ಮೈಸೂರು: ಸರ್ಕಾರಿ ಹಾಗೂ ಖಾಸಗಿವಿಶೇಷ ಕೇಂದ್ರಗಳಲ್ಲಿ ಪೋಷಿಸುತ್ತಿರುವ ಐದು ಮಕ್ಕಳನ್ನು ದತ್ತು ಪಡೆದ ಪೋಷಕರಿಗೆ ಹಸ್ತಾಂತರಿಸಲಾಯಿತು.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿ.ಲಕ್ಷ್ಮೀಕಾಂತ್ ರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ದತ್ತು ಪೂರ್ವ ಸಭೆ ನಡೆಸಲಾಯಿತು.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರು, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ, ಮಕ್ಕಳ ಕಲ್ಯಾಣ ಸಮಿತಿಅಧ್ಯಕ್ಷರು, ಸದಸ್ಯರು, ಸರ್ಕಾರಿ ಹಾಗೂ ಸರ್ಕಾರೇತರ ವಿಶೇಷ ದತ್ತು ಕೇಂದ್ರದ ಅಧಿಕಾರಿ, ಸಿಬ್ಬಂದಿಗಳು ಹಾಜರಿದ್ದರು.ಈ ವೇಳೆ ಭಾವಿ ದತ್ತು ಪೋಷಕರು ಮತ್ತು ದತ್ತು ಕೊಡಲಾಗುವ ಮಕ್ಕಳ ಪೋಷಕರು ಹಾಜರಿದ್ದರು. ಐದು ಮಕ್ಕಳಿಗೆ ದತ್ತು ನೀಡಲು ಆದೇಶ ನೀಡಿದ್ದರಿಂದಾಗಿ ದತ್ತು ಸ್ವೀಕಾರಕ್ಕೆ ಅರ್ಜಿ ಸಲ್ಲಿಸಿದ್ದ ಪೋಷಕರಿಗೆ ಹಸ್ತಾಂತರ ಮಾಡಲಾಯಿತು. ಒಂದು ವಿಶೇಷಚೇತನ ಮಗುವನ್ನು ಕೆನಡಾ ದೇಶದ ದಂಪತಿಗೆ ಜಿಲ್ಲಾಧಿಕಾರಿಗಳು ಹಸ್ತಾಂತರ ಮಾಡಿ ಶುಭಕೋರಿದರು.