
ಮೈಸೂರು: ನಗರದ ಮೈಸೂರು ವಿಶ್ವವಿದ್ಯಾನಿಲಯ ದೈಹಿಕ ಶಿಕ್ಷಣ ವಿಭಾಗದ ಸ್ಪೋರ್ಟ್್ಸ ಫೆವಿಲಿಯನ್ ಒಳಾಂಗಣದಲ್ಲಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ನಗರದ ಮಹಾರಾಣಿ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿ ಹಲವು ಪ್ರಶಸ್ತಿಗಳನ್ನು ಪಡೆದು ಉತ್ತಮ ಸಾಧನೆ ಮಾಡಿದ್ದಾರೆ.
ಜಿಮ್ನಾಸ್ಟಿಕ್, ವೇಟ್ ಲಿಫ್ಟಿಂಗ್, ಕುಸ್ತಿ, ಸ್ಫೋರ್ಟ್್ಸ ಪೆವಿಲಿಯನ್ ನಲ್ಲಿ, ಕಿಕ್ ಬಾಕ್ಸಿಂಗ್, ಕರಾಟೆ ಸ್ಪರ್ಧೆಗಳು ಯುವರಾಜ ಕಾಲೇಜಿನ ಒಳಾಂಗಣದಲ್ಲಿ ನಡೆದ ವಿಶ್ವವಿದ್ಯಾನಿಲಯ ಅಂತರ ಕಾಲೇಜುಗಳ ಸ್ಪರ್ಧೆ ಹಾಗೂ ವಿಶ್ವವಿದ್ಯಾನಿಲಯ ತಂಡಗಳ ಆಯ್ಕೆ ಪ್ರಕ್ರಿಯೆಯಲ್ಲಿ ಮೈಸೂರಿನ ಮಹಾರಾಣಿ ಮಹಿಳಾ ಕಲಾ ಕಾಲೇಜಿನ ವಿದ್ಯಾರ್ಥಿನಿಯರು ಅತ್ಯುತ್ತಮ ಸಾಧನೆ ಮಾಡಿದ್ದಾರೆ.
ಅ.೨೩, ೨೪ ಮತ್ತು ೨೫ ರಂದು ನಡೆದ ಕಿಕ್ ಬಾಕ್ಸಿಂಗ್ ನ ಆಯ್ಕೆ ಮತ್ತು ಸ್ಪರ್ಧೆಯಲ್ಲಿ ರಾಷ್ಟçಮಟ್ಟದ ಪದಕ ವಿಜೇತ ಕ್ರೀಡಾಪಟು ಬಿಂದುಶ್ರೀ(ತೃತೀಯ ಬಿಎ) ೭೦ ಕೆಜಿ ಮೇಲ್ಪಟ್ಟ ಲೋ ಕಿಕ್ ವಿಭಾಗದಲ್ಲಿ ಚಿನ್ನದ ಪದಕ, ಜ್ಯೋತಿ (ಪ್ರಥಮ ಬಿಎ) ೬೦ ಕೆಜಿ ಲೋ ಕಿಕ್ ವಿಭಾಗದಲ್ಲಿ ಚಿನ್ನದ ಪದಕ, ಮಾನಸ ೭೦ ಕೆಜಿ ವಿಭಾಗದ ಲೋ ಕಿಕ್ ನಲ್ಲಿ ಚಿನ್ನದ ಪದಕ, ರಮ್ಯಾ ಎಂ ೭೦ ಕೆಜಿ ವಿಭಾಗದ ಲೋ ಕಿಕ್ ನಲ್ಲಿ ಬೆಳ್ಳಿಯ ಪದಕ, ಸಂಜೀವಿನಿ (ಪ್ರಥಮ ಬಿಎ) ೫೦ ಕೆಜಿ ವಿಭಾಗದ ಕರಾಟೆಯ ಕುಮಿತೆಯಲ್ಲಿ ಬೆಳ್ಳಿ ಪದಕ ಪಡೆದಿದ್ದಾರೆ.
ಪಲ್ಲವಿ (ಪ್ರಥಮ ಬಿಎ) ಟೇಬಲ್ ವಾಲ್ಟ್ ನಲ್ಲಿ ಚಿನ್ನದ ಪದಕ, ಅನಿವನ್ ಬಾರ್ ನಲ್ಲಿ ಬೆಳ್ಳಿಯ ಪದಕ, ಬ್ಯಾಲೆನ್ಸಿಂಗ್ ಭೀಮ್ ನಲ್ಲಿ ಬೆಳ್ಳಿಯ ಪದಕ, ಫ್ಲೋರ್ ಎಕ್ಸರ್ಸೆÊಜ್‌ನಲ್ಲಿ ಬೆಳ್ಳಿಯ ಪದಕ, ಸಂಜನಾ (ಪ್ರಥಮ ಬಿಎ) ಜಿಮ್ನಾಸ್ಟಿಕ್ ಸ್ಪರ್ಧೆಯ ವಾಲ್ಟಿಂಗ್ ಟೇಬಲ್ ನಲ್ಲಿ ಕಂಚಿನ ಪದಕ, ಬ್ಯಾಲೆನ್ಸಿಂಗ್ ಭೀಮ್ ನಲ್ಲಿ ಕಂಚಿನ ಪದಕ ಹಾಗೂ ಕುಸ್ತಿಯ ೫೩ ಕೆಜಿ ವಿಭಾಗದ ಸ್ಪರ್ಧೆಯಲ್ಲಿ ಬೆಳ್ಳಿಯ ಪದಕ ಪಡೆದಿರುತ್ತಾರೆ. ಶ್ರೀರಕ್ಷ (ತೃತೀಯ ಬಿಎ) ಫ್ಲೋರ್ ಎಕ್ಸರ್ಸೆÊಜ್‌ನಲ್ಲಿ ಕಂಚಿನ ಪದಕ, ವಾಲ್ಟಿಂಗ್ ಟೇಬಲ್ ನಲ್ಲಿ ಕಂಚಿನ ಪದಕ, ಅನ್‌ಇವನ್ಬಾರ್ ನಲ್ಲಿ ಕಂಚಿನ ಪದಕ ಗಳಿಸಿರುತ್ತಾರೆ.
ವೇಟ್ ಲಿಫ್ಟಿಂಗ್ ಸ್ಪರ್ಧೆ ಮತ್ತು ಆಯ್ಕೆಯಲ್ಲಿ ಪೂರ್ವಿ ಪಿ ಹೆಗಡೆ (ದ್ವಿತೀಯ ಬಿಎ) ಚಿನ್ನದ ಪದಕ, ರಮ್ಯಾ ತೃತೀಯ ಬಿಎ ಚಿನ್ನದ ಪದಕ, ರೂಪಂ ಕುಮಾರಿ (ದ್ವಿತೀಯ ಬಿಎ) ಬೆಳ್ಳಿಯ ಪದಕ, ಮಾಯವ್ವ (ತೃತೀಯ ಬಿಎ) ಬೆಳ್ಳಿ ಪದಕ ಪಡೆದು ಅತ್ಯುತ್ತಮ ಸಾಧನೆಗೈದಿದ್ದಾರೆ. ಕ್ರೀಡಾಪಟುಗಳ ಸಾಧನೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಎಂ.ಎಸ್.ಅನಿತಾ, ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥರು ಹಾಗೂ ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ. ಮೋಹನ್ ಕುಮಾರ್ ಸಿ.ಎಸ್., ಮತ್ತು ಡಾ. ಭಾಸ್ಕರ್ ಕೆ.ಎಸ್. ಹಾಗೂ ಕಾಲೇಜಿನ ಕ್ರೀಡಾ ಕಾರ್ಯಕಾರಿ ಸಮಿತಿ, ಎಲ್ಲಾ ಅಧ್ಯಾಪಕರು, ಆಧ್ಯಾಪಕೇತರ ವರ್ಗದವರು ಅಭಿನಂದಿಸಿದ್ದಾರೆ.