Skip to main content

3Kaala News

ಸುಭಾಷಿತ 

ಯಾರಿಗಾದರೂ ಅವರು ಕೃತಜ್ಞತೆಯಿಂದ ಸ್ವೀಕರಿಸಲು ಸಾಧ್ಯವಾಗುವಷ್ಟು ಮಾತ್ರ ಸಹಾಯ ಮಾಡಿ. ನೀವು ಅವನಿಗೆ ಹೆಚ್ಚು ಸಹಾಯ ಮಾಡಿದರೆ, ಅವನು ಅದನ್ನು ತನ್ನ ಹಕ್ಕು ಎಂದು ಪರಿಗಣಿಸಲು ಪ್ರಾರಂಭಿಸುತ್ತಾನೆ. ಮತ್ತು ಅವನು ಅದನ್ನು ಪಡೆಯದಿದ್ದಾಗ, ಅದೇ ವ್ಯಕ್ತಿ ನಿಮ್ಮ ಶತ್ರುವಾಗುತ್ತಾನೆ.

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

admin

ನಂಜನಗೂಡಿನಲ್ಲಿ ಈಶ ಗ್ರಾಮೋತ್ಸವ ಸಂಭ್ರಮ: ಕಳೆಗಟ್ಟಿದ ಗ್ರಾಮೀಣ ಕ್ರೀಡೋತ್ಸವ

ನಂಜನಗೂಡು; ನಂಜನಗೂಡಿನ ಜೆ.ಎಸ್.ಎಸ್ ಆರ್ಟ್್ಸ, ಕಾಮರ್ಸ್ ಮತ್ತು ಸೈನ್ಸ್ ಕಾಲೇಜಿನಲ್ಲಿ ಈಶ ಗ್ರಾಮೋತ್ಸವ ಸಂಭ್ರಮದಿAದ ನಡೆಯಿತು. ಈಶ ಔಟ್‌ರೀಚ್ ಆಯೋಜಿಸುವ ‘ಈಶ ಗ್ರಾಮೋತ್ಸವ’ವು ಭಾರತದ ಅತಿ ದೊಡ್ಡ ಗ್ರಾಮೀಣ ಕ್ರೀಡಾ ಹಬ್ಬವಾಗಿದ್ದು, ಕ್ರೀಡೆಯ ಮೂಲಕ ಗ್ರಾಮೀಣ ಸಮಾಜವನ್ನು ಒಂದೆಡೆ ತರುವ ಹಾಗೂ ಬೇರುಮಟ್ಟದ ಆಟಗಾರರಲ್ಲಿ ತಂಡದ ಮನೋಭಾವ, ಆತ್ಮವಿಶ್ವಾಸ ಮತ್ತು ಸಮುದಾಯ ಪ್ರಜ್ಞೆಯನ್ನು ಬೆಳೆಸುವ ಉದ್ದೇಶವನ್ನು ಹೊಂದಿದೆ. ಈ ಕೂಟದಲ್ಲಿ ನಂಜನಗೂಡಿನ ವಿವಿಧ ಹಳ್ಳಿಗಳಿಂದ ಒಟ್ಟು 290 ಪುರುಷ ವಾಲಿಬಾಲ್ ಆಟಗಾರರು ಮತ್ತು ಮಹಿಳೆಯರ ಥ್ರೋಬಾಲ್ ಆಟಗಾರ್ತಿಯರು…

Read More

ದೇಶದಲ್ಲಿ ಕಾಂಗ್ರೆಸ್ ಪಕ್ಷದ ಪುನರ್ ಸಂಘಟನೆಗೆ ಅಭಿಯಾನ ಆರಂಭವಾಗಿದೆ ; ಎಐಸಿಸಿ ಉಸ್ತುವಾರಿ ಜಾರ್ಖಂಡ್ ಪಿಸಿಸಿ ಮಾಜಿ ಅಧ್ಯಕ್ಷ ರಾಜೇಶ್ ಠಾಕೂರ್

ಹುಣಸೂರು; ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನಖರ್ಗೆ , ಸೋನಿಯಾ ಗಾಂಧಿ, ಅವರ ನಿರ್ದೇಶನದಂತೆ ಹಾಗೂ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ಚಿಂತನೆಗಳನ್ನು ತಳ ಮಟ್ಟದಲ್ಲಿ ಜಾರಿಗೊಳಿಸಿ ದೇಶದಲ್ಲಿ ಕಾಂಗ್ರೆಸ್ ಪಕ್ಷದ ಪುನರ್ ಸಂಘಟನೆಗೆ ಅಭಿಯಾನ ಆರಂಭವಾಗಿದೆ ಎಂದು ಎಐಸಿಸಿ ಉಸ್ತುವಾರಿ ಜಾರ್ಖಂಡ್ ಪಿಸಿಸಿ ಮಾಜಿ ಅಧ್ಯಕ್ಷ ರಾಜೇಶ್ ಠಾಕೂರ್ ಹೇಳಿದರು.ಸೋಮವಾರ ಹುಣಸೂರು ನಗರದ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಸಂಘಟನ್ ಸೃಜನ್ ಅಭಿಯಾನ್ ಕಾರ್ಯ ಕ್ರಮದಲ್ಲಿ ಮಾತನಾಡಿದ ಅವರು, ಸಂಘಟನೆಯ ಅತ್ಯಂತ ಪ್ರಮುಖ ಆಧಾರದಾರರಾದ ಬೂತ್…

Read More

ಪೋಲೀಸ್ ಇಲಾಖೆಗೆ ಸೇರಲು ಇಚ್ಚಿಸುವವರು ಪ್ರಾಮಾಣಿಕವಾಗಿ ಜನಸೇವೆಯನ್ನು ಮಾಡುವ ಮನೋಭಾವ ಹೊಂದಿರಬೇಕು.

ಮೈಸೂರು; ಪೋಲೀಸ್ ಇಲಾಖೆಗೆ ಸೇರಲು ಇಚ್ಚಿಸುವವರು ಪ್ರಾಮಾಣಿಕವಾಗಿ ಜನಸೇವೆಯನ್ನು ಮಾಡುವ ಮನೋಭಾವ ಹೊಂದಿರಬೇಕು ಎಂದು ನಿವೃತ್ತ ಸಹಾಯಕ ಪೊಲೀಸ್ ಆಯುಕ್ತ ಡಿ. ಧನಂಜಯ ತಿಳಿಸಿದರು.ರಾಜ್ಯಮಟ್ಟದಲ್ಲಿ ನಡೆಯಲಿರುವ ಸಿವಿಲ್ ಪೋಲೀಸ್ ಕಾನ್ಸ್ ಟೇಬಲ್ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆ ಉದ್ಯೋಗಾಕಾಂಕ್ಷಿಗಳ ನೆರವಿಗಾಗಿ ಮೈಸೂರು ನಗರ ಕೇಂದ್ರ ಗ್ರಂಥಾಲಯ ಹಾಗೂ ಬೆಂಗಳೂರಿನ ಜ್ಞಾನಗಂಗೋತ್ರಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ಸಹಯೋಗದಲ್ಲಿ ಸೋಮವಾರ ನಡೆದ ಪ್ರಚಲಿತ ವಿಷಯಗಳು ಹಾಗೂ ಬೌದ್ಧಿಕ ಸಾಮರ್ಥ್ಯ ವಿಷಯಕ್ಕೆ ಸಂಬAಧಿಸಿದAತೆ 7ನೇ ಉಚಿತ ಅಣಕು ಪರೀಕ್ಷೆಗೆ ಚಾಲನೆ ನೀಡಿ…

Read More

ಸೇವಾ ಮನೋಭಾವದಿಂದ ಆಯೋಜನೆ ಮಾಡುವ ಕಾರ್ಯಗಳು ಸಮಾಜಕ್ಕೆ ಸದುಪಯೋಗವಾಗಲಿವೆ

ಮೈಸೂರು: ಸೇವಾ ಮನೋಭಾವದಿಂದ ಆಯೋಜನೆ ಮಾಡುವ ಕಾರ್ಯಗಳು ಸಮಾಜಕ್ಕೆ ಸದುಪಯೋಗವಾಗಲಿವೆ ಎಂದು ರಾಘವೇಂದ್ರ ಸೇವಾ ಟ್ರಸ್ಟ್ ಕಾರ್ಯಾಧ್ಯಕ್ಷ ಮತ್ತು ಹಿರಿಯ ವಕೀಲ ಕೆ.ಆರ್. ಶಿವಶಂಕರ್ ಹೇಳಿದರು.ನಗರದ ಟಿ.ಕೆ. ಬಡಾವಣೆಯ ರಾಯರ ಮಠದ ಸಾಮಾಜಿಕ ಸೇವಾ ಕಾರ್ಯಕ್ರಮದ ಅಡಿಯಲ್ಲಿ ಭಾನುವಾರ ಕಲ್ಪವೃಕ್ಷ ಪ್ರಾರ್ಥನಾ ಮಂದಿರದಲ್ಲಿ ಶ್ರೀ ಗುರು ರಾಘವೇಂದ್ರ ಸೇವಾ ಟ್ರಸ್ಟ್, ಜಿಲ್ಲಾ ಬ್ರಾಹ್ಮಣ ಸಂಘ ಮತ್ತು ಕರ್ನಾಟಕ ವಿಪ್ರ ವಕೀಲರ ಸಂಘದ ಸಂಯಕ್ತ ಆಶ್ರಯದಲ್ಲಿ ಸಾರ್ವಜನಿಕರಿಗಾಗಿ ಹಮ್ಮಿಕೊಂಡಿದ್ದ ಹೃದಯ ತಪಾಸಣೆ, ಕೀಲು ಮತ್ತು ಮಂಡಿ ನೋವಿನ ಉಚಿತ…

Read More

ವಿಜಯ ವಿಠ್ಠಲ ಪದವಿ ಪೂರ್ವ ಕಾಲೇಜಿನಲ್ಲಿ ಕಾರ್ಗಿಲ್ ವಿಜಯ ದಿನ

ಮೈಸೂರು; ನಗರದ ವಿಜಯ ವಿಠ್ಠಲ ಪದವಿ ಪೂರ್ವ ಕಾಲೇಜಿನಲ್ಲಿ ಕಾರ್ಗಿಲ್ ವಿಜಯ ದಿನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾಲೇಜಿನ ಪ್ರಾಂಶುಪಾಲ ಎಚ್ ಸತ್ಯಪ್ರಸಾದ್ ಮಾತನಾಡಿ, ಕಾರ್ಗಿಲ್ ಯುದ್ಧದಲ್ಲಿ ದೇಶದ ರಕ್ಷಣೆಗಾಗಿ ಪ್ರಾಣತೆತ್ತ ಯೋಧರನ್ನು ನೆನೆಯುವುದು ಹಾಗೂ ಅವರ ಬಲಿದಾನ ಸ್ಮರಿಸುವುದು ನಮ್ಮ ಆದ್ಯ ಕರ್ತವ್ಯ. ಈ ದಿನವು ನಮ್ಮ ದೇಶದ ಸಾರ್ವಭೌಮತ್ವವನ್ನು ಕಾಪಾಡಲು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ದೇಶದ ಸೈನಿಕರಿಗೆ ಗೌರವ ಸಲ್ಲಿಸುವ ದಿನವಾಗಿದೆ ಎಂದರು.1999ರಲ್ಲಿ “ಆಪರೇಷನ್ ವಿಜಯ್” ಕಾರ್ಯಾಚರಣೆಯ ಮೂಲಕ ಅತÀ್ಯಂತ ಕಠಿಣ ಹವಾಮಾನ, ಹಿಮಾಚ್ಛಾದಿತ…

Read More

ಮಾಜಿ ಸೈನಿಕರುಗಳ ಸತ್ಯ ಮೇವ ಜಯತೇ ಟೀಮ್ ವತಿಯಿಂದ 27ನೇ ಕಾರ್ಗಿಲ್ ವಿಜಯೋತ್ಸವ ಆಚರಣೆ

ಮೈಸೂರು: ನಗರದ ನಾರಾಯಣ ಶಾಸ್ತಿç ರಸ್ತೆಯಲ್ಲಿರುವ ಸ್ವಾತಂತ್ರ ಹೋರಾಟಗಾರರ ಉದ್ಯಾನವನ ಸುಬ್ಬರಾಯನಕೆರೆಯಲ್ಲಿ ಸತ್ಯ ಮೇವ ಜಯತೇ ತಂಡದಿAದ 27ನೇ ಕಾರ್ಗಿಲ್ ವಿಜಯೋತ್ಸವ ಆಚರಣೆ ಮಾಡಲಾಯಿತು.ದೇಶದ ಗಡಿಯನ್ನು ಕಾಪಾಡಲು ತಮ್ಮ ಪ್ರಾಣವನ್ನು ಅರ್ಪಿಸಿದ ಅಮರ ವೀರಯೋಧರಾದ ಕ್ಯಾಪ್ಟನ್ ವಿಕ್ರಂ ಭತ್ರ,ಕ್ಯಾಪ್ಟನ್ ಸೌರಭ ಕಾಲಿಯ, ಲೆಫ್ಟಿನೆಂಟ್ ಮನೋಜ್ ಕುಮಾರ್ ಪಾಂಡೆ ರವರ ಭಾವಚಿತ್ರಕ್ಕೆ ಗಣ್ಯರಿಂದ ತುಪ್ಪದ ದೀಪವನ್ನು ಹಚ್ಚಿ, ಭಾರತ್ ಮಾತಾ ಕೀ ಜೈ, ಅಮರ ವೀರ ಯೋಧರುಗಳಿಗೆ ಜೈ ಎಂಬ ಜೈಕಾರಗಳನ್ನು ಕೂಗುತ್ತಾ ಪುಷ್ಪಾರ್ಚನೆ ಮಾಡಲಾಯಿತು.ಈ ವೇಳೆ ಮಾತನಾಡಿದ…

Read More

ಕ್ರೀಡಾ ಪಟುಗಳು ಪ್ರತಿಯೊಬ್ಬರಿಗೂ ಮಾದರಿಯಾಗಬೇಕು; ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಎಂ.ಎನ್ ಅನುಚೇತ್

ಮೈಸೂರು: ಕ್ರೀಡಾ ವಸತಿ ನಿಲಯಗಳಲ್ಲಿರುವ ವಿದ್ಯಾರ್ಥಿನಿಯರು ಕ್ರೀಡೆ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿ, ಪ್ರತಿಯೊಬ್ಬ ಯುವ ಜನರಿಗೆ ಮಾದರಿಯಾಗಬೇಕು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಎಂ.ಎನ್ ಅನುಚೇತ್ ತಿಳಿಸಿದರು.ಸೋಮವಾರ ಮೈಸೂರಿನ ಚಾಮುಂಡಿ ವಿಹಾರ್ ಕ್ರೀಡಾಂಗಣದಲ್ಲಿರುವ ಕ್ರೀಡಾ ವಸತಿನಿಲಯಕ್ಕೆ ಭೇಟಿ ನೀಡಿ ವಿದ್ಯಾರ್ಥಿನಿಯರೊಂದಿಗೆ ವಸತಿನಿಲಯಗಳಲ್ಲಿ ದೊರಕುತ್ತಿರುವ ಆಹಾರ, ತರಬೇತಿ ಹಾಗೂ ಇನ್ನಿತರೆ ವ್ಯವಸ್ಥೆಗಳ ಬಗ್ಗೆ ಚರ್ಚಿಸಿದರು. ವಿದ್ಯಾರ್ಥಿನಿಯರೊಂದಿಗೆ ಊಟ ಮಾಡಿ ಆಹಾರದ ಗುಣಮಟ್ಟ…

Read More

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತರಿಂದ ಅರೆ ಬೆತ್ತಲೆ ಪ್ರತಿಭಟನೆ

ಮೈಸೂರು; ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸೋಮವಾರ ಮೈಸೂರಿನಲ್ಲಿ ರೈತರು ಪ್ರತಿಭಟನೆ ನಡೆಸಿದರು.ಕಬ್ಬು ಬೆಳೆಗಾರ ಸಂಘದ ರಾಜ್ಯ ಅಧ್ಯಕ್ಷ ಹಳ್ಳಿಕೆರೆ ಹುಂಡಿ ಭಾಗ್ಯರಾಜ್ ನೇತೃತ್ವದಲ್ಲಿ ಮೈಸೂರಿನ ಸಿದ್ಧಾರ್ಥನಗರದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಮುಂದೆ ಜಮಾಯಿಸಿದ ಪ್ರತಿಭಟನಾಕಾರರು ಅರೆ ಬೆತ್ತಲೆ ಚಳುವಳಿ ನಡೆಸಿ ಜಿಲ್ಲಾಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ಹಕ್ಕು ಒತ್ತಾಯ ಸಲ್ಲಿಸಿದರು.ರಾಜ್ಯದಲ್ಲಿ ಸುಮಾರು 20ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಬರದ ಛಾಯೆ ಆವರಿಸಿದ್ದು, ಜಾನುವಾರುಗಳಿಗೆ ಮೇವು ನೀರು, ಜನರಿಗೆ ಕುಡಿಯಲು ನೀರು ಸಾಕಷ್ಟು ಇಲ್ಲ. ಹಾಕಿರುವ ಬೆಳೆ ರಾಗಿ, ಜೋಳ, ಮೆಕ್ಕೆಜೋಳ,…

Read More

ಒಂದು ವಾರ ಕಾಲ ಜೆಎಸ್‌ಎಸ್ ಅರ್ಬನ್ ಹಾತ್‌ನಲ್ಲಿ ಗಾಂಧಿ ಶಿಲ್ಪ ಬಜಾರ್ ಕರಕುಶಲ ಮೇಳ

ಮೈಸೂರು; ನಗರದ ಹೆಬ್ಬಾಳ್‌ನಲ್ಲಿರುವ ಜೆ ಎಸ್ ಎಸ್ ಮೈಸೂರು ಅರ್ಬನ್ ಹಾತ್ ನಲ್ಲಿ ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇಳ- ಗಾಂಧೀ ಶಿಲ್ಪ ಬಜಾರ್‌ನ್ನು ಜುಲೈ 28 ರಿಂದ ಮೇ 3ರ ತನಕ ಆಯೋಜಿಸಲಾಗಿದೆ ಎಂದು ಜೆಎಸ್‌ಎಸ್ ಮಹಾವಿದ್ಯಾಪೀಠದ ತಾಂತ್ರಿಕ ಶಿಕ್ಷಣ ವಿಭಾಗದ ಉಪನಿರ್ದೇಶಕ ಬಿ.ಇಳಂಗೋವನ್ ತಿಳಿಸಿದರು.ಸೋಮವಾರ ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಭಿವೃದ್ಧಿ ಆಯುಕ್ತರು (ಕರಕುಶಲ), ಜವಳಿ ಸಚಿವಾಲಯ, ಭಾರತ ಸರ್ಕಾರ, ನವದೆಹಲಿ ಕಚೇರಿಯ ಪ್ರಾಯೋಜಕತ್ವದಲ್ಲಿ, ಜೆಎಸ್‌ಎಸ್ ಮೈಸೂರು…

Read More

ಕಬ್ಬು ಬೆಳೆಗಾರರ ಮುತ್ತಿಗೆ ಕಾರ್ಖಾನೆ ಗೇಟ್ ಮೇಲೇರಿ ಬನ್ನಾರಿ ಕಾರ್ಖಾನೆಗೆ ನುಗ್ಗಿದ ರೈತರು ; ಕಬ್ಬಿನ ಬಾಕಿ ಹಣ ವಸೂಲಿಗಾಗಿ ಆಗ್ರಹಿಸಿ ಪ್ರತಿಭಟನೆ

ನಂಜನಗೂಡು; ಕಬ್ಬು ಬೆಳೆಗಾರರ ಬಾಕಿ ಹಣ ಪಾವತಿಸುವಂತೆ ನಂಜನಗೂಡು ತಾಲೂಕಿನ ಬನ್ನಾರಿ ಸಕ್ಕರೆ ಕಾರ್ಖಾನೆಗೆ ರೈತರು ಸೋಮವಾರ ಮುತ್ತಿಗೆ ಹಾಕಿ ಬೃಹತ್ ಪ್ರತಿಭಟನೆ ನಡೆಸಿದರು.ಕಾರ್ಖಾನೆಯ ಮುಖ್ಯ ಗೇಟ್ ಬಾಗಿಲು ಮುಚ್ಚಿದ ಕಾರಣ ಗೇಟ್ ಮೇಲೇರಿ ಒಳ ನುಗ್ಗಿದ ರೈತರು ಕಾರ್ಖಾನೆ ಆಡಳಿತ ಕಚೇರಿ ಮುಂದೆ ಜಮಾಯಿಸಿ ಧಿಕ್ಕಾರದ ಘೋಷಣೆಗಳನ್ನು ಕೂಗಿದರು.ಪ್ರತಿಭಟನೆಯ ನೇತೃತ್ವದ ವಹಿಸಿದ್ದ ರಾಜ್ಯ ಕಬ್ಬು ಬೆಳೆಗಾರ ಸಂಘದ ರಾಜ್ಯಾಧ್ಯಕ್ಷ ಕುರುಬುರು ಶಾಂತಕುಮಾರ್ ಮಾತನಾಡಿ, 1966 ಸಕ್ಕರೆ ನಿಯಂತ್ರಣ ಕಾಯ್ದೆ ಪ್ರಕಾರ, ಸಕ್ಕರೆ ಕಾರ್ಖಾನೆ ಆರಂಭಕ್ಕೂ ಮುನ್ನ…

Read More