
ಮೈಸೂರು; ರಾಜ್ಯಸಭೆಗೆ ಹೋಗಲು ನಾನು ಕೂಡ ಆಕಾಂಕ್ಷಿಯಾಗಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಹೇಳಿದರು.
ಸೋಮವಾರ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನಾವು ಮತ್ತು ಜೆಡಿಎಸ್ ಒಂದೇ ಮೈತ್ರಿಕೂಟದಲ್ಲಿ ಇದ್ದೇವೆ. ನಮಗೆ ೬೩ ಮತ್ತು ಜೆಡಿಎಸ್ಸಿಗೆ ೧೭ ಸ್ಥಾನವಿದ್ದರೂ, ನನ್ನನ್ನು ರಾಜ್ಯಸಭೆಗೆ ಕಳುಹಿಸುವ ವಿಚಾರವನ್ನು ರಾಷ್ಟಿçÃಯ ನಾಯಕರು ನೋಡಿಕೊಳ್ಳುತ್ತಾರೆ. ನಾನು, ರಾಜ್ಯಸಭೆಗೆ ಆಯ್ಕೆಯಾಗಲು ಆಕಾಂಕ್ಷಿಯಾಗಿದ್ದೇನೆ. ಚುನಾವಣಾ ರಾಜಕಾರಣದಲ್ಲಿ ಇರುವುದಿಲ್ಲ ಎಂದು ಲೋಕಸಭಾ ಚುನಾವಣೆಯ ವೇಳೆಯೇ ಹೇಳಿದ್ದೇನೆ. ಪಕ್ಷ ಕೊಡುವ ಯಾವುದೇ ಜವಾಬ್ದಾರಿಯನ್ನು ನಿಭಾಯಿಸಲು ಸಿದ್ಧನಿದ್ದೇನೆ ಎಂದರು.
ನಮ್ಮಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಪ್ರಸ್ತಾಪ ಇಲ್ಲ. ಹಾಲಿ ಅಧ್ಯಕ್ಷರು ಎರಡು ವರ್ಷ ಅಧಿಕಾರ ಮುಗಿಸಿದ್ದು, ಇನ್ನೊಂದು ವರ್ಷದಲ್ಲಿ ಅವರ ಅವಧಿಯೇ ಮುಗಿಯುತ್ತದೆ ಎಂದರು.
ಎಲ್ಲಾ ಕಡೆ ಬಿಜೆಪಿ ಜಯಭೇರಿ ಭಾರಿಸುತ್ತಿದ್ದು, ರಾಜ್ಯದಲ್ಲಿ ಹಿಂದೆ ಜನಸೇವೆ ಮಾಡಿದ ಬಿಜೆಪಿಯನ್ನು ಹೇಗೆ ಮತ್ತೆ ಅಧಿಕಾರಕ್ಕೆ ತರಬೇಕು ಎನ್ನುವ ಮೂಲ ವಿಚಾರ ತಿಳಿಸುವ ಕೆಲಸವಾಗುತ್ತಿದೆ’ ಎಂದರು.
ಕಾAಗ್ರೆಸ್ ಎಸ್‌ಐಆರ್‌ಗೆ ವಿರೋಧ ವ್ಯಕ್ತಪಡಿಸುತ್ತಿರುವುದಕ್ಕೆ ಪ್ರತಿಕ್ರಿಯಿಸಿ, ‘ಕಾಂಗ್ರೆಸ್ ರಾಜ್ಯದ ಜನ ತನಗೆ ಕೊಟ್ಟ ಜವಬ್ದಾರಿ ನಿರ್ವಹಿಸಲಾಗದ ಕಾರಣ ಜನ ಮುಗಿ ಬಿದ್ದಾಗ, ಅವರ ದಿಕ್ಕು ತಪ್ಪಿಸಲು ಎಸ್‌ಐಆರ್ ಬಗ್ಗೆ ಸುಳ್ಳು ಹರಡುವ ಕೆಲಸ ಮಾಡುತ್ತಿದೆ. ಕಾಂಗ್ರೆಸ್ ಸರ್ಕಾರದ ಹಿಂದೂ ವಿರೋಧಿ ಧೋರಣೆಯಿಂದ ಜನ ರೋಸಿ ಹೋಗಿದ್ದಾರೆ. ಈಗ ಚುನಾವಣೆ ನಡೆದರೂ ಕಾಂಗ್ರೆಸ್ ಐವತ್ತು ಸ್ಥಾನಕ್ಕಿಂತ ಕೆಳಗಿಳಿಯಲಿದೆ’ ಎಂದರು.
ಪೆಟ್ರೋಲ್, ಡಿಸೇಲ್ ಬೆಲೆಯೇರಿಕೆ ಬಗ್ಗೆ ಮಾತನಾಡಿ, ‘ಜಾಗತಿಕ ಮಟ್ಟದಲ್ಲಿ ಸಮಸ್ಯೆ ಬಂದರೂ ಅದನ್ನು ಹತೋಟಿಯಲ್ಲಿಡುವ ಕೆಲಸ ಕೇಂದ್ರ ಸರ್ಕಾರದಿಂದ ಆಗಿದೆ. ಹೀಗಾಗಿ ಪೆಟ್ರೋಲ್, ಡಿಸೇಲ್ ಬೆಲೆ ಹೆಚ್ಚಿದೆ. ಆದರೂ ಯಾರಿಗೂ ಸಮಸ್ಯೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ’ ಎಂದು ಹೇಳಿದರು.