Skip to main content

3Kaala News

ಸುಭಾಷಿತ 

ಪಕ್ಕದಲ್ಲಿರುವವನ ತಟ್ಟೆಯಲ್ಲಿ ಏನಿದೆ ಅಂತ ಯಾವತ್ತೂ ಇಣುಕಿ ನೋಡಬೇಡ. ಕಾರಣ ಅಲ್ಲಿ ಜಾಸ್ತಿಯಿದ್ದರೆ, ನಿನಗೆ ಸಂಕಟವಾಗುತ್ತದೆ.ಅಲ್ಲಿ ಕಡಿಮೆ ಇದ್ದರೆ, ನಿನಗೆ ಅಹಂಕಾರ ಬರುತ್ತದೆ.ಎರಡೂ ಒಳ್ಳೆಯದಲ್ಲ.ನಮ್ಮ ತಟ್ಟೆಯನ್ನು ನಾವು ನೋಡಿಕೊಂಡಿದ್ದರೆ, ಸಿಗುವ ಸಂತೋಷವೇ ಬೇರೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಕನ್ನಡ ಕಾವ್ಯ ಲೋಕಕ್ಕೆ ಯಾವುದೇ ಕೃತಕ ಬುದ್ಧಿಮತ್ತೆಯ ಸ್ಪರ್ಶವಾಗಬಾರದು; ಸಾಹಿತಿ ವೈದೇಹಿ

ಮೈಸೂರು: ವಿಶ್ವವಿಖ್ಯಾತ ನಾಡ ಹಬ್ಬ ಮೈಸೂರು ದಸರಾದ ಮೂರನೇ ದಿನವಾದ ಮಂಗಳವಾರ ನಾಡಿನ ಕವಿಗಳ ಕಲರವ ಆರಂಭವಾಯಿತು.
ನಗರದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಬಿ.ಎಂ. ಶ್ರೀ ಸಭಾಂಗಣದಲ್ಲಿ ದಸರಾ ಕವಿಗೋಷ್ಠಿ ಉಪಸಮಿತಿ ವತಿಯಿಂದ ಆಯೋಜಿಸಿದ್ದ ಬಹುರೂಪಿ ಕವಿಗೋಷ್ಠಿಗೆ ಖ್ಯಾತ ಸಾಹಿತಿ ವೈದೇಹಿ ಅವರು ಚಾಲನೆ ನೀಡಿದರು. ಬಳಿಕ ಮಾತನಾಡಿ,
ಕನ್ನಡ ಕಾವ್ಯವು ತನ್ನದೇ ಆದ ಸಹಜ ಸೌಂದರ್ಯ ಮತ್ತು ಭಾವನಾತ್ಮಕ ಲೋಕವನ್ನು ಹೊಂದಿದ್ದು, ಅದಕ್ಕೆ ಯಾವುದೇ ಕೃತಕ ಬುದ್ಧಿಮತ್ತೆಯ ಸ್ಪರ್ಶವಾಗಬಾರದು,
ಡಿಜಿಟಲ್ ಯುಗದಲ್ಲಿ ನಮಗೆ ದುಃಖ ಸುಖಗಳು ಪ್ರಾಕೃತಿಕವಾಗಿ ದೊರೆಯಬೇಕು. ನಾನೇ ನುಡಿಗಡಿಗೆ ಇಳಿದ ಹಕ್ಕಿಗಳು ಎಷ್ಟು ಚೆಂದ ಹಾಡುತ್ತಿವೆ. ನೋಡಿ ಇಲ್ಲಿ ಮತ್ತೆ ಮಹಾ ಮಹಾ ಕವಿಗಳು, ಪ್ರಾಚೀನರು ಕಾವ್ಯದ ಕುರಿತು ಎಷ್ಟೆಲ್ಲಾ ಹೇಳಿಯಾರಿದ್ದರೂ ನಾನು ಮಾತನಾಡುತ್ತಿದ್ದೇನೆ. ಸಣ್ಣ ತರಂಗದ ಹಾಗೆ, ಕನ್ನಡದ ಅಂದಕ್ಕೆ ಮೈಯಾಳಕ್ಕೆ ಉರಿ ಮಾಡುವ ಕಿವಿ, ಕನ್ನಡದ ಅಂದ ನೂರಾರು ಭಾವಗೀತೆಗಳನ್ನು ಹಾಡು ಕುಣಿತದೊಂದಿಗೆ ಇರಲಿ ಎಂದರು.
ಕನ್ನಡವೆAಬ ಮುದ್ದಿನ ತೇರನ್ನು ಅರಳುದೆಂಬ ಗುರಿ ಮುಟ್ಟಬೇಕು. ಕನ್ನಡ ಕಾವ್ಯ ಎಐಗೆ ಬಲಿಯಾಗಬಾರದು. ಕನ್ನಡ ವಿಶ್ವಸ್ಥಾನಕ್ಕೆ ಬೀಳದಂತೆ ನೋಡಿಕೊಂಡರೆ ಮಾತ್ರ ಅದು ಕನ್ನಡಕ್ಕೆ ಭವಿಷ್ಯವಿದೆ ಎಂದು ಗ್ಯಾರಂಟಿ ಎನ್ನಬಹುದು. ಕವಿತೆ ಬರೆಯುವುದು ಎನ್ನುವುದು ನಮ್ಮ ಹೃದಯದ ಕವಿ ಹೃದಯದವಾಣಿ. ಕವಿ ಹೃದಯ ನೀಡುವ ಕಾರುಣ್ಯ ಭಾವನೆಯಿಂದ ಲೋಕವನ್ನು ನೋಡು ಶಕ್ತಿ ನಮಗೆಲ್ಲ ಬರುತ್ತದೆ. ನಮ್ಮೆಲ್ಲರ ಆಪ್ತ ಧ್ವನಿ ಹಣತೆಗಳು ಉರಿಯುತ್ತಿರಲಿ ಎಂದು ಹೇಳಿದರು.
ದ್ವಂದ್ವದ ಕಾಲವಿತ್ತು. ಈಗ ಅದೂ ಮುಗಿದಿದೆ. ಮಗುವಿಗೆ ಇಂಗ್ಲಿಷ್ ಭಾಷೆಯೇ ಮಾಧ್ಯಮ ಅಂತ ತೀರ್ಮಾನವಾದಂತಿದೆ. ತಾಯಿಯಿಂದ, ಶಾಲೆಯಿಂದ, ಪರಿಸರದಿಂದ ಮಗುವಿಗೆ ಸಿಗುವ ಪಾರಂಪರಿಕ ಬಳುವಳಿಯನ್ನು ಮುಡಿ ಕಟ್ಟಿ ಕಡಲಿಗೆಸೆಯಲು ನಮ್ಮ ಮೂರ್ಖ ಮನಸ್ಸುಗಳು ಸಿದ್ಧವಾಗಿವೆ. ಕನ್ನಡ ಶಾಲೆಗಳ ಪ್ರಾಣವಾಯು ಕ್ಷೀಣವಾಗುತ್ತಿದೆ. ಅದನ್ನು ಮತ್ತೆ ತ್ರಾಣ ಊದಬೇಕಾದ ಗಂಡಾAತರ ಸ್ಥಿತಿಯಲ್ಲಿ ನಾವಿದ್ದೇವೆ. ವಿಚಿತ್ರವೆಂದರೆ ಯಾವ ಸರಕಾರ ಬಂದರೂ ಅಷ್ಟೆ. ಸರಕಾರವೇ ಸೋಲೊಪ್ಪಿಕೊಳ್ಳುತ್ತದೆ. ಕನ್ನಡ ಶಾಲೆಗಳನ್ನು ಆಧುನಿಕಗೊಳಿಸುವ ಬದಲು ಇಂಗ್ಲಿಷ್ ಮಾಧ್ಯಮಕ್ಕೆ ಒಪ್ಪಿಗೆ ಕೊಡುತ್ತದೆ. ಅಲ್ಲಿ ತನ್ನ ಶೇಕಡಾ ಸೀಟು `ಗ್ಯಾರಂಟಿ’ ಮಾಡಿಕೊಳ್ಳುತ್ತದೆ. ತನ್ನದೇ ಸಾಮರ್ಥ್ಯವನ್ನು ತಾನೇ ಕಡೆಗಣಿಸಿಕೊಂಡAತೆ ಸೋಲೊಪ್ಪಿದಂತೆ ಅಲ್ಲವೆ ಇದು ಎಂದರು.
ಭಾಷೆಯನ್ನು ತಪ್ಪಿಸಿದರೆ ನೆಲದ ಮೇಲಿನ ಮೋಹವೂ ತಪುö್ಪತ್ತದೆ ಎಂದ ಜಾನ್ ಮೆಕಾಲೆ. ನೆಲ ಎಂದರೆ ಬರೀ ಭೌಗೋಲಿಕ ಅಷ್ಟೇ ಅಲ್ಲವಲ್ಲ. ಭಾಷೆಯನ್ನೂ ನೆಲವನ್ನೂ ಬಿಡಲು ಸಿದ್ಧವಿರುವ ನಾವು ಮತಧರ್ಮದ ಕುರಿತು ಮಾತ್ರ ಜಿಗುಟಾಗುವುದು ಎಂತಹ ವಿಪರ್ಯಾಸ!
ಅವರವರ ಭಾಷೆ, ಉಪಭಾಷೆಗಳು ಕೈ ತಪ್ಪಿ ಹೋಗದಂತೆ ಉಳಿಸಿಕೊಳ್ಳ ಬೇಕಾದ ತುರ್ತು ಪರಿಸ್ಥಿತಿ ಇವತ್ತಿದೆ.
ನನ್ನದೇ ಅನುಭವ ಹೇಳಲಿಕ್ಕೆ ಹೊರಟಲ್ಲಿ ನನಗೆ ಬೇಕಾಗುವುದು ನನ್ನದೇ ಆದ ಭಾಷೆ. ನನ್ನದೇ ನುಡಿಗಟ್ಟು. ಮಹಿಳೆಯಾಗಿ ನನ್ನ ಬದುಕು ನನಗೆ ಕಲಿಸಿದ ಭಾಷೆ. ಅದರ ಓಘವೇ ಬೇರೆ. ಅದು ಪುರುಷ ಭಾಷೆ ಅಲ್ಲ, ನೇತಿ ನೇತಿ ಎನ್ನುತ್ತ ನನ್ನ ಭಾಷೆಗೆ ಬಂದು ಮುಟ್ಟಿಕೊಳ್ಳುವ ಸುಖ ಉಂಟಲ್ಲ, ಅದಕ್ಕೆ ಸಮನಾದ್ದು ಬೇರೆ ಇಲ್ಲ.
ಕನ್ನಡ ಬೇಡ ಎಂದರೆ ಅರ್ಥ ಪಂಪ, ಕುಮಾರವ್ಯಾಸ ಬೇಡ, ಬಸವಣ್ಣ ಬೇಡ, ಬೇಂದ್ರೆ ಕುವೆಂಪು ಕಾರಂತ ಯಾರೂ ಬೇಡ ಎಂದAತೆ ಎಂದರು. ನಮಗೆ ಪ್ರಾಥಮಿಕ ಶಾಲಾ ಪಠ್ಯದಲ್ಲಿಯೇ ಎಂತೆAತಹ ಕಾವ್ಯಗಳಿದ್ದವು. ಭಾಮಿನಿ ಷಟ್ಪದಿ, ವಾರ್ಧಿಕ ಷಟ್ಪದಿ ಚರಣಗಳು ಸುಮ್ಮನೆ ಬಾಯಿಪಾಠಕ್ಕೆ ಇದ್ದವು. ನಾಲ್ಕನೆಯ ತರಗತಿಯಲ್ಲಿಯೇ ಡಿವಿಜಿಯವರ ಈ ಪದ್ಯವಿತ್ತು.
ಅಂದು ಕಲಿತ ಇಂತಹ ಪದ್ಯಗಳು ಇಂದಿಗೂ ಮನಸ್ಸಿನಲ್ಲಿ ಕೆತ್ತಿ ನಿಂತಿವೆ. ಕನ್ನಡ ಭಾಷೆಯ ಇಂತಹ ಅಗಾಧ ಸಂಪತ್ತನ್ನು ನಮ್ಮ ಮಕ್ಕಳಿಗೆ ವಂಚಿಸಿ ಬಿಡುವ ಹಕ್ಕು, ತಮ್ಮ ನೆಲದ ಭಾಷೆಯ ಸಕಲ ಮತ್ತು ಅಸಲು ಜ್ಞಾನವನ್ನು ಇಲ್ಲ ಮಾಡುವ ಹಕ್ಕು ನಮಗಿದೆಯೇ?
ಕನ್ನಡದ ಸುಂದರ ಬಾಲಸಾಹಿತ್ಯವನ್ನೇ ಮಕ್ಕಳ ಮನಸ್ಸಿಗೆ ತಾಕದಂತೆ ನಾವು ಮರೆಮಾಡುತ್ತಿದ್ದೇವೆ. ತಾತ, ಅಜ್ಜಿಯಂದಿರು ಮೊಮ್ಮಕ್ಕಳ ಎದುರು ಮಿಕಿ ಮಿಕಿ ನೋಡುತ್ತ ಕುಳಿತುಕೊಳ್ಳುವ ಕಾಲಕ್ಕೆ ದಾಟುತ್ತಿದ್ದೇವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಹರೀಶ್‌ಗೌಡ ವಹಿಸಿದ್ದರು.
ಮೈಸೂರು ವಿವಿಯ ಕುಲಪತಿ ಪ್ರೊ. ಎನ್. ಕೆ ಲೋಕನಾಥ್, ಚಿತ್ರ ನಟ ಮುಖ್ಯಮಂತ್ರಿ ಚಂದ್ರು, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಮುಖ್ಯಸ್ಥರಾದ ಪ್ರೊ. ನಂಜಪ್ಪ ಹೊಂಗನೂರು, ದಸರಾ ಕವಿಗೋಷ್ಠಿಯ ವಿಶೇಷಾಧಿಕಾರಿ ಎಂ. ದಾಸೇಗೌಡ, ಮಹಾದೇವ,ಎಂ. ಕೆ. ಲೋಕಲಾಕ್ಷಿ ಹಾಗೂ ಎಸ್. ಡಿ. ಶಶಿಕಲಾ, ಡಾ. ತ್ರಿವೇಣಿ ಹಾಗೂ ಡಾ. ಉಮೇಶ್ ಮತದಾರ ಉಪಸ್ಥಿರಿದ್ದರು.