Skip to main content

3Kaala News

ಸುಭಾಷಿತ 

ನಾವು ಏನು ಹೇಳುತ್ತೇವೆ ಅನ್ನೋದಕ್ಕಿಂತ, ಹೇಗೆ ಹೇಳುತ್ತೇವೆ ಅನ್ನುವುದೇ ಬದುಕಿನ ಗುಟ್ಟು.
ಮಾತಿನ ಶೈಲಿ ಹೃದಯ ಗೆಲ್ಲಬಹುದು, ಸಮಸ್ಯೆ ಪರಿಹರಿಸಬಹುದು, ಅಥವಾ ಸಂಬಂಧ ಉಳಿಸಬಹುದು.
ಮಾತು ಮನುಷ್ಯನ ಶಕ್ತಿ — ಅದನ್ನು ಜಾಣ್ಮೆಯಿಂದ ಬಳಕೆ ಮಾಡಿದರೆ ಬದುಕು ಸುಲಭವಾಗುತ್ತದೆ

 

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಬಾದರಾಯಣ ಆಚಾರ್ಯರಿಗೆ ` ಶ್ರೀ ವಿದ್ಯಾಮಾನ್ಯತೀರ್ಥರ ಸ್ಮರಣಾ ಪ್ರಶಸ್ತಿ’

  • ಗುರುವಾರ ಶ್ರೀ ವಿದ್ಯೇಶತೀರ್ಥರಿಂದ ಗೌರವ ಪ್ರದಾನ
  • ಬಾರ್ಕೂರಿನ ಭಂಡಾರಕೇರಿ ಶ್ರೀಮಠದಲ್ಲಿ ಗೌರವಾರ್ಪಣೆ
    ಮೈಸೂರು: ಕೀರ್ತಿಶೇಷ ಶ್ರೀ ವಿದ್ಯಾಮಾನ್ಯತೀರ್ಥರ ಪೀಠಾರೋಹಣ ಶತಮಾನೋತ್ಸವದ ಸಂಭ್ರಮಾಚರಣೆ ಅಂಗವಾಗಿ ಭಂಡಾರಕೇರಿ ಮಠಾಧೀಶರಾದ ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ 47ನೇ ಚಾತುರ್ಮಾಸ್ಯ ವ್ರತದ ಸಂದರ್ಭದಲ್ಲಿ ಕೊಡಮಾಡುವ ಶ್ರೀ ವಿದ್ಯಾಮಾನ್ಯತೀರ್ಥರ ಸ್ಮರಣಾ ವಿಶೇಷ ಪ್ರಶಸ್ತಿ’ ಗೆ ನಗರದ ಹಿರಿಯ ವಿದ್ವಾಂಸ ಬಾದರಾಯಣಾಚಾರ್ಯ ಆಯ್ಕೆಯಾಗಿದ್ದಾರೆ. ಉಡುಪಿ ಸಮೀಪದ ಬಾರ್ಕೂರಿನ ಭಂಡಾರಕೇರಿ ಶ್ರೀಮಠದಲ್ಲಿ ಸೆ. 10ರಂದು ಸಂಜೆ 5 ಗಂಟೆಗೆ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ನೆರವೇರಲಿದೆ. ಸನ್ಮಾನವು ಸ್ಮರಣಿಗೆ , ಸನ್ಮಾನ ಪತ್ರ ಮತ್ತು ಗೌರವ ಸಂಭಾವನೆ ಒಳಗೊಂಡಿದೆ ಎಂದು ಶ್ರೀ ವಿದ್ಯೇಶತೀರ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಶಸ್ತಿ ಪುರಸ್ಕöÈತರ ವಿವರ :
ಹಿರಿಯ ವಿದ್ವಾಂಸ ಬಾದರಾಯಣಾಚಾರ್ಯರು ಮುಂಬೈನ ಶ್ರೀ ಸತ್ಯಧ್ಯಾನ ವಿದ್ಯಾಪೀಠದಲ್ಲಿ ದಶಕಗಳ ಕಾಲ ಶಾಸ್ತç ವಿಚಾರ ಅಧ್ಯಯನ ಮಾಡಿದ್ದಾರೆ. ಕುಲಪತಿ, ಮಹಾ ಮಹೋಪಾಧ್ಯಾಯ ಮಾಹುಲಿ ವಿದ್ಯಾಸಿಂಹಾಚಾರ್ಯರ ಗರಡಿಯಲ್ಲಿ ಪಳಗಿ, ಶ್ರೀ ಸುಧಾ ಪಂಡಿತರಾಗಿ ಹೊರ ಹೊಮ್ಮಿದ್ದಾರೆ. ಸಂಸ್ಕöÈತ ಮತ್ತು ಆಂಗ್ಲ ಭಾಷಾ ಎಂಎ ಪದವೀಧರರು. ಶ್ರೀ ಸತ್ಯಾತ್ಮತೀರ್ಥ ಸ್ವಾಮಿಗಳ ವಿಶೇಷ ಅನುಗ್ರಹಕ್ಕೆ ಪಾತ್ರರಾಗಿದ್ದಾರೆ. ಭಾಗವತ ಪ್ರವಚನಕ್ಕೆ ಖ್ಯಾತರಾಗಿರುವ ಇರು,ಈವರೆಗೆ ನೂರಾರು ಬಾರಿ ಭಾಗವತ ಪ್ರವಚನ ಸಪ್ತಾಹ ನಡೆಸಿದ ಹಿರಿಮೆ ಪಡೆದಿದ್ದಾರೆ. ನಾಡಿನಾದ್ಯಂತ ವಿವಿಧ ಮಠ, ಮಂದಿರ, ವಿಶೇಷ ಜ್ಞಾನಸತ್ರ ಮತ್ತು ಮಾಧ್ವ ಸಮ್ಮೇಳನಗಳಲ್ಲಿ ತಮ್ಮ ವಿಚಾರಧಾರೆಯನ್ನು ಹೊಮ್ಮಿಸಿ, ಆಸ್ತಿಕ ಶ್ರೋತೃಗಳ ಮನ ಗೆದ್ದಿದ್ದಾರೆ.
ಮೈಸೂರಿನ ಶ್ರೀ ವೆಂಕಟೇಶ ಧ್ಯಾನಕೇಂದ್ರದ ವ್ಯವಸ್ಥಾಪಕರಾಗಿ ವಿಶೇಷ ಸೇವೆ ಸಲ್ಲಿಸಿ, ನಂತರ ತಮ್ಮ ಮನೆಯಲ್ಲೇ ` ಬ್ರಹ್ಮಾತ್ಮ ವಿದ್ಯಾಪೀಠ’ ಆರಂಭಿಸಿ, ಹಲವು ವಿದ್ಯಾರ್ಥಿಗಳಿಗೆ ಮತ್ತು ವಿವಿಧ ವೃತ್ತಿಯಲ್ಲಿ ಇರುವವರಿಗೆ ಪಾಠ, ಪ್ರವಚನ ಮಾಡುತ್ತಿದ್ದಾರೆ.
ಈವರೆಗೆ 4 ವಿದ್ಯಾರ್ಥಿಗಳಿಗೆ ಸುಧಾ ಮಂಗಳ ಮಾಡಿಸಿ ಗುರು ಸ್ಥಾನಕ್ಕೆ ಭಾಜನರಾಗಿದ್ದಾರೆ. ತಿರಪ್ಪೂರು ವಿದ್ಯಾಪೀಠ, ಪೇಜಾವರ ಮತ್ತು ಉತ್ತರಾದಿ ಮಠದ ಜಯತೀರ್ಥ ವಿದ್ಯಾಪೀಠ, ಟಿಟಿಡಿ ಧರ್ಮಗಿರಿ ಪಾಠಶಾಲೆ ನಡೆಸುವ ವಿವಿಧ ಪರೀಕ್ಷೆಗಳಿಗೆ ಮುಖ್ಯ ಪರೀಕ್ಷಕರಾಗಿರುವುದು ಇನ್ನೊಂದು ವಿಶೇಷ.