Skip to main content

3Kaala News

ಸುಭಾಷಿತ 

ಪಕ್ಕದಲ್ಲಿರುವವನ ತಟ್ಟೆಯಲ್ಲಿ ಏನಿದೆ ಅಂತ ಯಾವತ್ತೂ ಇಣುಕಿ ನೋಡಬೇಡ. ಕಾರಣ ಅಲ್ಲಿ ಜಾಸ್ತಿಯಿದ್ದರೆ, ನಿನಗೆ ಸಂಕಟವಾಗುತ್ತದೆ.ಅಲ್ಲಿ ಕಡಿಮೆ ಇದ್ದರೆ, ನಿನಗೆ ಅಹಂಕಾರ ಬರುತ್ತದೆ.ಎರಡೂ ಒಳ್ಳೆಯದಲ್ಲ.ನಮ್ಮ ತಟ್ಟೆಯನ್ನು ನಾವು ನೋಡಿಕೊಂಡಿದ್ದರೆ, ಸಿಗುವ ಸಂತೋಷವೇ ಬೇರೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಭೋವಿ ಸಮಾಜದ ಜಮೀನು ಒತ್ತುವರಿ ತೆರವಿಗೆ ಒತ್ತಾಯಿಸಿ ಧರಣಿ 

ಎಚ್ .ಡಿ.ಕೋಟೆ : ಭೋವಿ ಸಮಾಜದ ಬಡ  ಮಕ್ಕಳ ವಿದ್ಯಾರ್ಥಿನಿಲಯಕ್ಕೆ  ಸರ್ಕಾರ ಮಂಜೂರು ಮಾಡಿಕೊಟ್ಟಿರುವ ಜಮೀನು ಒತ್ತುವರಿಯಾಗಿದ್ದು, ಈ ಸಂಬಂಧ ಅತಿಕ್ರಮ ಪ್ರವೇಶ ಮಾಡಿರುವವ ವಿರುದ್ಧ ಕಾನೂನು ಕ್ರಮಕೈಗೊಂಡು ನಮ್ಮ ಸಮಾಜಕ್ಕೆ ನ್ಯಾಯ ದೊರಕಿಸಿಕೊಡಬೇಕೆಂದು ಆಗ್ರಹಿಸಿ ಜಿಲ್ಲಾ ಹಾಗು ತಾಲೂಕು ಮಟ್ಟದ ಭೋವಿ ಸಮಾಜದವರು ತಹಸೀಲ್ದಾರ್ ಕಚೇರಿ ಮುಂದೆ ಧರಣಿ ನಡೆಸಿದರು. 

ಭೋವಿ ಸಮುದಾಯದ ಹೆಚ್ ಡಿ ಕೋಟೆ ಮತ್ತು ಸರಗೂರು ತಾಲೂಕು ಅಧ್ಯಕ್ಷ ಐಡಿಯಾ ವೆಂಕಟೇಶ್ ನೇತೃತ್ವದಲ್ಲಿ ಧರಣಿ ನಡೆಸಿದ ಪ್ರತಿಭಟನಾಕಾರರು,  ನಮ್ಮ ಸಮಾಜದ ಜಾಗವನ್ನು ಒತ್ತುವರಿ ಮಾಡಿಕೊಂಡು ಪದೇ ಪದೇ ನಮ್ಮ ಮೇಲೆಯೇ  ದೌರ್ಜನ್ಯ ನಡೆಸುತ್ತಿರುವ ಸೋಮೇಶ್ ಗೌಡ ಹಾಗೂ ಅವರ ಮಕ್ಕಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು.  ಒತ್ತುವರಿ ತೆರವುಗೊಳಿಸಿ,  ನಮ್ಮ ಸಮಾಜದ ವಿದ್ಯಾರ್ಥಿನಿಲಯ ನಿರ್ಮಾಣಕ್ಕೆ ಅವಕಾಶ ಮಾಡಿಕೊಡಬೇಕೆಂದು ಒತ್ತಾಯಿಸಿದರು. 

(ಬಾಕ್ಸ್ )

ಏನಿದು ವಿವಾದ? 

1963 ರಲ್ಲಿ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ 11 ಸಮುದಾಯಗಳ ವಿದ್ಯಾರ್ಥಿನಿಲಯ ನಿರ್ಮಾಣಕ್ಕೆ ತಾಲೂಕಿನ ಪಡುಕೋಟೆ  ಸರ್ವೇ ನಂಬರ್ ಒಂದರಲ್ಲಿ 180 ಎಕರೆ ಜಮೀನು ಮಂಜೂರು ಮಾಡಲಾಗಿದ್ದು, ಈ ಪೈಕಿ  ಬ್ಲಾಕ್ ನಂಬರ್ 790, 791, 792, 793,  794, 795, 796 ಮತ್ತು 797 ರವರೆಗೆ ಭೋವಿ ಸಮಾಜಕ್ಕೆ 15  ಎಕರೆ ಜಮೀನು ಮಂಜೂರು ಮಾಡಿಕೊಡಲಾಗಿದೆ. ಈ ಸಂಬಂಧ ಭೋವಿ ಸಮಾಜ ಕಂದಾಯ ಪಾವತಿಸುತ್ತಾ ಬರುತ್ತಿದೆ.  ವರ್ಷಗಳು ಕಳೆಯುತ್ತಿದ್ದಂತೆ ಜಮೀನು ಒತ್ತುವರಿಯಾದ ಹಿನ್ನೆಲೆ ತೆರವು ಮಾಡಿಸಿಕೊಡುವಂತೆ ಮನವಿ ಮಾಡಿದ್ದ ಹಿನ್ನೆಲೆ  30 ಏಪ್ರಿಲ್ 2026 ರಂದು ತಹಸೀಲ್ದಾರ್ ಹಾಗೂ ಹೆಚ್ ಡಿ ಕೋಟೆ ಠಾಣೆ ಪೊಲೀಸರು, ಒತ್ತುವರಿ ತೆರವು ಮಾಡಿಸಿ, ಸ್ಥಳ ಗುರುತಿಸಿಕೊಡುತ್ತಾರೆ. ಮುಂದಿನ ದಿನಗಳಲ್ಲಿ ಮತ್ತೆ ತೊಂದರೆ ಆಗಬಾರದೆಂಬ ನಿಟ್ಟಿನಲ್ಲಿ ಅಂದೇ ತಂತಿ ಕಂಬಗಳನ್ನು ಅಳವಡಿಸಲಾಗಿತ್ತು.  ಆದರೆ  02-06-2026 ರಂದು ಸೋಮೇಶ್ ಗೌಡ ಮತ್ತು ಅವರ ಮಕ್ಕಳು ತಡರಾತ್ರಿ ಅತಿಕ್ರಮ ಪ್ರವೇಶ ಮಾಡಿ, ಭೋವಿ ಸಮಾಜದ ಜಮೀನಿನಲ್ಲಿ ಅಳವಡಿಸಲಾಗಿದ್ದ ತಂತಿ ಕಲ್ಲುಗಳನ್ನು ಕಿತ್ತು ಬೀಸಾಡಿದ್ದಾರೆ. 

ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದರೂ  ಕ್ಯಾರೇ ಎನ್ನದೆ  ಮತ್ತೆ ಮತ್ತೆ ಅತಿಕ್ರಮ ಪ್ರವೇಶ ಮಾಡಿ ಉದ್ದಟತನ ಮೆರೆಯುತ್ತಿದ್ದಾರೆ. ಈ ಬಗ್ಗೆ ತಹಸೀಲ್ದಾರ್ ಹಾಗೂ ಪೊಲೀಸರ ಗಮನಕ್ಕೂ ತಂದರೂ ಅವರ ವಿರುದ್ಧ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಹೆಚ್ ಡಿ ಕೋಟೆ ಮತ್ತು ಸರಗೂರು ತಾಲೂಕು ಭೋವಿ ಸಮಾಜದ ಅಧ್ಯಕ್ಷ ಐಡಿಯಾ ವೆಂಕಟೇಶ್ ಆರೋಪ ಮಾಡಿದರು. 

ಪ್ರತಿಭಟನಾ ಸ್ಥಳಕ್ಕೆ ತಹಸೀಲ್ದಾರ್ ಶ್ರೀನಿವಾಸ್, ಸರ್ಕಲ್ ಇನ್ಸ್ಪೆಕ್ಟರ್ ಗಂಗಾಧರ್ ಭೇಟಿ ನೀಡಿ, ಪ್ರತಿಭಟನಾಕಾರರ ಅಹವಾಲು ಆಲಿಸಿ ನ್ಯಾಯ ಕೊಡಿಸುವ ಭರವಸೆ ನೀಡಿದರು. 

(ಕೋಟ್)

ಭೋವಿ ಸಮಾಜಕ್ಕೆ ಅನ್ಯಾಯವಾಗಲು ನಾವು ಬಿಡುವುದಿಲ್ಲ. ಜಮೀನು ವಿವಾದ ಸಂಬಂಧ ಒತ್ತುವರಿದಾರರು ಕೋರ್ಟ್ ನಲ್ಲಿ ದಾವೆ ಹೂಡಿರುವುದರಿಂದ ನಾಳೆಯೇ ಭೋವಿ ಸಮಾಜಕ್ಕೆ ಜಮೀನು ಮಂಜೂರಾಗಿರುವ ಬಗ್ಗೆ ಸಮಪರ್ಕ ದಾಖಲೆಗಳನ್ನು ಕೋರ್ಟ್ ಗೆ ಸಲ್ಲಿಸುತ್ತೇವೆ. 

–  ಶ್ರೀನಿವಾಸ್, ತಹಸೀಲ್ದಾರ್ 

ಪ್ರತಿಭಟನೆಯಲ್ಲಿ ಶ್ರೀ ಸಿದ್ದರಾಮೇಶ್ವರ ಸ್ವಾಮೀಜಿಗಳು, ಕವಿ ಸ್ವಾಮೀಜಿಗಳು, ಭೋವಿ  ಸಮಾಜ ನಿಗಮದ ಮಾಜಿ ಅಧ್ಯಕ್ಷ ಜಿ ವಿ ಸೀತರಾಮ್, ಮುಖಂಡರಾದ ಎಸ್ ವಿಜಯಕುಮಾರ್, ಪಿ ಬಸವರಾಜು, ಜಿ ನಾಗರಾಜು, ಪಿಎಲ್ ಚಿನ್ನಸ್ವಾಮಿ, ಪಿ ಮಲ್ಲಿಯ, ಗಿರಿಯಾ ಭೋವಿ,  ಜಿ ಪುಟ್ಟರಾಜು, ವಿ ಶ್ರೀನಿವಾಸ್, ಪಿ ಮಾದಪ್ಪ, ರಾಜು, ವೆಂಕಟೇಶ್, ವಡ್ಡರಗುಡಿ ರವಿ, ರಘು, ಬಸಪ್ಪ, ಕೃಷ್ಣ ಭೋವಿ, ಮಾಲಾಭೋವಿ, ಜಿವಿ ಮಧುಸೂದನ್, ನಿಂಗಭೋವಿ, ಶ್ರೀನಿವಾಸ್, ನಾಗರಾಜು, ಈಶ್ವರ್, ಪ್ರದೀಪ್, ಶೇಖರ್, ಎನ್ ಡಿ ರಾಜಣ್ಣ, ಆರ್ ವಿ ನಾಗರಾಜು, ಮಹದೇವ, ನಾರಾಯಣ, ಮುರುಳಿ, ದಾಸಭೋವಿ, ರಾಜೇಶ್, ಸೋಮಶೇಖರ್, ಕರಿಯಪ್ಪ, ಕಾಳಪ್ಪ, ಮಹದೇವ, ಬಿಳಿಯಪ್ಪ, ಸೇರೊದಂತೆ  ವಿವಿಧ ಗ್ರಾಮಗಳ ಭೋವಿ ಸಮಾಜದ ಗ್ರಾಮಸ್ಥರು, ಮಹಿಳೆಯರು  ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು.