Skip to main content

3Kaala News

ಸುಭಾಷಿತ 

ನಾವು ಏನು ಹೇಳುತ್ತೇವೆ ಅನ್ನೋದಕ್ಕಿಂತ, ಹೇಗೆ ಹೇಳುತ್ತೇವೆ ಅನ್ನುವುದೇ ಬದುಕಿನ ಗುಟ್ಟು.
ಮಾತಿನ ಶೈಲಿ ಹೃದಯ ಗೆಲ್ಲಬಹುದು, ಸಮಸ್ಯೆ ಪರಿಹರಿಸಬಹುದು, ಅಥವಾ ಸಂಬಂಧ ಉಳಿಸಬಹುದು.
ಮಾತು ಮನುಷ್ಯನ ಶಕ್ತಿ — ಅದನ್ನು ಜಾಣ್ಮೆಯಿಂದ ಬಳಕೆ ಮಾಡಿದರೆ ಬದುಕು ಸುಲಭವಾಗುತ್ತದೆ

 

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಗುಣಮಟ್ಟದ ಹಾಲಿಗೆ ಹೆಚ್ಚಿನ ದರ: ಕಿರನಹಳ್ಳಿ ಮುತ್ತುರಾಜ್ 

ಕಿರನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಮಹಾಸಭೆ 

ಪಿರಿಯಾಪಟ್ಟಣ: ಗುಣಮಟ್ಟದ ಹಾಲು ಸರಬರಾಜು ಮಾಡುವುದರಿಂದ ಆರ್ಥಿಕವಾಗಿ ಸಬಲರಾಗಬಹುದು ಎಂದು ಕಿರನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕಿರನಹಳ್ಳಿ ಮುತ್ತುರಾಜ್ ತಿಳಿಸಿದರು 

ತಾಲೂಕಿನ ಕಿರನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ 2025-26ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು ಹೈನುಗಾರಿಕೆ ಪ್ರಮುಖ ಉದ್ಯಮವಾಗಿದೆ. ಬೇಸಾಯದ ಜೊತೆಗೆ ಹೈನುಗಾರಿಕೆ ಹೆಚ್ಚಿನ ಪ್ರಾಮುಖ್ಯತೆ ಹಾಗೂ ವೈಜ್ಞಾನಿಕವಾಗಿ ಹಸು ಸಾಕಾಣಿಕೆ ಮಾಡುವುದನ್ನು ಹೈನುಗಾರರು ಅಳವಡಿಸಿಕೊಳ್ಳಬೇಕು. ರಾಸುಗಳು ಎರಡು ಹೊತ್ತು ಹಾಲು ಕೊಡುವ ಜೊತೆಗೆ ನಮ್ಮ ಜೀವನಾಡಿಯಾಗಿದೆ ಗುಣಮಟ್ಟದ ಹಾಲು ನೀಡಿದರೆ ಹೈನುಗಾರರಿಗೆ ಹೆಚ್ಚಿನ ಹಣ ಬರಲಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಹಸುವಿಗೆ ಉತ್ತಮ ಆಹಾರ ನೀಡಬೇಕು. ಜತೆಗೆ ಆರೋಗ್ಯವನ್ನು ಕಾಪಾಡಬೇಕು. ಇದರೊಂದಿಗೆ ಸಂಘದಿಂದ ದೊರಕುವ ಸೌಲಭ್ಯಗಳನ್ನು ಪಡೆದುಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದು ಹೇಳಿದರು 

ಮೈಮುಲ್ ವಿಸ್ತರಣಾಧಿಕಾರಿ ನಂದಿನಿ ಮಾತನಾಡಿ ಮೈಮುಲ್‌ನಲ್ಲಿ ಪ್ರತಿ ನಿತ್ಯ 10 ಲಕ್ಷಕ್ಕೂ ಹೆಚ್ಚು ಲೀಟರ್ ಹಾಲು ಸಂಗ್ರಹವಾಗುತ್ತಿದೆ ಒಕ್ಕೂಟವು ಹೈನುಗಾರಿಕೆಯನ್ನು ಉತ್ತೇಜಿಸಲು ರೈತರಿಗೆ ವಿವಿಧ ವಿಮಾ ಸೌಲಭ್ಯಗಳು, ರೈತರ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ಹಾಗೂ ಪುರಸ್ಕಾರ, ರೈತ ಕಲ್ಯಾಣ ಯೋಜನೆ, ರಾಸುಗಳಿಗೆ ವಿಮಾ ಸೌಲಭ್ಯ, ಮ್ಯಾಟ್ ವಿತರಣೆ, ಪಶು ಆಹಾರ, ಅಫಘಾತ ಹಾಗೂ ಅಕಾಲಿಕ ಮರಣ ಹೊಂದಿದ ರೈತ ಕುಟುಂಬಗಳಿಗೆ ಆರ್ಥಿಕ ಸಹಾಯ, ಹೈನುಗಾರರಿಗೆ ತರಬೇತಿ ಸೇರಿದಂತೆ ವಿವಿಧ ಯೋಜನೆಗಳನ್ನು ಜಾರಿಗೊಳಿಸಿದೆ ರೈತರು ಒಕ್ಕೂಟದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ಇನ್ನೂ ಹೆಚ್ಚಿನ ಗುಣಮಟ್ಟದ ಹಾಲು ಪೂರೈಕೆ ಮಾಡಲು ಮುಂದಾಗಬೇಕು ಗುಣಮಟ್ಟದ ಹಾಲು ಪೂರೈಕೆಯಿಂದ ಒಕ್ಕೂಟದ ಪ್ರಗತಿ ಸಾಧ್ಯವಾಗುತ್ತದೆ ಎಂದು ಹೇಳಿದರು 

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷೆ ಹೆಚ್.ಎಸ್.ಸರೋಜ, ನಿರ್ದೇಶಕರಾದ ಕೆ.ಉಮೇಶ್, ಆರ್.ಹರೀಶ್, ಕುಮಾರ, ಕೆ.ಎ.ರಮೇಶ, ಜಯರಾಮ್, ಶಿವಣ್ಣ,

ಗೋವಿಂದಶೆಟ್ಟಿ, ಪುಟ್ಟಸ್ವಾಮಿ, ಯಶೋದಮ್ಮ, ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ರಾಜೇಗೌಡ, ಮುಖಂಡರಾದ ರಮೇಶ್, ಭೂಪಲ್ ಸೇರಿದಂತೆ ಸದಸ್ಯರು ಇದ್ದರು