
ಮೈಸೂರು: ಜ್ಯೋತಿನಗರ ಉಪವಿಭಾಗದ ವ್ಯಾಪ್ತಿಯಲ್ಲಿ ಭೂಗತ ಕೇಬಲ್ ಕಾಮಗಾರಿಯನ್ನು ಹಮ್ಮಿಕೊಂಡಿದ್ದು, ಜುಲೈ 25,26, 27,28 ರಂದು ಬೆಳಿಗ್ಗೆ 10 ಗಂಟೆಯಿ0ದ ಸಂಜೆ 05 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ಜುಲೈ 25 ರಂದು ಶಕ್ತಿ ಮತ್ತು ಕಾವೇರಿ ಫೀಡರ್ ವ್ಯಾಪ್ತಿಯಲ್ಲಿ ಶಕ್ತಿನಗರ, ಸಾತಗಳ್ಳಿ ಬಡಾವಣೆ, ಕಾವೇರಿ ಮುಖ್ಯ ರಸ್ತೆ, ರಾಘವೇಂದ್ರನಗರ ಹಾಗೂ ಸುತ್ತ-ಮುತ್ತಲಿನ ಪ್ರದೇಶಗಳು.
ಜುಲೈ 26 ರಂದು; ಯಾದವಗಿರಿ ಕೈಗಾರಿಕ ಪ್ರದೇಶ, ಮಂಜುನಾಥಪುರ, ಜಾವಾಸರ್ಕಲ್, ಜಾಯ್ಐಸ್ಕ್ರೀಮ್ ಪ್ಯಾಕ್ಟರಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ
ಜುಲೈ 27 ರಂದು ರಾಧಾಕೃಷ್ಣ ಫೀಡರ್ ವ್ಯಾಪ್ತಿಯಲ್ಲಿರುವ ಶಕ್ತಿನಗರ, ಟೀರ್ಸ್ ಬಡಾವಣೆ ಹಾಗೂ ಸುತ್ತ-ಮುತ್ತಲಿನ ಪ್ರದೇಶಗಳು.
ಜುಲೈ 28 ರಂದು ಶಕ್ತಿ ಮತ್ತು ಕಾವೇರಿ ಫೀಡರ್ ವ್ಯಾಪ್ತಿಯಲ್ಲಿ ಬರುವ ಹೆಚ್.ಪಿ.ಓ ಅಂಡ್ ಆರ್.ಎಂ.ಎಸ್ ಬಡಾವಣೆ, ಡಾ. ರಾಜ್ ಕುಮಾರ್ ರಸ್ತೆ, ಉರ್ದು ಟೀರ್ಸ್ ಕಾಲೋನಿ, ಬನ್ನೂರು ರಸ್ತೆ ಹಾಗೂ ಸುತ್ತ-ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ನ.ರಾ.ಮೊಹಲ್ಲಾ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.