Skip to main content

3Kaala News

ಸುಭಾಷಿತ 

ಪಕ್ಕದಲ್ಲಿರುವವನ ತಟ್ಟೆಯಲ್ಲಿ ಏನಿದೆ ಅಂತ ಯಾವತ್ತೂ ಇಣುಕಿ ನೋಡಬೇಡ. ಕಾರಣ ಅಲ್ಲಿ ಜಾಸ್ತಿಯಿದ್ದರೆ, ನಿನಗೆ ಸಂಕಟವಾಗುತ್ತದೆ.ಅಲ್ಲಿ ಕಡಿಮೆ ಇದ್ದರೆ, ನಿನಗೆ ಅಹಂಕಾರ ಬರುತ್ತದೆ.ಎರಡೂ ಒಳ್ಳೆಯದಲ್ಲ.ನಮ್ಮ ತಟ್ಟೆಯನ್ನು ನಾವು ನೋಡಿಕೊಂಡಿದ್ದರೆ, ಸಿಗುವ ಸಂತೋಷವೇ ಬೇರೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

2 ಕೋಟಿ 40 ಲಕ್ಷ ವೆಚ್ಚದ ಸಮುದಾಯ ಭವನ ಮತ್ತು ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗಳಿಗೆ ಶಾಸಕ ದರ್ಶನ್ ಧ್ರುವನಾರಾಯಣ ಚಾಲನೆ. 

  ನಂಜನಗೂಡು; ತಾಲೂಕಿನ ಕಳಲೆ, ಸಿಂದುವಳ್ಳಿಪುರ ಗ್ರಾಮಗಳಲ್ಲಿ 2 ಕೋಟಿ 40 ಲಕ್ಷ ಲಕ್ಷದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಚಾಲನೆ ನೀಡಲಾಗಿದೆ ಎಂದು ಶಾಸಕ ದರ್ಶನ್ ಧ್ರುವನಾರಾಯಣ ಹೇಳಿದರು. 

  ಅವರು ತಾಲೂಕಿನ ಕಳಲೆ, ಸಿಂಧುವಳ್ಳಿಪುರ, ಗೋಳೂರು, ಗೀಕಹಳ್ಳಿ ಗ್ರಾಮದಲ್ಲಿ 2 ಕೋಟಿ 40 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣ, ಮತ್ತು ವಿವಿಧ ಸಮುದಾಯಗಳ ಸಮುದಾಯ ಭವನಗಳ ನಿರ್ಮಾಣ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.   

   ನಮ್ಮ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಗ್ಯಾರೆಂಟಿ ಅನುಷ್ಠಾನಕ್ಕೆ ಅನುದಾನ ನೀಡಿದಷ್ಟೇ ಅಭಿವೃದ್ಧಿ ಕಾರ್ಯಗಳಿಗೂ ಹೆಚ್ಚಿನ ಅನುದಾನ ನೀಡಲಾಗುತ್ತಿದೆ, ಕ್ಷೇತ್ರಕ್ಕೆ ಮುಖ್ಯಮಂತ್ರಿಗಳ ವಿಶೇಷ ಅನುದಾನವೇ ಸುಮಾರು 75 ಕೋಟಿ ಬಂದಿದೆ, ಜೊತೆಗೆ ನೀರಾವರಿ ಇಲಾಖೆಯಿಂದಲೇ 30ಕೋಟಿ, ಕಪಿಲಾ ನದಿಯ ಸ್ನಾನಘಟ್ಟದ ಬಳಿಯಲ್ಲಿ ಸುಮಾರು 15 ಕೋಟಿ ವೆಚ್ಚದಲ್ಲಿ ಕಿರು ಬ್ಯಾರೇಜ್ ನಿರ್ಮಾಣಕ್ಕೆ ಅನುದಾನ ಬಿಡುಗಡೆಗೊಂಡಿದೆ, ದೇವನೂರು ಏತ ನೀರಾವರಿಗೆ 90 ಕೋಟಿ, ನಾಲೆಗಳ ಅಭಿವೃದ್ಧಿಗಾಗಿ 20 ಕೋಟಿ, ಬದನವಾಳು ಗ್ರಾಮದ ಖಾದಿ ಮತ್ತು ಗ್ರಾಮೋದ್ಯೋಗ ಕೇಂದ್ರದ ಅಭಿವೃದ್ಧಿಗಾಗಿ 60 ಕೋಟಿ ಅನುದಾನ ನೀಡಿದ್ದಾರೆ, ಲೋಕೋಪಯೋಗಿ ಇಲಾಖೆಯಿಂದ ಸುಮಾರು 25 ಕೋಟಿಗಿಂತಲೂ ಹೆಚ್ಚಿನ ಅನುದಾನದಲ್ಲಿ ವಿವಿಧ ಗ್ರಾಮದ ಸಂಪರ್ಕ ಮುಖ್ಯ ರಸ್ತೆಗಳ ಅಭಿವೃದ್ಧಿ ಪಡಿಸಲಾಗಿದೆ, ಎಸಿಪಿ ಮತ್ತು ಟಿಎಸ್ಪಿ ಯೋಜನೆ ಅಡಿ ಕೋಟ್ಯಾಂತರ ರೂಪಾಯಿ ಅನುದಾನ ನೀಡಲಾಗಿದೆ, ಒಟ್ಟಾರೆ ಕ್ಷೇತ್ರದಲ್ಲಿ 700 ಕೋಟಿಗಿಂತಲೂ ಹೆಚ್ಚಿನ ಅಭಿವೃದ್ಧಿ ಕಾರ್ಯಗಳು ನಡೆದಿವೆ, ಗ್ಯಾರೆಂಟಿ ಯೋಜನೆಗಳಿಂದ ಅಭಿವೃದ್ಧಿ ಹಿನ್ನಡೆಯಾಗಿದೆ ಎಂಬ ವಿಪಕ್ಷಗಳ ಟಿ ಕೆ ಟಿಪ್ಪಣಿಗಳಿಗೆ ಹುರುಳಿಲ್ಲ ಎಂದು ಹೇಳಿದರು. 

   ಕಳಲೆ ಗ್ರಾಮದಲ್ಲಿ 24 ಮನೆ ತೆಲುಗು ಶೆಟ್ಟರ ಸಮುದಾಯ ಭವನ 10 ಲಕ್ಷ, ಮಲೆ ಮಹದೇಶ್ವರ ಸ್ವಾಮಿ ಸಮುದಾಯ ಭವನ ಕಾಮಗಾರಿ 5 ಲಕ್ಷ, ದೊಡ್ಡ ಬೀದಿಯ ಗರಡಿ ಮನೆಗೆ 10 ಲಕ್ಷ, ಕಳಲೆಚಿಕ್ಕ ಬೀದಿಯಲ್ಲಿ 10 ಲಕ್ಷ ವೆಚ್ಚದಲ್ಲಿ ವೀಳ್ಯದೆಲೆ ಸಂತೆ ನಿರ್ಮಾಣ ಕಾಮಗಾರಿ, ಕಳಲೆ ಗ್ರಾಮದ ಎಸಿ ಬೀದಿಯಲ್ಲಿ 50 ಲಕ್ಷ ವೆಚ್ಚದಲ್ಲಿ ಕಮ್ಯುನಿಟಿ ಹಾಲ್, ಗ್ರಂಥಾಲಯ ನಿರ್ಮಾಣ, 65 ಲಕ್ಷ ವೆಚ್ಚದಲ್ಲಿ ಲಕ್ಷ್ಮಿಕಾಂತ ದೇವಾಲಯದ ಮುಂಭಾಗ ರಥಬೀದಿಯ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿ, ಹಾಲುಮತ ಬೀದಿಯ ರೇವಣ್ಣ ಸಿದ್ದೇಶ್ವರ ದೇವಸ್ಥಾನದ ಮುಂದುವರಿದ ಕಾಮಗಾರಿಗೆ 5 ಲಕ್ಷ, ಬೀರೇಶ್ವರ ದೇವಸ್ಥಾನದ ಕೊಳ್ಳಿ ಮಾರಮ್ಮ ದೇವಾಲಯಗಳ ನಿರ್ಮಾಣಕ್ಕೆ 10 ಲಕ್ಷ, ಪಾರ್ವತಮ್ಮ ಸಮುದಾಯ ಭವನದ ನಿರ್ಮಾಣ ಕಾಮಗಾರಿಗೆ 15 ಲಕ್ಷ, ಸಿಂಧುವಳ್ಳಿ ಪುರ ಗ್ರಾಮದಲ್ಲಿ 10 ಲಕ್ಷ ವೆಚ್ಚದಲ್ಲಿ ಕನಕ ಸಮುದಾಯ ಭವನ ನಿರ್ಮಾಣ ಸೇರಿದಂತೆ ಒಟ್ಟಾರೆ 2 ಕೋಟಿ 40 ಲಕ್ಷ ವೆಚ್ಚದಲ್ಲಿ ಗುದ್ದಲಿ ಪೂಜೆ ನೆರವೇರಿಸಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

  ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಮಾತನಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ರವರ ಅವಧಿಯಲ್ಲಿ ಗ್ರಾಮಕ್ಕೆ ಎರಡು ಕೋಟಿ ವಿಶೇಷ ಅನುದಾನವನ್ನು ನೀಡಿದ್ದರು, ಜೊತೆಗೆ 2023- 24 ನ ಸಾಲಿನಲ್ಲಿ ಬಿಡುಗಡೆಗೊಂಡ 25 ಕೋಟಿ ವಿಶೇಷ ಅನುದಾನದಲ್ಲಿ ಕಳಲೆ ಗ್ರಾಮಕ್ಕೆ ಎರಡು ಕೋಟಿ ಅನುದಾನವನ್ನು ಮೀಸಲಿಡಲಾಗಿದೆ, ಒಟ್ಟಾರೆಯಾಗಿ ನಾಲ್ಕು ಕೋಟಿ ಅನುದಾನವನ್ನು ಕಳಲೆ ಗ್ರಾಮ ಒಂದಕ್ಕೆ ನೀಡುವ ಮೂಲಕ ಕಳಲೆ ಗ್ರಾಮದ ಅಭಿವೃದ್ಧಿಗೆ ಸಹಕಾರ ನೀಡಿದ್ದಾರೆ ಎಂದು ಹೇಳಿದರು. 

    ಇದೇ ಸಂದರ್ಭದಲ್ಲಿ ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕುರಹಟ್ಟಿ ಕೆ.ಜಿ.ಮಹೇಶ್, ಸಿ.ಎಂ.ಶಂಕರ್, ಕಳಲೆ ಗ್ರಾಪಂ ಮಾಜಿ ಅಧ್ಯಕ್ಷ ಮಹೇಶ್, ಮಾಜಿ ಉಪಾಧ್ಯಕ್ಷ ಹರೀಶ್, ಜಿಪಂ ಮಾಜಿ ಸದಸ್ಯ ಎನ್.ಮಹದೇವು, ತಾಪಂ ಮಾಜಿ ಸದಸ್ಯ ಕೆ.ಡಿ.ಮಂಜು, ಎಸ್.ಸಿ.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉಪ್ಪಿನಹಳ್ಳಿಶಿವಣ್ಣ, ಮುಖಂಡರಾದ ಕಳಲೆರಾಜೇಶ್, ನಾರಾಯಣ, ಗೋವಿಂದರಾಜು, ಗುರುಮಲ್ಲಪ್ಪ, ಹಲ್ಲರೆ ಮಹದೇವು, ಕೆಆರ್ ಐಡಿಎಲ್ ಸಂಸ್ಥೆಯ ಎಇಇ ಶೋಭಾ, ನಿರ್ಮಿತಿ ಕೇಂದ್ರದ ಎಇಇ ಮಂಜುನಾಥ್, ಎಇ ಯಶವಂತ್ ಸೇರಿದಂತೆ ಹಲವಾರು ಪ್ರಮುಖರು ಉಪಸ್ಥಿತರಿದ್ದರು