
ಟಿಎಪಿಸಿಎಂಎಸ್ ಸಹಕಾರ ಸಂಘದ ವಾರ್ಷಿಕ ಮಹಾಸಭೆ
ಪಿರಿಯಾಪಟ್ಟಣ: ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಮತ್ತು ಸಹಕಾರ ಸಂಘ ಷೇರುದಾರರು ಮತ್ತು ಹಿರಿಯ ಮಾರ್ಗದರ್ಶನದಲ್ಲಿ ನಡೆದು 2025-26 ಸಾಲಿನಲ್ಲಿ 61.46 ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ಟಿಎಪಿಸಿಎಂಎಸ್ ನ ಕಾರ್ಯದರ್ಶಿ ಬಿ.ವಿ.ಕಲಾವತಿ ತಿಳಿಸಿದರು.
ಪಟ್ಟಣದ ಆದಿ ಚುಂಚನಗಿರಿ ಸಮುದಾಯ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಂಘದ 2025-26ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು
ಪಿರಿಯಾಪಟ್ಟಣ ತಾಲೂಕು ವ್ಯವಸಾಯ ಉತ್ಪನ್ನ ಮಾರಾಟ ಸಹಕಾರ ಸಂಘವು 1949ರಲ್ಲಿ ಸ್ಥಾಪನೆಯಾಗಿ ಅಲ್ಲಿಂದ ಇಲ್ಲಿಯವರೆಗೂ ರೈತರಿಗೆ ಉತ್ತಮವಾದ ಸೇವೆಗಳನ್ನು ಒದಗಿಸುತ್ತ ಬಂದಿದೆ. ಈ ಸಂಘವು ಸಗಟು ನಾಮಿನಿಯಾಗಿ ಪಡಿತರ ಆಹಾರ ಧಾನ್ಯಗಳನ್ನು ತಾಲೂಕಿನ ನ್ಯಾಯಬೆಲೆ ಅಂಗಡಿಗಳಿಗೆ ವಿತರಣೆ ಮಾಡುತ್ತಿದೆ ಹಾಗೂ ರೈತರಿಗೆ ಬೇಕಾದ ರಾಸಾಯನಿಕ ಗೊಬ್ಬರ ಮಾರಾಟ ಮಾಡುತ್ತಿದೆ ಸಂಘದ ಸದಸ್ಯರಿಗೆ ಹಾಗೂ ನಾಮಿನಲ್ ಸದಸ್ಯಗಳಿಗೆ ಚಿನ್ನಾಭರಣಗಳ ಮೇಲೆ ಕಡಿಮೆ ಬಡ್ಡಿ ದರದಲ್ಲಿ ಸಾಲ, ಷೇರುದಾರರ ಉಳಿತಾಯ ಖಾತೆಯ ಮೊಬಲಗಿಗೆ ಶೇ. 3 ಬಡ್ಡಿ ಪಾವತಿಸಲಾಗುತ್ತಿದೆ ಸಹಕಾರ ಸಂಘ ಸುಭದ್ರವಾಗಿದ್ದು 4 ಸಾವಿರ ಮೆಟ್ರಿಕ್ ಟನ್ ಸಾಮರ್ಥ್ಯದ ಬೃಹತ್ ಗೋದಾಮು ಹೊಂದಿದ್ದು,
ಈ ಸಾಲಿನಲ್ಲಿ ಒಟ್ಟು 61,46,790 ರೂ ನಿವ್ವಳ ಲಾಭ ಗಳಿಸಿದೆ ಎಂದರು.
ಸಂಘದ ಮಾಜಿ ಅಧ್ಯಕ್ಷ ಐಲಾಪುರ ರಾಮು ಮಾತನಾಡಿ ಸಹಕಾರ ಸಂಘಗಳಲ್ಲಿ ಆಡಳಿತ ಮಂಡಳಿಯ ಅವಧಿ ಮುಗಿದಿದ್ದು ಸರ್ಕಾರ ಚುನಾವಣೆ ನಡೆಸುತ್ತಿಲ್ಲ ಆದ್ದರಿಂದ ಚುನಾವಣೆಯನ್ನು ನಡೆಸಿ ಸಂಘದ ಬೆಳವಣಿಗೆಗೆ ಸಹಕರಿಸಬೇಕು ಎಂದು ಹೇಳಿದರು
ಇದೇ ಸಂದರ್ಭದಲ್ಲಿ 10 ನೇ ತರಗತಿ ಹಾಗೂ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಷೇರುದಾರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಆಡಳಿತಾಧಿಕಾರಿ ಅನುಸೂಯ, ಐಲಾಪುರ ರಾಮು, ತಿಮ್ಮ ನಾಯ್ಕ, ಕೆ.ಕೆ.ಕುಮಾರ್, ಜವರಪ್ಪ, ಹೆಚ್.ಡಿ.ವಿಜಯ್, ಎಸ್.ವಿ.ತಿಮ್ಮೇಗೌಡ, ಮುಕೇಶ್ ಕುಮಾರ್, ಟಿ.ಎಂ.ಮಹದೇವ್, ಸರ್ವಮಂಗಳ, ಸುಜಾತಾ, ಚಪ್ಪರದಹಳ್ಳಿ ರಾಜೇಶ್, ಸೇರಿದಂತೆ ಸಹಕಾರ ಸಂಘದ ಸದಸ್ಯರು ಉಪಸ್ಥಿತರಿದ್ದರು.