3Kaala News

ಸುಭಾಷಿತ 

ಭೌತಿಕ ಬದುಕಿಗೆ ಆಧ್ಯಾತ್ಮದ ಜ್ಞಾನ ಅವಶ್ಯಕ. ಮನುಷ್ಯ ಧರ್ಮದಿಂದ ವಿಮುಖನಾದರೇ, ಜೀವನ ಅಶಾಂತಿಯ ಕಡಲಾಗುತ್ತದೆ. ಮನುಷ್ಯನ ಬದುಕು ಇನ್ನೊಬ್ಬರಿಗೆ ಮಾದರಿಯಾಗಬೇಕಲ್ಲದೆ, ಮಾರಕವಾಗಬಾರದು.  ಸುಳ್ಳು ಹೇಳಲು ಹಲವು ದಾರಿ, ಆದರೆ ಸತ್ಯಕ್ಕೆ ಇರುವುದೊಂದೇ ದಾರಿ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಸುವರ್ಣದ ಬೆಳಕಿನ ಸೇವೆ

ಮನ ತುಂಬಿ… ತನು ತುಂಬಿ… ಸಂತಸದ ಹೊಳೆ ಹರಿದಿತು

ಸೇವಾರತ್ನ ಗೌರವದಿಂದ ಬದುಕು ಹೂವಾಗಿ ಅರಳಿತು

ನಿರೂಪಣೆಯ ನಾದದಲ್ಲಿ ನಗುಗಳು ಮಿಡಿದವು

ಆಯೋಜನೆಯ ಸೌಂದರ್ಯದಲ್ಲಿ ಮನಗಳು ಬೆಸೆದವು

ಯೋಗದ ಮಹತ್ವವು ಬದುಕಿಗೆ ಬೆಳಕಾಯಿತು

ಮಧ್ಯಾಹ್ನದ ಗಾಯನ ಮನಕೆ ಮಧುರವಾಯಿತು

ಸೇವೆಯ ದೀಪ ಹಚ್ಚಿ ಹಲವರ ಬದುಕು ಬೆಳಗಿಸಿದಿರಿ

ಸೇವಾರತ್ನ, ಯೋಗರತ್ನ ಹೆಸರಿನಲ್ಲಿ ಮಾನವೀಯ ಮೌಲ್ಯ ಉಳಿಸಿದಿರಿ

ಆತಿಥ್ಯದ ಸೌರಭದಲ್ಲಿ ಆತ್ಮೀಯತೆ ಅರಳಿತು

ಸ್ನೇಹದ ಮಿಡಿತದಲ್ಲಿ ಹೃದಯಗಳು ಹತ್ತಿರವಾಯಿತು

ಗಣ್ಯರ ಮಾತುಗಳು ಹೃದಯದಲ್ಲಿ ನೆಲೆಗೊಂಡವು

ನನ್ನ ಮೆಚ್ಚಿದ ಕ್ಷಣಗಳು ನೆನಪಾಗಿ ಉಳಿದವು

ಯಾವ ಪ್ರಭಾವವಿಲ್ಲದೆ ಗೌರವ ದೊರೆತ ಕ್ಷಣ

ಜೀವನದ ಪುಟದಲ್ಲಿ ಸುವರ್ಣ ಬೆಳಕು ಫೌಂಡೇಶನ್ ಸವಿ ನೆನಪು ಸದಾ

ಮಹೇಶ್‌ರ ನೆರವಿನಿಂದ ಹೆಮ್ಮೆ ಇನ್ನಷ್ಟು ಹೆಚ್ಚಿತು

ಮನ ತುಂಬಿ… ತನು ತುಂಬಿ… ಕೃತಜ್ಞತೆ ಕಣ್ಣೀರಾಯಿತು. 🙏

ಡಾ‌ ಸುಮ ವೈ
ಬಳ್ಳಾರಿ