Skip to main content

3Kaala News

ಸುಭಾಷಿತ 

ಪಕ್ಕದಲ್ಲಿರುವವನ ತಟ್ಟೆಯಲ್ಲಿ ಏನಿದೆ ಅಂತ ಯಾವತ್ತೂ ಇಣುಕಿ ನೋಡಬೇಡ. ಕಾರಣ ಅಲ್ಲಿ ಜಾಸ್ತಿಯಿದ್ದರೆ, ನಿನಗೆ ಸಂಕಟವಾಗುತ್ತದೆ.ಅಲ್ಲಿ ಕಡಿಮೆ ಇದ್ದರೆ, ನಿನಗೆ ಅಹಂಕಾರ ಬರುತ್ತದೆ.ಎರಡೂ ಒಳ್ಳೆಯದಲ್ಲ.ನಮ್ಮ ತಟ್ಟೆಯನ್ನು ನಾವು ನೋಡಿಕೊಂಡಿದ್ದರೆ, ಸಿಗುವ ಸಂತೋಷವೇ ಬೇರೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ವೃದ್ಧೆ ಒಬ್ಬರ ಎರಡು ಎಕರೆ ಜಮೀನನ್ನು ಅಕ್ರಮವಾಗಿ ಖಾತೆ ಮಾಡಿಸಿಕೊಂಡು ಬಡ ಕುಟುಂಬಕ್ಕೆ ಅನ್ಯಾಯ

ನ್ಯಾಯಕ್ಕಾಗಿ ತಾಲೂಕು ಮಾಜಿ ಸೈನಿಕರ ಸಂಘ ಆಗ್ರಹ

ಪಿರಿಯಾಪಟ್ಟಣ: 84 ವರ್ಷದ ಕೇರಳ ಮೂಲದ ಕುಟುಂಬ ಅನ್ಯಾಯ ಎಸಗುತ್ತಿದ್ದು ಕೂಡಲೇ ತಾಲೂಕು ಆಡಳಿತ ಈ ಬಗ್ಗೆ ಕ್ರಮ ಕೈಗೊಂಡು ಅನ್ಯಾಯ ಕೊಳಗಾದ ಕುಟುಂಬಕ್ಕೆ ನ್ಯಾಯ ಕೊಡಿಸಿ ಕೊಡಬೇಕೆಂದು ತಾಲೂಕು ಮಾಜಿ ಸೈನಿಕರ ಸಂಘದ ಮಾಜಿ ಅಧ್ಯಕ್ಷ ಜೆ ಸಿ ವಿಕ್ರಮ್ ರಾಜ್ ತಿಳಿಸಿದರು.

 ತಾಲೂಕು ಪತ್ರಕರ್ತರ ಸಂಘದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಮಾತನಾಡಿದ ಅವರು ಪಿರಿಯಾಪಟ್ಟಣ ತಾಲೂಕಿನ ಅಳಲೂರು ಗ್ರಾಮದ ಸರ್ವೆ ನಂಬರ್ 49ರ ಸರ್ಕಾರಿ ದರಕಾಸು ಭೂಮಿಯ ಪೈಕಿ ಎರಡು ಎಕರೆ ಜಾಗದಲ್ಲಿ ದಿವಂಗತ ರಾಮಕೃಷ್ಣರವರ ಪತ್ನಿಯಾದ ರಾಧಮ್ಮ ಸುಮಾರು 84 ವರ್ಷ ಹಾಗೂ ಇಬ್ಬರು ಗಂಡು ಮಕ್ಕಳು ಕಳೆದ 65 ವರ್ಷಗಳಿಂದ ಈ ಜಮೀನಿನಲ್ಲಿ ಅನುಭವದಲ್ಲಿದ್ದು ಅದರಂತೆ ಪಂಚವಳ್ಳಿ ಪಂಚಾಯಿತಿಯಿಂದ ಲೈಸೆನ್ಸ್ ಪಡೆದು ಮನೆಯನ್ನು ಸಹ ನಿರ್ಮಿಸಿಕೊಂಡು ವಾಸಿಸುತ್ತಿದ್ದಾರೆ ಸದರಿ ಜಮೀನಿನ ದಾಖಲಾತಿಗಳನ್ನು ಕೇರಳ ರಾಜ್ಯದ ಕಣ್ಣೂರು ಜಿಲ್ಲೆಯ ಚಕ್ಕರಕಲ್ಲು ತಲ ಚೇರಿ ಮೂಲದ ಮೋಹನ್ ಹಾಗೂ ಅವರ ಸಹೋದರಿಯರು ತಮ್ಮ ಹೆಸರಿಗೆ ಅಕ್ರಮವಾಗಿ ಖಾತೆ ಮಾಡಿಸಿಕೊಂಡು ಸದರಿ ದರಕಾಸ್ತು ಜಮೀನಿನ ಮಾಲೀಕತ್ವ ಹಾಗೂ ಅನುಭವಕ್ಕೆ ಯತ್ನಿಸಿದಾಗ ಪ್ರಕರಣ ಪಿರಿಯಾಪಟ್ಟಣ ನ್ಯಾಯಾಲಯದ ಮೆಟ್ಟಿಲೇರಿದ್ದು ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೇರಳದ ನಿವಾಸಿಗಳ ಪರವಾಗಿ ತಾಲೂಕಿನ ಭೀಮ್ ಆರ್ಮಿ ಗಿರೀಶ್ ಕೂಣಸೂರು , ಮಂಜು ಆಯ್ತನಹಳ್ಳಿ, ಕಾಂತರಾಜು ಮಧ್ಯ ಪ್ರವೇಶಿಸಿ ವೃದ್ಧ ರಾಧಮ್ಮ ಮತ್ತು ಆಕೆಯ ಮಕ್ಕಳಿಗೆ ಕಿರುಕುಳ ನೀಡುತ್ತಾ ದಮಕಿ ಹಾಕಿ ಮನೆಯನ್ನು ಖಾಲಿ ಮಾಡುವಂತೆ ತಾಕಿತು ಮಾಡುತ್ತಿದ್ದು ಈ ಬಗ್ಗೆ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿರುತ್ತದೆ

ಕರ್ನಾಟಕ ಸರ್ಕಾರದ ಭೂ ಮಂಜೂರಾತಿ ನಿಯಮ 1969ರ ಅಡಿಯಲ್ಲಿ ಕೇರಳ ರಾಜ್ಯದವರ ಹೆಸರಿನಲ್ಲಿರುವ ದರಕಾಸ್ತು ಭೂಮಿಯನ್ನು ರದ್ದುಪಡಿಸಿ ಹಲವು ವರ್ಷಗಳಿಂದ ಜಮೀನಿನಲ್ಲಿ ಅನುಭವ ಹಾಗೂ ವಾಸದಲ್ಲಿರುವ ಪಿರಿಯಾಪಟ್ಟಣದ ಮೂಲ ನಿವಾಸಿಗಳಾದ ರಾಧಮ್ಮನ ಮಕ್ಕಳದ ರಾಜೀವ ಹಾಗೂ ಅನಿಲ್ ಕುಮಾರ್ ರವರ ಹೆಸರಿಗೆ ಖಾತೆ ಮಾಡಿಸಿ ಕೊಡುವಂತೆ ರಾಜ್ಯ ಸರ್ಕಾರದ ಕಂದಾಯ ಇಲಾಖೆಗೆ ಮನವಿ ಮಾಡುತ್ತ ತಾಲೂಕಿನಲ್ಲಿ ಭೀಮ್ ಆರ್ಮಿ ಹೆಸರಿನಲ್ಲಿ ನೊಂದ ಬಡ ಹಿಂದುಳಿದ ವರ್ಗದ ಕುಟುಂಬದವರಿಗೆ ಕಿರುಕುಳ ನೀಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ತಾಲೂಕು ಆಡಳಿತಕ್ಕೆ ಆಗ್ರಹಪಡಿಸಿದ್ದಾರೆ ಪತ್ರಿಕಾಗೋಷ್ಠಿಯಲ್ಲಿ ನೊಂದ ಕುಟುಂಬದ ವೃದ್ಧೆ ರಾಧಮ್ಮ, ಮಗ ರಾಜೀವ್, ಸೋದರ ಸಂಬಂಧಿ ಪ್ರಶಾಂತ್, ತಾಲೂಕು ಮಾಜಿ ಸೈನಿಕರ ಸಂಘದ ಅಧ್ಯಕ್ಷ ನರಸೇಗೌಡ ಕಾರ್ಯದರ್ಶಿ ರಜಿತ್ ಖಜಾಂಚಿ ಧ್ರುವರಾಜ್ ನಿರ್ದೇಶಕ ಮುದ್ದಪ್ಪ ಸೇರಿದಂತೆ ಇತರರು ಇದ್ದರು