
ಮೈಸೂರು; ಇಲ್ಲಿನ ರಾಮಕೃಷ್ಣ ನಗರದ ವಿವೇಕಾನಂದ ರಸ್ತೆಯಲ್ಲಿರುವ ಶ್ರೀನಿವಾಸ ದೇವಸ್ಥಾನ ಆವರಣದಲ್ಲಿ ಶ್ರೀ ರಾಘವೇಂದ್ರಸ್ವಾಮಿಗಳ ಪಂಚಲೋಹ ಶಿಲಾ ಪ್ರತಿಷ್ಠಾಪನಾ ಮಹೋತ್ಸವವು ಸೋಮವಾರ ನೆರವೇರಿತು.
ಬೆಳಿಗ್ಗೆಯಿಂದ ದೇವರಿಗೆ ಅಭಿಷೇಕ, ಹೂವಿನ ಅಲಂಕಾರ, ಗಣಪತಿ ನವಗ್ರಹ ಹೋಮ, ವಿಶೇಷ ವೇದಮಂತ್ರಗಳೊAದಿಗೆ ಶ್ರೀ ರಾಘವೇಂದ್ರ ಸ್ವಾಮಿಗಳ ಪಂಚಲೋಹ ಶಿಲಾ ಪ್ರತಿಷ್ಠಾಪನೆಯನ್ನು ವಿದ್ವಾನ್ ನಿತ್ಯಾಗ್ನಿ ಹೋತ್ರಿ ಶ್ರೀದಾಮೋದರಾವಾರ್ಯ ಬಾಜಪೇಯಿ ಅವರ ನೇತೃತ್ವದಲ್ಲಿ ಜರುಗಿತು.
ದೇಸ್ಥಾನದ ಅಧ್ಯಕ್ಷ ಹರೀಶ್ರಾವ್, ಟ್ರಸ್ಟಿಗಳಾದ ಸುಧಾರಾವ್, ಗುರುರಾಜ್ರಾವ್, ದಾನಿಗಳಾದ ಉದ್ಯಮಿ ಆನಂದ್ ಹಾಗೂ ನೂರಾರು ಭಕ್ತಾಧಿಗಳು ಪ್ರಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಭಕ್ತಾಧಿಗಳಿಗೆ ಪ್ರಸಾದವಾಗಿ ಅನ್ನದಾನ ನೆರವೇರಿಸಲಾಯಿತು.