Skip to main content

3Kaala News

ಸುಭಾಷಿತ 

ಪಕ್ಕದಲ್ಲಿರುವವನ ತಟ್ಟೆಯಲ್ಲಿ ಏನಿದೆ ಅಂತ ಯಾವತ್ತೂ ಇಣುಕಿ ನೋಡಬೇಡ. ಕಾರಣ ಅಲ್ಲಿ ಜಾಸ್ತಿಯಿದ್ದರೆ, ನಿನಗೆ ಸಂಕಟವಾಗುತ್ತದೆ.ಅಲ್ಲಿ ಕಡಿಮೆ ಇದ್ದರೆ, ನಿನಗೆ ಅಹಂಕಾರ ಬರುತ್ತದೆ.ಎರಡೂ ಒಳ್ಳೆಯದಲ್ಲ.ನಮ್ಮ ತಟ್ಟೆಯನ್ನು ನಾವು ನೋಡಿಕೊಂಡಿದ್ದರೆ, ಸಿಗುವ ಸಂತೋಷವೇ ಬೇರೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಶ್ರೀರಂಗಪಟ್ಟಣ ದಸರಾಗೆ ಧನಂಜಯ, ಲಕ್ಷ್ಮಿ, ರೂಪ ಆನೆಗಳ ಆಯ್ಕೆ; ಸಿಸಿಎಫ್ ಡಾ. ಎಸ್. ಎಸ್. ರವಿಶಂಕರ್


ಮೈಸೂರು: “ಸಾಂಪ್ರದಾಯಿಕ ಶ್ರೀರಂಗಪಟ್ಟಣ ದಸರಾದ ಮೆರವಣಿಗೆಯಲ್ಲಿ ಭಾಗವಹಿಸಲು ಧನಂಜಯ ಗಂಡು ಆನೆಯಾಗಿ, ಹೆಣ್ಣು ಆನೆಗಳಾಗಿ ಲಕ್ಷಿ÷್ಮ ಮತ್ತು ರೂಪ ಆನೆಗಳನ್ನು ಆಯ್ಕೆ ಮಾಡಲಾಗಿದೆ” ಎಂದು ಸಿಸಿಎಫ್ ಡಾ. ಎಸ್. ಎಸ್. ರವಿಶಂಕರ್ ತಿಳಿಸಿದರು.
ಸೋಮವಾರ ಮೈಸೂರಿನ ವಸ್ತು ಪ್ರದರ್ಶನ ಆವರಣದಲ್ಲಿ ದಸರಾ ಗಜಪಡೆ ಹಾಗೂ ಅಶ್ವದಳಕ್ಕೆ ನಡೆದ ಅಂತಿಮ ಹಾಗೂ ಮೂರನೇ ಹಂತದ ಸಿಡಿಮದ್ದು ತಾಲೀಮಿನ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಈ ಬಾರಿ ಶ್ರೀರಂಗಪಟ್ಟಣ ದಸರಾಗೆ ಧನಂಜಯ ಹಾಗೂ ಲಕ್ಷಿ÷್ಮ, ರೂಪಾ ಆನೆಗಳನ್ನು ಆಯ್ಕೆ ಮಾಡಲಾಗಿದೆ. ಮೈಸೂರಿನ ಜಂಬೂಸವಾರಿ ಕ್ಯಾಪ್ಟನ್ ಆನೆಯನ್ನು ಮೂರು ದಿನ ಮುಂಚಿತವಾಗಿ ಆಯ್ಕೆ ಮಾಡಲಾಗುವುದು ಎಂದರು.
ಮೂರನೇ ಹಂತದ ಕುಶಾಲತೋಪು ತಾಲೀಮು ಅತ್ಯಂತ ಯಶಸ್ವಿಯಾಗಿ ನಡೆದಿದೆ. ಮೂರನೇ ತಾಲೀಮಿನಲ್ಲಿ ಎಲ್ಲಾ ಆನೆಗಳು ಅತ್ಯುತ್ತಮವಾಗಿ ನಿಭಾಯಿಸಿವೆ. ಮೆರವಣಿಗೆಯ ತಾಲೀಮು ಮತ್ತು ಅರಮನೆ ಒಳಗಡೆ ಅಭ್ಯಾಸ ಇನ್ನೂ ಬಾಕಿ ಇದೆ. ಮಿಕ್ಕಂತೆ ಎಲ್ಲಾ ತರಬೇತಿಗಳನ್ನು ದಸರಾ ಆನೆಗಳು ಯಶಸ್ವಿಯಾಗಿ ಮುಗಿಸಿವೆ. ಈಗ ಅಂಬಾರಿ ಆನೆಯನ್ನು ಆಯ್ಕೆ ಮಾಡುವುದೊಂದೇ ಉಳಿದಿರುವುದು. ಅಂಬಾರಿ ಆನೆಯ ಕುರಿತು ಮಾಹಿತಿ ನೀಡುತ್ತೇವೆ. ದಸರಾ ಗಜಪಡೆಯ ಎಲ್ಲಾ ಆನೆಗಳ ಆರೋಗ್ಯ ಉತ್ತಮವಾಗಿದ್ದು, ಅರಣ್ಯಾಧಿಕಾರಿಗಳು ಹಾಗೂ ಪಶು ವೈದ್ಯರ ತಂಡ ಅವುಗಳ ಆರೋಗ್ಯದ ಕುರಿತು ನಿಗಾ ಇರಿಸಿದೆ. ನಮ್ಮ ದಸರಾ ಆನೆಗಳು ಚೆನ್ನಾಗಿವೆ” ಎಂದು ಮಾಹಿತಿ ನೀಡಿದರು.
ಸಿಎಆರ್‌ನ ಡಿಸಿಪಿ ಸಿದ್ದನಗೌಡ ವೈ ಪಾಟೀಲ್ ಮಾತನಾಡಿ, ದಸರಾ ಆನೆಗಳಿಗೆ ಇಂದು ನಡೆದ ಕೊನೆಯ ಹಂತದ ಕುಶಾಲತೋಪು ತಾಲೀಮು ಯಶಸ್ವಿಯಾಗಿ ನಡೆದಿದೆ. ದಸರಾ ಗಜಪಡೆಯ ಎಲ್ಲಾ ಆನೆಗಳು ಹಾಗೂ ಅಶ್ವದಳದ ಕುದುರೆಗಳು ಸಿಡಿಮದ್ದಿನ ಸದ್ದಿಗೆ ಬೆದರದೆ, ವಿಚಲಿತವಾಗದೆ ಶಾಂತ ರೀತಿಯಿಂದ ವರ್ತಿಸಿದವು. ವಿಜಯದಶಮಿಯ ದಿನದಂದು ಹಾರಿಸುವ ಕುಶಾಲತೋಪು ಪ್ರಕ್ರಿಯೆಗೆ ದಸರಾ ಗಜಪಡೆ ಹಾಗೂ ಅಶ್ವದಳ ಸಜ್ಜಾಗಿವೆ” ಎಂದು ತಿಳಿಸಿದರು.