Skip to main content

3Kaala News

ಸುಭಾಷಿತ 

ನಾವು ಏನು ಹೇಳುತ್ತೇವೆ ಅನ್ನೋದಕ್ಕಿಂತ, ಹೇಗೆ ಹೇಳುತ್ತೇವೆ ಅನ್ನುವುದೇ ಬದುಕಿನ ಗುಟ್ಟು.
ಮಾತಿನ ಶೈಲಿ ಹೃದಯ ಗೆಲ್ಲಬಹುದು, ಸಮಸ್ಯೆ ಪರಿಹರಿಸಬಹುದು, ಅಥವಾ ಸಂಬಂಧ ಉಳಿಸಬಹುದು.
ಮಾತು ಮನುಷ್ಯನ ಶಕ್ತಿ — ಅದನ್ನು ಜಾಣ್ಮೆಯಿಂದ ಬಳಕೆ ಮಾಡಿದರೆ ಬದುಕು ಸುಲಭವಾಗುತ್ತದೆ

 

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಪ್ರೋಟೀನ್ ಮತ್ತು ಪೋಷಕಾಂಶಗಳಿAದ ಕೂಡಿದ ಪೆಸರಟ್ಟು ದೋಸೆ!

ಸದ್ಗುರು ಜಗ್ಗಿ ವಾಸುದೇವ್ ಅವರ ಮಗಳಾದ ರಾಧೆ ಜಗ್ಗಿ ಅವರು ನಿಪುಣ ಭರತನಾಟ್ಯ ನ್ಲತ್ಯಗಾರ್ತಿ. ಭಾರತದ ಪ್ರಸಿದ್ಧ ಶಾಸ್ತಿçÃಯ ಭರತನಾಟ್ಯ ನೃತ್ಯಗಾರ್ತಿ ಮತ್ತು ಸೃಜನಶೀಲ ಕಲಾ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ರಾಧೆ ಜಗ್ಗಿ
ಅವರು ಹೆಸರುಬೇಳೆಯಿಂದ ಮಾಡುವ ಸಾಂಪ್ರದಾಯಿಕ ಪೆಸರಟ್ಟು ರೆಸಿಪಿಯ ಬಗ್ಗೆ ಇರುವ ಮಾಹಿತಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊAಡಿದ್ದಾರೆ. ಇದು ದೈಹಿಕ ಸದೃಢತೆಯನ್ನು ಹೆಚ್ಚಿಸಿ, ದೀರ್ಘಕಾಲದವರೆಗೆ ಶಕ್ತಿಯನ್ನು ಒದಗಿಸುವ ಅತ್ಯುತ್ತಮ ಪ್ರೋಟೀನ್ ಭರಿತ ಖಾದ್ಯದ ತುಂಬಾನೇ ಸರಳವಾಗಿ ಮಾಡಬಹುದಾದ ರೆಸಿಪಿ. ಇದು ಹಸಿರು ಹೆಸರುಕಾಳು ಹಾಗೂ ಅಕ್ಕಿಯನ್ನು ಬಳಸಿ ಮಾಡುವ ಪ್ರೋಟೀನ್ ಮತ್ತು ಪೋಷಕಾಂಶಗಳಿAದ ಕೂಡಿದ ದೋಸೆಯಾಗಿದೆ.

ಪೆಸರಟ್ಟು ಮಾಡುವುದು ಹೇಗೆ ಗೊತ್ತಾ

ಹಂತ 1  ಪೆಸರಿಟ್ಟು ಅಥವಾ ಹೆಸರುಕಾಳಿನ ದೋಸೆ ಮಾಡಲು, ಹಸಿರು ಹೆಸರುಕಾಳು ಮತ್ತು ಒಂದು ಕಪ್ ಅಕ್ಕಿಯನ್ನು ರಾತ್ರಿಯಿಡೀ ನೆನೆಸಿಡಿ.
ಹಂತ 2 - ಬೆಳಗ್ಗೆ, ಅಕ್ಕಿಯನ್ನು ಚೆನ್ನಾಗಿ ತೊಳೆದು ಸ್ವಚ್ಛಗೊಳಿಸಿ ಮಿಕ್ಸರ್ ಗ್ರೆöÊಂಡರ್‌ನಲ್ಲಿ ಇರಿಸಿ. ನಂತರ ಖಾರಕ್ಕೆ ಬೇಕಾಗುವ ಹಸಿರು ಮೆಣಸಿನ ಕಾಯಿ ಸ್ವಲ್ಪ ತುರಿದ ಶುಂಠಿ, ಸ್ವಲ್ಪ ಜೀರಿಗೆ ಮತ್ತು ಸ್ವಲ್ಪ ಪಾಲಕ್ ಸೊಪುö್ಪ ಸೇರಿಸಿ ಚೆನ್ನಾಗಿ ರುಬ್ಬಿಕೊಳ್ಳಿ.
ಹಂತ 3 - ಪೇಸ್ಟ್ ಸಿದ್ಧವಾದಾಗ, ಅದನ್ನು ಒಂದು ಬಟ್ಟಲಿನಲ್ಲಿ ತೆಗೆದು ಮತ್ತೊಂದೆಡೆ ಗ್ಯಾಸ್ ಮೇಲೆ ಪ್ಯಾನ್ ಬಿಸಿ ಮಾಡಿ.
ಹಂತ 4 - ಈಗ ದೋಸೆ ಕಾವಲಿಯನ್ನು ಮಧ್ಯಮ ಉರಿಯಲ್ಲಿ ಎರಡು ಮೂರು ನಿಮಿಷ ಚೆನ್ನಾಗಿ ಕಾಯಲು ಬಿಡಿ,ನಂತರ ಕಾವಲಿಯ ಮೇಲೆ ನಿಧಾನಕ್ಕೆ ಕೆಲವು ಹನಿ ತಣ್ಣೀರನ್ನು ಚಿಮುಕಿಸಿ,ಈ ಸಂದರ್ಭದಲ್ಲಿ ನೀರು ಆವಿಯಾದರೆ ದೋಸೆ ಬಿಸಿಯಾಗಿದೆ ಎಂದರ್ಥ ನಂತರ, ತಯಾರಾದ ಬ್ಯಾಟರ್ ಅಥವಾ ದೋಸೆ ಹಿಟ್ಟನ್ನು ಸುರಿಯಿರಿ ಮತ್ತು ಅದನ್ನು ದೋಸೆ ಯಂತೆ ರೂಪಿಸಿ.
ಹಂತ 5 - ನಂತರ, ಪೆಸರಿಟ್ಟು (ಹೆಸರುಕಾಳು) ದೋಸೆಯ ಮೇಲೆ ತುಪ್ಪ ಸವರಿ ಎರಡೂ ಬದಿ ಚೆನ್ನಾಗಿ ಬೇಯಲು ಬಿಡಿ. ಎರಡೂ ಬದಿ ಬೇಯಿಸಿದ ನಂತರ, ಚಟ್ನಿಯೊಂದಿಗೆ ಬಡಿಸಿ. ಬಯಸಿದಲ್ಲಿ ನೀವು ಆಲೂಗಡ್ಡೆ ಅಥವಾ ಪನೀರ್ ಸ್ಟಫಿಂಗ್ ಅನ್ನು ಕೂಡ ಸೇರಿಸಬಹುದು.

ಕೆಲವೊಂದು ಟಿಪ್ಸ್;
ಪೆಸರಿಟ್ಟು ಅಥವಾ ಹೆಸರುಕಾಳು ದೋಸೆ ಮಾಡುವ ಮುನ್ನ ಹಿಟ್ಟನ್ನು ಹುದುಗಿ ಸುವ ಅವಶ್ಯಕತೆ ಇರುವುದಿಲ್ಲ. ಹಿಟ್ಟ ರೆಡಿ ಮಾಡಿಕೊಂಡ ಬಳಿಕ ಸೀದಾ ಬಿಸಿ ಕಾವಲಿಯ ಮೇಲೆ ತೆಳುವಾಗಿ ಹರಡಿ ಸಾಕು
ಹೆಸರುಕಾಳು ಹಾಗೂ ಅಕ್ಕಿಯ ಹಿಟ್ಟು ಸಾಮಾನ್ಯ ದೋಸೆ ಹಿಟ್ಟಿಗಿಂತ ಸ್ವಲ್ಪ ತೆಳ್ಳಗಿರಬೇಕು, ತುಂಬಾ ಗಟ್ಟಿಯಾದರೆ ದೋಸೆ ದಪ್ಪವಾಗಿ ಬರುತ್ತದೆ
ಇನ್ನು ದೋಸೆ ಕಾವಲಿ ಸರಿಯಾಗಿ ಬಿಸಿಯಾಗಿರಬೇಕು. ದೋಸೆ ಕಾವಲಿ ಹೆಚ್ಚು ಬಿಸಿಯಾಗಿದ್ದರೆ ಮಾತ್ರ ಪೆಸರಟ್ಟು ದೋಸೆ ಗರಿಗರಿಯಾಗಿ ಬರುತ್ತದೆ
ಈ ದೋಸೆಯನ್ನು ಈರುಳ್ಳಿ ಟೊಮೆಟೊ ಅಥವಾ ತೆಂಗಿನಕಾಯಿ ಚಟ್ನಿ ಬೆಸ್ಟ್ ಕಾಂಬಿನೇಷನ್ ಇಲ್ಲಾಂದ್ರೆ ಸಾಂಬಾರ್ ಜೊತೆಗೆ ಸವಿದರೆ ರುಚಿ ಅದ್ಭುತ ವಾಗಿರುತ್ತದೆ!?