
ಮಾಡಿಕೊಂಡು ತಿಂದು ನೋಡಿ ರವೆ ವೆಜಿಟೇಬಲ್ ಟೋಸ್ಟ್, ರವೆ ಪಡ್ಡು, ರವೆ ದೋಸೆ
ಪ್ರತಿಯೊಂದು ಮಹಿಳೆ ಬೆಳಗ್ಗಿನ ಚಿಂತೆ ಎಂದರೆ ತಿಂಡಿ ಏನು ಮಾಡುವುದು ಎಂದು. ಇವತ್ತು ಯಾವ ತಿಂಡಿ ಮಾಡುವುದು, ನಾಳೆ ಏನು ಮಾಡುವುದು ಎಂದು ಚಿಂತಿಸುತ್ತಾರೆ. ಅಂತವರಿಗೆ ಏನೇನು ತಿಂಡಿ ಮಾಡಬಹುದು ಎಂಬ ರೆಸಿಪಿ ಇಲ್ಲಿದೆ ನೋಡಿ ಬೆಳಗಿನ ಉಪಹಾರವು ದಿನದ ಪ್ರಮುಖ ಊಟ. ಬೆಳಗ್ಗೆ ಆರೋಗ್ಯಕರ ತಿಂಡಿ ತಿಂದರೆ ದಿನವಿಡೀ ಉತ್ಸಾಹದಿಂದ ಇರಬಹುದು. ಹೀಗಾಗಿ ರವೆಯಿಂದ ಮಾಡಿರುವ ಆಹಾರ ತಿಂದರೆ ಇನ್ನೂ ಉತ್ತಮ. ಯಾಕೆಂದರೆ ರವೆ ಸುಲಭವಾಗಿ ಜೀರ್ಣವಾಗುವುದಲ್ಲದೇ, ಪೌಷ್ಟಿಕಾಂಶಯುಕ್ತ ಮತ್ತು ಹೆಚ್ಚಿನ ಕಾಲ ಹಸಿವಾಗದಂತೆ ನೋಡಿಕೊಳ್ಳುತ್ತದೆ.
ರವೆಯಿಂದ ಹೊಟ್ಟೆ ತುಂಬುವAತಹ ಮತ್ತು ರುಚಿಕರವಾದ ಹಲವು ಬಗೆಯ ತಿಂಡಿಗಳನ್ನು ಮಾಡಬಹುದು. ಬೆಳಗಿನ ಅವಸರಕ್ಕೆ, ಮನೆಯಲ್ಲಿರುವ ಸರಳ ಪದಾರ್ಥಗಳನ್ನು ಬಳಸಿಕೊಂಡೇ ರವೆಯಿಂದ ಸುಲಭವಾಗಿ ರೆಡಿ ಮಾಡಬಹುದು.
ರವೆ ಉತ್ತಪ್ಪ
ರವೆಯನ್ನು ನೆನೆಸಿಟ್ಟು ರಾತ್ರಿ ರುಬ್ಬಿಕೊಂಡು ಮಾರನೇ ದಿನ ಬೆಳಿಗ್ಗೆ ಈರುಳ್ಳಿ, ಟೊಮೆಟೊ ಮತ್ತು ದಪ್ಪ ಮೆಣಸಿನಕಾಯಿಯಂತಹ ಕತ್ತರಿಸಿದ ತರಕಾರಿಗಳನ್ನು ಹಾಕಿ ದೋಸೆ ರೀತಿ ಮಾಡಿಕೊಂಡರೆ ರವೆ ಉತ್ತಪ್ಪ ರೆಡಿ.ರವೆ ಉತ್ತಪ್ಪ
ರವೆಯನ್ನು ನೆನೆಸಿಟ್ಟು ರಾತ್ರಿ ರುಬ್ಬಿಕೊಂಡು ಮಾರನೇ ದಿನ ಬೆಳಿಗ್ಗೆ ಈರುಳ್ಳಿ, ಟೊಮೆಟೊ ಮತ್ತು ದಪ್ಪ ಮೆಣಸಿನಕಾಯಿಯಂತಹ ಕತ್ತರಿಸಿದ ತರಕಾರಿಗಳನ್ನು ಹಾಕಿ ದೋಸೆ ರೀತಿ ಮಾಡಿಕೊಂಡರೆ ರವೆ ಉತ್ತಪ್ಪ ರೆಡಿ.
ರವೆ ವೆಜಿಟೇಬಲ್ ಟೋಸ್ಟ್;
ರವೆ, ಮೊಸರು ಮತ್ತು ನುಣ್ಣಗೆ ಕತ್ತರಿಸಿದ ತರಕಾರಿಗಳನ್ನು ಒಟ್ಟಿಗೆ ಮಿಶ್ರಣ ಮಾಡಿ, ಅದನ್ನು ಬ್ರೆಡ್ ಚೂರುಗಳ ಮೇಲೆ ಸವರಿ, ಹೊಂಬಣ್ಣ ಬರುವವರೆಗೆ ರೋಸ್ಟ್ ಮಾಡುವ ಮೂಲಕ ತಯಾರಿಸಲಾಗುತ್ತದೆ. ರವೆ ಇಡ್ಲಿ
ಪಾತ್ರೆಗೆ ಎಣ್ಣೆ ಹಾಕಿ ಸಾಸಿವೆ, ಕಡಲೆಬೇಳೆ, ಉದ್ದಿನಬೇಳೆ, ಕರಿಬೇವು ಮತ್ತು ಮೆಣಸಿನಕಾಯಿ ಒಗ್ಗರಣೆ ಮಾಡಿ, ನಂತರ ರವೆ ಸೇರಿಸಿ ಘಮ ಬರುವವರೆಗೆ ಹುರಿದು ತಣ್ಣಗಾಗಿಸಿ. ಈ ರವೆಗೆ ಕ್ಯಾರೆಟ್ ತುರಿ, ಕೊತ್ತಂಬರಿ ಸೊಪುö್ಪ, ಉಪುö್ಪ ಮತ್ತು ಮೊಸರು ಸೇರಿಸಿ ಇಡ್ಲಿ ಹಿಟ್ಟಿನ ಹದಕ್ಕೆ ಕಲಸಿ 15 ನಿಮಿಷ ನೆನೆಯಲು ಬಿಡಿ. ಇಡ್ಲಿ ಬೇಯಿಸುವ ಮುನ್ನ ಹಿಟ್ಟಿಗೆ ಅರ್ಧ ಚಮಚ ಅಡುಗೆ ಸೋಡಾ ಹಾಕಿ ಮಿಕ್ಸ್ ಮಾಡಿ. ನಂತರ ಈ ಹಿಟ್ಟನ್ನು ಎಣ್ಣೆ ಸವರಿದ ಇಡ್ಲಿ ತಟ್ಟೆಗಳಿಗೆ ಹಾಕಿ, ಇಡ್ಲಿ ಪಾತ್ರೆಯಲ್ಲಿ 10-12 ನಿಮಿಷ ಹಬೆಯಲ್ಲಿ ಬೇಯಿಸಿದರೆ ಬಿಸಿಬಿಸಿಯಾದ ಮೃದು ರವೆ ಇಡ್ಲಿ (ಖಚಿve Iಜಟi) ಸಿದ್ಧವಾಗುತ್ತದೆ.
ರವೆ ಪಡ್ಡು;
ಪಾತ್ರೆಗೆ ಎಣ್ಣೆ ಹಾಕಿ ಸಾಸಿವೆ, ಕಡಲೆಬೇಳೆ, ಉದ್ದಿನಬೇಳೆ, ಕರಿಬೇವು ಮತ್ತು ಮೆಣಸಿನಕಾಯಿ ಒಗ್ಗರಣೆ ಮಾಡಿ, ನಂತರ ರವೆ ಸೇರಿಸಿ ಘಮ ಬರುವವರೆಗೆ ಹುರಿದು ತಣ್ಣಗಾಗಿಸಿ. ಈ ರವೆಗೆ ಕ್ಯಾರೆಟ್ ತುರಿ, ಕೊತ್ತಂಬರಿ ಸೊಪುö್ಪ, ಉಪುö್ಪ ಮತ್ತು ಮೊಸರು ಸೇರಿಸಿ ಇಡ್ಲಿ ಹಿಟ್ಟಿನ ಹದಕ್ಕೆ ಕಲಸಿ 15 ನಿಮಿಷ ನೆನೆಯಲು ಬಿಡಿ. ಇಡ್ಲಿ ಬೇಯಿಸುವ ಮುನ್ನ ಹಿಟ್ಟಿಗೆ ಅರ್ಧ ಚಮಚ ಅಡುಗೆ ಸೋಡಾ ಹಾಕಿ ಮಿಕ್ಸ್ ಮಾಡಿ. ನಂತರ ಈ ಹಿಟ್ಟನ್ನು ಎಣ್ಣೆ ಸವರಿದ ಪಡ್ಡಿನ ಮಣೆಗೆ ಹಾಕಿ, 10-12 ನಿಮಿಷ ಬೇಯಿಸಿದರೆ ಬಿಸಿಬಿಸಿಯಾದ ಮೃದು ರವೆ ಪಡ್ಡು ಸಿದ್ಧವಾಗುತ್ತದೆ.
ರವೆ ದೋಸೆ;
ಒಂದು ಪಾತ್ರೆಯಲ್ಲಿ ರವೆ, ಅಕ್ಕಿ ಹಿಟ್ಟು ಮತ್ತು ಮೈದಾ ಹಿಟ್ಟನ್ನು ಸಮಪ್ರಮಾಣದಲ್ಲಿ ಹಾಕಿ. ಇದಕ್ಕೆ ಜೀರಿಗೆ, ಕಾಳುಮೆಣಸಿನ ಪುಡಿ, ಸಣ್ಣಗೆ ಹೆಚ್ಚಿದ ಹಸಿರು ಮೆಣಸಿನಕಾಯಿ, ಶುಂಠಿ, ಈರುಳ್ಳಿ, ಕೊತ್ತಂಬರಿ ಸೊಪುö್ಪ ಮತ್ತು ರುಚಿಗೆ ತಕ್ಕಷ್ಟು ಉಪುö್ಪ ಸೇರಿಸಿ. ನಂತರ ಅಗತ್ಯ ನೀರು ಅಥವಾ ಮಜ್ಜಿಗೆಯನ್ನು ಹಾಕಿ, ಹಿಟ್ಟನ್ನು ತುಂಬಾ ತೆಳ್ಳಗೆ ಕಲಸಿ, 20 ನಿಮಿಷ ನೆನೆಯಲು ಬಿಡಿ. ದೋಸೆ ಹಂಚು ಚೆನ್ನಾಗಿ ಕಾದ ನಂತರ, ಹಿಟ್ಟನ್ನು ಕೈಯಿಂದ ಅಥವಾ ಲೋಟದಿಂದ ಹಂಚಿನ ಸುತ್ತಲೂ ಚಿಮುಕಿಸಿದಂತೆ ತೆಳ್ಳಗೆ ಸುರಿಯಿರಿ. ದೋಸೆಯ ಸುತ್ತಲೂ ಎಣ್ಣೆ ಅಥವಾ ತುಪ್ಪ ಹಾಕಿ, ಮಧ್ಯಮ ಉರಿಯಲ್ಲಿ ದೋಸೆ ಗರಿಗರಿಯಾಗಿ ಮತ್ತು ಹೊಂಬಣ್ಣಕ್ಕೆ ಬರುವವರೆಗೆ ಚೆನ್ನಾಗಿ ಬೇಯಿಸಿದರೆ ರುಚಿಯಾದ ರವೆ ದೋಸೆ ಸಿದ್ಧವಾಗುತ್ತದೆ