Skip to main content

3Kaala News

ಸುಭಾಷಿತ 

ಪಕ್ಕದಲ್ಲಿರುವವನ ತಟ್ಟೆಯಲ್ಲಿ ಏನಿದೆ ಅಂತ ಯಾವತ್ತೂ ಇಣುಕಿ ನೋಡಬೇಡ. ಕಾರಣ ಅಲ್ಲಿ ಜಾಸ್ತಿಯಿದ್ದರೆ, ನಿನಗೆ ಸಂಕಟವಾಗುತ್ತದೆ.ಅಲ್ಲಿ ಕಡಿಮೆ ಇದ್ದರೆ, ನಿನಗೆ ಅಹಂಕಾರ ಬರುತ್ತದೆ.ಎರಡೂ ಒಳ್ಳೆಯದಲ್ಲ.ನಮ್ಮ ತಟ್ಟೆಯನ್ನು ನಾವು ನೋಡಿಕೊಂಡಿದ್ದರೆ, ಸಿಗುವ ಸಂತೋಷವೇ ಬೇರೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಜ್ಞಾನೇಶ್ ಕುಮಾರ್ ರಾಜಿನಾಮೆಗೆ ಒತ್ತಾಯಿಸಿ ಅ.೨೩ರಂದು ಬೃಹತ್ ಹೋರಾಟ 

ಎಚ್ .ಡಿ .ಕೋಟೆ: ಸಂವಿಧಾನ ಸಂರಕ್ಷಣಾ ಪಡೆ ಕರೆಯ ಮೇರೆಗೆ ಗುರುವಾರ ಪಟ್ಟಣದ ಡಾ ಬಿ ಆರ್ ಅಂಬೇಡ್ಕರ್ ಭವನದಲ್ಲಿ ತಾಲ್ಲೂಕಿನ ಪ್ರಗತಿಪರ ಸಂಘಟನೆಗಳು ಸೇರಿ ರಾಜ್ಯದಲ್ಲಿ ನಡೆಯುತ್ತಿರುವ ಎಸ್ ಐ ಆರ್ ಅನ್ನು ರದ್ದುಗೊಳಿಸುವಂತೆ ಹಾಗೂ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಅಕ್ಟೋಬರ್ 23ಕ್ಕೆ ಬೃಹತ್ ಹೋರಾಟ ನಡೆಸಲು ತೀರ್ಮಾನಿಸಲಾಯಿತು.  ಸಭೆಯಲ್ಲಿ ದಸಂಸ ಜಿಲ್ಲಾ ಸಂಚಾಲಕ ಬೆಟ್ಟಯ್ಯ ಕೋಟೆ ಮಾತನಾಡಿ ಪ್ರಾರಂಭದಲ್ಲಿ ಜನಸಾಮಾನ್ಯರಿಗೆ ಎಸ್ ಐ ಆರ್ ತೀವ್ರತೆಯ ಬಗ್ಗೆ ಗೊತ್ತಿರಲಿಲ್ಲ.  ಅದರಿಂದಾಗುವ ಅನಾಹುತಗಳ ಬಗ್ಗೆಯೂ…

Read More

ಪಿಎಂ ಸೂರ್ಯ ಘರ್ ಯೋಜನೆ ಸದ್ಬಳಕೆ ಮಾಡಿಕೊಳ್ಳಿ: ಚೆಸ್ಕಾಂ ಕಾರ್ಯನಿರ್ವಾಹಕ ಅಧಿಕಾರಿ ಗುರು ಬಸವರಾಜು.

ಪಿಎಂ ಸೂರ್ಯ ಘರ್ ಸೇವಾ ಸೇತು ಅಭಿಯಾನಕ್ಕೆ ಚಾಲನೆ., ಪಿರಿಯಾಪಟ್ಟಣ:ಪ್ರತಿ ಮನೆಗೆ ಉಚಿತ ವಿದ್ಯುತ್‌ ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಸೂರ್ಯ ಘರ್‌ ಯೋಜನೆಯನ್ನು ಘೋಷಿಸಿದ್ದು ಸಾರ್ವಜನಿಕರು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಚೆಸ್ಕಾಂ ಕಾರ್ಯನಿರ್ವಾಹಕ ಅಧಿಕಾರಿ ಗುರು ಬಸವರಾಜು ತಿಳಿಸಿದರು. ಪಟ್ಟಣದ ಚೆಸ್ಕಾಂ ಕಚೇರಿ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ಪಿಎಂ ಸೂರ್ಯ ಘರ್ ಸೇವಾ ಸೇತು ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕೇಂದ್ರ ಸರ್ಕಾರ ಸೌರಶಕ್ತಿ ಬಳಸಿ ವಿದ್ಯುತ್‌ ಉತ್ಪಾದಿಸುವ ಮೂಲಕ ನೈಸರ್ಗಿಕ ಸಂಪನ್ಮೂಲದ ಸದ್ಬಳಕೆ…

Read More

ಮಾನವೀಯ ನೆಲೆಗಟ್ಟಿನಲ್ಲಿ ರಾಜೇಂದ್ರ ಸ್ವಾಮೀಜಿಯವರು ಮನುಕುಲಕ್ಕೆ ಸಲ್ಲಿಸಿದ ಸೇವೆ ಅಮೂಲ್ಯವಾಗಿದೆ; ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ

ನಂಜನಗೂಡು; ಗ್ರಾಮೀಣ ಪ್ರದೇಶದ ಹಳ್ಳಿಗಳಲ್ಲಿ ಶಿಕ್ಷಣ ಸಂಸ್ಥೆಗಳನ್ನು ತೆರೆದು ಬಡ ಹಾಗೂ ಆರ್ಥಿಕವಾಗಿ ಹಿಂದುಳಿದ ಜನರ ಕಷ್ಟಸುಖಗಳಿಗೆ ಸ್ಪಂದಿಸುವ ಮೂಲಕ ರಾಜೇಂದ್ರ ಸ್ವಾಮೀಜಿಯವರು ಮಾತೃ ಸ್ವರೂಪಿಯಾಗಿ ಗುರ್ತಿಸಿಕೊಂಡಿದ್ದರು ಎಂದು ಸುತ್ತೂರು ಮಠಾಧ್ಯಕ್ಷ ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಹೇಳಿದರು.    ಅವರು ಗುರುವಾರ ನಗರದ ಜೆಎಸ್‌ಎಸ್ ಮಂಗಳ ಮಂಟಪದಲ್ಲಿ ಜೆಎಸ್‌ಎಸ್ ಶಿಕ್ಷಣ ಸಂಸ್ಥೆಗಳು ಹಾಗೂ ವಿವಿಧ ಸಂಘ ಸಂಸ್ಥೆಗಳು ಮತ್ತು ಭಕ್ತವೃಂದದಿಂದ ಆಯೋಜಿಸಿದ್ದ ಡಾ.ಶಿವರಾತ್ರಿರಾಜೇಂದ್ರ ಸ್ವಾಮೀಜಿಯವರ 111ನೇ ಜಯಂತಿ ಮಹೋತ್ಸವ ಸಮಾರಂಭದಲ್ಲಿ ಮಾತನಾಡಿದರು. ಮಾನವೀಯ ನೆಲೆಗಟ್ಟಿನಲ್ಲಿ ರಾಜೇಂದ್ರ…

Read More

ವಡ್ಡರ ಗುಡಿಯಲ್ಲಿ ನವರಾತ್ರಿ ಸಂಭ್ರಮ 

ಎಚ್ .ಡಿ. ಕೋಟೆ:  ಪಟ್ಟಣದ ವಾರ್ಡ್ ನಂಬರ್ 21 ವಡ್ಡರ ಗುಡಿ ( ಲಕ್ಷ್ಮಿಪುರ) ಗ್ರಾಮದಲ್ಲಿ ವಿಜೃಂಭಣೆಯಿಂದ ನವರಾತ್ರಿ ಉತ್ಸವವನ್ನು ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ನೆರವೇರಿಸಲಾಯಿತು.  ಗ್ರಾಮದ ಮಹಿಳೆಯರು ಮತ್ತು ಮಕ್ಕಳು ಪೂಜೆಯಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು. ಗುರವಾರ ಬೆಳೆಗ್ಗೆಯಿಂದ   ದೇವಸ್ಥಾನದಲ್ಲಿ ವಿಶೇಷ ಪೂಜೆ,  ಭಜನೆ  ಸೇರಿದಂತೆ  ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.  ಪ್ರತಿ ಮನೆಮನೆಯಿಂದ ಹೂಗಳನ್ನು ತಂದು ದೇವರ  ವಿಗ್ರಹ ಅಲಂಕರಿಸಿ ಭಕ್ತಿ ಪೂರ್ವಕವಾಗಿ ನಮಿಸಿದರು.  ಸರ್ವಧರ್ಮದ ಜನರು  ಶಾಂತಿ ಮತ್ತು ಸೌಹಾರ್ದತೆಯಿಂದ ನೆಲೆಸಿ,…

Read More

ಕಬ್ಬಿನ ಎಫ್ ಆರ್ ಪಿ ದರ ಏರಿಕೆ ಒತ್ತಾಯಿಸಿ ರೈತರಿಂದ ಕಬ್ಬಿನ ಸೋಗಿಗೆ ಬೆಂಕಿ ಹಚ್ಚಿ ಪ್ರತಿಭಟನೆ

ಮೈಸೂರು; ಕಬ್ಬಿನ ಎಫ್ ಆರ್ ಪಿ ದರ ಏರಿಕೆ ಒತ್ತಾಯಿಸಿ ಮೈಸೂರಿನ ಎಪಿಎಂಸಿ ಮುಂಭಾಗದಲ್ಲಿ ಗುರುವಾರ ರೈತರು ಕಬ್ಬಿನ ಸೋಗಿಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು.ಸ್ಥಳದಲ್ಲಿ ಜಮಾಯಿಸಿದ ರೈತರು ಕಬ್ಬಿನ ಸೋಗಿಗೆ ಬೆಂಕಿ ಹಚ್ಚಿ ನಾನಾ ಘೋಷಣೆಗಳನ್ನು ಕೂಗುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.ಈ ವೇಳೆ ಮಾತನಾಡಿದ ರಾಜ್ಯ ಕಬ್ಬು ಬೆಳೆಗಾರ ಸಂಘದ ರಾಜ್ಯಾಧ್ಯಕ್ಷ ಕುರುಬುರ್ ಶಾಂತಕುಮಾರ್,ಕಬ್ಬು ಬೆಳೆಗಾರರ ಸಮಸ್ಯೆ ಆಲಿಸುವ ರಮೇಶ್ ಚಂದ್ ಸಮಿತಿಯನ್ನು ರೈತರನ್ನ ಬಿಟ್ಟು ರಚಿಸಿರುವುದು ಸಮಂಜಸವಲ್ಲ.ಸಮಿತಿಗೆ ರೈತ ಪ್ರತಿನಿಧಿ ಇರಬೇಕು. ಇಲ್ಲದಿದ್ದರೆ ರೈತರಿಗೆ…

Read More

ಕಳೆದ ವರ್ಷದ ದಸರಾದಲ್ಲಿ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದ ಕಾರ್ತಿಕ್ ಅಪರಾಧಿ ಎಂದು ಘೋಷಣೆ

ಮೈಸೂರು: ಕಳೆದ ವರ್ಷ ನಡೆದ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವ ವೇಳೆ ಬಲೂನ್ ಮಾರಲು ಬಂದಿದ್ದ 9 ವರ್ಷದ ಬಾಲಕಿಯನ್ನು ಅಪಹರಿಸಿ, ಆಕೆಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ್ದ ಕಾರ್ತಿಕ್ (32) ಅಪರಾಧಿ ಎಂದು ಇದೀಗ ಸಾಬೀತಾಗಿದ್ದು, ದೋಷಿ ಎಂದು ಪರಿಗಣಿಸಿರುವ ಮೈಸೂರಿನ ಶೀಘ್ರಗತಿ ನ್ಯಾಯಾಲಯ, ಶುಕ್ರವಾರ ಮೈಸೂರು ತಾಲೂಕಿನ ಸಿದ್ದಲಿಂಗಪುರದ ನಿವಾಸಿಯಾದ ಕಾರ್ತಿಕ್‌ಗೆ ಶಿಕ್ಷೆ ಪ್ರಮಾಣ ಪ್ರಕಟಿಸಲಿದೆ. ಘಟನೆ ದಿನದಂದು ದಸರಾ ಸಮಯದಲ್ಲೇ ಕೃತ್ಯವೆಸಗಿದ್ದ ಆರೋಪಿಗೆ ಇದೀಗ ದಸರಾ ಮಹೋತ್ಸವ ಸಮಯದಲ್ಲೇ ಶಿಕ್ಷೆ ವಿಧಿಸಿರುವುದು…

Read More

ಶನಿವಾರ ಮೈಸೂರಿಗೆ ಬರಲಿವೆ 150 ಕೋಣಗಳು; ಕಂಬಳ ಉಪಸಮಿತಿ ಅಧ್ಯಕ್ಷ ಹಾಗೂ ಶಾಸಕ ಅಶೋಕ್ ರೈ

ಮೈಸೂರು; ನಾಡ ಹಬ್ಬ ದಸರಾದಲ್ಲಿ ನಡೆಯಲಿರುವ ಎರಡು ದಿನಗಳ ಕಂಬಳ ಕ್ರೀಡೆಗೆ 150 ಕೋಣಗಳನ್ನು ಆಯ್ಕೆ ಮಾಡಲಾಗಿದ್ದು, ಅವುಗಳು ಶನಿವಾರ ಸಂಜೆ ಮೈಸ್ರರಿಗೆ ಆಗಮಿಸಲಿವೆ ಎಂದು ಕಂಬಳ ಉಪಸಮಿತಿ ಅಧ್ಯಕ್ಷ ಹಾಗೂ ಶಾಸಕ ಅಶೋಕ್ ರೈ ತಿಳಿಸಿದರು.ಗುರುವಾರ ಮೈಸೂರಿನ ಸಾತಗಳ್ಳಿಯಲ್ಲಿ ನಿರ್ಮಿಸಲಾಗಿರುವ ಕಂಬಳ ಕ್ರೀಡೆಯ ಟ್ಯಾçಕ್‌ನ್ನು ಹಾಗೂ ಇಲ್ಲಿ ಮಾಡಲಾಗಿರುವ ಸೌಲಭ್ಯಗಳ ವ್ಯವಸ್ಥೆಯನ್ನು ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಕಂಬಳ ಕ್ರೀಡೆಗೆ ಒಟ್ಟು 150 ಕೋಣಗಳನ್ನು ಆಯ್ಕೆ ಮಾಡಿ ಪ್ರಕಟಿಸಲಾಗಿದೆ. ಇದಲ್ಲದೆ ಇನ್ನೂ 150 ಕೋಣಗಳ ಮಾಲೀಕರು…

Read More

ಅಪ್ಪ-ಮಗನ ಹೆಗಲಿಗೆ ಮಹತ್ತರ ಜವಾಬ್ದಾರಿ

ಮೈಸೂರು; ಮೈಸೂರು ಮತ್ತು ಶ್ರೀರಂಗಪಟ್ಟಣ ದಸರಾ ಎರಡೂ ಕಡೆ ಅಂಬಾರಿ ಹೊರುವ ಜವಾಬ್ದಾರಿ ಅಪ್ಪ-ಮಗನ ಹೆಗಲಿಗೆ ವಹಿಸಲಾಗಿದೆ. ವಿಶ್ವ ಪ್ರಸಿದ್ಧ ನಾಡ ಹಬ್ಬ ಮೈಸೂರು ದಸರಾದ ಕೊನೆ ದಿನ ನಡೆಯುವ ಐತಿಹಾಸಕ ಜಂಬೂಸವಾರಿಯಲ್ಲಿ ನಾಡ ಶಕ್ತಿ ದೇವತೆ ಬೆಟ್ಟದ ತಾಯಿ ಚಾಮುಂಡೇಶ್ವರಿ ವಿರಾಜಮಾನರಾಗಿ ಕುಳಿತಿರುವ ಚಿನ್ನದ ಅಂಬಾರಿಯನ್ನು ಬೆನ್ನ ಮೇಲೆ ಹೊರುವ ಪ್ರಶಾಂತ ಆನೆಯ ಮಾವುತ ಚಿಣ್ಣಪ್ಪ ಮತ್ತು ಶ್ರೀರಂಗಪಟ್ಟಣ ದಸರಾದಲ್ಲಿ ಮರದ ಅಂಬಾರಿ ಹೊರುತ್ತಿರುವ ಧನಂಜಯ ಆನೆಯ ಮಾವುತ ಭಾಸ್ಕರ್ ಅವರು ತಂದೆ ಮಗನಾಗಿದ್ದಾರೆ. ಅಂಬಾರಿಯನ್ನು…

Read More

ದಸರಾ ಪುಸ್ತಕ ಮೇಳದಲ್ಲಿ ವಿವಿಧ ಲೇಖಕರ ಕೃತಿಗಳ ಲೋಕಾರ್ಪಣೆ

ಮೈಸೂರು; ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ಮೈಸೂರು ದಸರಾ ಮಹೋತ್ಸವ- 2026ರ ಕನ್ನಡ ಪುಸ್ತಕಗಳ ರಿಯಾಯಿತಿ ಮಾರಾಟ ಮೇಳದ ರಾಷ್ಟçಕವಿ ಡಾ. ಜಿ.ಎಸ್. ಶಿವರುದ್ರಪ್ಪ ಸಾಂಸ್ಕöÈತಿಕ ವೇದಿಕೆಯಲ್ಲಿ ವಿವಿಧ ಲೇಖಕರ ಕೃತಿಗಳ ಬಿಡುಗಡೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.ನಗರದ ಸ್ಕೌಟ್ ಅಂಡ್ ಗೈಡ್ ಮೈದಾನದಲ್ಲಿ ಆಯೋಜಿಸಲಾಗಿರುವ ಐದನೇ ದಿನದ ಪುಸ್ತಕ ಮೇಳದಲ್ಲಿ ನಡೆದ ಕಾರ್ಯಕ್ರಮವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಅವರು ಉದ್ಘಾಟಿಸಿ ಕೃತಿ ಬಿಡುಗಡೆ ಮಾಡಿದರು. ಬಳಿಕ ಮಾತನಾಡಿದರು. ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ….

Read More

ವಿದ್ಯುತ್ ದೀಪಗಳ ಬೆಳಕಿನ ಹಿಂದಿದೆ ಕಾಣದ ಕೈಗಳ ಪರಿಶ್ರಮ

*ಸೆಸ್ಕ್ ವತಿಯಿಂದ ದೀಪಾಲಂಕಾರ ನಿರ್ವಹಣೆ, ಮೇಲ್ವಿಚಾರಣೆಒಟ್ಟು 642 ಅಧಿಕಾರಿಗಳು ಹಾಗೂ ಸಿಬ್ಬಂದಿಯ ನಿಯೋಜನೆಮೈಸೂರು: ವಿಶ್ವ ಪ್ರಸಿದ್ದ ನಾಡಹಬ್ಬ ಮೈಸೂರು ದಸರಾದ ವೈಭವಕ್ಕೆ ಕಿರೀಟವಿಟ್ಟಂತೆ ಅರಮನೆ ನಗರಿ ಮೈಸೂರು ನಗರ ಪ್ರತಿವರ್ಷವೂ ವಿದ್ಯುತ್ ದೀಪಾಲಂಕಾರದ ಸೌಂದರ್ಯದಿAದ ಲಕ್ಷಾಂತರ ಜನರು, ಪ್ರವಾಸಿಗರನ್ನು ಆಕರ್ಷಿಸುತ್ತದೆ. ಆದರೆ ಕಣ್ಮನ ಸೆಳೆಯುವ ವಿದ್ಯುತ್ ದೀಪಾಲಂಕಾರದ ಸಂಭ್ರಮದ ಹಿಂದೆ ವಿದ್ಯುತ್ ವ್ಯವಸ್ಥೆಯ ನಿರ್ವಹಣೆಗಾಗಿ ಶ್ರಮಿಸುವ ನೂರಾರು ಅಧಿಕಾರಿಗಳು ಮತ್ತು ಸಿಬ್ಬಂದಿಯ ಪರಿಶ್ರಮವಿದೆ.ನಾಡ ಹಬ್ಬ ಮೈಸೂರು ದಸರಾ ಬಂತೆAದರೆ ಅರಮನೆ ಮಾತ್ರವಲ್ಲದೇ ನಗರದ ಪ್ರಮುಖ ರಸ್ತೆ, ವೃತ್ತಗಳಲ್ಲಿ…

Read More