Skip to main content

3Kaala News

ಸುಭಾಷಿತ 

ಪಕ್ಕದಲ್ಲಿರುವವನ ತಟ್ಟೆಯಲ್ಲಿ ಏನಿದೆ ಅಂತ ಯಾವತ್ತೂ ಇಣುಕಿ ನೋಡಬೇಡ. ಕಾರಣ ಅಲ್ಲಿ ಜಾಸ್ತಿಯಿದ್ದರೆ, ನಿನಗೆ ಸಂಕಟವಾಗುತ್ತದೆ.ಅಲ್ಲಿ ಕಡಿಮೆ ಇದ್ದರೆ, ನಿನಗೆ ಅಹಂಕಾರ ಬರುತ್ತದೆ.ಎರಡೂ ಒಳ್ಳೆಯದಲ್ಲ.ನಮ್ಮ ತಟ್ಟೆಯನ್ನು ನಾವು ನೋಡಿಕೊಂಡಿದ್ದರೆ, ಸಿಗುವ ಸಂತೋಷವೇ ಬೇರೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಕೆ.ಎಂ.ಹುಂಡಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿದ ನಲ್ಲೂರು ಶಂಕರೇಗೌಡ 

ಬೋರ್ ವೆಲ್ ನಿಂದ ಚಿಮ್ಮಿದ ಗಂಗಮ್ಮ, ಸಿಹಿ ಹಂಚಿ ಗ್ರಾಮಸ್ಥರ ಹರ್ಷೋದ್ಘಾರ   

ಎಚ್ ಡಿ ಕೋಟೆ: ಸಮಾಜ ಸೇವಕ ನಲ್ಲೂರು ಶಂಕರೇಗೌಡ ಅವರು  ತಾಲೂಕಿನ ಹಂಪಾಪುರ ಜಿಲ್ಲಾ ವ್ಯಾಪ್ತಿಯ ಕೆ.ಎಂ.ಹುಂಡಿ  ಗ್ರಾಮದಲ್ಲಿ ಬೋರ್ ವೆಲ್ ಕೊರೆಸುವ ಮೂಲಕ ಕುಡಿಯುವ ಹಲವು ದಿನಗಳಿಂದ ತಲೆದೂರಿದ್ದ ನೀರಿನ ಸಮಸ್ಯೆ ಬಗೆಹರಿಸಿದ್ದಾರೆ. ಗ್ರಾಮಸ್ಥರ ಮನವಿಗೆ ಸ್ಪಂದಿಸಿ, ಒಂದೇ ದಿನದಲ್ಲಿ ನೀರಿನ ಪಾಯಿಂಟ್ ಮಾಡಿಸಿ  ಬೋರ್ ವೇಳೆ ಕೊರೆಸಿ, ಗಂಗಮ್ಮ ತಾಯಿ ಹರಿಸಿರುವುದಕ್ಕೆ  ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ. 

ತಾಲೂಕಿನ ಗಡಿ ಭಾಗವಾಗಿರುವ ಆಲನಹಳ್ಳಿ ಸಮೀಪದ ಕೆ.ಎಂ. ಹುಂಡಿ ಗ್ರಾಮದಲ್ಲಿ ಕಳೆದ ಎರಡು-ಮೂರು ತಿಂಗಳಿಂದ ಕುಡಿಯುವ ನೀರಿಗೆ ಹಾಹಾಕಾರ ಶುರುವಾಗಿತ್ತು. ಮುಂಗಾರು ಮಳೆ ಕೊರತೆ ಹಾಗೂ ಭೀಕರ ಬರ ಹಿನ್ನೆಲೆ  ಅಂತರ್ಜಲ ಮಟ್ಟ ಕುಸಿದು ಬೋರ್ ವೆಲ್ ವೆಲ್ ಗಳು  ಬತ್ತಿ ಹೋಗಿವೆ. ಗ್ರಾಮ ಪಂಚಾಯಿತಿ ವತಿಯಿಂದ ಎರಡು ಬೋರ್ ವೆಲ್ ಕೊರೆಸಿದರೂ ನೀರು ಬಂದಿರಲಿಲ್ಲ. ಹೀಗಾಗಿ ಗ್ರಾಮ ಪಂಚಾಯಿತಿ ವತಿಯಿಂದ ಟ್ಯಾಂಕರ್ ಗಳ ಮೂಲಕ  ನಾಲ್ಕು ದಿನ ಅಥವಾ ವಾರಕೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದೆ. ಆದರೆ ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬ ಗಾದೆ ಮಾತಿನಂತೆ ಪೂರೈಕೆ ಮಾಡುತ್ತಿರುವ ನೀರು ಒಂದು ದಿನಕ್ಕೂ ಸಾಕಾಗುತ್ತಿರಲಿಲ್ಲ. ಸ್ನಾನ ಸೇರಿದಂತೆ ದಿನನಿತ್ಯದ ಚಟುವಟಿಕೆಗಳಿಗೆ ತೀವ್ರ ತೊಂದರೆಯಾಗಿತ್ತು. ದಿನದಿಂದ ದಿನಕ್ಕೆ ಪರಿಸ್ಥಿತಿ ಬಿಗಾಡಿಯಿಸಿದ ಹಿನ್ನೆಲೆ ಸಮಾಜ ಸೇವಕ ಶಂಕರೇಗೌಡ ಅವರ ಗಮನಕ್ಕೆ ತರಲಾಯಿತು. ತಕ್ಷಣವೇ ನಮ್ಮ ಗ್ರಾಮಕ್ಕೆ ಬಂದು ನೀರಿನ ಪಾಯಿಂಟ್ ಮಾಡಿಸಿ, ಮಾರನೇ ದಿನವೇ ಬೋರ್ ವೆಲ್ ಕೊರೆಸಿ ನೀರು ಒದಗಿಸಿದ್ದಾರೆ. ಅವರಿಗೆ ನಾವು ಸದಾ ಚಿರಋಣಿಯಾಗಿರುತ್ತೇವೆ ಅಂದು ಗ್ರಾಮಸ್ಥರು ಧನ್ಯವಾದ ಹೇಳುತ್ತಾರೆ. 

ಗ್ರಾಮದಲ್ಲಿ ಈ ಹಿಂದೆ ಎರಡು ಬೋರ್ ವೆಲ್ ಕೊರೆಸಿದರೂ ನೀರು ಬಂದಿರಲಿಲ್ಲ. ಆದರೆ ಸಮಾಜ ಸೇವಕ ಅವರ ಕಾಲ್ಗುಣವೊ ಇಲ್ಲ ಮತ್ತೊಂದು ಗೊತ್ತಿಲ್ಲ. ಅವರು ಪಾಯಿಂಟ್ ಮಾಡಿಸಿದ ಸ್ಥಳದಲ್ಲಿ ಗಂಗಮ್ಮ ಉಕ್ಕಿ ಹರಿಯುತ್ತಿದ್ದಾಳೆ. ಈ ಮೂಲಕ ನಮ್ಮ ಊರಿನ ಪ್ರಮುಖ ಸಮಸ್ಯೆಯಾಗಿದ್ದ ನೀರಿನ ಅಭಾವ ತಗ್ಗಿಸಿದ್ದಾರೆ ಎಂದು ಗ್ರಾಮದ ಯುವಕ  ನಂದನ್ ಹೇಳುತ್ತಾರೆ. 

(ಕೋಟ್ )

ಜನಪ್ರತಿನಿಧಿಗಳು ಮಾಡಬೇಕಾದ ಕೆಲಸವನ್ನು ಸಮಾಜ ಸೇವಕ ನಲ್ಲೂರು ಶಂಕರೇಗೌಡ ಅವರು ಒಂದೇ ದಿನದಲ್ಲಿ ಮಾಡಿದ್ದಾರೆ. ತಮ್ಮ ಸ್ವಂತ ಹಣದಿಂದ ಬೋರ್ ವೆಲ್ ಕೊರೆಸಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿದ್ದಾರೆ. ಇಂತವರು ರಾಜಕೀಯಕ್ಕೆ ಬರಬೇಕು, ಇಂತವರನ್ನು ಜನ ಆಯ್ಕೆಮಾಡಬೇಕು 

ಯೋಗೇಶ್, ಗ್ರಾಂ.ಪಂ. ಮಾಜಿ ಸದಸ್ಯರು  

ಬೋರ್ ವೆಲ್ ನಲ್ಲಿ ನೀರು ಮೇಲಕ್ಕೆ ಚಿಮ್ಮುತ್ತಿದಂತೆ ಗ್ರಾಮಸ್ಥರು ಕುಣಿದು ಕುಪ್ಪಳಿಸಿದರು. ಸಿಹಿ ಹಂಚಿ ಸಂಭ್ರಮಿಸಿದರು. ಆಧುನಿಕ ಭಗೀರಥ ನಮ್ಮ ನಲ್ಲೂರು ಶಂಕರೇಗೌಡರು ಎಂದು ಎಂದು ಘೋಷಣೆ ಕೂಗಿ ಸಂತಸವ್ಯಕ್ತಪಡಿಸಿದರು. ಈ ವೇಳೆ  ಈ ವೇಳೆ  ಜಗದೀಶ್,  ರವಿಕುಮಾರ್,  ಶಿವರಾಜ್, ರಾಜೇಂದ್ರ, ಶಂಕರ್, ಮಹದೇವ್, ಕುಮಾರಸ್ವಾಮಿ, ಇಂದ್ರಣ್ಣ, ರಾಮಣ್ಣ, ಮಹೇಂದ್ರ, ಕೃಷ್ಣೇಗೌಡ, ನಿಂಗೇಗೌಡ, ಶಿವಣ್ಣ ಸೇರಿದಂತೆ ಗ್ರಾಮದ ಯುವಕರು, ಮಹಿಳೆಯರು ಉಪಸ್ಥಿತರಿದ್ದರು.