Skip to main content

3Kaala News

ಸುಭಾಷಿತ 

ಪಕ್ಕದಲ್ಲಿರುವವನ ತಟ್ಟೆಯಲ್ಲಿ ಏನಿದೆ ಅಂತ ಯಾವತ್ತೂ ಇಣುಕಿ ನೋಡಬೇಡ. ಕಾರಣ ಅಲ್ಲಿ ಜಾಸ್ತಿಯಿದ್ದರೆ, ನಿನಗೆ ಸಂಕಟವಾಗುತ್ತದೆ.ಅಲ್ಲಿ ಕಡಿಮೆ ಇದ್ದರೆ, ನಿನಗೆ ಅಹಂಕಾರ ಬರುತ್ತದೆ.ಎರಡೂ ಒಳ್ಳೆಯದಲ್ಲ.ನಮ್ಮ ತಟ್ಟೆಯನ್ನು ನಾವು ನೋಡಿಕೊಂಡಿದ್ದರೆ, ಸಿಗುವ ಸಂತೋಷವೇ ಬೇರೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಈ ಬಾರಿ ದಸರಾದ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿ ಹೊರುವ ಆನೆ ಯಾಗಿ ಪ್ರಶಾಂತ ಆಯ್ಕೆ


*ಧನಂಜಯ ಮೀಸಲು ಅಂಬಾರಿ ಆನೆ, ನಿಶಾನೆ ಆನೆಯಾಗಿ ಅಭಿಮನ್ಯು, ನೌಫತ್ ಆನೆಯಾಗಿ ಗೋಪಿ ಆಯ್ಕೆ
ಮೈಸೂರು; ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ 2026ರ ವಿಜಯದಶಮಿ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿಯನ್ನು ಹೊರುವ ಪ್ರಧಾನ ಆನೆಯಾಗಿ 54 ವರ್ಷ ವಯಸ್ಸಿನ, ಕಳೆದ 18 ವರ್ಷಗಳಿಂದ ಮೈಸೂರು ದಸರಾ ಮಹೋತ್ಸವದಲ್ಲಿ ಭಾಗವಹಿಸುತ್ತಿರುವ ಅನುಭವಿ ಪ್ರಶಾಂತ್ ಆನೆಯನ್ನು ಆಯ್ಕೆ ಮಾಡಲಾಗಿದೆ.
ಮೈಸೂರು ದಸರಾ ಕರ್ನಾಟಕದ ಭವ್ಯ ಸಾಂಸ್ಕöÈತಿಕ ಪರಂಪರೆ ಹಾಗೂ ಐತಿಹಾಸಿಕ ವೈಭವದ ಪ್ರತೀಕವಾಗಿದ್ದು, ವಿಜಯದಶಮಿಯಂದು ನಡೆಯುವ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿಯನ್ನು ಹೊತ್ತು ಸಾಗುವ ಆನೆಯ ಆಯ್ಕೆಗೆ ವಿಶೇಷ ಮಹತ್ವವಿದೆ. ಈ ಹಿನ್ನೆಲೆಯಲ್ಲಿ ಆನೆಗಳ ದೈಹಿಕ ಆರೋಗ್ಯ, ಭಾರ ಹೊರುವ ಸಾಮರ್ಥ್ಯ, ಬೆನ್ನಿನ ರಚನೆ, ನಡಿಗೆಯ ಸ್ಥಿರತೆ, ಸಹನಶಕ್ತಿ, ಸ್ವಭಾವ, ಹಿಂದಿನ ಅನುಭವ ಹಾಗೂ ತರಬೇತಿಯಲ್ಲಿನ ಕಾರ್ಯಕ್ಷಮತೆಯನ್ನು ಸಮಗ್ರವಾಗಿ ಪರಿಶೀಲಿಸಿ ಪ್ರಶಾಂತ್ ಆನೆಯನ್ನು ಆಯ್ಕೆ ಮಾಡಲಾಗಿದೆ.
ಪ್ರಶಾಂತ ಆನೆಯ ಪ್ರಮುಖ ವೈಶಿಷ್ಟ÷್ಯಗಳು;
18 ವರ್ಷಗಳ ದಸರಾ ಅನುಭವ: ಪ್ರಶಾಂತ್ ಆನೆಯು ಕಳೆದ 18 ವರ್ಷಗಳಿಂದ
ಮೈಸೂರು ದಸರಾ ಮಹೋತ್ಸವದಲ್ಲಿ ಭಾಗವಹಿಸುತ್ತಿದೆ. ಅರಮನೆಯ ವಾತಾವರಣ, ಮೆರವಣಿಗೆಯ ಮಾರ್ಗ, ಜನಸಂದಣಿ, ವಾದ್ಯ ಘೋಷ ಹಾಗೂ ಮಾವುತರ ನಿರ್ದೇಶನಗಳಿಗೆ ಹೊಂದಿಕೊAಡಿರುವ ಸುದೀರ್ಘ ಅನುಭವವು ಅದರ ಪ್ರಮುಖ ಸಾಮರ್ಥ್ಯವಾಗಿದೆ.
ಅಂಬಾರಿ ಹೊರುವುದಕ್ಕೆ ಅನುಕೂಲಕರವಾದ ಬೆನಿನ ರಚನೆ:
ಪ್ರಶಾಂತ್ ಆನೆಯ ಬೆನ್ನಿನ ಮೇಲ್ಬಾಗವು ತುಲನಾತ್ಮಕವಾಗಿ ಸಮತಟ್ಟಾಗಿದ್ದು, ಅಂಬಾರಿಯನ್ನು ಸ್ಥಿರವಾಗಿ ಮತ್ತು ಸಮತೋಲನದಿಂದ ಇರಿಸಲು ಅನುಕೂಲಕರವಾಗಿದೆ. ಚಿನ್ನದ ಅಂಬಾರಿ ಹೊರುವ ಆನೆಯ ಆಯ್ಕೆಯಲ್ಲಿ ಇದು ಅತ್ಯಂತ ಪ್ರಮುಖವಾದ ದೈಹಿಕ ವೈಶಿಷ್ಟ÷್ಯವಾಗಿದೆ.
ತರಬೇತಿಯಲ್ಲಿ ಸಾಬೀತಾದ ಭಾರ ಹೊರುವ ಸಾಮರ್ಥ್ಯ:
ಪ್ರಶಾಂತ್ ಆನೆಯು ನಿಗದಿತ ಮೆರವಣಿಗೆ ಮಾರ್ಗದಲ್ಲಿ 11 ಕಿ.ಮೀ. ದೂರದ ತರಬೇತಿಯಲ್ಲಿ ಭಾಗವಹಿಸಿದ್ದು, 700 ಕೆ.ಜಿ. ಹಾಗೂ 1,000 ಕೆ.ಜಿ. ಭಾರವನ್ನು ಒಳಗೊಂಡ ಅಭ್ಯಾಸಗಳನ್ನು ತೃಪ್ತಿಕರವಾಗಿ ಪೂರ್ಣಗೊಳಿಸಿದೆ. ಮರದ ಅಂಬಾರಿ ಮತ್ತು ಮರಳು ಮೂಟೆಗಳೊಂದಿಗೆ ನಡೆಸಲಾದ ತರಬೇತಿಯಲ್ಲಿಯೂ ಉತ್ತಮ ಕಾರ್ಯಕ್ಷಮತೆಯನ್ನು ಪ್ರದರ್ಶಿಸಿದೆ.
ಶಾಂತ ಸ್ವಭಾವ ಮತ್ತು ನಿಯಂತ್ರಣಕ್ಕೆ ಸ್ಪಂದಿಸುವ ಗುಣ:
ಪ್ರಶಾಂತ್ ಆನೆಯ ಶಾಚಿತ ಸ್ವಭಾವ, ಮಾವುತರ ನಿರ್ದೇಶನಗಳಿಗೆ ಸ್ಪಂದಿಸುವ ಗುಣ ಹಾಗೂ ಮೆರವಣಿಗೆಯ ವಾತಾವರಣಕ್ಕೆ ಹೊಂದಿಕೊಳ್ಳುವ ಅನುಭವವು ಅದರ ಆಯ್ಕೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಜನಸಂದಣಿ ಮತ್ತು ವಾದ್ಯಘೋಷಗಳ ನಡುವೆ ಶಿಸ್ತುಬದ್ಧವಾಗಿ ಸಾಗಬೇಕಾದ ಅಂಬಾರಿ ಆನೆಗೆ ಈ ಗುಣಗಳು ಅತ್ಯಂತ ಅಗತ್ಯವಾಗಿವೆ.
ಅನುಭವ ಮತ್ತು ದೈಹಿಕ ಸಾಮರ್ಥ್ಯದ ಸಮನ್ವಯ: 54 ವರ್ಷ ವಯಸ್ಸಿನ ಪ್ರಶಾಂತ್ ಆನೆಯ ಸುದೀರ್ಘ ಅನುಭವ, ದೈಹಿಕ ರಚನೆ, ತರಬೇತಿಯಲ್ಲಿ ಪ್ರದರ್ಶಿಸಿರುವ ಸಾಮರ್ಥ್ಯ ಹಾಗೂ ಸಮತೋಲನಯುತ ನಡಿಗೆಯನ್ನು ಪರಿಗಣಿಸಿದಾಗ, ಅದು ಪ್ರಧಾನ ಅಂಬಾರಿ ಆನೆಯ ಜವಾಬ್ದಾರಿಗೆ ಸೂಕ್ತವಾಗಿದೆ ಎಂದು ಸಮಿತಿಯು ಅಭಿಪ್ರಾಯಪಟ್ಟಿದೆ.
ಆನೆಗಳ ಆಯ್ಕೆ ವೈಜ್ಞಾನಿಕ ಹಾಗೂ ಸಮಗ್ರ ಪರಿಶೀಲನೆ;
ಪ್ರಸ್ತುತ ದಸರಾ ಮಹೋತ್ಸವಕ್ಕೆ ಆಗಮಿಸಿರುವ ಆನೆಗಳಿಗೆ ಮೈಸೂರು ಅರಮನೆ ಆವರಣ ಹಾಗೂ ನಿಗದಿತ ಮೆರವಣಿಗೆ ಮಾರ್ಗದಲ್ಲಿ ನಿಯಮಿತ ತರಬೇತಿ ನೀಡಲಾಗುತ್ತಿದೆ. ಪ್ರಶಾಂತ್,ಸುಗ್ರೀವ, ಧನಂಜಯ ಮತ್ತು ಏಕಲವ್ಯ ಸೇರಿದಂತೆ ವಿವಿಧ ಆನೆಗಳ ಮರಳು ಮೂಟೆ ಹಾಗೂ ಮರದ ಅಂಬಾರಿ ಹೊರುವ ತರಬೇತಿಯನ್ನು ಪರಿಶೀಲಿಸಲಾಗಿದೆ. ಆನೆಗಳ ನಡಿಗೆ, ಸಮತೋಲನ, ಭಾರ ಹೊರುವ ಸಾಮರ್ಥ್ಯ, ಸಹನಶಕ್ತಿ ಹಾಗೂ ವರ್ತನೆಯನ್ನು ಪಶುವೈದ್ಯಾಧಿಕಾರಿಗಳು, ಅರಣ್ಯಾಧಿಕಾರಿಗಳು ಮತ್ತು ಅನುಭವಿ ಮಾವುತರ ಸಹಕಾರದೊಂದಿಗೆ ಮೌಲ್ಯಮಾಪನ ಮಾಡಲಾಗಿದೆ. ಇದಲ್ಲದೆ, ಜಂಬೂಸವಾರಿಯ ಸಂದರ್ಭದಲ್ಲಿ ಉಂಟಾಗುವ ಸಿಡಿಮದ್ದಿನ ಶಬ್ದಕ್ಕೆ ಆನೆಗಳು ಹೊಂದಿಕೊಳ್ಳುವAತೆ ವಿಶೇಷ ತಾಲೀಮುಗಳನ್ನು ನೀಡಲಾಗುತ್ತಿದೆ.
ಈ ಎಲ್ಲ ಅಂಶಗಳ ತುಲನಾತ್ಮಕ ಪರಿಶೀಲನೆಯ ನಂತರ ಪ್ರಶಾಂತ್ ಆನೆಯ ಸುದೀರ್ಘ ಅನುಭವ, ಅಂಬಾರಿ ಸ್ಥಾಪನೆಗೆ ಅನುಕೂಲಕರವಾದ ಬೆನ್ನಿನ ರಚನೆ, ತರಬೇತಿಯಲ್ಲಿ ಸಾಬೀತಾಗಿರುವ ಸಾಮರ್ಥ್ಯ ಹಾಗೂ ಶಾಂತ ಸ್ವಭಾವವು ಅದರ ಆಯ್ಕೆಗೆ ಪ್ರಮುಖ ಆಧಾರಗಳಾಗಿವೆ.
ಇತರೆ ಆನೆಗಳ ಜವಾಬ್ದಾರಿ;
ಜಂಬೂಸವಾರಿಯ ಸುಗಮ ನಿರ್ವಹಣೆಗಾಗಿ ಧನಂಜಯ ಆನೆಯನ್ನು ಮೀಸಲು ಅಂಬಾರಿ ಆನೆಯಾಗಿ, ಅಭಿಮನ್ಯು ಆನೆಯನ್ನು ನಿಶಾನೆ ಆನೆಯಾಗಿ ಹಾಗೂ ಗೋಪಿ ಆನೆಯನ್ನು ನೌಫತ್ ಆನೆಯಾಗಿ ನಿಯೋಜಿಸಲು ಶಿಫಾರಸು ಮಾಡಲಾಗಿದೆ.
ಎಲ್ಲಾ ಆನೆಗಳ ಆರೋಗ್ಯ ಸುರಕ್ಷತೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಪಶುವೈದ್ಯಕೀಯ ಮೇಲ್ವಿಚಾರಣೆ, ಸೂಕ್ತ ವಿಶ್ರಾಂತಿ, ಆಹಾರ ಹಾಗೂ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಪ್ರಧಾನ ಅಂಬಾರಿ ಆನೆಯ ನಿಯೋಜನೆಯು ಅಂತಿಮ ಪಶುವೈದ್ಯಕೀಯ ಆರೋಗ್ಯ ಮತ್ತು ದೈಹಿಕ ಸಾಮರ್ಥ್ಯದ ದೃಢೀಕರಣಕ್ಕೆ ಒಳಪಟ್ಟಿರುತ್ತದೆ.
ಮೈಸೂರು ದಸರಾ ಮಹೋತ್ಸವದ ಭವ್ಯ ಪರಂಪರೆಯನ್ನು ಮುಂದುವರಿಸುವ ಜವಾಬ್ದಾರಿಯೊಂದಿಗೆ, ಅನುಭವ, ಸಾಮರ್ಥ್ಯ, ಶಾಂತ ಸ್ವಭಾವ ಮತ್ತು ದೈಹಿಕ ಸೂಕ್ತತೆಯ ಆಧಾರದ ಮೇಲೆ ಪ್ರಶಾಂತ್ ಆನೆಯನ್ನು ಈ ಬಾರಿಯ ಚಿನ್ನದ ಅಂಬಾರಿ ಹೊರುವ ಪ್ರಧಾನ ಆನೆಯಾಗಿ ಆಯ್ಕೆ ಮಾಡಲಾಗಿದೆ


ಅಂಬಾರಿ ಆನೆಯಾಗಿ ಪ್ರಶಾಂತ ಆಯ್ಕೆ; ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ
ಮೈಸೂರು; ಈ ಬಾರಿ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿ ಹೊರುವ ಆನೆಯಾಗಿ ಪ್ರಶಾಂತ ಆನೆಯಾಗಿ ಆಯ್ಕೆ ಮಾಡಲಾಗಿದೆ.
ಆನೆಗಳಿಗೆ ಎಲ್ಲಾ ಹಂತದ ತಾಲೀಮು ಮುಗಿದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು. ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂಬಾರಿ ಆನೆ ಆಯ್ಕೆ ವಿಚಾರ ಸೂಕ್ಷ÷್ಮವಾಗಿದೆ.
ಆನೆಗಳು ತಾಲೀಮಿನಲ್ಲಿ ನಡೆದುಕೊಂಡ ರೀತಿಯನ್ನ ಗಮನಿಸಿ, ಅಂಬಾರಿ ಆನೆಯಾಗಿ ಆಯ್ಕೆ ಮಾಡಲಾಗಿದೆ.
ಈ ಬಾರಿ ಪ್ರಶಾಂತ ಆನೆಯನ್ನ ಅಂಬಾರಿ ಹೊರುವುದಕ್ಕೆ ಆಯ್ಕೆ ಮಾಡಿದ್ದೀವಿ. ಪ್ರಶಾಂತ ಆನೆ ಎಲ್ಲಾ ರೀತಿಯಲ್ಲೂ ಅಂಬಾರಿ ಹೊರೋವುದಕ್ಕೆ ಸೂಕ್ತವಾಗಿದೆ. ಧನಂಜಯ ಆನೆಯನ್ನ ಮೀಸಲು ಅಂಬಾರಿ ಆನೆಯಾಗಿ ಇಟ್ಟಿದ್ದೀವಿ.
ಅಭಿಮನ್ಯು ನಿಶಾನೆ, ಗೋಪಿ ನೌಪತ್ ಆನೆ, ಅಂಬಾರಿ ಆನೆ ಜೊತೆ ರೂಪ ಚೈತ್ರ, ಕಾವೇರಿ ಆನೆ ಬರುತ್ತವೆ ಎಂದು ಹೇಳಿದರು.