
• ರಂಗೋಲಿ ಸ್ಪರ್ಧೆಯಲ್ಲಿ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಸ್ಪರ್ಧಿಗಳು ಭಾಗಿ
ಮೈಸೂರು: ನಗರದಲ್ಲಿರುವ ವಿಶ್ವವಿಖ್ಯಾತ ಅಂಬಾ ವಿಲಾಸ ಅರಮನೆಯ ಆವರಣದಲ್ಲಿ ಮಂಗಳವಾರ ಮುಂಜಾನೆ ತರಾವರಿಯ ಬಣ್ಣ, ಬಣ್ಣದ ರಂಗೋಲಿಗಳು ಅರಳಿದ್ದವು. ವಿವಿಧ ಜಿಲ್ಲೆಗಳಿಂದ ಬೆಳ್ಳಂ ಬೆಳಗ್ಗೆನೇ ಅರಮನೆ ಆವರಣಕ್ಕೆ ಬಣ್ಣ, ಬಣ್ಣದ ರಂಗೋಲಿಗಳೊAದಿಗೆ ಆಗಮಿಸಿದ ಮಹಿಳೆಯರು ತಮ್ಮ ಸುಂದರವಾದ ಕೈಚಳಕದಿಂದ ಚೆಂದ, ಚೆಂದವಾದ ರಂಗೋಲಿಗಳನ್ನು ಬಿಡಿಸಿದರು. ಆ ಮೂಲಕ ಅರಮನೆಯ ಆವರಣಕ್ಕೆ ಹೊಸ ಮೆರಗು ನೀಡಿದರು.
ಅರಮನೆ ಆವರಣದಲ್ಲಿ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ರಂಗೋಲಿ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಒಟ್ಟು 265ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿ ತಮ್ಮ ಕಲಾಕೌಶಲವನ್ನು ಪ್ರದರ್ಶಿಸಿದ್ದರು.
ಅರಮನೆಯ ಮುಂಭಾಗದ ಅಂಗಳದಲ್ಲಿ ಸ್ಪರ್ಧಿಗಳು ಬಿಡಿಸಿದ ವೈವಿಧ್ಯಮಯ ಹಾಗೂ ಸಾಂಪ್ರದಾಯಿಕ ರಂಗೋಲಿಗಳು, ದಸರಾ ಸಂಸ್ಕöÈತಿ ಮತ್ತು ನಾಡಿನ ಪರಂಪರೆಯನ್ನು ಸಾರುವ ಚಿತ್ರಕಲಾಕೃತಿಗಳು ಸಾರ್ವಜನಿಕರ ಹಾಗೂ ಪ್ರವಾಸಿಗರ ಗಮನ ಸೆಳೆದವು. ಸ್ಪರ್ಧೆಯಲ್ಲಿ ಮೈಸೂರಿನ 63 ವರ್ಷದ ಸರಸಮ್ಮ ಪ್ರಥಮ ಬಹುಮಾನವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಶ್ರೀರAಗಪಟ್ಟಣ ತಾಲೂಕಿನ ಗಾಮಿನಹಳ್ಳಿಯ ಸಾವಿತ್ರಿ ದ್ವಿತೀಯ ಬಹುಮಾನ,
ಮೈಸೂರಿನ ವಿಜಯನಗರದ ನಿವಾಸಿ ಮಾಲಾ ಎಳೆ ರಂಗೋಲಿ ಬಿಡಿಸಿ ತೃತೀಯ ಬಹುಮಾನವನ್ನು ಪಡೆದುಕೊಂಡಿದ್ದಾರೆ.ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೂ ಪ್ರಮಾಣಪತ್ರ ವಿತರಿಸಲಾಯಿತು.
ರಂಗೋಲಿ ಸ್ಪರ್ಧೆಗೆ ಮಹಿಳೆಯರೊಂದಿಗೆ ರಂಗೋಲಿಯನ್ನು ಬಿಡಿಸುವ ಮೂಲಕ ಚಾಲನೆ ನೀಡಿದ ಕೃಷ್ಣರಾಜ ಕ್ಷೇತ್ರದ ಶಾಸಕ ಟಿ. ಎಸ್. ಶ್ರೀವತ್ಸ ಮಾತನಾಡಿ, ಕೇಂದ್ರ ಸರ್ಕಾರವು ಕರ್ನಾಟಕದ ರಾಜ್ಯಪಾಲರನ್ನಾಗಿಯೂ ಮಹಿಳೆಯರನ್ನೇ (ಸುಧಾ ಯಾದವ್) ನೇಮಕ ಮಾಡುವ ಮೂಲಕ ಮಹಿಳೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದೆ ಎಂದು ಹೇಳಿದರು.
ದಸರಾ ನಾಡಹಬ್ಬದ ಸಂದರ್ಭದಲ್ಲಿ ನವರಾತ್ರಿಯ ಹಿನ್ನೆಲೆಯಲ್ಲಿ ತಾಯಂದಿರು ಬೆಳಿಗ್ಗೆಯಿಂದಲೇ ಬಂದು ರಂಗೋಲಿ ಸ್ಪರ್ಧೆಯಲ್ಲಿ ಉತ್ಸಾಹದಿಂದ ಭಾಗವಹಿಸಿದ್ದಾರೆ. ನವರಾತ್ರಿಯ ಈ ಸಂದರ್ಭದಲ್ಲಿ ನವದುರ್ಗೆಯರನ್ನು ನೆನೆಸಿಕೊಂಡು, ನವಧಾನ್ಯಗಳಲ್ಲಿ ರಂಗೋಲಿ ಬಿಡಿಸಿ ಎಲ್ಲರೂ ಸಂಭ್ರಮಿಸುತ್ತಿದ್ದಾರೆ ಎಂದು ಅವರು ಹೇಳಿದರು. ಮೈಸೂರು ಜಿಲ್ಲೆಯಾದ್ಯಂತ 265ಕ್ಕೂ ಹೆಚ್ಚು ಹೆಣ್ಣುಮಕ್ಕಳು ಈ ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಲಕ್ಷಿ÷್ಮÃಕಾಂತ ರೆಡ್ಡಿ ಜಿ,ಅಪರ ಜಿಲ್ಲಾಧಿಕಾರಿ ಆರ್. ಐಶ್ವರ್ಯ, ಮಹಿಳಾ ಮತ್ತು ಮಕ್ಕಳ ದಸರಾ ಉಪಸಮಿತಿ ಅಧ್ಯಕ್ಷರು ಚೂಡಾಮಣಿ, ಕಾರ್ಯದರ್ಶಿ ನಾಗರಾಜ್. ಆರ್, ಉಪವಿಶೇಷಾಧಿಕಾರಿಗಳು ಸವಿತಾ ಕೆ.ಜಿ.ಎಸ್,ಹಾಗೂ ಮತ್ತಿತರರು ಉಪಸ್ಥಿತರಿದ್ದರು.

