3Kaala News

ಸುಭಾಷಿತ 

ಭೌತಿಕ ಬದುಕಿಗೆ ಆಧ್ಯಾತ್ಮದ ಜ್ಞಾನ ಅವಶ್ಯಕ. ಮನುಷ್ಯ ಧರ್ಮದಿಂದ ವಿಮುಖನಾದರೇ, ಜೀವನ ಅಶಾಂತಿಯ ಕಡಲಾಗುತ್ತದೆ. ಮನುಷ್ಯನ ಬದುಕು ಇನ್ನೊಬ್ಬರಿಗೆ ಮಾದರಿಯಾಗಬೇಕಲ್ಲದೆ, ಮಾರಕವಾಗಬಾರದು.  ಸುಳ್ಳು ಹೇಳಲು ಹಲವು ದಾರಿ, ಆದರೆ ಸತ್ಯಕ್ಕೆ ಇರುವುದೊಂದೇ ದಾರಿ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಲೇಖನ


ಸುರ‍್ಣದ ಬೆಳಕಿನ ಸೇವೆ ಮನ ತುಂಬಿ…
ತನು ತುಂಬಿ… ಸಂತಸದ ಹೊಳೆ ಹರಿದಿತುಸೇವಾರತ್ನ ಗೌರವದಿಂದ ಬದುಕು ಹೂವಾಗಿ ಅರಳಿತು ನಿರೂಪಣೆಯ ನಾದದಲ್ಲಿ ನಗುಗಳು ಮಿಡಿದವುಆಯೋಜನೆಯ ಸೌಂರ‍್ಯದಲ್ಲಿ ಮನಗಳು ಬೆಸೆದವು.
ಯೋಗದ ಮಹತ್ವವು ಬದುಕಿಗೆ ಬೆಳಕಾಯಿತು.
ಮಧ್ಯಾಹ್ನದ ಗಾಯನ ಮನಕೆ ಮಧುರವಾಯಿತು. ಸೇವೆಯ ದೀಪ ಹಚ್ಚಿ ಹಲವರ ಬದುಕು ಬೆಳಗಿಸಿದಿರಿ ಸೇವಾರತ್ನ, ಯೋಗರತ್ನ ಹೆಸರಿನಲ್ಲಿ ಮಾನವೀಯ ಮೌಲ್ಯ ಉಳಿಸಿದಿರಿ.
ಆತಿಥ್ಯದ ಸೌರಭದಲ್ಲಿ ಆತ್ಮೀಯತೆ ಅರಳಿತು.
ಸ್ನೇಹದ ಮಿಡಿತದಲ್ಲಿ ಹೃದಯಗಳು ಹತ್ತಿರವಾಯಿತು.
ಗಣ್ಯರ ಮಾತುಗಳು ಹೃದಯದಲ್ಲಿ ನೆಲೆಗೊಂಡವು.
ನನ್ನ ಮೆಚ್ಚಿದ ಕ್ಷಣಗಳು ನೆನಪಾಗಿ ಉಳಿದವು.
ಯಾವ ಪ್ರಭಾವವಿಲ್ಲದೆ ಗೌರವ ದೊರೆತ ಕ್ಷಣಜೀವನದ ಪುಟದಲ್ಲಿ ಸುರ‍್ಣ ಬೆಳಕು ಫೌಂಡೇಶನ್ ಸವಿ ನೆನಪು ಸದಾ. ಮಹೇಶ್‌ರ ನೆರವಿನಿಂದ ಹೆಮ್ಮೆ ಇನ್ನಷ್ಟು ಹೆಚ್ಚಿತು.
ಮನ ತುಂಬಿ… ತನು ತುಂಬಿ… ಕೃತಜ್ಞತೆ ಕಣ್ಣೀರಾಯಿತು.
ಡಾ‌ ಸುಮ ವೈ ಬಳ್ಳಾರಿ

ಮೇ ೧೬ರಂದು 'ಕಥೆ ಕೇಳೋಣ ಬನ್ನಿ
ಮೈಸೂರು: ಇಲ್ಲಿನ ಕುವೆಂಪುನಗರದ ಚಿತ್ರ ಭಾನು ರಸ್ತೆಯಲ್ಲಿರುವ ಸುರುಚಿ ರಂಗಮನೆ ಕಲಾ ಸುರುಚಿಯಲ್ಲಿ ಮೇ ೧೬ ೦ ೪.೩೦೦೦ ೫.೩೦ ರವರೆಗೆ 'ಕಥೆ ಕೇಳೋಣ ಬನ್ನಿ-೯೩೨' ಕಾರ್ಯಕ್ರಮವನ್ನು ಹಮ್ಮಿ ಕೊಳ್ಳಲಾಗಿದೆ.ಡಿಪಿಯು ಕಾಲೇಜು ಆಕ್ಯುರೇಟ್ ಅಕಾಡೆಮಿಯ ಕನ್ನಡ ಭಾಷಾ ಪ್ರಾಧ್ಯಾಪಕರಾದ ಮೇಘಶ್ರೀ ಸುರೇಶ್ ಅವರು ಮಕ್ಕಳಿಗೆ ಕಥೆ ಹೇಳಲಿದ್ದಾರೆ ಎಂದು ಕಲಾಸುರುಚಿಯ ವಿಜಯಾ ಸಿಂಧುವಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 'ಅಜ್ಞಾತವಾಸ'ಕೃತಿ ಬಿಡುಗಡೆ; ಕಲಾಸುರುಚಿ ಮತ್ತು ಅಪರಾಜಿತೆ ಪ್ರಕಾಶನದ ಸಹಯೋಗದಲ್ಲಿ ವಿಜ್ಞಾನಿ, ಲೇಖಕ ಡಾ.ಪಾಲಹಳ್ಳಿ ವಿಶ್ವನಾಥ್ ಅವರ 'ಅಜ್ಞಾತವಾಸ' ನಾಟಕ ಕೃತಿ ಬಿಡುಗಡೆ ಮತ್ತು ವಾಚನ ಕಾರ್ಯಕ್ರಮವನ್ನು ಸುರುಚಿ ರಂಗಮನೆಯಲ್ಲಿ ಮೇ ೧೬ರಂದು ಸಂಜೆ ೬.೩೦ಕ್ಕೆ ಹಮ್ಮಿಕೊಳ್ಳಲಾಗಿದೆ. ಹರಿಪ್ರಸಾದ್ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯ ಕ್ರಮದಲ್ಲಿ ಗಂಗಾಧರಸ್ವಾಮಿ ಅವರು ಪುಸ್ತಕವನ್ನು ಬಿಡುಗಡೆ ಮಾಡಲಿದ್ದಾರೆ. ಕೃಷ್ಣಮೂರ್ತಿ ಚಂದರ್ ಅವರು ಪುಸ್ತಕವನ್ನು ಪರಿಚಯಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.