Skip to main content

3Kaala News

ಸುಭಾಷಿತ 

ಪಕ್ಕದಲ್ಲಿರುವವನ ತಟ್ಟೆಯಲ್ಲಿ ಏನಿದೆ ಅಂತ ಯಾವತ್ತೂ ಇಣುಕಿ ನೋಡಬೇಡ. ಕಾರಣ ಅಲ್ಲಿ ಜಾಸ್ತಿಯಿದ್ದರೆ, ನಿನಗೆ ಸಂಕಟವಾಗುತ್ತದೆ.ಅಲ್ಲಿ ಕಡಿಮೆ ಇದ್ದರೆ, ನಿನಗೆ ಅಹಂಕಾರ ಬರುತ್ತದೆ.ಎರಡೂ ಒಳ್ಳೆಯದಲ್ಲ.ನಮ್ಮ ತಟ್ಟೆಯನ್ನು ನಾವು ನೋಡಿಕೊಂಡಿದ್ದರೆ, ಸಿಗುವ ಸಂತೋಷವೇ ಬೇರೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ದೇಶದ ಬಡತನ ಪ್ರಮಾಣ ೨೦೨೨-೨೩ ಶೇ ೨.೩ ಕ್ಕೆ ಇಳಿದಿರುವುದು ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಸಾಧನೆ;ಬಿಎಂ ಸಂತೋಷ್‌ಕುಮಾರ್


*ಬಡವರ ಬದುಕಿನಲ್ಲಿ ಬದಲಾವಣೆ ತಂದ ಕೇಂದ್ರ ಬಿಜೆಪಿ ಸರ್ಕಾರದ ಜನಪರ ಯೋಜನೆಗಳು!
ಮೈಸೂರು: ದೇಶದ ಬಡತನ ಪ್ರಮಾಣ ೨೦೨೨-೨೩ ಶೇ ೨.೩ ಕ್ಕೆ ಇಳಿದಿರುವುದು ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಸಾಧನೆಯಾಗಿದೆ ಎಂದು ಬಿಜೆಪಿ ಮೈಸೂರು ನಗರ ಮಾಧ್ಯಮ ಸಹ ಸಂಚಾಲಕ ಬಿ.ಎಂ.ಸAತೋಷ್‌ಕುಮಾರ್ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ದೇಶದಲ್ಲಿ ಬಡತನ ನಿರ್ಮೂಲನೆ ಮಾಡುವ ದಿಕ್ಕಿನಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರದ ಬಿಜೆಪಿ ಸರ್ಕಾರ ಮಹತ್ವದ ಹೆಜ್ಜೆಗಳನ್ನು ಇಟ್ಟಿದೆ. ಬಡವರ ಹೆಸರಿನಲ್ಲಿ ದಶಕಗಳ ಕಾಲ ರಾಜಕೀಯ ಮಾಡಿದವರು ಬಡವರ ಬದುಕನ್ನು ಬದಲಾಯಿಸಲು ಏನು ಮಾಡಿದರು ಎಂಬುದನ್ನು ದೇಶದ ಜನತೆ ಪ್ರಶ್ನಿಸಬೇಕಾದ ಕಾಲ ಬಂದಿದೆ ಎಂದಿದ್ದಾರೆ.
ವಿಶ್ವಬ್ಯಾಂಕ್‌ನ ವರದಿಯ ಪ್ರಕಾರ, ಭಾರತದಲ್ಲಿ ೨೦೧೧-೧೨ರಲ್ಲಿ ಶೇ. ೧೬.೨ರಷ್ಟಿದ್ದ ತೀವ್ರ ಬಡತನದ ಪ್ರಮಾಣ ೨೦೨೨?೨೩ರ ವೇಳೆಗೆ ಶೇ. ೨.೩ಕ್ಕೆ ಇಳಿದಿದೆ. ಇದು ದೇಶದ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಯ ಕುರಿತು ಚರ್ಚಿಸಲು ಮಹತ್ವದ ಅಂಕಿ-ಅAಶವಾಗಿದೆ.
ಪ್ರಧಾನಮAತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರವು ಉಚಿತ ಪಡಿತರ, ಜನಧನ್ ಬ್ಯಾಂಕ್ ಖಾತೆ, ಉಜ್ವಲ ಅಡುಗೆ ಅನಿಲ, ಆಯುಷ್ಮಾನ್ ಭಾರತ್ ಆರೋಗ್ಯ ಯೋಜನೆ ಮತ್ತು ಪ್ರಧಾನಮಂತ್ರಿ ಆವಾಸ್ ಯೋಜನೆಗಳ ಮೂಲಕ ಬಡ ಕುಟುಂಬಗಳಿಗೆ ನೆರವು ನೀಡಿದೆ.
ಬಡವರಿಗೆ ಮನೆ, ಹಸಿದವರಿಗೆ ಅನ್ನ, ರೋಗಿಗಳಿಗೆ ಆರೋಗ್ಯ ರಕ್ಷಣೆ ಮತ್ತು ಸಾಮಾನ್ಯ ಜನರಿಗೆ ಸರ್ಕಾರಿ ಯೋಜನೆಗಳ ಸೌಲಭ್ಯ ತಲುಪಿಸುವುದು ಸರ್ಕಾರದ ಆದ್ಯತೆಯಾಗಬೇಕು ಎಂಬ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ಸಾಧನೆಗಳನ್ನು ಒಪ್ಪಿಕೊಳ್ಳಲು ರಾಜಕೀಯ ಪೂರ್ವಾಗ್ರಹ ಅಡ್ಡಿಯಾಗಬಾರದು. ಅದೇ ರೀತಿ, ಬಡತನ ಸಂಪೂರ್ಣವಾಗಿ ನಿರ್ಮೂಲನೆಯಾಗಿದೆ ಎಂದು ಹೇಳಿಕೊಂಡು ಆತ್ಮತೃಪ್ತಿ ಪಡುವುದೂ ಸರಿಯಲ್ಲ. ಪ್ರತಿಯೊಬ್ಬ ಬಡವನಿಗೂ ಉತ್ತಮ ಜೀವನ, ಉದ್ಯೋಗ, ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯ ದೊರೆಯುವವರೆಗೂ ಸರ್ಕಾರದ ಪ್ರಯತ್ನ ಮುಂದುವರಿಯಬೇಕು. ಬಡತನದ ವಿರುದ್ಧದ ಹೋರಾಟಕ್ಕೆ ರಾಜಕೀಯ ಬಣ್ಣ ಬೇಡ; ಬಡವರ ಬದುಕಿನಲ್ಲಿ ನಿಜವಾದ ಬದಲಾವಣೆ ಬರಬೇಕು ಎಂದು ಹೇಳಿದ್ದಾರೆ.
ಕೇಂದ್ರದ ಬಿಜೆಪಿ ಸರ್ಕಾರದ ಜನಪರ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪುವಂತೆ ನೋಡಿಕೊಳ್ಳುವುದು ಮತ್ತು ದೇಶವನ್ನು ಬಡತನಮುಕ್ತ ಭಾರತದತ್ತ ಕೊಂಡೊಯ್ಯುವುದು ನಮ್ಮೆಲ್ಲರ ಜವಾಬಾýರಿಯಾಗಿದೆ ಎಂದು ತಿಳಿಸಿದ್ದಾರೆ.