Skip to main content

3Kaala News

ಸುಭಾಷಿತ 

ಪಕ್ಕದಲ್ಲಿರುವವನ ತಟ್ಟೆಯಲ್ಲಿ ಏನಿದೆ ಅಂತ ಯಾವತ್ತೂ ಇಣುಕಿ ನೋಡಬೇಡ. ಕಾರಣ ಅಲ್ಲಿ ಜಾಸ್ತಿಯಿದ್ದರೆ, ನಿನಗೆ ಸಂಕಟವಾಗುತ್ತದೆ.ಅಲ್ಲಿ ಕಡಿಮೆ ಇದ್ದರೆ, ನಿನಗೆ ಅಹಂಕಾರ ಬರುತ್ತದೆ.ಎರಡೂ ಒಳ್ಳೆಯದಲ್ಲ.ನಮ್ಮ ತಟ್ಟೆಯನ್ನು ನಾವು ನೋಡಿಕೊಂಡಿದ್ದರೆ, ಸಿಗುವ ಸಂತೋಷವೇ ಬೇರೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ದಸರಾ ಪುಸ್ತಕ ಮೇಳ, ಛಾಯಾಚಿತ್ರ ಪ್ರದರ್ಶನ, ಲಲಿತಾ ಕಲೆ ಪ್ರದರ್ಶನ ವೀಕ್ಷಿಸಿದ ಅಭಿನವ ಗವಿ ಸಿದ್ದೇಶ್ವರ ಸ್ವಾಮೀಜಿ


ಮೈಸೂರು : ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ 2026ರ ಉದ್ಘಾಟನೆಮಾಡಿದ ಕೊಪ್ಪಳದ ಗವಿಮಠದ ಶ್ರೀ ಅಭಿನವ ಗವಿ ಸಿದ್ದೇಶ್ವರ ಸ್ವಾಮೀಜಿ ಅವರು ಸೋಮವಾರ ವಿವಿಧೆಡೆ ಭೇಟಿ ನೀಡಿದರು.
ದಸರಾ ಪುಸ್ತಕ ಮೇಳದಲ್ಲಿ ವಿವಿಧ ಪುಸ್ತಕಗಳನ್ನು ವೀಕ್ಷಣೆ ಮಾಡಿದರು.
ನಗರದ ಭಾರತ್ ಸೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ಮೈಸೂರು ದಸರಾ ಮಹೋತ್ಸವ-2026ರ ಅಂಗವಾಗಿ ಅ.11 ರಿಂದ 20ರವರೆಗೆ “ಕನ್ನಡ ಪುಸ್ತಕಗಳ ರಿಯಾಯಿತಿ ಮಾರಾಟ ಮೇಳವನ್ನು ಆಯೋಜಿಸಲಾಗಿದ್ದು, ದಸರಾ ಪುಸ್ತಕ ಮೇಳದ ಮಳಿಗೆಗಳಿಗೆ ಭೇಟಿಕೊಟ್ಟ ಶ್ರೀಗಳು , ಹಲವಾರು ಪುಸ್ತಕಗಳನ್ನು ವೀಕ್ಷಣೆ ಮಾಡಿ, ಪುಸ್ತಕದಲ್ಲಿನ ಬರವಣಿಗೆಯನ್ನು ಕಣ್ಣಾಡಿಸಿದರು.
ಸುಮಾರು ಒಂದು ಗಂಟೆಗೂ ಅಧಿಕ ಸಮಯವನ್ನು ಪುಸ್ತಕ ಮೇಳದಲ್ಲಿ ಪುಸ್ತಕಗಳ ವೀಕ್ಷಣೆಯಲ್ಲಿ ಕೆಳೆ ಸ್ವಾಮೀಜಿ ಅವರು,ಕೆಲವು ಪುಸ್ತಕಗಳ ಹೆಸರು ಮತ್ತು ಲೇಖಕರ ಹಸರನ್ನು ಸ್ವತಃ ತಮ್ಮ ನೋಟ್ ಪುಸ್ತಕದಲ್ಲಿ ಬರೆದುಕೊಂಡರು. ಸ್ವಾಮೀಜಿ ಅವರಿಗೆ ವಿವಿಧ ಪ್ರಕಾಶಕರು ತಮ್ಮ ಪ್ರಕಾಶನದಲ್ಲಿ ಮುದ್ರಣಗೊಂಡಿರುವ ಪುಸ್ತಕಗಳನ್ನು ನೀಡಿದರು.
ಈ ಸಂದರ್ಭದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಮಾನಸ, ಕನ್ನಡ ಮತ್ತು ಸಂಸ್ಕöÈತಿ ಇಲಾಖೆ ಜಂಟಿ ನಿರ್ದೇಶಕಿ ಎಸ್.ನಿರ್ಮಲ ಮಠಾಪತಿ, ಕನ್ನಡ ಪುಸ್ತಕ ಪ್ರಾಧಿಕಾರ ಆಡಳಿತಾಧಿಕಾರಿ ಕೆ.ಬಿ.ಕಿರಣ್ ಸಿಂಗ್, ಮೈಸೂರು ಜಿಲ್ಲಾ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಚಂದ್ರಶೇಖರ್ ಸೇರಿದಂತೆ ಇತರರು ಇದ್ದರು. ಬಳಿಕ ಶ್ರೀಗಳು ನಗರದ ಕಲಾಮಂದಿರದ ಸ್ಮಚಿತ್ರ ಗ್ಯಾಲರಿಯಲ್ಲಿ ಛಾಯಾಚಿತ್ರಗಾರರ ಸಂಘದಿAದ ಆಯೋಜಿಸಲಾಗಿರುವ ಛಾಯಾ ಚಿತ್ರಗಳ ಪ್ರದರ್ಶನವನ್ನು ಕುತೂಹಲದಿಂದ ನೋಡಿದರು. ಈ ವೇಳೆ ಹಾಜರಿದ್ದ ಸಂಘದ ಪದಾಧಿಕಾರಿಗಳು ಅಲ್ಲಿ ಪ್ರದರ್ಶನಕ್ಕೆ ಇಟ್ಟಿದ್ದ ಛಾಯಾಚಿತ್ರಗಳ ಕುರಿತು ಮಾಹಿತಿಯನ್ನು ನೀಡಿದರು. ಬಳಿಕ ಛಾಯಾ ಚಿತ್ರವನ್ನು ಶ್ರೀಗಳಿಗೆ ನೀಡಿ ಸನ್ಮಾನಿಸಿದರು. ಬಳಿಕ ಶ್ರೀಗಳು ಮೈಸೂರು ಆಕಾಶವಾಣಿಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಮೈಸೂರು ಆಕಾಶವಾಣಿಯ ಕಾರ್ಯಕ್ರಮ ಮುಖ್ಯಸ್ಥರಾದ ಶ್ರೀ ಎನ್.ಕೇಶವ ಮೂರ್ತಿ ಅವರು ತಮ್ಮ ತಂಡದೊAದಿಗೆ ಶ್ರೀಗಳನ್ನು ಮೈಸೂರು ಆಕಾಶವಾಣಿ ಸ್ಟುಡಿಯೋದಲ್ಲಿ ಸನ್ಮಾನಿಸಿದರು.