Skip to main content

3Kaala News

ಸುಭಾಷಿತ 

ಪಕ್ಕದಲ್ಲಿರುವವನ ತಟ್ಟೆಯಲ್ಲಿ ಏನಿದೆ ಅಂತ ಯಾವತ್ತೂ ಇಣುಕಿ ನೋಡಬೇಡ. ಕಾರಣ ಅಲ್ಲಿ ಜಾಸ್ತಿಯಿದ್ದರೆ, ನಿನಗೆ ಸಂಕಟವಾಗುತ್ತದೆ.ಅಲ್ಲಿ ಕಡಿಮೆ ಇದ್ದರೆ, ನಿನಗೆ ಅಹಂಕಾರ ಬರುತ್ತದೆ.ಎರಡೂ ಒಳ್ಳೆಯದಲ್ಲ.ನಮ್ಮ ತಟ್ಟೆಯನ್ನು ನಾವು ನೋಡಿಕೊಂಡಿದ್ದರೆ, ಸಿಗುವ ಸಂತೋಷವೇ ಬೇರೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಇನ್ಸ್ಪೆಕ್ಟರ್ ಧನ0ಜಯ್ ಸಸ್ಪೆಂಡ್ ಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ವಿಪಕ್ಷ ನಾಯಕ ಆರ್.ಅಶೋಕ, ಸಂಸದ ಯದುವೀರ್, ಪ್ರತಾಪ್‌ಸಿಂಹ, ಟಿ.ಎಸ್.ಶ್ರೀವತ್ಸ ಸೇರಿದಂತೆ ಬಿಜೆಪಿ ನಾಯಕರು ಪೊಲೀಸ್ ವಶಕ್ಕೆ

ಮೈಸೂರು: ಜಿಲ್ಲೆಯ ತಿ. ನರಸೀಪುರದಲ್ಲಿ ಗಣೇಶೋತ್ಸವದ ಹಿನ್ನಲೆಯಲ್ಲಿ ಹಿಂದು ಕಾರ್ಯಕರ್ತರಿಗೆ ಧಮ್ಕಿ ಹಾಕಿರುವ ಇನ್ಸ್ಪೆಕ್ಟರ್ ಧನಚಿಜಯ್‌ರನ್ನು ಕೂಡಲೇ ಸ್ಪಸೆಂಡ್ ಮಾಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ಬಿಜೆಪಿ ನಾಯಕರನ್ನು ಪೊಲೀಸರು ವಶಕ್ಕೆ ಪಡೆದರು. ಇನ್ಸ್ಪೆಕ್ಟರ್ ಧನಂಜಯ್ ಮತ್ತು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿರುವ ಬಿಜೆಪಿ ನಾಯಕರು ಟಿ. ನರಸೀಪುರ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಾಕಾರರು ಪೊಲೀಸ್ ಠಾಣೆಯತ್ತ ನುಗ್ಗಲು ಮುಂದಾದಾಗ ವಿಪಕ್ಷ ನಾಯಕ ಆರ್. ಅಶೋಕ್, ಸಂಸದ ಯದುವೀರ್ ಒಡೆಯರ್, ಮಾಜಿ ಸಂಸದ ಪ್ರತಾಪ್ ಸಿಂಹ, ಶಾಸಕ ಟಿ.ಎಸ್. ಶ್ರೀವತ್ಸ ಸ್ಭೆರಿದಂತೆ ಹಲವು ನಾಯಕರು, ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದು ವ್ಯಾನ್‌ಗೆ ಹತ್ತಿಸಿಕೊಂಡು, ಅಲ್ಲಿಂದ ಕರೆದುಕೊಂಡು ಹೋದರು.
ಪ್ರತಿಭಟನೆ ವೇಳೆ ಮಾತನಾಡಿದ
ವಿಪಕ್ಷ ನಾಯಕ ಆರ್. ಅಶೋಕ್, ಇನ್ಸ್ಪೆಕ್ಟರ್ ಅಮಾನತ್ತಿಗೆ ನಾಲ್ಕು ದಿನ ಸಮಯ ಕೇಳಿದ್ದಾರೆ. ಅದಕ್ಕೆ ನಾವು ಒಪ್ಪಿಲ್ಲ, ಪ್ರತಿಭಟನಾ ಮೆರವಣಿಗೆ ಆರಂಭಿಸಿದ್ದೇವೆ. ಸರ್ಕಾರ ದಮ್ಮು ತಾಕತ್ತು ತೋರಿಸಲಿ, ಎಲ್ಲೆ ಗಣಪತಿ ಮೆರವಣಿಗೆಗೆ ತೊಂದರೆ ಆದರೆ ನಾವು ಬರುತ್ತೇವೆ. ಒಬ್ಬ ಇನ್ಸ್ಪೆಕ್ಟರ್ 2 ವರ್ಷದ ತನಕ ಒಂದೇ ಸ್ಟೇಷನ್‌ನಲ್ಲಿ ಇರುವ ಹಾಗಿಲ್ಲ, ಈತ ಮೂರು ವರ್ಷದಿಂದ ಒಂದೇ ಸ್ಟೇಷನ್‌ನಲ್ಲಿದ್ದಾನೆ. ಪ್ರಭಾವಿ ನಾಯಕರ ರಕ್ಷಣೆ ಇನ್ಸ್ಪೆಕ್ಟರ್‌ಗೆ ಇದೆ ಎಂದು ವಾಗ್ದಾಳಿ ನಡೆಸಿದರು.
ಇನ್ಸ್ಪೆಕ್ಟರ್ ಧನಂಜಯ್ ಹೀಗೆ ಮಾತನಾಡಿದ್ದಾರೆ ಎಂದರೆ, ಇದರ ಹಿಂದೆ ದೊಡ್ಡ ಷಢ್ಯಂತ್ರ ಇದೆ. ಸರ್ಕಾರದ ಕುಮ್ಮಕ್ಕಿದೆ. ಕರ್ನಾಟಕದಲ್ಲಿ ಹಿಂದೂ ವಿರೋಧಿ ಸರ್ಕಾರ ಇದೆ. ಡಿ.ಕೆ. ಶಿವಕುಮಾರ್ ಅವರು ಚುನಾವಣೆ ಬಂದ ತಕ್ಷಣ ದೇವಸ್ಥಾನಗಳಿಗೆ ಹೋಗ್ತಾರೆ, ಕುಂಕುಮ ಹಾಕ್ತಾರೆ, ನದೀಲಿ ಮುಳುಗ್ತಾರೆ. ನಾನೂ ದೊಡ್ಡ ಹಿಂದೂ ಅಂತ ಬಿಂಬಿಸಿಕೊಳ್ಳುತ್ತಾರೆ. ಇದೇನಾ ನಿಮ್ಮ ಹಿಂದೂ ಕಾಳಜಿ, ಡಿಕೆಶಿ ಎಲೆಕ್ಷನ್ ಹಿಂದೂ, ಕಲೆಕ್ಷನ್ ಹಿಂದೂ. ಜನರಿಗೆ ಏನು ಸಂದೇಶ ಕೊಡಲು ಹೊರಟಿದ್ದೀರಿ? ಗಣೇಶ ಹಬ್ಬಕ್ಕೆ ಪೊಲೀಸರು ಯೋಗ್ಯತೆ ಇದ್ದರೆ ರಕ್ಷಣೆ ಕೊಡಬೇಕು, ಇಷ್ಟು ಬಿಟ್ರೆ ಇನ್ನೇನಿದೆ ಕೆಲಸ ಎಂದು ಕಿಡಿಕಾರಿದರು.
ಭಕ್ತಾದಿಗಳಿಗೆ ಧಮಕಿ ಹಾಕೋದೇ ಕರ್ನಾಟಕ ಮಾಡೆಲ್ಲಾ?, ಚುನಾವಣೆ ಬಂದಾಗ ಮಾತ್ರ ಕಪಟ ಹಿಂದುತ್ವ ತೋರುತ್ತಾರೆ. ಅಂಬೇಡ್ಕರ್ ಬರೆದ ಸಂವಿಧಾನ ಇದೆಯೋ? ಪಾಕಿಸ್ತಾನದ ಸಂವಿಧಾನ ಇದೆಯೋ ಇಲ್ಲಿ? ಮುಸ್ಲಿಮರೂ ಉರುಸ್ ಮಾಡ್ತಾರೆ, ಯಾವಾಗಲಾದರೂ ದೇವಸ್ಥಾನಗಳಿಂದ ಕಲ್ಲು ಹೊಡೆದಿದ್ದಾರಾ? ಮಸೀದಿಯಿಂದ ಬಾಂಬ್ ಹಾಕೋರಿಗೆ, ಕಲ್ಲು ಹೊಡೀಯೋರಿಗೆ ಹೀಗೇ ಕರೆದು ವಾರ್ನಿಂಗ್ ಮಾಡಲ್ಲ ಯಾಕೆ ಎಂದು ಪ್ರಶ್ನಿಸಿದ್ದಾರೆ.
ಗಣೇಶ ಹಬ್ಬ ಬಂದು ಎರಡು ಸಾವಿರ ವರ್ಷ ಆಯ್ತು, ಮಸೀದಿ ಬಂದು 300 ವರ್ಷ ಅಷ್ಟೇ. ಮಸೀದಿ ಮುಂದೆಯೇ ಯಾಕೆ ಗಲಾಟೆ ಆಗುತ್ತೆ? ಚರ್ಚ್, ಗುರುದ್ವಾರ ಮುಂದೆ ಮೆರವಣಿಗೆ ಹೋದಾಗ ಯಾಕೆ ಗಲಾಟೆ ಆಗಲ್ಲ? ಅವರೆಲ್ಲ ಅಲ್ಪಸಂಖ್ಯಾತರೇ ತಾನೆ, ಇವರು ಮಾತ್ರ ಯಾಕೆ ಗಲಾಟೆ ಮಾಡ್ತಾರೆ? ರಸ್ತೆಗಳನ್ನು ಇವರಿಗೆ ಜಹಗೀರು ಬರೆದುಕೊಟ್ಟಿದ್ದೀರಾ? ಏನೇ ತೊಂದರೆ ಕೊಟ್ರೂ ನಾವು ಗಣಪತಿ ಆಚರಣೆ ಮಾಡುವುದು ಬಿಡುವುದಿಲ್ಲ. ಡಿಕೆಶಿವಕುಮಾರ್ ಅವರು ನಿಜವಾದ ಹಿಂದೂ ಆಗಿದ್ದರೆ ಇನ್ಸ್ಪೆಕ್ಟರ್ ಧನಚಿಜಯ್‌ರನ್ನು ಸಸ್ಪೆಂಡ್ ಮಾಡಲಿ. ತಾವು ನಿಜ ಹಿಂದೂ ತೋರಿಸಲಿ ಎಂದು ಸವಾಲು ಹಾಕಿದರು.
ಪಾಕ್ ಪರ ಘೋಷಣೆ ಮಾಡೋರಿಗೆ ಬಿರಿಯಾನಿ, ಗಣೇಶ ಹಬ್ಬ ಮಾಡೋರಿಗೆ ಬೆದರಿಕೆ. ಇದು ಗೂಂಡಾ ಸರ್ಕಾರ, ತಾಲಿಬಾನಿ ಸರ್ಕಾರ. ವೋಟ್‌ಬ್ಯಾಂಕ್‌ಗಾಗಿ ಗಣೇಶ ಹಬ್ಬಕ್ಕೆ ಷರತ್ತು ಹಾಕ್ತೀರಾ? ಮೈಕ್ ಹಾಕಬಾರದು ಅಂತಾರೆ, ಮುಸ್ಲಿಮರು ರಾತ್ರಿ 12 ಗಂಟೆವರೆಗೂ ಮೈಕ್ ಬಳಸ್ತಾರೆ, ಯಾಕೆ ಕೇಳಲ್ಲ? ಮಸೀದಿಗಳಿಗೆ ಹೋಗಿ ಡಿಕೆಶಿ ಕೇಳಿದೀಯೇನಪ್ಪಾ? ಸುಪ್ರೀಂಕೋರ್ಟ್ ಇಷ್ಟೇ ಡೆಸಿಬಲ್ ಇರಬೇಕು ಅಂದಿದೆ, ಮಸೀದಿಗೆ ಹೋಗಿ ಚೆಕ್ ಮಾಡಿದೀರ? ಅವರಿಗೂ ಹೇಳಿ ಮೈಕ್ ಹಾಕಬಾರದು ಅಂತ. ಇದು ಸರ್ಕಾರದ ಎಡಬಿಡಂಗಿತನ ಎಂದು ವಾಗ್ದಾಳಿ ನಡೆಸಿದರು.
ಹಿಂದೂಗಳೇ ಎಚ್ಚರ, ಇಲ್ಲ ಎಂದರೆ ಮನೆಗಳಲ್ಲಿ ಗಣಪತಿ ಕೂರಿಸಲೂ ಅನುಮತಿ ಪಡೆಯೋ ಸ್ಥಿತಿ ಬರುತ್ತದೆ. ನಾವು ಈ ವಿಚಾರ ಇಲ್ಲಿಗೇ ಬಿಡಲ್ಲ. ಈಗ ಸುಮ್ಮನಿದ್ರೆ ಗಲ್ಲಿ, ಗಲ್ಲಿಯಲ್ಲೂ ಪೊಲೀಸರು ವಾರ್ನಿಂಗ್ ಕೊಡ್ತಾರೆ ಎಂದರು.
ಬ್ರಿಟಿಷರ ಅವಧಿಯಲ್ಲಿ ಆರಾಮವಾಗಿ ಗಣೇಶ ಹಬ್ಬ ಮಾಡಲಾಗ್ತಿತ್ತು. ಈ ಕಾಂಗ್ರೆಸ್ ಸರ್ಕಾರ ಬ್ರಿಟಿಷರಿಗಿಂತಲೂ ಕಡೆ ಆಗಿದ್ದಾರೆ ಎಂದು ಕಿಡಿಕಾರಿದರು.