3Kaala News

ಸುಭಾಷಿತ 

ಯಾವುದಕ್ಕಾಗಿ ಚಿಂತೆ ಯಾವುದಕ್ಕಾಗಿ ದುಃಖ ಪಡುತ್ತಿದ್ದಿ , ನೆನ್ನೆ ಇದ್ದ ಖುಷಿ ಇವತ್ತು ಇಲ್ಲ ಅಂದಮೇಲೆ ಇವತ್ತು ಇರೋದು ನಾಳೆ ಇರುತ್ತಾ? ಈ ಜಗತ್ತಿನ ಸೃಷ್ಟಿಯಲ್ಲಿ ಯಾವುದೂ ಕೂಡ ಶಾಶ್ವತ ಅಲ್ಲ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

News Stories

ಅವಧೂತ ದತ್ತ ಪೀಠದಲ್ಲಿ ಸಂಸ್ಕöÈತ ಶಿಕ್ಷಣ ಕೋರ್ಸ್ ಗಳ ಉದ್ಘಾಟನೆ
ಮೈಸೂರು: ನಗರದ ಅವದೂತ ದತ್ತ ಪೀಠದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ ೮೪ನೇ ಜನ್ಮೋತ್ಸವದ ಶುಭ ಸಂದರ್ಭದಲ್ಲಿ, ಮೈಸೂರಿನ ಅವಧೂತ ದತ್ತ ಪೀಠವು ನೂತನ ಸಂಸ್ಕöÈತ ಶಿಕ್ಷಣ ಕೋರ್ಸ್ಗಳನ್ನು ಆರಂಭಿಸಿದೆ.ದತ್ತ ಪೀಠದ ಪ್ರಮುಖ ಅಂಗ ಸಂಸ್ಥೆಗಳಾದ ಎಸ್‌ಜಿಎಸ್ ವೇದನಿಧಿ ಅಕಾಡೆಮಿ ಮತ್ತು ಮಾಸ್ಟರ್ಸ್ ಇನ್‌ಸ್ಟಿಟ್ಯೂಟ್, ಭಾರತ ಸರ್ಕಾರದ ಕೇಂದ್ರ ಸಂಸ್ಕöÈತ ವಿಶ್ವವಿದ್ಯಾಲಯದಸಹಯೋಗದೊಂದಿಗೆ ಈ ಕೋರ್ಸ್ಗಳನ್ನು ಪ್ರಾರಂಭಿಸಲಾಗಿದೆ.ಸAಸ್ಕöÈತ, ಶಾಸ್ತçಗಳು ಹಾಗೂ ಸಂಬAಧಿತ ವಿಷಯಗಳನ್ನು ಕಲಿಯಲು ಆಸಕ್ತಿ ಇರುವ ಯಾರು ಬೇಕಾದರೂ ಈ ಕೋರ್ಸ್ಗಳಿಗೆ ಸೇರಬಹುದಾಗಿದೆ.ಡಿಪ್ಲೊಮಾ ಇನ್ ಸಂಸ್ಕöÈತ:ಇದು ಆರು ತಿಂಗಳು ಅಥವಾ ಒಂದು ವರ್ಷದ ಸರಳ ಕೋರ್ಸ್. ಸಂಸ್ಕöÈತ ಸಂಭಾಷಣೆ, ವ್ಯಾಕರಣ ಮತ್ತು ನಮ್ಮ ಸಂಸ್ಕöÈತಿಯ ಮೂಲ ಜ್ಞಾನವನ್ನು ಒದಗಿಸುತ್ತದೆ.ಪ್ರಾಕ್-ಶಾಸ್ತಿçà ಸಂಸ್ಕöÈತ ಪ್ರೆöÊಮರ್: ಇದು ಪಿಯುಸಿ (ಪ್ರೀ-ಯೂನಿವರ್ಸಿಟಿ) ಮಟ್ಟದ ಎರಡು ವರ್ಷಗಳ ಕೋರ್ಸ್, ೧೦ನೇ ತರಗತಿ ಹಾಗೂ ಅದಕ್ಕಿಂತ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ಬಿ.ಎ ಮತ್ತು ಎಂ.ಎ ಪದವಿಗಳಿಗೆ ಪ್ರವೇಶ ಪಡೆಯಲು ಪೂರಕವಾಗಿದೆ.ಅದ್ವೆöÊತ ವೇದಾಂತ, ಪುರಾಣ ಇತಿಹಾಸ ಮತ್ತು ವ್ಯಾಕರಣ: ಉನ್ನತ ವ್ಯಾಸಂಗದ ಗಂಭೀರ ಕೋರ್ಸ್ಗಳು.ಯೋಗ ಕೋರ್ಸ್: ಇದು ಕೇವಲ ಆಸನಗಳಿಗೆ ಸೀಮಿತವಾಗಿರದೆ ಮಾನವ ಅಂಗರಚನಾ ಶಾಸ್ತç, ಆಯುರ್ವೇದ ಮತ್ತು ಆಧುನಿಕ ವೈದ್ಯಕೀಯ ದೃಷ್ಟಿಕೋನವನ್ನೊಳಗೊಂಡ ವೃತ್ತಿಪರ ತರಬೇತಿ ಕಾರ್ಯಕ್ರಮವಾಗಿದೆ.ಹಿಂದೂ ಧರ್ಮ ಅಧ್ಯಯನ (ಎಂ.ಎ): ೪೦-೫೦ ವರ್ಷ ದಾಟಿದವರು ತಮ್ಮ ಸ್ವಯಂ ಜ್ಞಾನಾರ್ಜನೆಗಾಗಿ ಈ ಸ್ನಾತಕೋತ್ತರ ಪದವಿಯನ್ನು ಕೈಗೊಳ್ಳಬಹುದು.ವೇದಭಾಷ್ಯ ಕೋರ್ಸ್: ವೇದ ಮಂತ್ರಗಳ ಅರ್ಥವನ್ನು ಆಳವಾಗಿ ತಿಳಿಯಲು ಬಯಸುವ ವೇದ ವಿದ್ವಾಂಸರಿಗಾಗಿ ಈ ವಿಶೇಷ ಕೋರ್ಸ್ ರೂಪಿಸಲಾಗಿದೆ.ಪರೀಕ್ಷಾ ವಿಧಾನ:ಬಿ.ಎ ಮತ್ತು ಎಂ.ಎ ಪದವಿಗಳ ವಿದ್ಯಾರ್ಥಿಗಳು ಸ್ವಯಂ ಅಧ್ಯಯನವನ್ನು ಎಲ್ಲಿದ್ದರೂ ಮಾಡಬಹುದು, ಆದರೆ ಪರೀಕ್ಷೆಗಳನ್ನು ಮೈಸೂರು ಆಶ್ರಮದ ಆವರಣದಲ್ಲೇ ಬರೆಯಬೇಕಾಗುತ್ತದೆ. ಇನ್ನು ಡಿಪ್ಲೊಮಾ ಮತ್ತು ಸರ್ಟಿಫಿಕೇಟ್ ಕೋರ್ಸ್ಗಳ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯವು ವಿನಾಯಿತಿ ನೀಡಿದ್ದು, ಇಂಟರ್ನೆಟ್ ಆಧಾರಿತ ಪ್ರೋಟೋಕಾಲ್ ಮೂಲಕ ವಿಶ್ವದ ಯಾವುದೇ ಮೂಲೆಯಿಂದ ಬೇಕಾದರೂ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ.ಜೂನ್ ಮೊದಲ ವಾರದಲ್ಲಿ ಅಧಿಕೃತ ಮಂಜೂರಾತಿ ಪತ್ರಗಳು ದೊರೆತ ನಂತರ, ಕೋರ್ಸ್ನ ಸಂಪೂರ್ಣ ಪಠ್ಯಕ್ರಮ ಮತ್ತು ವಿವರಗಳನ್ನು sತಿಚಿmi.iಟಿ/ಛಿsu ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು ಎಂದು ಪೀಠದ ಪ್ರಮುಖರು ತಿಳಿಸಿದ್ದಾರೆ.ಪ್ರಥಮ ಪಿಎಚ್.ಡಿ ಪದವಿ ಪ್ರದಾನ:೨೦೧೨ ರಿಂದ ಸಂಸ್ಕöÈತ ಸಂಶೋಧನಾ ಕೇಂದ್ರವಾಗಿ ಗುರುತಿಸಲ್ಪಟ್ಟಿರುವ ಈ ಸಂಸ್ಥೆಯಿAದ, ಇದೀಗ ಶ್ರೀ ಎ. ಚಿನ್ಮಯ ದತ್ತ ಅವರು ಯಶಸ್ವಿಯಾಗಿ ಪಿಎಚ್.ಡಿ ಪದವಿ ಪಡೆದ ಮೊದಲ ವಿದ್ಯಾರ್ಥಿಯಾಗಿದ್ದಾರೆ.ಇವರು ಋಗ್ವೇದದ 'ಐತ್ರೇಯ ಬ್ರಾಹ್ಮಣ ಮತ್ತು ಉಪನಿಷತ್' ವಿಷಯದ ಮೇಲೆ ಸಂಶೋಧನಾ ಪ್ರಬಂಧ ಮಂಡಿಸಿದ್ದರು.ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಹಾಗೂ ಎಸ್‌ಜಿಎಸ್ ವೇದನಿಧಿ ಅಕಾಡೆಮಿಯ ಗೌರವಾನ್ವಿತ ಅಧ್ಯಕ್ಷರಾದ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿಯವರು ದೀಪ ಬೆಳಗಿಸಿ, ಫಲಕವನ್ನು ಅನಾವರಣಗೊಳಿಸುವ ಮೂಲಕ ಈ ಐತಿಹಾಸಿಕ ಕೋರ್ಸ್ಗಳಿಗೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಆಶ್ರಮದ ಅಧ್ಯಾಪಕರು ಹಾಗೂ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು

This is a title