ಮಳೆ ತಂದ ಅನಾಹುತ.. ರೈತರ ಬದುಕು ಅತಂತ್ರ; ಮನೆ ಮೇಲೆ ಬಿದ್ದ ತೆಂಗಿನ ಮರ.. ಕುಟುಂಬಸ್ಥರು ಪ್ರಾಣಾಪಾಯದಿಂದ ಪಾರು
ಮೈಸೂರು; ಶುಕ್ರವಾರ ತಡರಾತ್ರಿ ಸುರಿದ ಬಿರುಗಾಳಿ ಸಹಿತ ಮಳೆಗೆ ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ಅನೇಕ ಗ್ರಾಮಗಳಲ್ಲಿ ಮಳೆ ಹಾನಿ ಸಂಭವಿಸಿದ್ದು ಜನಜೀವನ ಅಸ್ತವ್ಯತಗೊಂಡಿದ್ದು, ರೈತರ ಬದುಕು ಮುರಾಬಟ್ಟೆಯಾಗಿದೆ.ಅಬ್ಬರಿಸಿ ಬೊಬ್ಬಿರಿದ ಗಾಳಿ ಸಹಿತ ಮಳೆಗೆ ಹೆಚ್.ಡಿ.ಕೋಟೆ ತಾಲೂಕಿನ ತೊರವಳ್ಳಿ ಗ್ರಾಮದ ಕೆಂಪನಾಯಕ ಅವರ ಮನೆಯ ಮೇಲ್ಛಾವಣಿ ಹಾರಿಹೋಗಿ, ಹೆಂಚುಗಳು ಒಡೆದು ಹೋಗಿವೆ. ಚರಂಡಿ ನೀರು ನುಗ್ಗಿದ ಪರಿಣಾಮ ಮನೆಯೊಳಗಿದ್ದ ರಾಗಿ, ತೊಗರಿ ಸೇರಿ ದವಸ ಧಾನ್ಯಗಳು ನೀರುಪಾಳಾಗಿವೆ. ಪರ್ಯಾಯ ವ್ಯವಸ್ಥೆ ಇಲ್ಲದೆ ಇಡೀ ರಾತ್ರಿ ಜಾಗರಣೆ ಮಾಡಿದ್ದಾರೆ.ಮಳೆಯ ಪ್ರಮಾಣ ಸಾಮಾನ್ಯವಾಗಿತ್ತಾದರೂ ವ್ಯಾಪಕ ಗಾಳಿಗೆ ತುಂಬಸೋಗೆ ಗ್ರಾಮದಿಂದ ಇಟ್ನ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಮಾರ್ಗದಲ್ಲಿ ವಿದ್ಯುತ್ ಕಂಬ ಮುರಿದು ಬಿದ್ದಿದ್ದೆ. ಪರಿಣಾಮ ಸಂಪರ್ಕ ಕಡಿತಗೊಂಡು ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣ ಆಗಿತ್ತು. ಜೊತೆಗೆ ಸಮೀಪದಲ್ಲೇ ಇದ್ದ ಬೃಹತ್ ಮರವೊಂದಕ್ಕೆ ಸಿಡಿಲು ತಾಕಿ ನೆಲಕ್ಕಪ್ಪಳಿಸಿದೆ.ಬಿಡುಗಲು ಸಮೀಪದ ಕೆಮ್ಮಣ್ಣುಗುಂಡಿ ಬಳಿ ನಾಲ್ಕೆöÊದು ಮರಗಳು ಬಿದ್ದು, ರಸ್ತೆಗಳನ್ನೆಲ್ಲ ಆವರಿಸಿಕೊಂಡಿದ್ದರಿAದ ಶನಿವಾರ ಮುಂಜಾನೆಯೇ ಸರಗೂರು-ಎಚ್.ಡಿ.ಕೋಟೆ ಮಾರ್ಗದಲ್ಲಿ ರಸ್ತೆ ಸಂಚಾರವಿರಲಿಲ್ಲ. ಅಕ್ಕಪಕ್ಕದ ಗ್ರಾಮಸ್ಥರು ಸ್ಥಳಕ್ಕಾಗಮಿಸಿ ಮರಗಳನ್ನು ತೆರವು ಮಾಡಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.ಮಳೆ ಅನಾಹುತ ಆಸ್ಪತ್ರೆಗೆ ದಾಖಲು: ಹೂವಿನ ಕೊಳೆ ಗ್ರಾಮದ ರೈತ ಪ್ರತಾಪ್ ಅವರ ಜಮೀನಿನಲ್ಲಿ ಬೆಳೆದಿದ್ದ ನೇಂದ್ರ ಬಾಳೆ ಬೆಳೆ , ಹುಲಿಕುರ ಗ್ರಾಮದ ತಮ್ಮಯ್ಯನಾಯಕರ ಜಮೀನಲ್ಲಿ ತಲಾ ಎರಡು ಎಕರೆ ಬಾಳೆ , ಬಸಾಪುರ ಮಹಾದೇವನಾಯಕ ೧ ಎಕರೆ ಬಾಳೆ ಸಂಪೂರ್ಣವಾಗಿ ನೆಲೆಕಚ್ಚಿದೆ.ದೇವಲಾಪುರ ಗ್ರಾಮದ ಮಂಗಳಮ್ಮ ಅವರ ಮನೆ ಹಾಗೂ ಅಂಕನಾಥಪುರದಲ್ಲಿ ಮನೆಯೊಂದು ಜಖಂಗೊAಡಿದೆ. .ಹ್ಯಾಂಡ್ ಪೋಸ್ಟ್ ಪಟ್ಟಣದ ಮಹಾದೇವಮ್ಮ ಅವರ ಮನೆಯ ಮೇಲ್ಛಾವಣಿ ಹಾರಿದ ಪರಿಣಾಮ ತಾಯಿ ಮಗುವಿಗೆ ಗಾಯವಾಗಿದ್ದು, ಹೆಚ್ ಡಿ ಕೋಟೆಯ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ, ಪುರಸಭೆ ಮುಖ್ಯಧಿಕಾರಿ ಪಿ.ಸುರೇಶ್ ಭೇಟಿ ನೀಡಿ ಗಾಯಳುಗಳ ಆರೋಗ್ಯ ವಿಚಾರಿಸಿದರು.*ಇಟ್ನ ಗ್ರಾಮದಲ್ಲಿ ಸಾಕಷ್ಟು ಹಾನಿ*ಇಟ್ನ ಗ್ರಾಮದ ಮರಿನಾಯ್ಕರ ಜಮೀನಿನ ಒಂದು ಎಕರೆ ಬಾಳೆ, ರಾಮನಾಯಕರ ಜಮೀನಿನಲ್ಲಿ ಒಂದು ಎಕರೆ ತೆಂಗಿನ ಮರಗಳು ಧರೆಗುರುಳಿವೆ. ರವಿಸ್ವಾಮಿ ಹಾಗೂ ದೊಡ್ಡಯ್ಯ ಅವರ ಮನೆಯ ಮೇಲ್ಛಾವಣಿ ಹಾರಿಹೋಗಿದರೆ,, ಇದೇ ಗ್ರಾಮದ ಚನ್ನನಾಯಕ ಅವರು ಬೆಳೆದಿದ್ದ ಐದು ಎಕರೆ ಬಾಳೆ ನೆಲೆಸಮವಾಗಿದೆ.. ಚಿಕ್ಕಮ್ಮ ಅವರ ಮನೆಯ ಸಮೀಪವಿದ್ದ ತೆಂಗಿನ ಮರ ಮನೆ ಮೇಲೆ ಬಿದ್ದಿದೆ. ಅದೃಷ್ಟವಶಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.