ಅಂಚೆ ಸಿಬ್ಬಂದಿ ಮೂಲಕ ಮನೆ ಬಾಗಿಲಲ್ಲೇ ಡಿಜಿಟಲ್ ಜೀವನ್ ಪ್ರಮಾಣಪತ್ರ ಸಲ್ಲಿಕೆ ಸೌಲಭ್ಯ
ಮೈಸೂರು: ಕರ್ನಾಟಕ ಮತ್ತು ರಾಷ್ಟ್ರಾದ್ಯಂತ ಇರುವ ಕೋಟ್ಯಾಂತರ ಪಿಂಚಣಿದಾರರಿಗೆ ಅನುಕೂಲವಾಗುವಂತೆ ಅಂಚೆ ಇಲಾಖೆಯು ಇಂಡಿಯಾ ಪೋಸ್ಟ್ಸ್ ಪೇಮೆಂಟ್ಸ್ ಬ್ಯಾಂಕ್ ಮೂಲಕ ಮನೆ ಬಾಗಿಲಲ್ಲೇ ಡಿಜಿಟಲ್ ಜೀವನ್ ಪ್ರಮಾಣಪತ್ರ ಸಲ್ಲಿಸುವ ಸೇವೆಯನ್ನು ಒದಗಿಸುತ್ತಿದೆ ಎಂದು ನಂಜನಗೂಡು ವಿಭಾಗದ ಅಂಚೆ ಅಧೀಕ್ಷಕರು ತಿಳಿಸಿದ್ದಾರೆ.
ಪಿಂಚಣಿದಾರರು ಪ್ರತಿವರ್ಷ ತಮ್ಮ ಪಿಂಚಣಿ ತಡೆರಹಿತವಾಗಿ ಬರಲು ಜೀವನ್ ಪ್ರಮಾಣಪತ್ರ ಸಲ್ಲಿಸುವುದು ಕಡ್ಡಾಯವಾಗಿದ್ದು, ನೇರವಾಗಿ ಕಚೇರಿಗಳಿಗೆ ತೆರಳಿ ಅನುಭವಿಸುವ ಶ್ರಮವನ್ನು ತಪ್ಪಿಸಲು, ಅಂಚೆ ಸಿಬ್ಬಂದಿಯ (ಪೋಸ್ಟ್ಮನ್ ಮತ್ತು ಗ್ರಾಮೀಣ ಡಾಕ್ ಸೇವಕರು) ಸಹಾಯದಿಂದ ಬಯೋಮೆಟ್ರಿಕ್ ಅಥವಾ ಫೇಸ್ ಆರ್ ಡಿ ಆಪ್ ಬಳಸಿ ಕೆಲವೇ ನಿಮಿಷಗಳಲ್ಲಿ ಮನೆ ಬಾಗಿಲಲ್ಲೇ ಪ್ರಮಾಣಪತ್ರ ಪಡೆಯಬಹುದು. ಸಾಮಾನ್ಯ ಪಿಂಚಣಿದಾರರಿಗೆ ಕೇವಲ 70 ರೂ ಸೇವಾ ಶುಲ್ಕವಿದ್ದು, ಇಪಿಎಫ್ಒ ಹಾಗೂ ದೂರಸಂಪರ್ಕ ಇಲಾಖೆಯ ಪಿಂಚಣಿದಾರರಿಗೆ ಈ ಸೇವೆ ಸಂಪೂರ್ಣ ಉಚಿತವಾಗಿರುತ್ತದೆ.
ಈ ಸೇವೆಗೆ ಸಂಬAಧಿಸಿದAತೆ ನವೆಂಬರ್ 1 ರಿಂದ ಎಲ್ಲಾ ಅಂಚೆ ಕಚೇರಿಗಳಲ್ಲಿ ವಿಶೇಷ ಶಿಬಿರಗಳನ್ನು ಆಯೋಜಿಸಲಾಗುತ್ತಿದ್ದು, ಅರ್ಹ ಪಿಂಚಣಿದಾರರು ಆಧಾರ್, ಮೊಬೈಲ್ ಹಾಗೂ ಪಿಪಿಒ ಸಂಖ್ಯೆಗಳೊAದಿಗೆ ತಮ್ಮ ಹತ್ತಿರದ ಅಂಚೆ ಸಿಬ್ಬಂದಿಯನ್ನು ಸಂಪರ್ಕಿಸಿ ಇದರ ಸೌಲಭ್ಯ ಪಡೆಯಬಹುದು ಎಂದು ನಂಜನಗೂಡು ವಿಭಾಗದ ಅಂಚೆ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
--°C
Mysore, IN
Loading...