Skip to main content

3Kaala News

ಸುಭಾಷಿತ 

ಪಕ್ಕದಲ್ಲಿರುವವನ ತಟ್ಟೆಯಲ್ಲಿ ಏನಿದೆ ಅಂತ ಯಾವತ್ತೂ ಇಣುಕಿ ನೋಡಬೇಡ. ಕಾರಣ ಅಲ್ಲಿ ಜಾಸ್ತಿಯಿದ್ದರೆ, ನಿನಗೆ ಸಂಕಟವಾಗುತ್ತದೆ.ಅಲ್ಲಿ ಕಡಿಮೆ ಇದ್ದರೆ, ನಿನಗೆ ಅಹಂಕಾರ ಬರುತ್ತದೆ.ಎರಡೂ ಒಳ್ಳೆಯದಲ್ಲ.ನಮ್ಮ ತಟ್ಟೆಯನ್ನು ನಾವು ನೋಡಿಕೊಂಡಿದ್ದರೆ, ಸಿಗುವ ಸಂತೋಷವೇ ಬೇರೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ವೀರಶೈವ ಸಹಕಾರ ಸಂಘವು ಆರ್ಥಿಕ ಸ್ವಾವಲಂಬನೆಯ ಸಂಕೇತ : ಎನ್.ಸಿ ಬಸವಣ್ಣ.

 

ನಂಜನಗೂಡು;ವೀರಶೈವ ಸಹಕಾರ ಸಂಘವು ನಮ್ಮ ಸಮಾಜದ ಆರ್ಥಿಕ ಸ್ವಾವಲಂಬನೆಯ ಸಂಕೇತವಾಗಿದ್ದು ನಿಮ್ಮೆಲ್ಲರ ನಂಬಿಕೆ ಮತ್ತು ಸಹಕಾರದಿಂದಾಗಿ ಪ್ರತಿ ವರ್ಷ ಲಾಭದತ್ತ ಮುನ್ನಡೆಯುತ್ತಿದೆ ಎಂದು ವೀರಶೈವ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಎನ್‌.ಸಿ.ಬಸವಣ್ಣ ಹೇಳಿದರು. ಅವರು ನಗರದ ಕಮಲಮ್ಮ ಗುರುಮಲ್ಲಪ್ಪ ಕಲ್ಯಾಣ ಮಂಟಪದಲ್ಲಿ ಜರುಗಿದ ಸಂಘದ 20ನೇ ವರ್ಷದ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ನಮ್ಮ ವೀರಶೈವ ಕೋ ಆಪರೇಟಿವ್ ಸೊಸೈಟಿಯು ಕಳೆದ ಹತ್ತು ವರ್ಷಗಳಿಂದ ಲಾಭದಲ್ಲಿ ಮುನ್ನಡೆಯುತ್ತಿದೆ ಎಂದು ಹೇಳಲು ನಾನು ಹೆಮ್ಮೆ ಪಡುತ್ತೇನೆ, ಪ್ರಸಕ್ತ ವರ್ಷದಲ್ಲಿ 13 ಲಕ್ಷ ಲಾಭದಲ್ಲಿ ಮುನ್ನಡೆಯುತ್ತಿದ್ದು, ಸಮಾಜದ ಬಂಧುಗಳಿಗೆ ಆರ್ಥಿಕ ಭದ್ರತೆಯನ್ನು ಒದಗಿಸಿ ಕೆಲಸ ನಿರ್ವಹಿಸುತ್ತಿದೆ, ಅಲ್ಲದೆ ನಮ್ಮ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಮತ್ತು ಕಷ್ಟದಲ್ಲಿರುವವರಿಗೆ ಆರ್ಥಿಕ ಸಹಾಯ ಮಾಡುವ ಮೂಲಕ ನಮ್ಮ ಸಾಮಾಜಿಕ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದೇವೆ, ಎಂದರಲ್ಲದೆ ಮುಂದಿನ ಒಂದು ತಿಂಗಳ ಅವಧಿಯಲ್ಲಿ ವೀರಶೈವ ಕೋ ಆಪರೇಟಿವ್ ಸೊಸೈಟಿಯು ಸ್ವಂತ ನಿವೇಶನವನ್ನು ಖರೀದಿ ಮಾಡುವ ಮೂಲಕ ಸದಸ್ಯರಿಗೆ ಸಿಹಿ ಸುದ್ದಿ ನೀಡಲಿದೆ ಎಂದು ಹೇಳಿದರು.

  ಸಮಾರಂಭದಲ್ಲಿ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು, 

ಸಮಾರಂಭದಲ್ಲಿ ಸೊಸೈಟಿಯ ನಿರ್ದೇಶಕರಾದ ಎಂ.ವಿ.ಶಿವಕುಮಾರ್‌, ಕೆಂಡಗಣ್ಣಸ್ವಾಮಿ, ಚೆನ್ನಬಸಪ್ಪ, ಎನ್.ವಿ.ವಿನಯ್‌ ಕುಮಾರ್‌, ಮಂಜುಳ ಮಧು, ಶಾಂತಕುಮಾರ್‌, ಗೀತಾದೇವಿ, ರಮೇಶ್‌, ಕುಮಾರಸ್ವಾಮಿ, ಚೈತ್ರಾ, ಪೂಜ ಉಪಸ್ಥಿತರಿದ್ದರು.