Skip to main content

3Kaala News

ಸುಭಾಷಿತ 

ಪಕ್ಕದಲ್ಲಿರುವವನ ತಟ್ಟೆಯಲ್ಲಿ ಏನಿದೆ ಅಂತ ಯಾವತ್ತೂ ಇಣುಕಿ ನೋಡಬೇಡ. ಕಾರಣ ಅಲ್ಲಿ ಜಾಸ್ತಿಯಿದ್ದರೆ, ನಿನಗೆ ಸಂಕಟವಾಗುತ್ತದೆ.ಅಲ್ಲಿ ಕಡಿಮೆ ಇದ್ದರೆ, ನಿನಗೆ ಅಹಂಕಾರ ಬರುತ್ತದೆ.ಎರಡೂ ಒಳ್ಳೆಯದಲ್ಲ.ನಮ್ಮ ತಟ್ಟೆಯನ್ನು ನಾವು ನೋಡಿಕೊಂಡಿದ್ದರೆ, ಸಿಗುವ ಸಂತೋಷವೇ ಬೇರೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಕೊಪ್ಪಳದ ಗವಿಮಠದ ಶ್ರೀ ಅಭಿನವ ಗವಿ ಸಿದ್ದೇಶ್ವರ ಸ್ವಾಮೀಜಿಯವರಿಂದ ಯೋಗ ದಸರಾಗೆ ಚಾಲನೆ


ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ನಾಲ್ಕನೇ ದಿನವಾದ ಬುಧವಾರ ನಗರದ ಜೆ.ಕೆ. ಜೆ.ಕೆ. ಗ್ರೌಂಡ್‌ನ ಮೈಸೂರು ವೈದ್ಯಕೀಯ ಮಹಾವಿದ್ಯಾಲಯದ ಅಲ್ಯೂಮಿನಿ ಅಸೋಷಿಯೇಷನ್ ಸಭಾಭವನದಲ್ಲಿ ಆಯೋಜಿಸಲಾಗಿದ್ದ ಯೋಗ ದಸರಾ ಉದ್ಘಾಟನೆ ಕೊಪ್ಪಳದ ಗವಿಮಠದ ಶ್ರೀ ಅಭಿನವ ಗವಿ ಸಿದ್ದೇಶ್ವರ ಸ್ವಾಮೀಜಿ ಅವರು ಮಾಡಿದರು.
ಈ ವೇಳೆ ಮಾತನಾಡಿದ ಯೋಗ ದಸರಾ ಉಪಸಮಿತಿ ವಿಶೇಷಧಿಕಾರಿ ರಮ್ಯಾ.ಕೆ, ದಸರಾ ಎಂದರೆ ಕೇವಲ ಸಂಭ್ರಮ, ಮೆರವಣಿಗೆ, ದೀಪಾಲಂಕಾರ ಮಾತ್ರವಲ್ಲದೆ, ಅದು ನಮ್ಮ ಸಂಸ್ಕöÈತಿ, ಪರಂಪರೆ ಮತ್ತು ಜ್ಞಾನದ ಆಚರಣೆಯೂ ಹೌದು ಎಂದು ಹೇಳಿದರು.
ಪರಂಪರೆಯ ಅತ್ಯಮೂಲ್ಯ ಕೊಡುಗೆಗಳಲ್ಲಿ ಯೋಗವೂ ಒಂದಾಗಿದ್ದು, ಮೈಸೂರು ಮತ್ತು ಯೋಗಕ್ಕೆ ಅವಿನಾಭಾವ ಸಂಬAಧವಿದೆ. ಮೈಸೂರು ಮಹಾರಾಜರ ಆಶ್ರಯದಲ್ಲಿ ಶ್ರೀ ಟಿ. ಕೃಷ್ಣಮಾಚಾರ್ ಅವರು ಬೆಳೆಸಿದ ಯೋಗ ಪರಂಪರೆ ಇಂದು ಜಗತ್ತಿನಾದ್ಯಂತ ಹರಡಿದೆ ಎಂದರು.
ವಿಶ್ವದ ಅನೇಕ ದೇಶಗಳಿಂದ ಜನರು ಯೋಗ ಕಲಿಯಲು ಮೈಸೂರಿಗೆ ಬರುತ್ತಾರೆ. ಆದ್ದರಿಂದಲೇ ಮೈಸೂರನ್ನು ‘ಯೋಗ ನಗರಿ’ ಎಂದು ಗುರುತಿಸಲಾಗಿದೆ ಎಂದು ತಿಳಿಸಿದರು.
ಇಂದಿನ ವೇಗದ ಜೀವನ ಶೈಲಿಯಲ್ಲಿ ಮಧುಮೇಹ, ರಕ್ತದೊತ್ತಡ, ಹೃದ್ರೋಗ, ಸ್ಥೂಲಕಾಯ, ಮಾನಸಿಕ ಒತ್ತಡ ಮತ್ತು ನಿದ್ರಾಹೀನತೆಯಂತಹ ಕಾಯಿಲೆಗಳು ಹೆಚ್ಚುತ್ತಿದ್ದು, ಯೋಗವು ಇವುಗಳಿಗೆ ಅತ್ಯಗತ್ಯ ಪರಿಹಾರವಾಗಿದೆ ಎಂದು ಹೇಳಿದರು.
ನಿಯಮಿತ ಯೋಗಾಭ್ಯಾಸದಿಂದ ಹಾರ್ಮೋನ್‌ಗಳನ್ನು ನಿಯಂತ್ರಿಸಿ ಆತಂಕವನ್ನು ಕಡಿಮೆ ಮಾಡಬಹುದು ಹಾಗೂ ಪ್ರಾಣಾಯಾಮ ಮತ್ತು ಧ್ಯಾನವು ಮನಸ್ಸನ್ನು ಶಾಂತಗೊಳಿಸಿ ರಕ್ತದೊತ್ತಡವನ್ನು ಸಮತೋಲನದಲ್ಲಿಡಲು ಸಹಕಾರಿಯಾಗಿದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳು ಮತ್ತು ಯುವಜನತೆ ದಿನಕ್ಕೆ ಕನಿಷ್ಟ 20 ರಿಂದ 30 ನಿಮಿಷಗಳ ಯೋಗಾಭ್ಯಾಸ ಮಾಡುವುದರಿಂದ ಏಕಾಗ್ರತೆ, ಆತ್ಮವಿಶ್ವಾಸ ಹಾಗೂ ಶಿಸ್ತನ್ನು ಬೆಳೆಸಿಕೊಳ್ಳಬಹುದು. ಉದ್ಯೋಗಿಗಳಿಗೆ, ಗೃಹಿಣಿಯರಿಗೆ ಮತ್ತು ಹಿರಿಯ ನಾಗರಿಕರಿಗೆ ಯೋಗವು ಒಂದು ಸರಳ ಹಾಗೂ ಉಚಿತವಾದ ‘ಆರೋಗ್ಯ ರಕ್ಷಾ ಕವಚ’ವಾಗಿದೆ ಎಂದು ಹೇಳಿದರು.
ಆರೋಗ್ಯವಂತ ವ್ಯಕ್ತಿ, ಆರೋಗ್ಯವಂತ ಕುಟುಂಬ ಹಾಗೂ ಆರೋಗ್ಯವಂತ ಸಮಾಜವೇ ಸದೃಢ ರಾಷ್ಟçದ ಅಡಿಪಾಯವಾಗಿದ್ದು, ಪ್ರತಿಯೊಬ್ಬರೂ ಯೋಗವನ್ನು ತಮ್ಮ ದಿನಚರಿಯ ಭಾಗವಾಗಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಯೋಗ ದಸರಾ ಉಪಸಮಿತಿಯ ಕಾರ್ಯಾಧ್ಯಕ್ಷ ಕಾಂತ್ ರಾಜ್, ಯೋಗ ದಸರಾ ಉಪಸಮಿತಿಯ ನಿರೂಪ್ ವೇಸ್ಲಿ, ಡಾ.ರೇಣುಕಾ ದೇವಿ. ಸಿ, ಯೋಗ ದಸರಾ ಪದಾಧಿಕಾರಿಗಳು, ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.