Skip to main content

3Kaala News

ಸುಭಾಷಿತ 

ಪಕ್ಕದಲ್ಲಿರುವವನ ತಟ್ಟೆಯಲ್ಲಿ ಏನಿದೆ ಅಂತ ಯಾವತ್ತೂ ಇಣುಕಿ ನೋಡಬೇಡ. ಕಾರಣ ಅಲ್ಲಿ ಜಾಸ್ತಿಯಿದ್ದರೆ, ನಿನಗೆ ಸಂಕಟವಾಗುತ್ತದೆ.ಅಲ್ಲಿ ಕಡಿಮೆ ಇದ್ದರೆ, ನಿನಗೆ ಅಹಂಕಾರ ಬರುತ್ತದೆ.ಎರಡೂ ಒಳ್ಳೆಯದಲ್ಲ.ನಮ್ಮ ತಟ್ಟೆಯನ್ನು ನಾವು ನೋಡಿಕೊಂಡಿದ್ದರೆ, ಸಿಗುವ ಸಂತೋಷವೇ ಬೇರೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಅರಮನೆ ಸರ್ಕಾರದ್ದು ಎಂಬ ಸಚಿವ ಡಾ. ಯತೀಂದ್ರ ರವರ ಹೇಳಿಕೆ ಅವೈಜ್ಞಾನಿಕ : ಎಲ್.ಆರ್. ಮಹದೆವಸ್ವಾಮಿ

ಮೈಸೂರು; ಮೈಸೂರಿನ ವಿಶ್ವಪ್ರಸಿದ್ಧ ಅಂಬಾವಿಲಾಸ ಅರಮನೆ ಸರ್ಕಾರದ್ದು ಎಂದು ನಗರಾಭಿವೃದ್ಧಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯನವರು ನೀಡಿರುವ ಹೇಳಿಕೆ ಅವ್ಶೆಜ್ಞಾನಿಕವಾಗಿದೆ ಎಂದು ಬಿಜೆಪಿಯ ಮೈಸೂರು ಗ್ರಾಮಾಂತರ ಮಾಜಿ ಜಿಲ್ಲಾಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ ಟೀಕಿಸಿದ್ದಾರೆ.ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಮೈಸೂರು ಸಂಸ್ಥಾನವನ್ನು 1399 ರಿಂದ 1947 ರವರೆಗೆ ಆಳಿದ ಯದುವಂಶದ ಒಡೆಯರ್ ರಾಜರುಗಳು ಮೈಸೂರು ಅರಮನೆಯ ನಿರ್ಮಾಣ,ಪುನರುತ್ಥಾನ ಮತ್ತು ಸಾಂಸ್ಕöÈತಿಕ ಭವ್ಯತೆಗೆ ಅತ್ಯಮೂಲ್ಯ ಕೊಡುಗೆಗಳನ್ನು ನೀಡಿದ್ದಾರೆ. ಈಗಿನ ಕೃಷ್ಣರಾಜಸಾಗರ (ಕೆ.ಆರ್.ಎಸ್ ) ಅಣೆಕಟ್ಟು ಮೈಸೂರು ರಾಜರ…

Read More

ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿಮೈಸೂರು: ಇಲ್ಲಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ ಬ್ಯಾಂಕಿAಗ್, ಎಸ್‌ಎಸ್‌ಸಿ ಹಾಗೂ ಆರ್‌ಆರ್‌ಬಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ಗ್ರಾಮೀಣ ಮತ್ತು ನಗರ ಪ್ರದೇಶದ ಪದವೀಧರರಿಗಾಗಿ 45 ದಿನಗಳ ಉಚಿತ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ.ವಿವಿಧ ರಾಷ್ಟ್ರೀಯ ಮತ್ತು ಖಾಸಗಿ ವಲಯದ ಬ್ಯಾಂಕ್‌ಗಳು, ಎಸ್‌ಎಸ್‌ಸಿ ಹಾಗೂ ರೈಲ್ವೆ ನೇಮಕಾತಿ ಮಂಡಳಿಯ ಹುದ್ದೆಗಳಿಗೆ ಹಾಜರಾಗುವ ಆಸಕ್ತ ಅಭ್ಯರ್ಥಿಗಳು ಅ. 31 ರ ಒಳಗೆ ಬೆಳಿಗ್ಗೆ 10 ಗಂಟೆಯಿAದ ಸಂಜೆ…

Read More

ಅಂಚೆ ಸಿಬ್ಬಂದಿ ಮೂಲಕ ಮನೆ ಬಾಗಿಲಲ್ಲೇ ಡಿಜಿಟಲ್ ಜೀವನ್ ಪ್ರಮಾಣಪತ್ರ ಸಲ್ಲಿಕೆ ಸೌಲಭ್ಯಮೈಸೂರು: ಕರ್ನಾಟಕ ಮತ್ತು ರಾಷ್ಟ್ರಾದ್ಯಂತ ಇರುವ ಕೋಟ್ಯಾಂತರ ಪಿಂಚಣಿದಾರರಿಗೆ ಅನುಕೂಲವಾಗುವಂತೆ ಅಂಚೆ ಇಲಾಖೆಯು ಇಂಡಿಯಾ ಪೋಸ್ಟ್ಸ್ ಪೇಮೆಂಟ್ಸ್ ಬ್ಯಾಂಕ್ ಮೂಲಕ ಮನೆ ಬಾಗಿಲಲ್ಲೇ ಡಿಜಿಟಲ್ ಜೀವನ್ ಪ್ರಮಾಣಪತ್ರ ಸಲ್ಲಿಸುವ ಸೇವೆಯನ್ನು ಒದಗಿಸುತ್ತಿದೆ ಎಂದು ನಂಜನಗೂಡು ವಿಭಾಗದ ಅಂಚೆ ಅಧೀಕ್ಷಕರು ತಿಳಿಸಿದ್ದಾರೆ.ಪಿಂಚಣಿದಾರರು ಪ್ರತಿವರ್ಷ ತಮ್ಮ ಪಿಂಚಣಿ ತಡೆರಹಿತವಾಗಿ ಬರಲು ಜೀವನ್ ಪ್ರಮಾಣಪತ್ರ ಸಲ್ಲಿಸುವುದು ಕಡ್ಡಾಯವಾಗಿದ್ದು, ನೇರವಾಗಿ ಕಚೇರಿಗಳಿಗೆ ತೆರಳಿ ಅನುಭವಿಸುವ ಶ್ರಮವನ್ನು ತಪ್ಪಿಸಲು, ಅಂಚೆ ಸಿಬ್ಬಂದಿಯ…

Read More

ಮಿನಿ ಉದ್ಯೋಗ ಮೇಳಮೈಸೂರು; ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ವತಿಯಿಂದ ನಗರಾಭಿವೃದ್ಧಿ ಹಾಗೂ ಉದ್ಯೋಗಾವಕಾಶ ಹೆಚ್ಚಿಸುವ ನಿಟ್ಟಿನಲ್ಲಿ ಅಕ್ಟೋಬರ್ 30 ರಂದು ಬೆಳಿಗ್ಗೆ 10 ಗಂಟೆಗೆ ಮೈಸೂರಿನ ಸಿದ್ದಾರ್ಥ್ ನಗರದಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಕಚೇರಿ ಇಲ್ಲಿ ಮಿನಿ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ.ಮೈಸೂರಿನ ಪ್ರಸಿದ್ಧ ಸಂಸ್ಥೆಗಳಾದ ಪ್ಯಾಲೇಸ್ ಸೋಡಾ ಮತ್ತು ಎಚ್.ಡಿ.ಎಫ್.ಸಿ ಲೈಫ್ ಕಂಪನಿಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ನೇರ ಸಂದರ್ಶನದ ಮೂಲಕ ನೇಮಕಾತಿ ಪ್ರತಿಗಳೊಂದಿಗೆ ಮೈಸೂರಿನ ಸಿದ್ಧಾರ್ಥನಗರದಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರಕ್ಕೆ…

Read More

ವೀರಶೈವ ಲಿಂಗಾಯತ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ 

ಎಚ್ ಡಿ ಕೋಟೆ : ವೀರಶೈವ ಲಿಂಗಾಯತ ಸಮಾಜ ಪ್ರತಿಯೊಂದು ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರ ಬೆಳವಣಿಗೆಯಲ್ಲಿ ತಾನು ಬೆಳವಣಿಗೆ ಕಾಣುತ್ತಿರುವ ಸಮಾಜ.  ಪ್ರತಿಯೊಂದು ರೀತಿಯಲ್ಲೂ ಸಮಾಜಕ್ಕೆ ಕೊಡುಗೆ ನೀಡುತ್ತಾ ಬರುತ್ತಿರುವ ಸಮುದಾಯ ಇವತ್ತು, ಸಂಘಟನೆ ವಿಚಾರ ಬಂದಾಗ ಪ್ರಶ್ನೆ ತಲೆದೂರಿದೆ.  ಈ ನಿಟ್ಟಿನಲ್ಲಿ ರಾಜಕೀಯವಾಗಿ ಸಂಘಟನಾತ್ಮಕವಾಗಲು ಸಮುದಾಯದ  ಪ್ರತಿಯೊಬ್ಬರೂ ಸದಸ್ಯತ್ವ ನೋಂದಣಿ ಮಾಡಿಸಿಕೊಳ್ಳಬೇಕಾಗಿದೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾದ  ರಾಷ್ಟ್ರೀಯ ಯುವ ಘಟಕದ ಅಧ್ಯಕ್ಷ ವೆಂಕಟರೆಡ್ಡಿ ಪಾಟೀಲ್ ಹೇಳಿದರು.  ಪಟ್ಟಣದ ಜೆಎಸ್ ಎಸ್ ಮಂಗಳ…

Read More

ಜಿ.ಪಂ.,ತಾ.ಪ0.ಚುನಾವಣೆಯ ಟಿಕೆಟ್‌ನ್ನು ನೀಡುವ ವಿಚಾರದಲ್ಲಿ ಯಾರಿಗೂ ಭರವಸೆ ನೀಡಿಲ್ಲ; ದೊಡ್ಡಸ್ವಾಮೇಗೌಡ

ಕೆ.ಆರ್.ನಗರ; ಜಿ.ಪಂ.,ತಾ.ಪA.ಚುನಾವಣೆಯ ಟಿಕೆಟ್‌ನ್ನು ನೀಡುವ ವಿಚಾರದಲ್ಲಿ ಯಾರಿಗೂ ಭರವಸೆ ನೀಡಿಲ್ಲ. ಹಾಗಾಗಿ ಯಾರೂ ಕೂಡ ಗೊಂದಲಕ್ಕೀಡಾಗದೇ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವಂತೆ ಎಂಸಿಡಿಸಿಸಿ ಬ್ಯಾಂಕ್‌ಅಧ್ಯಕ್ಷ ದೊಡ್ಡಸ್ವಾಮೇಗೌಡ ಹೇಳಿದರು.ಪಟ್ಟಣದ ಕಾಂಗ್ರೇಸ್ ಕಛೇರಿಯಲ್ಲಿ ಪಕ್ಷದ ವತಿಯಿಂದ ಏರ್ಪಡಿಸಲಾಗಿದ್ದ ಸಂಘಟನ್ ಸೃಜನ್ ಅಭಿಯಾನ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಅಂತಿಮವಾಗಿ ಚುನಾವಣೆ ಘೋಷಣೆಯಾದ ನಂತರ ಆಕಾಂಕ್ಷಿಗಳು ಅಭ್ಯರ್ಥಿಗಳಾಗ ಬಯಸುವವರು ಪಕ್ಷಕ್ಕೆ ಅರ್ಜಿ ಸಲ್ಲಿಸಿದನಂತರ ಸಮಿತಿ ಸಾಧಕಬಾಧಕಗಳನ್ನು ಚರ್ಚಿಸಿ ಯಾರು ಗೆಲ್ಲತ್ತಾರೋ, ಪಕ್ಷಕ್ಕೆ ಯಾರು ದುಡಿದಿದ್ಧಾರೆ ಎಂಬುದನ್ನು ಗಣನೆಗೆ ತೆಗೆದುಕೊಂಡು ನಿರ್ಣಯಿಸಿಲಾಗುವುದು ಎಂದರು.ಪಕ್ಷಕ್ಕೆ ಗೆಲುವು ಪ್ರಮುಖ…

Read More

ಚಾಮುಂಡಿ ಅಂತರವಲಯ ಮಟ್ಟದ ಕ್ರೀಡಾಕೂಟದಲ್ಲಿ ಸದ್ವಿದ್ಯಾ ಪ್ರೌಢಶಾಲೆಗೆ ಸಮಗ್ರ ಪ್ರಶಸ್ತಿ

ಮೈಸೂರು: ಜಿಲ್ಲಾ ಪಂಚಾಯತ್, ಮೈಸೂರು, ಶಾಲಾ ಶಿಕ್ಷಣ ಇಲಾಖೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಉತ್ತರ ವಲಯ, ಮೈಸೂರು ಇವರ ಆಶ್ರಯದಲ್ಲಿ ಆಯೋಜಿಸಲಾಗಿದ್ದ 2026-27ನೇ ಸಾಲಿನ ಚಾಮುಂಡಿ ಅಂತರವಲಯ ಮಟ್ಟದ ಕ್ರೀಡಾಕೂಟದಲ್ಲಿ ವಿಜಯನಗರದ ಸದ್ವಿದ್ಯಾ ಪ್ರೌಢಶಾಲೆ ಶಾಖೆಯು ತಾಲೂಕು ಮಟ್ಟದ ಸಮಗ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡು ಗಮನಾರ್ಹ ಸಾಧನೆ ಮಾಡಿದೆ.ಕ್ರೀಡಾಕೂಟದ ವಿವಿಧ ಸ್ಪರ್ಧೆಗಳಲ್ಲಿ ಶಾಲೆಯ ವಿದ್ಯಾರ್ಥಿಗಳು ಅತ್ಯುತ್ತಮ ಪ್ರದರ್ಶನ ನೀಡಿ, ತಮ್ಮ ಕ್ರೀಡಾ ಪ್ರತಿಭೆ, ಶಿಸ್ತು, ಕ್ರೀಡಾಸ್ಫೂರ್ತಿ ಹಾಗೂ ಸಂಘಟಿತ ಪ್ರಯತ್ನದ ಮೂಲಕ ಈ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾಗಿದ್ದಾರೆ….

Read More

ಮೈಸೂರಿನ ಪಾರ್ಕ್ ನಲ್ಲಿ ಭಾರೀ ಗಾತ್ರದ ಹೆಬ್ಬಾವು ಪತ್ತೆ

ಮೈಸೂರು: ನಗರದ ಜಾಕಿ ಕ್ವಾಟ್ರಸ್ ಬಳಿ ಪಾರ್ಕ್ನಲ್ಲಿ ಬೃಹತ್ ಗಾತ್ರದ ಹೆಬ್ಬಾವು ಕಾಣಿಸಿಕೊಂಡಿದ್ದು, ಅದನ್ನು ಸೆರೆ ಹಿಡಿಯಲಾಯಿತು. ಪಾರ್ಕ್ ಬಳಿ ಇದ್ದ ಸ್ಥಳೀಯರು ಪೊದೆಯೊಳಗೆ ಚಲಿಸುತ್ತಿದ್ದ ಸುಮಾರು 10 ಅಡಿ ಉದ್ದದ ಹೆಬ್ಬಾವನ್ನು ಕಂಡು ಸ್ಥಳೀಯರು ತೀವ್ರ ಆತಂಕಗೊAಡರು. ತಕ್ಷಣ ಉರಗ ತಜ್ಞ ಸ್ನೇಕ್ ಪ್ರದೀಪ್ ಅವರಿಗೆ ಕರೆ ಮಾಡಿದ್ದಾರೆ. ಕೆಲವೇ ನಿಮಿಷಗಳಲ್ಲಿ ಸ್ಥಳಕ್ಕೆ ಬಂದ ಸ್ನೇಕ್ ಪ್ರದೀಪ್, ಟಾರ್ಚ್ ಬೆಳಕಿನಲ್ಲಿ ಅತ್ಯಂತ ಜಾಗರೂಕತೆಯಿಂದ ಹೆಬ್ಬಾವನ್ನು ಹಿಡಿದು ಸುರಕ್ಷಿತವಾಗಿ ಸಂರಕ್ಷಿಸಿ,ಅರಣ್ಯ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ನಗರದ ಹೊರ…

Read More

ರಾಜಮನೆತನದವರ ಕುರಿತು ಸಚಿವರ ಹಗುರ ಮಾತುಗಳು ಸಲ್ಲದು ; ತೋಟದಪ್ಪ ಬಸವರಾಜು

ಮೈಸೂರು; ಮೈಸೂರಿನ ಅಂಬಾವಿಲಾಸ ಅರಮನೆ ಸರ್ಕಾರದ್ದು, ರಾಜ ಮನೆತನದವರು ಇರಲು ಸ್ವಲ್ಪ ಜಾಗ ನೀಡಲಾಗಿದೆ ಅಷ್ಟೇ ಎಂಬ ಉಸ್ತುವಾರಿ ಸಚಿವ ಯತೀಂದ್ರರವರ ಹೇಳಿಕೆಯನ್ನು ಬಿಜೆಪಿ ಮುಖಂಡ ತೋಟದಪ್ಪ ಬಸವರಾಜು ತೀವ್ರವಾಗಿ ಖಂಡಿಸಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಸಂವಿಧಾನದ ಆಶಯದಂತೆ ರಾಜಮನೆತನದವರು ನಡೆದುಕೊಂಡು ಮಾದರಿ ಎನಿಸಿಕೊಂಡಿದ್ದಾರೆ. ಸಾರ್ವಜನಿಕರ ಸ್ವತ್ತಾಗಿದ್ದ ಮೂಡಾದ 14 ಸೈಟುಗಳನ್ನು ಪ್ರಜಾಪ್ರಭುತ್ವಕ್ಕೆ ಸರ್ಕಾರಕ್ಕೆ ಮೋಸ ಮಾಡಿ, ಕದ್ದ ಮಾಲನ್ನು ವಾಪಸ್ ನೀಡುವ ಕಳ್ಳರಂತೆ ವಾಪಸ್ ಮಾಡಿರುವವರಿಗೆ, ರಾಜ ಮನೆತನದವರ ಬಗ್ಗೆ ಮಾತನಾಡುವ ನೈತಿಕತೆ…

Read More

ಐಟಿ ಬಿಟಿ ಕಂಪನಿಗಳು, ಸ್ಥಳೀಯ ಕನ್ನಡಿಗರಿಗೆ ಉದ್ಯೋಗ ನೀಡದೆ ನಿರಾಕರಿಸುತ್ತಿರುವುದನ್ನು ವಿರೋಧಿಸಿ ಪ್ರತಿಭಟನೆ

ಮೈಸೂರು; ಬೆಂಗಳೂರಿನಲ್ಲಿರುವ ಐಟಿ ಬಿಟಿ ಕಂಪನಿಗಳು, ಸ್ಥಳೀಯ ಕನ್ನಡಿಗರಿಗೆ ಉದ್ಯೋಗ ನೀಡದೆ ನಿರಾಕರಿಸುತ್ತಿರುವ ಕ್ರಮವನ್ನು ಖಂಡಿಸಿ ಮಂಗಳವಾರ ಕರ್ನಾಟಕ ಸೇನಾಪಡೆಯಿಂದ ಪ್ರತಿಭಟನೆ ನಡೆಸಲಾಯಿತು.ನಗರದ ಹಳೆ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು ಕೆಲಕಾಲ ಧರಣಿ ನಡೆಸಿ, ನಾನಾ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ಬೆಂಗಳೂರಿನ ಐಟಿ ಕಂಪನಿಗಳು ಹೊರರಾಜ್ಯದವರನ್ನು ಕಡಿಮೆ ವೇತನಕ್ಕೆ ನೇಮಕ ಮಾಡಿಕೊಳ್ಳುತ್ತಿವೆ. ಮತ್ತು ಸ್ಥಳೀಯ ಕನ್ನಡಿಗರನ್ನು ಹಾಗೂ ಮಾತೃಭಾಷೆ ಕನ್ನಡ ಇರುವವರನ್ನು ಕಡೆಗಣಿಸುತ್ತಿವೆ ಎಂದು ಯುವತಿಯೊಬ್ಬರು ವಿಡಿಯೋ ಮೂಲಕ ಅಸಮಾಧಾನ ವ್ಯಕ್ತಪಡಿಸಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ“ಕನ್ನಡಿಗರಿಗೆ…

Read More