Skip to main content

3Kaala News

ಸುಭಾಷಿತ 

ಪಕ್ಕದಲ್ಲಿರುವವನ ತಟ್ಟೆಯಲ್ಲಿ ಏನಿದೆ ಅಂತ ಯಾವತ್ತೂ ಇಣುಕಿ ನೋಡಬೇಡ. ಕಾರಣ ಅಲ್ಲಿ ಜಾಸ್ತಿಯಿದ್ದರೆ, ನಿನಗೆ ಸಂಕಟವಾಗುತ್ತದೆ.ಅಲ್ಲಿ ಕಡಿಮೆ ಇದ್ದರೆ, ನಿನಗೆ ಅಹಂಕಾರ ಬರುತ್ತದೆ.ಎರಡೂ ಒಳ್ಳೆಯದಲ್ಲ.ನಮ್ಮ ತಟ್ಟೆಯನ್ನು ನಾವು ನೋಡಿಕೊಂಡಿದ್ದರೆ, ಸಿಗುವ ಸಂತೋಷವೇ ಬೇರೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ರೈತನನ್ನು ಕೊಂದು ತಿಂದಿದ್ದ ಹುಲಿ ಸೆರೆ

ಚಾಮರಾಜನಗರ; ತಾಲೂಕಿನ ಬಡಗಲಪುರದಲ್ಲಿ ರೈತ ಬಸವಣ್ಣ ಎಂಬುವರನ್ನು ಕೊಂದು ಹಾಕಿ ತಿಂದಿದ್ದ ಹುಲಿಯನ್ನು ಚಾಮರಾಜನಗರ ತಾಲೂಕಿನ ತಾವರೆಕಟ್ಟೆ ಮೋಳೆ ಗ್ರಾಮದ ಮರಗದಕೆರೆ ಬಳಿ ಕಾರ್ಯಚರಣೆ ನಡೆಸಿ ಸೆರೆ ಹಿಡಿಯಲಾಗಿದೆ.
ಶನಿವಾರ ಬೆಳಗ್ಗೆ ಸಾಕಾನೆಗಳಾದ ಕಂಜನ್ ಮತ್ತು ಈಶ್ವರ್ ಸಹಾಯದಿಂದ ಅರವಳಿಕೆ ಚುಚ್ಚುಮದ್ದು ನೀಡಿ ಸೆರೆ ಹಿಡಿಯಲಾಗಿದೆ. ಸೆರೆ ಹಿಡಿದ ವ್ಯಾಘ್ರವು ಗಂಡಾಗಿದ್ದು, ೬ ರಿಂದ ೭ ವರ್ಷದ್ದು ಎಂದು ಅಂದಾಜು ಮಾಡಲಾಗಿದೆ.
ಸೆ. ೧೪ರ ಸಂಜೆ ಚಾಮರಾಜನಗರ ತಾಲೂಕಿನ ಬಡಗಲಪುರ ಗ್ರಾಮದ ಜಮೀನಿನಲ್ಲಿ ಹುಲಿ ದಾಳಿಗೆ ರೈತ ಬಸವಣ್ಣ ಮೃತಪಟ್ಟ ಪ್ರಕರಣಕ್ಕೆ ಸಂಬAಧಿಸಿದAತೆ ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಅರಣ್ಯ ಸಿಬ್ಬಂದಿ ಸೆಪ್ಟೆಂಬರ್ ೧೫ ರಿಂದಲೂ ಹುಲಿ ಸೆರೆ ಕಾರ್ಯಾಚರಣೆ ನಡೆಸಲಾಗುತ್ತಿತ್ತು.
ಡ್ರೋನ್ ಹಾಗೂ ಥರ್ಮಲ್ ಡ್ರೋನ್, ಶ್ವಾನದಳದ ಮೂಲಕ ಕಾರ್ಯಾಚರಣೆ ನಡೆಸಿದರೂ ಹುಲಿಯ ಸುಳಿವು ಸಿಕ್ಕಿರಲಿಲ್ಲ. ಹುಲಿ ಸೆರೆಗಾಗಿ ದುಬಾರೆಯಿಂದ ಕಂಜನ್ ಮತ್ತು ಈಶ್ವರ್ ಎಂಬ ಸಾಕಾನೆಗಳನ್ನು ಕರೆತರಲಾಗಿತ್ತು. ಕಳೆದ ಗುರುವಾರದಂದು ಚಾಮರಾಜನಗರ ತಾಲೂಕಿನ ತಾವರೆಕಟ್ಟೆ ಮೋಳೆ ಸುತ್ತಮುತ್ತಲು ಹುಲಿ ಕಾಣಿಸಿಕೊಂಡ ಭೀತಿ ಸೃಷ್ಟಿಯಾಗಿತ್ತು.
ತಾವರುಕಟ್ಟೆ ಮೋಳೆ ಗ್ರಾಮದ ಆಸುಪಾಸಿನಲ್ಲೇ ಹುಲಿ ಓಡಾಟ ನಡೆಸಿದ್ದ ಮಾಹಿತಿ ಮೇರೆಗೆ ಬಿಆರ್‌ಟಿ ಅರಣ್ಯಾಧಿಕಾರಿಗಳು ದೌಡಾಯಿಸಿ ಡ್ರೋನ್ ಕ್ಯಾಮರಾದ ಮೂಲಕ ಹುಲಿ ಮೇಲೆ ನಿಗಾ ಇರಿಸಿ ಕಾರ್ಯಾಚರಣೆ ನಡೆಸಿದ್ದರು.
ಎರಡು ಡ್ರೋನ್, ಶ್ವಾನದಳ ಮತ್ತು ಹುಲಿ ಜಾಡು ಪತ್ತೆಹಚ್ಚುವ ನುರಿತ ಗಿರಿಜನರು ಸೇರಿದಂತೆ ೬೫ಕ್ಕೂ ಅಧಿಕ ಮಂದಿ ಹುಲಿ ಸೆರೆಗೆ ಕಳೆದ ೧೨ ದಿನಗಳಿಂದ ನಿರಂತರ ಕಾರ್ಯಾಚರಣೆ ನಡೆಸಿ, ಕೊನೆಗೆ ಯಶಸ್ವಿಯಾಗಿದ್ದಾರೆ. ಸೆರೆ ಸಿಕ್ಕ ಹುಲಿಯನ್ನು ಅಲ್ಲಿಂದ ಸ್ಥಳಾಂತರಿಸಲಾಗಿದೆ.
.