಬಹುದಾಗಿದೆ ಎಂದು ಹೇಳಿದರು..
ಈ ಉದ್ಯೋಗ ಮೇಳದಲ್ಲಿ ಮೈಸೂರು ಮತ್ತು ಬೆಂಗಳೂರಿನ ಕಂಪನಿಗಳು, ಹಾಗೂ ಕೆಲವು ಐ.ಟಿ.ಕಂಪನಿಗಳು ಸಹ ಭಾಗವಹಿಸಲಿವೆ. ಈ ಮೇಳದಲ್ಲಿ ಎಸ್.ಎಸ್.ಎಲ್.ಸಿ. ಪಿ.ಯು.ಸಿ, ಐ.ಟಿ.ಐ., ಡಿಪ್ಲೊಮೊ, ಕಂಪ್ಯೂಟರ್ ತರಬೇತಿವುಳ್ಳವರು, ಪದವಿಧರರು ಹಾಗೂ ಇಂಜಿನಿಯರಿAಗ್ ಪದವಿವರೆಗೂ ವಿವಿಧ ವಿದ್ಯಾರ್ಹತೆಗಳಿಗನುಗುಣವಾಗಿ ನೂರಾರು ನಿರುದ್ಯೋಗಿಗಳಿಗೆ ಉದ್ಯೋಗ ಲಭಿಸುವ ಅವಕಾಶವಿದೆ. ಆದ್ದರಿಂದ ಉದ್ಯೋಗಾಕಾಂಕ್ಷಿಗಳು ಈ ಮೇಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಉದ್ಯೋಗ ಮೇಳದ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು.
ಈ ಮೇಳದಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಂದ ಹಾಗೂ ಯಾರಿಂದಲೂ ಯಾವುದೇ ರೀತಿಯ ಸದ್ಯಸತ್ವದ ಶುಲ್ಕವನ್ನು ಪಡೆಯಲಾಗುವುದಿಲ್ಲ. ಇದು ಪೂರ್ಣವಾಗಿ ಉಚಿತವಾಗಿ ಸೇವಾ ಮನೋಭಾವದಿಂದ ನಡೆಯುವ ಉದ್ಯೋಗ ಮೇಳವಾಗಿದೆ. ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಗೆ ಸಂಬAಧಿಸಿದ ಮೂಲ ದಾಖಲಾತಿಗಳು, ಜೆರಾಕ್ಸ್ ಪ್ರತಿಗಳು, ಭಾವಚಿತ್ರಗಳು, ಮತ್ತು ವ್ಯಕ್ತಿಪರಿಚಯಪತ್ರ (ಃIಔ-ಆಂಖಿA) ಗಳನ್ನು ಜೊತೆಯಲ್ಲಿ ತರುವುದು.
ಉದ್ಯೋಗ ಮೇಳದಲ್ಲಿ ಭಾಗವಹಿಸಲಿಚ್ಚಿಸುವ ಮೈಸೂರು ಜಿಲ್ಲೆಯ ವಿವಿಧ ಕೈಗಾರಿಕೆಗಳ ಮುಖ್ಯಸ್ಥರುಗಳು ತಮ್ಮ ಬೇಡಿಕೆಗಳಿಗನುಗುಣವಾಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲು ಪ್ರತ್ಯೇಕ ಕೌಂಟರ್ ತೆರೆಯಲಾಗುವುದು.
ಒಟ್ಟಾರೆ ೬೦ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಲಿದ್ದು, ೮೦೦೦ಕ್ಕೂ ಹೆಚ್ಚು ಮಂದಿ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸುವ ಗುರಿಯನ್ನು ಹೊಂದಿರುತ್ತೇವೆ. ಹೆಚ್ಚಿನ ವಿವರಗಳಿಗೆ ಮೊಬೈಲ್ ನಂ. ೮೮೯೨೬೨೮೦೦೯-೭೮೯೨೨೫೩೮೯೭-೮೬೧೮೪೪೮೧೬೪-೯೯೦೦೨೪೪೯೫೫ ನ್ನು ಸಂಪರ್ಕಿಸಬಹುದು ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ನಗರಪಾಲಿಕೆಯ ಮಾಜಿ ಸದಸ್ಯರಾದ ಜೆ.ಗೋಪಿ, ಎಂ.ಸುನೀಲ್, ಮುಖಂಡರುಗಳಾದ ಶ್ರೀಧರ್, ವಿನಯಕುಮಾರ್ ಜೆ, ರವಿಶಂಕರ್, ಪಟಾಕಿ ಮಂಜುನಾಥ್, ಹರವೆ ಸಿದ್ದು, ವಿಶ್ವ ಹಾಜರಿದ್ದರು.