
ಮೈಸೂರು:ಮುಂದಿನ ದಿನಗಳಲ್ಲಿ ಕೇಂದ್ರ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ರಾಜ್ ಮಂತ್ರಾಲಯ ಕೊಡ ಮಾಡುವ ರಾಷ್ಟಿçÃಯ ಪಂಚಾಯತ್ರಾಜ್ ಪುರಸ್ಕಾರ ಪ್ರಶಸ್ತಿಯನ್ನು ಪಡೆಯಲು ಗ್ರಾಮ ಪಂಚಾಯಿತಿಗಳು ಸಜ್ಜಾಗಿ ಕೆಲಸ ಮಾಡಬೇಕು. ಅಭಿವೃದ್ದಿ ಕಾರ್ಯಗಳ ಚಟುವಟಿಕೆಗಳ ಕುರಿತು ಡಾಕ್ಯುಮೆಂಟೇಷನ್ ಮಾಡಿ ಅಪ್ಲೋಡ್ ಮಾಡಬೇಕು ಎಂದು ಮೈಸೂರು ಜಿ.ಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಸ್.ಯುಕೇಶ್ಕುಮಾರ್ ಸೂಚಿಸಿದರು.
ಗುರುವಾರ ನಗರದ ಜಿಪಂ ಸಭಾಂಗಣದಲ್ಲಿ ವಿವಿಧ ಯೋಜನೆಗಳ ಪ್ರಗತಿಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ರಾಷ್ಟಿçÃಯ ಪಂಚಾಯತ್ರಾಜ್ ಪುರಸ್ಕಾರವನ್ನು ಜಿಲ್ಲೆ,ತಾಲ್ಲೂಕು ಹಾಗೂ ಗ್ರಾಪಂಗಳು ಪಡೆಯುವಂತೆ ಮಾಡಬೇಕು. ಪುರಸ್ಕಾರ ಪಡೆಯಲು ನಿಗದಿಪಡಿಸಿರುವ ಇಂಡೆಕ್ಸ್ ಹಾಗೂ ಪ್ಯಾರಾಮೀಟರ್ಗಳನ್ನು ಗಮನಿಸಿ ಅಪ್ಲೋಡ್ ಮಾಡಬೇಕು ಎಂದು ತಿಳಿಸಿದರು.
ಗ್ರಾಮಾಂತರ ಪ್ರದೇಶದಲ್ಲಿ ನಡೆಯುವ ಅಭಿವೃದ್ದಿ ಕಾರ್ಯಗಳು,ಚಟುವಟಿಕೆಗಳನ್ನುಡಾಕ್ಯುಮೆಂಟೇಷನ್ ಮಾಡಬೇಕು. ಡೇಟಾ ಅಪ್ಡೇಟ್ ಮಾಡಬೇಕು. ನಾವು ರ್ಯಾಂಕಿAಗ್ ತಲುಪಬೇಕಾದರೆ ಇಂಡೆಕ್ಸ್ನಲ್ಲಿ ಕೊಟ್ಟಿರುವ ಅಂಶಗಳನ್ನು ಪರಿಗಣಿಸಿ ಅದರಂತೆ ಕೆಲಸ ಮಾಡಬೇಕು ಎಂದು ನುಡಿದರು. ಕಳೆದ ವರ್ಷಗಳಲ್ಲಿ ರಾಷ್ಟಿçÃಯ ಪುರಸ್ಕಾರ ಬಂದಿರುವ ಪ್ರಶಸ್ತಿಗಳು ಅನುಸರಿಸಿದ್ದ ಮಾರ್ಗಗಳನ್ನು ಗಮನಿಸಬೇಕು. ಕಳೆದ ವರ್ಷಗಳಲ್ಲಿ ಇದ್ದ ಪ್ಯಾರಾಮೀಟರ್ ಹಾಗೂ ಪ್ರಸಕ್ತ ಸಾಲಿನಲ್ಲಿ ಇರುವ ಪ್ಯಾರಾಮೀಟರ್ನಲ್ಲಿ ಏನೇನು ವ್ಯತ್ಯಾಸಗಳು ಇವೆ ಎಂಬುದನ್ನು ಅಧ್ಯಯನ ಮಾಡಿದರೆ ಗೊತ್ತಾಗಲಿದೆ ಎಂದು ಹೇಳಿದರು. ಗ್ರಾಪಂಗಳಲ್ಲಿ ಚುರುಕಾಗಿ ಕೆಲಸ ಮಾಡಲು ಹಾಗೂ ಪ್ರಗತಿಯಲ್ಲಿ ಹಿಂದಿರುವ ಗ್ರಾಪಂಗಳನ್ನು ಚುರುಕುಗೊಳಿಸಲು ಅನುಷ್ಟಾನಕ್ಕೆ ತಂದ ಶ್ರೇಷ್ಠತೆ ಆಪ್ನಿಂದಾಗಿ ಸಾಕಷ್ಟು ಅನುಕೂಲವಾಗುತ್ತಿದೆ.ಪಿಡಿಒಗಳು ಯಾವ್ಯಾವ ಅಂಶಗಳಲ್ಲಿ ಹಿಂದೆ ಬಿದ್ದಿದ್ದೇವೆ ಎಂಬುದನ್ನು ಸರಿಪಡಿಸಿಕೊಳ್ಳುತ್ತಾರೆ. ಪ್ರಗತಿಯಲ್ಲಿ ಹಿಂದಿರುವ ಗ್ರಾಪಂಗಳು ಮುಂದಿನ ಬಾರಿ ರ್ಯಾಂಕಿAಗ್ ಹೆಚ್ಚು ಮಾಡಿಕೊಂಡರೆ ಪುರಸ್ಕಾರಗಳನ್ನುಪಡೆಯಲು ಸುಲಭವಾಗಲಿದೆ ಎಂದು ಕಿವಿಮಾತು ಹೇಳಿದರು. ಗ್ರಾಮೀಣಾಭಿವೃದ್ದಿ ಪ್ರಗತಿಯಲ್ಲಿ ಮೈಸೂರು ಜಿಲ್ಲೆಯು ಈಗ ಎರಡನೇ ಸ್ಥಾನದಲ್ಲಿದೆ. ಮೊದಲು ಬೇರೆ ಬೇರೆ ಕ್ರಮಾಂಕಗಳನ್ನು ಹೊಂದಲಾಗಿತ್ತು.ಪಿಡಿಒಗಳು ಪ್ರಗತಿ ಸಾಧಿಸಿದಷ್ಟು ಜಿಲ್ಲೆಯು ರಾಜ್ಯಮಟ್ಟದಲ್ಲಿ ರ್ಯಾಂಕ್ನಲ್ಲಿ ಮುಂದಿರಲು ಸಾಧ್ಯವಾಗಬಹುದು ಎಂದು ಹೇಳಿದರು.
ಅಬ್ದುಲ್ನಜೀರ್ಸಾಬ್ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ರಾಜ್ ಸಂಸ್ಥೆ ಸಮಾಲೋಚಕ ಡಾ.ಜಿ.ಎನ್.ಗಣೇಶ್ ಪ್ರಸಾದ್ ಮಾತನಾಡಿ, ರಾಷ್ಟಿçÃಯ ಪಂಚಾಯತ್ ರಾಜ್ ಪುರಸ್ಕಾರವನ್ನು ನೀಡಲು ಈ ಬಾರಿ ಸುಸ್ಥಿರ ಅಭಿವೃದ್ದಿಯನ್ನು ಆಧರಿಸಿ, ಪರಿಗಣಿಸಲಾಗುತ್ತದೆ. ಇಂಡೆಕ್ಸ್ನಲ್ಲಿ ಯಾವ್ಯಾವ ಚಟುವಟಿಕೆಗಳಿಗೆ ಎಷ್ಟು ಅಂಕಗಳನ್ನು ನಿಗದಿಪಡಿಸಲಾಗಿದೆ ಎಂಬುದನ್ನು ಗಮನಿಸಿ ಅದರಲ್ಲಿ, ಗ್ರಾಪಂಗಳುಮಾಡುವ ಕೆಲಸಕ್ಕೆ ಎಷ್ಟು ಅಂಕ ದೊರೆಯುತ್ತದೆ ಎಂಬುದನ್ನು ಗಮನಿಸಬೇಕು. ಬಾಲಮಕ್ಕಳ ಹಾಗೂ ಮಹಿಳೆಯರ ಗ್ರಾಮಸಭೆ ಮಾಡಿದ್ದರೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪೋರ್ಟಲ್ನಲ್ಲಿ ಅಪ್ಲೋಡ್ ಮಾಡದಿದ್ದರೆ ಪರಿಗಣಿಸಲ್ಲ. ಹಾಗಾಗಿ, ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ದಿಗೆ ಹೊಂದಿಕೊAಡAತೆ ಕೆಲಸ ಮಾಡುವ ವಿವಿಧ ಇಲಾಖೆಗಳಿಗೆ ಮಾಹಿತಿ ನೀಡಬೇಕು.ಅಲ್ಲಿಂದ ಪಂಚತAತ್ರ-2.0ಗೆ ಅಪ್ಲೋಡ್ ಮಾಡಿದರೆ ಉತ್ತಮವಾಗಲಿದೆ ಎಂದರು.
ಅತ್ಯುತ್ತಮ ಗ್ರಾಪಂಗಳಿಗೆ ಪುರಸ್ಕಾರ: ಕಳೆದ ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಅತ್ಯುತ್ತಮವಾಗಿ ಕೆಲಸ ಮಾಡಿದ ಗ್ರಾಪಂ,ತಾಪAಗಳಿಗೆ ಪ್ರಶಂಸನಾ ಪತ್ರವನ್ನು ವಿತರಿಸಲಾಯಿತು. ಜುಲೈ ತಿಂಗಳಲ್ಲಿ ಅತ್ಯುತ್ತಮವಾಗಿ ಕೆಲಸ ಮಾಡಿದ ಐದು ವಾಜಮಂಗಲ, ಎಂ.ಬಿ.ಹಳ್ಳಿ, ಹುಳಿಮಾವು, ಬಿ.ಶೆಟ್ಟಿಹಳ್ಳಿ, ಹೊರಳವಾಡಿ ಗ್ರಾಪಂಗಳಿಗೆ, ಅತ್ಯುತ್ತಮವಾದ ತಿ.ನರಸೀಪುರ, ನಂಜನಗೂಡು, ಮೈಸೂರು ತಾಲ್ಲೂಕು ಪಂಚಾಯಿತಿಗಳಿಗೆ, ಆಗಸ್ಟ್ ತಿಂಗಳಲ್ಲಿ ಸೋಮೇಶ್ವರಪುರ, ತಗಡೂರು, ಹೊಳೆಸಾಲು, ಬಾಚೇಗೌಡನಹಳ್ಳಿ, ಹುಳಿಮಾವು ಗ್ರಾಪಂಗಳಿಗೆ, ತಿ.ನರಸೀಪುರ, ಪಿರಿಯಾಪಟ್ಟಣ, ಸಾಲಿಗ್ರಾಮ ತಾಪಂಗಳಿಗೆ ಕ್ರಮವಾಗಿ ಪ್ರಥಮ,ದ್ವಿತೀಯ,ತೃತೀಯ ಬಹುಮಾನ ವಿತರಿಸಿದರು.
ಈ ವೇಳೆ ಜಿಪಂ ಉಪ ಕಾರ್ಯದರ್ಶಿ ಭೀಮೇಶ್ ಕೆ.ಲಾಳಿ ಹಾಜರಿದ್ದರು.