Skip to main content

3Kaala News

ಸುಭಾಷಿತ 

ಪಕ್ಕದಲ್ಲಿರುವವನ ತಟ್ಟೆಯಲ್ಲಿ ಏನಿದೆ ಅಂತ ಯಾವತ್ತೂ ಇಣುಕಿ ನೋಡಬೇಡ. ಕಾರಣ ಅಲ್ಲಿ ಜಾಸ್ತಿಯಿದ್ದರೆ, ನಿನಗೆ ಸಂಕಟವಾಗುತ್ತದೆ.ಅಲ್ಲಿ ಕಡಿಮೆ ಇದ್ದರೆ, ನಿನಗೆ ಅಹಂಕಾರ ಬರುತ್ತದೆ.ಎರಡೂ ಒಳ್ಳೆಯದಲ್ಲ.ನಮ್ಮ ತಟ್ಟೆಯನ್ನು ನಾವು ನೋಡಿಕೊಂಡಿದ್ದರೆ, ಸಿಗುವ ಸಂತೋಷವೇ ಬೇರೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಎಲ್ಲರ ಕಣ್ಮನ ಸೆಳೆದ ಬೆಟ್ಟದ ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ


ಮೈಸೂರು; ನಾಡಹಬ್ಬ ಮೈಸೂರು ದಸರಾ ಆರಂಭವಾಗುವುದೇ ಶಕ್ತಿ ದೇವತೆ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸುವ ಮೂಲಕ. ಈ ಹಿನ್ನೆಲೆಯಲ್ಲಿ ಕಳೆದ ವಾರ ಅರಮನೆಯಿಂದ ಅಮ್ಮನವರ ಉತ್ಸವಮೂರ್ತಿಯನ್ನು ಚಾಮುಂಡಿ ಬೆಟ್ಟಕ್ಕೆ ಸಾಂಪ್ರದಾಯಿಕವಾಗಿ ಕರೆತರಲಾಯಿತು. ಅಲ್ಲಿ ವಿಶೇಷವಾಗಿ ತಾಯಿಯನ್ನು ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸಿಲಾಯಿತು. ನಂತರ ನವರಾತ್ರಿಯ ಮೊದಲ ಇಂದು ಅಕ್ಟೋಬರ್ 11 ರಂದು ದೇವಸ್ಥಾನದ ಒಳಗೆ ಪೂಜಾ ಕೈಂಕರ್ಯಗಳನ್ನು ಕೈಗೊಂಡು ವಿಶೇಷ ಅಲಂಕಾರದೊAದಿಗೆ ದಸರಾ ಉದ್ಘಾಟನಾ ವೇದಿಕೆಗೆ ಕರೆತಂದು, ಅಲ್ಲಿ ಬೆಳ್ಳಿ ಪಲ್ಲಕ್ಕಿಯಲ್ಲಿ ಕೂರಿಸಿದ ಬಳಿಕ ನಾಡ ಅಧಿದೇವತೆಗೆ ಗಣ್ಯರಿಂದ ಪುಷ್ಪಾರ್ಚನೆ ಮಾಡಿ ದಸರಾ ಉದ್ಘಾಟಿಸಲಾಯಿತು.
ಚಾಮುಂಡೇಶ್ವರಿ ಅಮ್ಮನವರ ಈ ಉತ್ಸವಮೂರ್ತಿ ವರ್ಷವಿಡೀ ಅರಮನೆಯಲ್ಲಿ ಇರಲಿದ್ದು, ದಸರಾ ಸಂದರ್ಭದಲ್ಲಿ ಅರಮನೆಯಿಂದ ಚಾಮುಂಡಿ ಬೆಟ್ಟದ ಪ್ರಾಧಿಕಾರಕ್ಕೆ ಕಳಿಸಿಕೊಡಲಾಗುತ್ತದೆ. ಅಲ್ಲಿ ನವರಾತ್ರಿಯ ವಿಶೇಷ ಪೂಜೆ ನಂತರ, ಜಂಬೂಸವಾರಿಯ ದಿನ ಅರಮನೆಗೆ ಕರೆತರಲಾಗುತ್ತದೆ. ಅಲ್ಲಿ ಪೂಜೆ ಸಲ್ಲಿಸಿದ ನಂತರ ಚಿನ್ನದ ಅಂಬಾರಿಯನ್ನು ಅಮ್ಮನವರನ್ನು ಕೂರಿಸಿ ಪುಷ್ಪಾರ್ಚನೆ ಮಾಡುವ ಮೂಲಕ ಜಂಬೂಸವಾರಿ ಮೆರವಣಿಗೆ ವಿಜೃಂಭಣೆಯಿAದ ವೈಭವವಾಗಿ ನಡೆಯಲಿದೆ.